For Quick Alerts
ALLOW NOTIFICATIONS  
For Daily Alerts

ವಿಶ್ವ ಛಾಯಾಗ್ರಹಣ ದಿನ ಇತಿಹಾಸ, ಮಹತ್ವ ಮತ್ತು ಆಚರಣೆ

|

ಛಾಯಾಚಿತ್ರದ ಮೂಲಕ ವಿಶ್ವವನ್ನು ಸಕಾರಾತ್ಮಕವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಆರಂಭವಾದ ವಿಶ್ವ ಛಾಯಾಗ್ರಹಣ ದಿನವನ್ನು 2021ರಲ್ಲಿ ಆಗಸ್ಟ್‌ 19 ಗುರುವಾರದಂದು ಆಚರಿಸಲಾಗುವುದು.

ಛಾಯಾಗ್ರಹಣಕ್ಕಿರುವ ಸಾಮರ್ಥ್ಯವನ್ನು 'ಒಂದು ಚಿತ್ರ ಸಾವಿರ ಪದಗಳಿಗೆ ಸಮ', 'ಪದಗಳಲ್ಲಿ ವರ್ಣಿಸಲಸಾಧ್ಯವಾದ ಅದೆಷ್ಟೋ ಮಾತುಗಳನ್ನು ಕೇವಲ ಒಂದು ಚಿತ್ರ ಬಿಡಿಸಿಡುತ್ತದೆ; ಎಂಬಂಥ ಮಾತುಗಳು ತಿಳಿಸುತ್ತದೆ.

World Photography Day

ವಿಶ್ವ ಛಾಯಾಗ್ರಹಣ ದಿನದ ಇತಿಹಾಸ

1939ರ ಆಗಸ್ಟ್ 19ರಂದು ಫ್ರಾನ್ಸ್ ದೇಶದಲ್ಲಿ ಮೊದಲ ಬಾರಿಗೆ ವಿಶ್ವ ಛಾಯಾಗ್ರಹಣ ದಿನವನ್ನು ಘೋಷಿಸಿತು. ಆದರೆ ಜಾಗತಿಕ ಮಟ್ಟದಲ್ಲಿ ಛಾಯಾಚಿತ್ರಕ್ಕಿರುವ ಮನ್ನಣೆ ಗಮನಿಸಿ 2010ರ ಆಗಸ್ಟ್ 19ರಂದು ವಿಶ್ವ ಮಟ್ಟದಲ್ಲಿ ಭಾರತವೂ ಸೇರಿದಂತೆ ಅಂದಾಜು 100 ದೇಶಗಳು ಆನ್ ಲೈನ್ ಗ್ಯಾಲರಿಗಳು ಮೊದಲ ಛಾಯಾಗ್ರಹಣ ದಿನವನ್ನು ಆಚರಿಸಿತು. ಮೊಟ್ಟ ಮೊದಲ ಬಾರಿಗೆ ನಡೆದ ಈ ಛಾಯಾಗ್ರಹಣ ದಿನ ನಂತರ ಇತಿಹಾಸದ ಪುಟ ಸೇರಿತು.

ಛಾಯಾಗ್ರಹಣ ದಿನ ಆಚರಣೆಯ ಮಹತ್ವ

ಛಾಯಾಗ್ರಾಹಕರು ತಮ್ಮ ಯೋಚನೆಗಳನ್ನು ಹಂಚಿಕೊಳ್ಳಲು, ಪ್ರೋತ್ಸಾಹಿಸುವ ಮೂಲಕ, ವಿಶ್ವ, ದೇಶ, ರಾಜ್ಯ ಮಟ್ಟಗಳಲ್ಲಿ ಕಲಾವಿದರ ಅತ್ಯುತ್ತಮ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಈ ದಿನವನ್ನು ವಿಶೇಷವಾಗಿ ಆಚರಿಸುತ್ತಾರೆ. ಮುಂದಿನ ಪೀಳಿಗೆಗೆ ತಜ್ಞರ ಅನುಭವ, ತಾಂತ್ರಿಕ ಕೌಶಲ್ಯಗಳು, ಪ್ರೇರಣೆ ನೀಡುವ ಮೂಲಕ ಈ ದಿನವನ್ನು ಸಾಕಾರಗೊಳಿಸುತ್ತಾರೆ. ಇದಕ್ಕಾಗಿ ವಿಶ್ವಾದ್ಯಂತ ಅಸಂಖ್ಯ ಛಾಯಾಗ್ರಾಹಕರು ಈ ದಿನಕ್ಕಾಗಿ ಕಾತುರದಿಂದ ಕಾಯುತ್ತಾರೆ.

ವಿಷಯಾಧಾರಿತ (Theme) ಆಚರಣೆ

ವಿಶ್ವ ಛಾಯಾಗ್ರಹಣ ದಿನವನ್ನು ಪ್ರತಿ ವರ್ಷ ವಿಷಯಾಧಾರಿತವಾಗಿ ಆಚರಿಸಲಾಗುತ್ತದೆ. 2017ರಲ್ಲಿ ಮೋಡಗಳ ಅರ್ಥೈಸುವಿಕೆ (Understanding clouds) ಹಾಗೂ 2018ರಲ್ಲಿ ಒಳ್ಳೆಯವರಾಗಿರಿ (Be nice) ಎಂಬ ವಿಷಯವನ್ನು ಆಧರಿಸಿ ಛಾಯಾಗ್ರಹಣ ದಿನವನ್ನು ಆಚರಿಸಲಾಗಿತ್ತು.

Read more about: world ವಿಶ್ವ
English summary

World Photography Day History, Significance and Important

On 19th August photography lovers across the globe will be celebrating World Photo Day. The main aim of World Photo Day is to inspire positive change across the world. Connecting people and raising awareness through the use of photography.
X
Desktop Bottom Promotion