For Quick Alerts
ALLOW NOTIFICATIONS  
For Daily Alerts

ಇಂಥಾ ಸಂದರ್ಭಗಳಲ್ಲಿ ನೀವು ಮೌನವಾಗಿದ್ದರೆ ಜೀವನದಲ್ಲಿ ಯಶಸ್ಸು ಕಾಣುವುದು ಖಂಡಿತಾ!

|

ಮಾತು ಮನಸ್ಸಿನ ಭಾವನೆ ಹಾಗೂ ಅನಿಸಿಕೆಯನ್ನು ಬಿತ್ತರಿಸುತ್ತದೆ. ಮೌನ ಎನ್ನುವುದು ಸಾಕಷ್ಟು ಸಂಗತಿಗಳನ್ನು ಹಿಡಿದಿಡುತ್ತದೆ. ಮನಸ್ಸಿಗೆ ಅನಿಸಿದ್ದನ್ನು ಥಟ್ಟನೆ ಹೇಳುವುದು ಸುಲಭ. ಆದರೆ ಮನಸ್ಸು ಬಯಸಿದ್ದನ್ನು ನಿಯಂತ್ರಿಸುವುದು ಮೌನ. ಮೌನದಿಂದ ಪರಿಸ್ಥಿತಿಯನ್ನು ನಿಯಂತ್ರಿಸುವುದು ಅಷ್ಟು ಸುಲಭದ ಸಂಗತಿಯಲ್ಲ. ಮನಸ್ಸು ಸಾವಿರ ಸಂಗತಿಯನ್ನು ಬಯಸುತ್ತದೆ. ಹಾಗಂತ ಅದನ್ನು ಆ ಕ್ಷಣಕ್ಕೆ ಎಲ್ಲೆಂದರಲ್ಲಿ ಹೇಳಲು ಆಗುವುದಿಲ್ಲ. ನಿಜ, ಮನಸ್ಸೇ ಹಾಗೆ, ಏನೋ ಬಯಸುತ್ತದೆ, ಇನ್ನೇನೋ ಬಿತ್ತರಿಸುತ್ತದೆ. ನಂತರ ಅದರ ಪರಿಣಾಮಗಳೇ ಬೇರೆಯಾಗಿರುತ್ತವೆ.

silence significance

ಅದಕ್ಕಾಗಿಯೇ ನಾವು ಮೊದಲು ನಮ್ಮ ಭಾವನೆ ಹಾಗೂ ಮಾತಿನ ಮೇಲೆ ನಿಯಂತ್ರಣ ಹೊಂದಿರಬೇಕು ಎಂದು ಬಲ್ಲವರು ಹೇಳುತ್ತಾರೆ. ಯಾರು ತಮ್ಮ ಸಂವೇದನೆ ಮತ್ತು ಸಂವಹನಗಳ ಬಗ್ಗೆ ಅರಿವನ್ನು ಮತ್ತು ಅಳತೆಯನ್ನು ಹೊಂದಿರುತ್ತಾರೆ ಅವರಿಗೆ ವಿಪತ್ತು ಬಾರದು. ಸಂದರ್ಭಕ್ಕೆ ತಕ್ಕಂತೆ ವರ್ತಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ನಮ್ಮ ಮಾತು. ಅಗತ್ಯವಿಲ್ಲದೆ ಇರುವಾಗ ಒಂದಿಷ್ಟು ಮಾತನಾಡುತ್ತಾ ಇದ್ದರೆ ಅದು ವ್ಯಕ್ತಿಯ ಬಗ್ಗೆ ಒಂದಿಷ್ಟು ಅಭಿಪ್ರಾಯ ಹುಟ್ಟುವಂತೆ ಮಾಡುವುದು. ಜೊತೆಗೆ ಇತರರು ಕಷ್ಟಕ್ಕೆ ಒಳಗಾಗುವ ಸಾಧ್ಯತೆಗಳೂ ಇರುತ್ತವೆ.

ಮಾತು ಮತ್ತು ಮೌನ ಎರಡೂ ಮನುಷ್ಯನಿಗೆ ಅತ್ಯಅಗತ್ಯವಾದ ಸಂಗತಿ. ಅಗತ್ಯ ವಿದ್ದಾಗ ಮಾತನಾಡುವುದು, ಅಗತ್ಯ ಇಲ್ಲದೆ ಇರುವಾಗ ಮೌನವನ್ನು ತಾಳುವುದು ಒಂದು ಕೌಶಲ್ಯ. ಅದು ವ್ಯಕ್ತಿತ್ವದ ನಿಲುವನ್ನು ನಿರ್ಧರಿಸುವುದು. ಮೌನ ಹಾಗೂ ಧ್ಯಾನದ ಸ್ಥಿತಿಯು ವ್ಯಕ್ತಿಯ ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಮಾತು ಮತ್ತು-ಮೌನವನ್ನು ಯಾವ ಸಂದರ್ಭದಲ್ಲಿ ಬಳಸಬೇಕು? ಮಾತಿನಿಂದ ಹಾಗೂ ಮೌನದಿಂದ ಯಾವ ರೀತಿಯ ಪ್ರಯೋಜನವಾಗುವುದು? ಯಾವ ಸಂದರ್ಭದಲ್ಲಿ ಮೌನವಾಗಿರುವುದು ಸೂಕ್ತ? ಯಾವಾಗ ಮೌನವನ್ನು ಮುರಿಯಬೇಕು? ಎನ್ನುವುದನ್ನು ಈ ಮುಂದಿನ ವಿವರಣೆಯಲ್ಲಿ ಪರಿಶೀಲಿಸಿ.

1. ಸೂಕ್ತ ವಿಷಯದ ಬಗ್ಗೆ ತಿಳಿಯದೆ ಇರುವಾಗ

1. ಸೂಕ್ತ ವಿಷಯದ ಬಗ್ಗೆ ತಿಳಿಯದೆ ಇರುವಾಗ

ಎಲ್ಲರೂ ಎಲ್ಲಾ ವಿಷಯಗಳನ್ನು ತಿಳಿದಿರಲು ಸಾಧ್ಯವಿಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು. ಯಾರಾದರೂ ಒಂದು ಗಂಭೀರ ವಿಷಯದ ಬಗ್ಗೆ ಮಾತನಾಡುತ್ತಿರುವಾಗ ಅದನ್ನು ಕೇಳುವ ಶಕ್ತಿ ಮೊದಲು ಇರಬೇಕು. ನಮಗೆ ತಿಳಿಯದೆ ಇರುವ ವಿಷಯಗಳ ಬಗ್ಗೆ ತಿಳಿದಿದೆ ಎನ್ನುವ ರೀತಿಯಲ್ಲಿ ತೋರಿಸಲು, ಅರ್ಥವಿಲ್ಲದ ಮಾತುಗಳನ್ನು ಆಡಬಾರದು. ಆ ಸಮಯದಲ್ಲಿ ಮೌನವಾಗಿ ಇರುವುದು ಉತ್ತಮ ಮಾರ್ಗ.

2. ಬೇರೆಯವರಿಗೆ ನೋವುಂಟು ಮಾಡುವ ಬದಲು ಮೌನ

2. ಬೇರೆಯವರಿಗೆ ನೋವುಂಟು ಮಾಡುವ ಬದಲು ಮೌನ

ಮನಸ್ಸಿಗೆ ಬಂದ ಮಾತನ್ನು ಒಮ್ಮೆಲೇ ಹೇಳುವುದರಿಂದ ಎದುರು ಇರುವ ವ್ಯಕ್ತಿಯ ಮನಸ್ಸಿಗೆ ನೋವಾಗಬಾರದು. ನಮ್ಮ ಮಾತುಗಳು ಇತರರ ಭಾವನೆಗಳಿಗೆ ನೋವು ಅಥವಾ ಬೇಸರವನ್ನು ಉಂಟುತ್ತದೆ ಎಂದಾಗ ಆದಷ್ಟು ಮೌನದಿಂದ ಇರುವುದು ಉತ್ತಮ. ಅನುಚಿತ ಮಾತುಗಳನ್ನು ಹೇಳಬೇಕು ಎನ್ನುವಂತಹ ಸಂದರ್ಭ ಬಂದಾಗ ಆದಷ್ಟು ಮಾತನಾಡದೆ, ಮೌನವಾಗಿರುವುದು ಲೇಸು. ನಾವು ಆಡುವ ಮಾತಿನಲ್ಲಿ ದಯೆ, ಪ್ರೀತಿ, ಸೃಜನಶೀಲತೆಯ ಶಕ್ತಿಯಿದ್ದರೆ, ಅದು ವ್ಯಕ್ತಿಯ ಪ್ರತಿಷ್ಟೆಯನ್ನು ಹಾಗೂ ಮಟ್ಟವನ್ನು ಎತ್ತರಕ್ಕೆ ಕೊಂಡೊಯ್ಯುವುದು.

3. ಕೇಳುವ ಸಮಯ ಬಂದಾಗ ಮೌನವಾಗಿರಿ

3. ಕೇಳುವ ಸಮಯ ಬಂದಾಗ ಮೌನವಾಗಿರಿ

ಸಾಮಾನ್ಯವಾಗಿ ನಾವು ಮಾತನಾಡುವುದು ಎಂದರೆ ನಿರರ್ಗಳವಾಗಿ ಮನಸ್ಸಿಗೆ ಬಂದಂತೆ ಮಾತನಾಡುತ್ತಾ ಇರುತ್ತೇವೆ. ಅದೇ ನಾವು ಬೇರೆಯವರ ಮಾತನ್ನು ಕೇಳಬೇಕು ಎಂದಾಗ ಅದು ಅತ್ಯಂತ ಕಷ್ಟದ ಸಮಗತಿಯಾಗುವುದು. ಏನು ಹೆಳುತ್ತಾರೆ? ಎನ್ನುವುದನ್ನು ಕೇಳುವ ವ್ಯವಧಾನ ನಮ್ಮಲ್ಲಿ ಇರುವುದಿಲ್ಲ. ನಮ್ಮ ಎದುರಿಗಿರುವ ವ್ಯಕ್ತಿ ಯಾವುದೋ ಸಂಗತಿಯ ಬಗ್ಗೆ ಒಂದಿಷ್ಟು ಮಾತನಾಡುತ್ತಿದ್ದಾರೆ ಅಥವಾ ಅವರಿಗಿರುವ ಜ್ಞಾನವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದಾಗ ಅದನ್ನು ಕೇಳುವ ತಾಳ್ಮೆ ಇರಬೇಕು. ಆ ಸಮಯದಲ್ಲಿ ನಾವು ಸಲ್ಲದ ಮಾತುಗಳನ್ನು ಹೇಳುವುದರ ಬದಲು ಆದಷ್ಟು ಮೌನ ವಹಿಸಿ, ಕೇಳುವುದು ಉತ್ತಮ.

 ನಿಮ್ಮ ಮಾತು ಜನರ ಮೇಲೆ ಕೆಟ್ಟದಾಗಿ ಪ್ರತಿಫಲಿಸುತ್ತಿದ್ದರೆ

ನಿಮ್ಮ ಮಾತು ಜನರ ಮೇಲೆ ಕೆಟ್ಟದಾಗಿ ಪ್ರತಿಫಲಿಸುತ್ತಿದ್ದರೆ

ಕೆಲವರು ಜನರ ಸಮೂಹದಲ್ಲಿ ಅಥವಾ ಆಪ್ತರೊಂದಿಗೆ ಇರುವಾಗ ಸಾಕಷ್ಟು ತಮಾಷೆ ಹಾಗೂ ಹಾಸ್ಯಾಸ್ಪದ ಪದಗಳನ್ನು ಹೇಳುತ್ತಾರೆ. ಅದು ಇತರರಿಗೆ ಇಷ್ಟವಾಗದೆ ಹೋಗಬಹುದು. ಅಂತಹ ಸಂದರ್ಭದಲ್ಲಿ ಸೂಕ್ಷ್ಮವಾಗಿ ಗಮನಿಸುವ ಹಾಗೂ ಅರ್ತೈಸಿಕೊಳ್ಳುವ ಕೌಶಲ್ಯ ನಮ್ಮಲ್ಲಿ ಇರಬೇಕು. ನಾವು ಹೇಳುವ ಮಾತು ಅಥವಾ ಶಬ್ದಗಳು ಇತರರಿಗೆ ಕಳಪೆ ಅಥವಾ ಅಸಹ್ಯವನ್ನು ಹುಟ್ಟಿಸುತ್ತಿದೆ ಎಂದಾಗ ಆದಷ್ಟು ಮೌನದ ವರ್ತನೆ ತೋರುವುದು ಸೂಕ್ತ. ಇದರಿಂದ ಸಾಕಷ್ಟು ಅನುಚಿತ ಭಾವನೆಗಳನ್ನು ನಿಯಂತ್ರಣದಲ್ಲಿ ಇಟ್ಟಂತಾಗುವುದು.

ಸುಳ್ಳು ಹೇಳಬೇಕಾಗಿ ಬಂದಾಗ

ಸುಳ್ಳು ಹೇಳಬೇಕಾಗಿ ಬಂದಾಗ

ಸುಳ್ಳು ಹೇಳುವುದು ಸುಲಭ. ಆದರೆ ಆ ಸುಳ್ಳನ್ನು ಮುಚ್ಚಲು ಮತ್ತೆ ಮತ್ತೆ ಸುಳ್ಳನ್ನು ಹೇಳುತ್ತಲೇ ಹೋಗಬೇಕು. ಸುಳ್ಳು ಎಂದಿಗೂ ಮರೆಮಾಚಲು ಸಾಧ್ಯವಿಲ್ಲ. ಒಂದಲ್ಲಾ ಒಂದು ಬಾರಿ ಸತ್ಯದ ಬೆಳಕಿಗೆ ತಲೆ ತಗ್ಗಿಸಿ ನಿಲ್ಲಲೇ ಬೇಕು. ಹಾಗಾಗಿ ನೀವು ಸುಳ್ಳು ಹೇಳುವ ಸಂದರ್ಭ ಅಥವಾ ಸಮಯ ಎದುರಾದಾಗ ಸುಳ್ಳು ಹೇಳುವ ಬದಲು ಮೌನವನ್ನು ವಹಿಸುವುದು ಸೂಕ್ತ. ಸುಳ್ಳಿನಿಂದ ಪರಿಸ್ಥಿತಿಯನ್ನು ಬಿಗಡಾಯಿಸುವುದಕ್ಕಿಂತ ಮೌನದಿಂದ ಪರಿಸ್ಥಿತಿಯನ್ನು ಶಾಂತಗೊಳಿಸುವುದು ಉತ್ತಮ.

ಮಾತುಗಳು ಸ್ನೇಹವನ್ನು ಹಾಳುಮಾಡುವಂತಿದ್ದರೆ

ಮಾತುಗಳು ಸ್ನೇಹವನ್ನು ಹಾಳುಮಾಡುವಂತಿದ್ದರೆ

ಸ್ನೇಹ ಎನ್ನುವುದು ಪವಿತ್ರವಾದ ಹಾಗೂ ಸುಂದರವಾದ ಬಂಧನ. ಆ ಸಂಬಂಧವನ್ನು ಹಾಳುಮಾಡಿಕೊಳ್ಳದೆ ಇದ್ದರೆ ಜೀವನವು ಸುಗಮವಾಗಿ ಸಾಗುವುದು. ನಮ್ಮ ಮಾತು ಅಥವಾ ಪದಗಳು ಸಂಬಂಧವನ್ನು ಹಾಗೂ ಸ್ನೇಹವನ್ನು ಹಾಳುಮಾಡುತ್ತದೆ ಎಂದಾದರೆ ಆ ಸಮಯದಲ್ಲಿ ಮೌನವಾಗಿ ಇರುವುದೇ ಲೇಸು. ಅನುಚಿತವಾದ ಮಾತುಗಳು ಸಂಬಂಧವನ್ನು ಬಹುಬೇಗ ಹಾಳುಮಾಡುತ್ತದೆ. ಸ್ನೇಹಪರ ಹಾಗೂ ಉತ್ತಮ ಮಾತುಗಳು ಇಲ್ಲ ಎಂದಾಗ ಮೌನದಿಂದ ಇದ್ದರೆ ಸಂಬಂಧವು ಉಳಿದುಕೊಳ್ಳುತ್ತದೆ. ಸ್ನೇಹ ಅಥವಾ ಸ್ನೇಹಿತರು ಇಲ್ಲ ಎಂದಾದರೆ ಜೀವನವು ಚೈತನ್ಯವನ್ನು ಕಳೆದುಕೊಂಡಂತೆ ಇರುತ್ತದೆ. ಹಾಗಾಗಿ ಸಂಬಂಧವನ್ನು ಮಾತಿನಿಂದಾಗಿ ಹಾಳು ಮಾಡಿಕೊಳ್ಳಬಾರದು.

ಒಂದೇ ಸಂಗತಿಯನ್ನು ಹತ್ತು ಬಾರಿ ಹೇಳುವ ಬದಲು

ಒಂದೇ ಸಂಗತಿಯನ್ನು ಹತ್ತು ಬಾರಿ ಹೇಳುವ ಬದಲು

ಸಂಭಾಷಣೆ ನಡೆಸುವಾಗ ಅಥವಾ ಯಾವುದೋ ಒಂದು ಗುಂಪಿನಲ್ಲಿ ಮಾತನಾಡುವಾಗ ಒಂದೇ ವಿಷಯವನ್ನು ಹತ್ತು ಬಾರಿ ಹೇಳುವ ಬದಲು, ತಿಳಿದ ವಿಷಯವನ್ನು ಸರಳ ಹಾಗೂ ಸಣ್ಣದಾಗಿ ಹೇಳಿ ಮುಗಿಸುವುದು ಉತ್ತಮ. ಹೇಳಿದ್ದನ್ನೇ ಹೇಳುತ್ತಾ ಇದ್ದರೆ ಅದು ಸುಳ್ಳು ಹೇಳುತ್ತಿದ್ದಾರೆ ಎನ್ನುವ ಸಂದೇಹವನ್ನು ಮೂಡಿಸಬಹುದು. ಹುರುಳಿಲ್ಲದ ಸಂಗತಿಯನ್ನು ಉದ್ದವಾಗಿ ಹೇಳುತ್ತಾ ಹೋಗುವುದರಲ್ಲಿ ಯಾವುದೇ ಅರ್ಥ ಇರುವುದಿಲ್ಲ. ಅಂತಹ ಸಮಯದಲ್ಲಿ ತಿಳಿದಷ್ಟು ವಿಷಯವನ್ನು ಹೇಳಿ ಮೌನವಾಗಿ ಉಳಿದರೆ ನಮ್ಮ ಬಗ್ಗೆ ಗೌರವ ಉಳಿದುಕೊಳ್ಳುತ್ತದೆ. ನಮ್ಮ ಮಾತಿಗೂ ಒಂದಿಷ್ಟು ಗೌರವ ದೊರೆಯುವುದು.

7. ತಪ್ಪನ್ನು ಒಪ್ಪಿಕೊಳ್ಳುವಾಗ ಮೌನ ಸೂಕ್ತ

7. ತಪ್ಪನ್ನು ಒಪ್ಪಿಕೊಳ್ಳುವಾಗ ಮೌನ ಸೂಕ್ತ

ಪ್ರತಿಯೊಬ್ಬರು ತಪ್ಪು ಎನ್ನುವುದನ್ನು ತಪ್ಪದೆ ಮಾಡುತ್ತಾರೆ. ನಾವು ಮಾಡುವ ತಪ್ಪು ಕೆಲವೊಮ್ಮೆ ನಮಗೆ ನಾಚಿಕೆಯನ್ನು ಹುಟ್ಟಿಸುವುದು. ಮಾಡಿದ ತಪ್ಪಿಗೆ ಕ್ಷಮೆಯನ್ನು ಯಾಚಿಸುವುದು ಸೂಕ್ತ. ಅದೇ ನಮ್ಮ ತಪ್ಪನ್ನು ಇತರರು ಗುರುತಿಸಿ, ನಮಗೆ ತಪ್ಪಿನ ಅರಿವನ್ನು ಮೂಡಿಸುವಾಗ ವಾದ ಮಾಡುವ ಬದಲು, ಅದನ್ನು ಒಪ್ಪಿಕೊಂಡು ಮೌನವಾಗಿದ್ದರೆ ನಿಮ್ಮ ಬಗ್ಗೆ ದಯೆ ತೋರುವರು. ಜೊತೆಗೆ ಒಂದಿಷ್ಟು ಭಾವನೆಯು ಹೆಚ್ಚುವುದು.

 ಸತ್ಯ, ಸಹಾಯ, ಅಗತ್ಯ ಹಾಗೂ ದಯೆ ಇರಬೇಕಾದ ಸಂದರ್ಭದಲ್ಲಿ ಮಾತನಾಡಿ

ಸತ್ಯ, ಸಹಾಯ, ಅಗತ್ಯ ಹಾಗೂ ದಯೆ ಇರಬೇಕಾದ ಸಂದರ್ಭದಲ್ಲಿ ಮಾತನಾಡಿ

ಮಾತನಾಡುವ ಅಗತ್ಯ ಇರುವಾಗ ಅಥವಾ ನಮ್ಮ ಒಂದು ಮಾತಿನಿಂದ ಒಳ್ಳೆಯ ಕೆಲಸ ಉಂಟಾಗುತ್ತದೆ ಎಂದಾಗ ಯಾವುದೇ ಸಂದೇಹಕ್ಕೆ ಒಳಗಾಗದೆ ಮಾತನಾಡಬೇಕು. ಆಗ ನಮ್ಮ ಮಾತಿಗೆ ಗೌರವ ದೊರೆಯುವುದು. ಸತ್ಯ ಸಂಗತಿಯನ್ನು ಹೊರತರುವಾಗ, ಸತ್ಯದ ಪರವಾಗಿ ಇದ್ದಾಗ, ಇತರರಿಗೆ ಸಹಾಯದ ಅಗತ್ಯ ಇರುವಾಗ, ಸ್ಫೂರ್ತಿ ಬೇಕಾದಾಗ, ದಯೆಯ ಅನಿವಾರ್ಯತೆ ಇರುವಾಗ ಮೌಲ್ಯಯುತವಾದ ಮಾತುಗಳನ್ನು ಅಥವಾ ಶಬ್ದಗಳನ್ನು ಹೇಳಬೇಕು. ಆಗ ಪರಿಸ್ಥಿತಿಯು ಸುಧಾರಿಸುವುದು. ನಮ್ಮ ಮಾತಿನಿಂದ ಒಂದಿಷ್ಟು ಒಳ್ಳೆಯದಾಗುತ್ತದೆ ಎಂದಾಗ ತಪ್ಪದೇ ಮಾತನಾಡಬೇಕು. ನಮ್ಮ ಮಾತಿನಿಂದ ಇತರರಿಗೂ ಸಂತೋಷ ಹಾಗೂ ಸಮಾಧಾನ ಉಂಟಾಗುವುದು. ಹಾಗಾಗಿ ನಾವು ಎಂದು ಮಾತನಾಡಬೇಕು? ಎಂದು ಮೌನವಾಗಿರಬೇಕು? ಎನ್ನುವುದನ್ನು ಅರಿತುಕೊಂಡರೆ ಜೀವನದ ಬಹುತೇಕ ಸಂಗತಿಗಳು ಸುಂದರವಾಗಿ ಸಾಗುವುದು.

English summary

You Must Know When To Be Silent

There is no wisdom like knowing when to be silent, when to speakIt can be tough to know when to speak and when to be silent . I am sure we have all experienced situations where it’s been extremely difficult not to respond / react to someone. Self-awareness, perceptiveness and empathy are the keys to making the right decision.
Story first published: Tuesday, December 24, 2019, 14:05 [IST]
X
Desktop Bottom Promotion