For Quick Alerts
ALLOW NOTIFICATIONS  
For Daily Alerts

ಇತರರು ಎಂದಿಗೂ ತಮ್ಮತ್ತ ಗಮನಹರಿಸಬೇಕು ಎಂದು ಬಯಸುವ ರಾಶಿಚಕ್ರಗಳು

|

ಇನ್ನು ಮುಂದೆ ಯಾರಾದರೂ ನಿಮ್ಮ ರಾಶಿ ಯಾವುದು ಎಂದು ಕೇಳಿದರೆ ಹೇಳುವ ಮುನ್ನ ಸ್ವಲ್ಪ ಯೋಚನೆ ಮಾಡಿ. ಏಕೆಂದರೆ ನಿಮ್ಮ ರಾಶಿಯನ್ನು ಹೇಳುತ್ತಿದ್ದಂತೆ ನಿಮ್ಮ ಬಹುತೇಕ ಗುಣಸ್ವಭಾವಗಳನ್ನೇ ಅರ್ಥಮಾಡಿಕೊಳ್ಳಬಹುದಂತೆ. ಹೌದು, ಜ್ಯೊತಿಶಾಸ್ತ್ರದ ಪ್ರಕಾರ ನಿಮ್ಮ ರಾಶಿಯು ನಿಮ್ಮ ಬಗೆಗಿನ ಹಲವು ರಹಸ್ಯಗಳನ್ನು ಬಿಚ್ಚಿಡುತ್ತದೆ.

ಯಾರೊಬ್ಬರ ಬಗ್ಗೆ ತಿಳಿದುಕೊಳ್ಳಬೇಕಿದ್ದರೆ ರಾಶಿಚಕ್ರದ ಮೂಲಕವೇ ಅವರ ವ್ಯಕ್ತಿತ್ವ, ಅವರ ಆಸಕ್ತಿಗಳು, ಅಭಿರುಚಿಗಳು ಇತ್ಯಾದಿಗಳ ಬಗ್ಗೆ ತಿಳಿದುಕೊಳ್ಳಬಹುದು.

ಇನ್ನು ಸಂಬಂಧದಲ್ಲಿರುವಾಗ ನಮ್ಮ ಪ್ರೇಮಿಯ ಅಥವಾ ಸಂಗಾತಿಯ ಸ್ವಭಾವ ಹೇಗಿರುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಜ್ಯೋತಿಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರಗಳು ಸಂಬಂಧದಲ್ಲಿರುವಾಗ ಶೀಘ್ರದಲ್ಲೇ ಆಕರ್ಷಿಸುವ ಅಥವಾ ಗಮನ ಸೆಳೆಯುವ ಸ್ವಭಾವಗಳನ್ನು ಹೊಂದಿರುತ್ತದೆ ಎನ್ನಲಾಗುತ್ತದೆ. ಹಾಗಿದ್ದರೆ ಯಾವ ರಾಶಿಗಳು ಹೆಚ್ಚು ಗಮನಸೆಳೆಯುವ ಗುಣಗಳನ್ನು ಹೊಂದಿದೆ ಎಂದು ತಿಳಿಯುವ ಆಸಕ್ತಿಯೇ, ಮುಂದೆ ಲೇಖನದಲ್ಲಿ ಪಟ್ಟಿ ನೀಡಲಾಗಿದೆ. ಒಮ್ಮೆ ನೋಡಿ ಮತ್ತು ನೀವು ಪಟ್ಟಿಯಲ್ಲಿದ್ದೀರಾ ಎಂದು ಪರಿಶೀಲಿಸಿ.

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರು ತಮ್ಮದೇ ಅದ ವಿಶಿಷ್ಟ ರೀತಿಯಲ್ಲಿ ಗಮನ ಸೆಳೆಯುವ ಛಾತಿಯನ್ನು ಹೊಂದಿದ್ದಾರೆ. ನಿಜವಾಗಿ ಹೇಳಬೇಕೆಂದರೆ ಒತ್ತಾಯಿಸುವ ಗುಣ ಅವರದ್ದಾಗಿದೆ. ಇವರು ಎಂದಿಗೂ ಹಿಂಜರಿಯುವುದಿಲ್ಲ ಮತ್ತು ಅವರ ಭಾವನೆಗಳನ್ನು ತಮ್ಮ ಹೃದಯಲ್ಲೆ ಬಚ್ಚಿಟ್ಟುಕೊಳ್ಳುದಿಲ್ಲ. ಆದ್ದರಿಂದಲೇ ಮೇಷರಾಶಿಯವರು ಎಲ್ಲರ ನಡುವೆ ತಮ್ಮ ಪ್ರಾಬಲ್ಯವನ್ನು ಸಾಧಿಸುತ್ತಾರೆ ಮತ್ತು ಕೆಲವೊಮ್ಮೆ ಬೇಡಿಕೆ ಇಡುತ್ತಾರೆ. ಇನ್ನೂ ವಿಶೇಷವೆಂದರೆ, ತಮಗೇ ತಿಳಿಯದಂತೆ ಇವರು ಇತರರ ಗಮನಸೆಳೆಯುತ್ತಾರೆ ಎಂಬುದು ಹಾಗೂ ಇದನ್ನು ಅರ್ಥಮಾಡಿಕೊಳ್ಳುವುದ ಇವರಗೇ ಕೆಲವೊಮ್ಮೆ ಕಷ್ಟವಾಗುತ್ತದೆ ಎಂಬುದು. ಮೇಷ ರಾಶಿಯು ನಿಮ್ಮ ಗಮನವನ್ನು ಆಗಾಗ್ಗೆ ಸೆಳೆಯಲು ಬಯಸುತ್ತಿದ್ದಾರೆ ಎಂದಾದರೆ ನೀವು ಅರ್ಥಮಾಡಿಕೊಳ್ಳಬೇಕು ಅವರು ನಿಮಗಾಗಿ ಅವರ ಹೃದಯದಲ್ಲಿ ಪ್ರೀತಿಯನ್ನು ಹೊಂದಿದ್ದಾರೆಂದು. ಆದರೆ ಇವರ ಉತ್ತಮ ಗುಣವೆಂದರೆ ಇತರರೂ ಗಮನ ಸೆಳೆಯುವಾಗ ಇವರೂ ಸಹ ಸಮಾನವಾಗಿ ಅರ್ಥಮಾಡಿಕೊಳ್ಳುತ್ತಾರೆ.

ಕರ್ಕ ರಾಶಿ

ಕರ್ಕ ರಾಶಿ

ಕರ್ಕ ರಾಶಿಯವರು ಎಂದಿಗೂ ಸೂಕ್ಷ್ಮ ಮನಸ್ಸುಳ್ಳವರು. ಕರ್ಕ ರಾಶಿಯವರಿಗೆ ತಮ್ಮನ್ನು ಪ್ರೀತಿಸುತ್ತೇವೆ, ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ನಿರಂತರವಾಗಿ ಭರವಸೆ ನೀಡುತ್ತಲೇ ಇರಬೇಕು ಎಂದು ಬಯಸುತ್ತಾರೆ. ನೀವು ಅವರನ್ನು ಸಂತೋಷದಿಂದ ನೋಡಲು ಬಯಸಿದರೆ ನೀವು ಅವರೆಡೆ ಆಗಾಗ್ಗೆ ಅಥವಾ ನಿರಂತರವಾಗಿ ಗಮನಹರಿಸುತ್ತಲೇ ಇರಬೇಕು. ಆದರೆ ಅವರೆಷ್ಟು ಸೂಕ್ಷ್ಮ ಮನಸ್ಸುಳ್ಳವರೋ, ಸಂಬಂಧದಲ್ಲಿ ಸಹ ಅಷ್ಟೇ ತಿಳುವಳಿಕೆ ಉಳ್ಳವರು ಮತ್ತು ಪ್ರಬುದ್ಧರು. ಕರ್ಕ ರಾಶಿಯವರು ನಿಮ್ಮ ಬದ್ಧತೆಗಳು, ಕೆಲಸದ ಒತ್ತಡವನ್ನು ಅರ್ಥಮಾಡಿಕೊಳ್ಳುತ್ತಾ ಎಂದು ನಿರೀಕ್ಷಿಸುವುದು ತಪ್ಪಲ್ಲ, ಆದರೆ ಅಂತೆಯೇ ನೀವು ಎಂದಿಗೂ ಅವರ ಮೇಲೆ ಗಮನವಹಿಸಬೇಕು ಎಂಬುದ ಸಹ ಅನಿವಾರ್ಯವಾಗಿರುತ್ತದೆ.

ಸಿಂಹ ರಾಶಿ

ಸಿಂಹ ರಾಶಿ

ಬಹುಶಃ ನಿಮಗೆ ಅಚ್ಚರಿ ಆಗಬಹುದು, ಸದಾ ಆತ್ಮವಿಶ್ವಾಸ ಹಾಗೂ ನಿರಾತಂಕವಾಗಿ ಕಾಣುವ ಸಿಂಹ ರಾಶಿಯವರು ಎಲ್ಲರಿಂದ ಪ್ರತಿಕ್ರಿಯೆಯನ್ನು ಪಡೆಯಲು ತುಂಬಾ ಇಷ್ಟಪಡುತ್ತಾರೆ ಗೊತ್ತೆ. ಇನ್ನೂ ಗಮನಿಸಬೇಕಾದ ಅಂಶವೆಂದರೆ, ನಿಮ್ಮ ನಕಾರಾತ್ಮಕ ಟೀಕೆಗಳು ಅವರನ್ನು ನಿಮ್ಮ ಶತ್ರುಗಳನ್ನಾಗಿ ಮಾಡುವಲ್ಲಿ ಕೊನೆಗೊಳ್ಳಬಹುದು. ಸಿಂಹ ರಾಶಿಯವರು ಪ್ರಶಂಸೆಯನ್ನು ಮಾತ್ರ ಬಯಸುತ್ತಾರೆ ಮತ್ತು ನೀವು ಎಷ್ಟೇ ಹೊಗಳಿದರೂ ಇವರಿಗೆ ಇದು ಹೆಚ್ಚು ಎಂದು ಅನಿಸುವುದೇ ಇಲ್ಲವಂತೆ ಎಂದು ಜ್ಯೋತಿಶಾಸ್ತ್ರ ಹೇಳುತ್ತದೆ. ಅತ್ಯುತ್ತಮ ಕಾರಣಗಳಿಗಾಗಿ ಸದಾ ಪ್ರಚಲಿತ ಹಾಗೂ ಪ್ರಸಿದ್ಧರಾಗಿರಬೇಕು ಎನ್ನುವುದು ಸಿಂಹ ರಾಶಿಯ ಅಹಂಗೆ ಹೇಳ ಮಾಡಿಸಿದ ಗುಣ. ನೀವು ಸಹ ಸಿಂಹ ರಾಶಿಯವರ ಮನವನ್ನು ಗೆಲ್ಲಬಯಸಿದ್ದರೆ ಅವರನ್ನು ಸದಾ ಹೊಗಳಿ ಹಾಗೂ ಅವರು ವಿಶೇಷ ಎಂಬ ಭಾವನೆಯನ್ನು ಅವರಲ್ಲಿ ಮೂಡಿಸಿ.

ತುಲಾ ರಾಶಿ

ತುಲಾ ರಾಶಿ

ಮಾಪಕಗಳಿಂದಲೇ ಪ್ರತಿನಿಧಿಸಲ್ಪಡುವ ತುಲಾ ರಾಶಿಯವರ ಪ್ರಕಾರ ಸಮತೋಲನ ಎಂದರೆ ಎರಡೂ ಕಡೆಗಳಲ್ಲಿ ಸಮಾನ ಗಮನವನ್ನು ಕೊಡುವುದು ಮತ್ತು ಅವರಿಂದ ಪಡೆಯುವುದು. ಸಂವಹನವು ಸಂಬಂಧಕ್ಕೆ ಅತ್ಯುನ್ನತವಾದ ಅಸ್ತ್ರ ಎಂದು ಅವರಿಗೆ ಚೆನ್ನಾಗಿ ತಿಳಿದಿದೆ. ಆದರೆ ಅವರು ಕೆಲವೊಮ್ಮೆ ಗಮನ ಸೆಳೆಯಲು ಬಯಸುತ್ತಾರೆ ಮತ್ತು ಕೆಲವೊಮ್ಮೆ ತನ್ನನ್ನು ಮುದ್ದು ಮಾಡಬೇಕು ಎಂದು ಅಪೇಕ್ಷಿಸುತ್ತಾರೆ ಎಂಬುದು ಸಹ ಸತ್ಯ. ಬಹುಶಃ ಅದಕ್ಕಾಗಿಯೇ ತುಲಾರಾಶಿಯ ಕೆಲವರು ಫ್ಲರ್ಟ್ ಮಾಡುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಅವರನ್ನು ಪ್ರೀತಿಸುತ್ತಿದ್ದೇವೆ ಎಂದು ನಿರಂತರವಾಗಿ ನೆನಪಿಸುವ ಅಗತ್ಯವಿಲ್ಲ, ಆದರೂ ನಿಯಮಿತವಾಗಿಯಾದರೂ ಹೇಳಬೇಕು ಎಂದು ಬಯಸುತ್ತಾರೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಗಮನ ಸೆಳೆಯುವವರ ಪಟ್ಟಿಯಲ್ಲಿ ವೃಶ್ಚಿಕ ರಾಶಿಯವರೇನೂ ಹೊರತಾಗಿಲ್ಲ. ಆದರೆ ನೀವು ತಿಳಿದುಕೊಳ್ಳಬೇಕಾದ ಅಂಶವೆಂದರೆ ಸಂಬಂಧದಲ್ಲಿ ಅವರ ಪ್ರಯತ್ನಗಳಿಗೆ ಗಮನ ಕೊಡದಿದ್ದರೆ ಅವರು ತುಂಬಾ ಕೊರಗುತ್ತಾರೆ. ಇವರು ಸಾಮಾನ್ಯವಾಗಿ ಯಾರೊಬ್ಬರ ಬಗ್ಗೆ ತಮ್ಮ ಭಾವನೆಗಳನ್ನು ಒಪ್ಪಿಕೊಳ್ಳುವುದಿಲ್ಲ. ಅವರು ಹಾಗೆ ಮಾಡಬೇಕು ಎಂದು ನೀವು ಬಯಸಿದರೆ ಅವರಿಗೆ ಅಗತ್ಯ ಗಮನ ಕೊಟ್ಟರೆ ಸಾಕು. ವೃಶ್ಚಿಕ ರಾಶಿಯವರು ಪ್ರಾಮಾಣಿಕ ಮತ್ತು ನ್ಯಾಯಯುತ ಆಟಗಾರರಾಗಿದ್ದು, ಇವರ ಈ ಗುಣಕ್ಕಾಗಿ ಗಮನವನ್ನು ನೀಡಬೇಕು ಎಂದು ಒತ್ತಾಯಿಸುತ್ತಾರೆ.

English summary

Zodiac Sign Attention Seeker In Relationship

Here we are intrrsting zodiac signs the really attention seekers in relationship. whether you want to learn from the best or just confirm that you are in fact on this list, read below to find out which signs are the biggest attention seekers of the zodiac.Take a look.
Story first published: Thursday, November 14, 2019, 17:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X