Just In
Don't Miss
- News
ಪಿಎಸ್ಐ ಹಗರಣ: ಬೊಮ್ಮಾಯಿ ರಾಜೀನಾಮೆಗೆ ರಾಹುಲ್ ಗಾಂಧಿ ಒತ್ತಾಯ
- Technology
ಶಿಯೋಮಿಯಿಂದ ಮತ್ತೆ ಹೊಸ ಸ್ಮಾರ್ಟ್ಬ್ಯಾಂಡ್ ಲಾಂಚ್; ಇದರ ಫೀಚರ್ಸ್ ಏನು?
- Automobiles
ಭಾರತದಲ್ಲಿ ಹೊಸ ಡುಕಾಟಿ ಸ್ಟ್ರೀಟ್ಫೈಟರ್ ವಿ4 ಎಸ್ಪಿ ಬೈಕ್ ಬಿಡುಗಡೆ
- Education
Mysore University Recruitment 2022 : ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
IND vs ENG 5ನೇ ಟೆಸ್ಟ್: 'ಚೀರಿಯೋ ವಿರಾಟ್'; ಇಂಗ್ಲೆಂಡ್ ಪ್ರೇಕ್ಷಕರಿಂದ ಕೊಹ್ಲಿಗೆ ಅವಮಾನ
- Finance
ಷೇರು ಪೇಟೆ ಶುಭಾರಂಭ: ಮತ್ತೆ ಎಲ್ಐಸಿ ಸ್ಟಾಕ್ ಜಿಗಿತ
- Movies
HR ಆಗಿ ಕೆಲಸ ಮಾಡಿದ್ದ ಪವಿತ್ರಾ ಲೋಕೇಶ್: ಹೀರೊಯಿನ್ ಆಗಲಿಲ್ಲ ಯಾಕೆ?
- Travel
ಪಶ್ಚಿಮಘಟ್ಟಗಳಲ್ಲಿ ಮಾನ್ಸೂನ್ ನಲ್ಲಿ ಅನ್ವೇಷಿಸಬಹುದಾದ ಸ್ಥಳಗಳು
ಜ್ಯೋತಿಷ್ಯ: ಈ ರಾಶಿಯವರನ್ನು ಸುಲಭವಾಗಿ ಮೋಸ ಮಾಡಬಹುದಂತೆ
ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಸಹ ಇದ್ದೇ ಇರುತ್ತಾರೆ. ಮೋಸ ಹೋಗುವುದು ಹಾಗೂ ಮೋಸ ಮಾಡುವುದು ಎರಡೂ ತಪ್ಪೇ, ಆದರೆ ಕೆಲವು ಸಂದರ್ಭಗಳು, ಪರಿಸ್ಥಿತಿಗಳು ಕೆಲವರನ್ನು ಮೂರ್ಖರನ್ನಾಗಿ ಮಾಡಿಸುತ್ತದೆ.
ಈ ಮೋಸ ಹೋಗುವವರ ಬಗ್ಗೆ ಜ್ಯೋತಿಶಾಸ್ತ್ರ ಸಹ ಭವಿಷ್ಯ ನುಡಿದಿದೆ. ಜ್ಯೋತಿಶಾಸ್ತ್ರದ ಪ್ರಕಾರ ಈ ರಾಶಿಯವರು ಮೋಸ ಹೋಗುವುದರಲ್ಲಿ ಮೊದಲಿಗರಂತೆ. ಅಂದರೆ ಇವರನ್ನು ಸುಲಭವಾಗಿ ಮೋಸ ಮಾಡುಬಹುದಂತೆ. ನೀವು ಸಹ ಈ ರಾಶಿಗಳ ಪಟ್ಟಿಯಲ್ಲಿದ್ದೀರಾ, ನೀವು ಮೋಸ ಹೋಗುವವರಾಗಿದ್ದರೆ ಇನ್ನು ಮುಂದಾದರೂ ಎಚ್ಚರದಿಂದಿರಿ?

ಕುಂಭ ರಾಶಿ
ಈ ರಾಶಿಚಕ್ರದವರನ್ನು ಸುಲಭವಾಗಿ ಮೋಸದ ಹಾದಿಯಲ್ಲಿ ನಡೆಸಬಹುದಂತೆ. ಏಕೆಂದರೆ ಅವರು ಗಾಸಿಪ್, ಪಿಸುಮಾತುಗಳನ್ನು ಸುಲಭವಾಗಿ ನಂಬುತ್ತಾರೆ. ಅವರು ಅದರ ಬಗ್ಗೆ ಸತ್ಯಾಂಶ ತಿಳಿಯಲು ಸಹ ಪ್ರಯಯ್ನ ಮಾಡುವುದಿಲ್ಲ ಆದ್ದರಿಂದ ಯಾವುದನ್ನಾದರೂ ಪರಿಶೀಲಿಸುವ ಪ್ರಶ್ನೆಯೇ ಅವರ ಬಳಿ ಇರುವುದಿಲ್ಲ. ಕುಂಭ ರಾಶಿಯವರಂಥ ಒಳ್ಳೆಯ ಹೃದಯವಂತರು ಬೇಗ ಮೂರ್ಖರಾಗುವುದು ವಿಷಾದನೀಯ.

ವೃಶ್ಚಿಕ ರಾಶಿ
ಈ ರಾಶಿಚಕ್ರದವರು ಬಿಂಬಿಸುವ ಚಿತ್ರಕ್ಕಿಂತ ಭಿನ್ನವಾಗಿ ಮೈಂಡ್ ಗೇಮ್‌ಗಳನ್ನು ಆಡುವಲ್ಲಿ ತುಂಬಾನೇ ಮಂದ ಗುಣದವರು. ಅವರು ಸುಲಭವಾಗಿ ಜನರಿಂದ ಮೋಸ ಹೋಗಬಹುದು. ಅವರು ಸಾಮಾನ್ಯವಾಗಿ ಜನರನ್ನು ನಂಬುವುದಿಲ್ಲ ಆದರೆ ಈ ನಂಬಿದವರೇ ಅವರನ್ನು ಹೆಚ್ಚು ಮೂರ್ಖರನ್ನಾಗಿ ಮಾಡುವುದು ದುರಂತವೇ. ಇದು ಅವರು ತಮ್ಮ ನಿರ್ಧಾರಗಳಿಗೆ ವಿಷಾದಿಸುವಂತೆ ಮಾಡುತ್ತದೆ ಆದ್ದರಿಂದ ಇವರಲ್ಲಿ ನಂಬಿಕೆಯ ಮೇಲೆಯೇ ಅಪನಂಬಿಕೆ ಉಂಟು ಮಾಡುವಂತೆ ಮಾಡುತ್ತದೆ.

ಕರ್ಕ ರಾಶಿ
ಕರ್ಕ ರಾಶಿ ತಮ್ಮ ಸ್ನೇಹಿತರಾಗಲಿ ಅಥವಾ ಶತ್ರುಗಳಾಗಲಿ ಸುಲಭವಾಗಿ ನಂಬುತ್ತಾರೆ ಇದೇ ಇವರನ್ನು ಮೂರ್ಖರನ್ನಾಗಿಸುತ್ತದೆ. ಈ ಸೂಕ್ಷ್ಮ ಮತ್ತು ಮೃದು ಹೃದಯದ ಆತ್ಮಗಳನ್ನು ಮೋಸ ಮಾಡುವುದು ತುಂಬಾ ಸುಲಭ. ಅವರು ದಡ್ಡರು ಅಥವಾ ಅವಿವೇಕಿಗಳಲ್ಲ, ಅವರು ನಿಮ್ಮನ್ನು ನಂಬುವ ಹೃದಯವನ್ನು ಹೊಂದಿದ್ದಾರೆ. ಅವರು ಯಾವಾಗಲೂ ಯಾವುದೇ ದುಷ್ಟತನವಿಲ್ಲದೆ ಜಗತ್ತನ್ನು ನೋಡುತ್ತಾರೆ. ನಮಗೆ ಅಂತಹ ಜನರು ಹೆಚ್ಚು ಬೇಕು ಆದರೆ ದುಃಖಕರವೆಂದರೆ ಜಗತ್ತು ಅವರನ್ನು ಗ್ರಾಂಟೆಡ್ ಆಗಿ ಸ್ವೀಕರಿಸುವುದೇ ವಿಷಾದನೀಯ.

ಧನು ರಾಶಿ
ಧನು ರಾಶಿಯವರು ಸಂಬಂಧಗಳಲ್ಲಿ ಅದ್ಭುತವಾಗಿದ್ದಾರೆ, ಚೆನ್ನಾಗಿ ನಿಭಾಯಿಸುತ್ತಾರೆ, ಅದಕ್ಕಾಗಿಯೇ ಅವರನ್ನು ಸಾಮಾನ್ಯವಾಗಿ ಲಘುವಾಗಿ ತೆಗೆದುಕೊಳ್ಳಲಾಗುತ್ತದೆ. ಅವರು ಸ್ನೇಹಿತರು ಮತ್ತು ಕುಟುಂಬದವರಿಂದ ಸುಲಭವಾಗಿ ಮೂರ್ಖರಾಗುತ್ತಾರೆ ಮತ್ತು ನಂತರ ಅವರಿಗೆ ಹಾನಿ ಮಾಡುವಂತಹ ಕೆಲಸಗಳನ್ನು ಮಾಡುತ್ತಾರೆ. ಈ ರಾಶಿಚಕ್ರದವರ ಸಮಸ್ಯೆಯೆಂದರೆ ಅವರು ಕೊಳಕು ಅಥವಾ ದುಷ್ಟ ಮನಸ್ಸಿನ ಸಂದರ್ಭಗಳನ್ನು ನೋಡಲು ಸಾಧ್ಯವಾಗುವುದಿಲ್ಲ . ಅವರು ಯಾವಾಗಲೂ ಮೋಸ ಮತ್ತು ದ್ರೋಹವನ್ನು ಅನುಭವಿಸಲು ಇದು ಒಂದು ಪ್ರಮುಖ ಕಾರಣವಾಗಿದೆ.