Just In
Don't Miss
- News
ನಾವ್ಯಾರೂ ಸಚಿವ ಸ್ಥಾನ, ಖಾತೆ ಕೇಳಿಲ್ಲ ಎಂದ ಸೋಮಶೇಖರ್
- Movies
ಸಹೋದರಿಯ ಸ್ಥಿತಿ ಕಂಡು ಕಣ್ಣೀರಿಟ್ಟ ಬಾಲಿವುಡ್ ನಟಿ ಆಲಿಯಾ ಭಟ್
- Automobiles
ವೇಗವಾಗಿ ಬಂದು ಬಾಲಕಿಗೆ ಗುದ್ದಿದ್ದ ಕಾರು
- Travel
ಗದಗ ಜಿಲ್ಲೆಯಲ್ಲಿ ಭೇಟಿನೀಡಬಹುದಾದ ಅದ್ಬುತ ಸ್ಟಳಗಳು
- Education
DHFWS Davanagere Recruitment 2019: ವಿವಿಧ 19 ಹುದ್ದೆಗಳ ನೇಮಕಾತಿ.ಡಿ.16ರೊಳಗೆ ಅರ್ಜಿ ಹಾಕಿ
- Technology
ವಾಟ್ಸಪ್ ಬಳಕೆದಾರರಿಗೆ ಶಾಕಿಂಗ್ ಸುದ್ದಿ!..ಈ ಫೋನ್ಗಳಲ್ಲಿ ಇನ್ನು ವಾಟ್ಸಪ್ ಸ್ಥಗಿತ!
- Finance
ಡಿಸ್ಕೌಂಟ್ ಸೇಲ್ ಮೋಸಕ್ಕೆ 56.1% ಭಾರತೀಯರು ಬಲಿ
- Sports
ಏಕದಿನ ಸರಣಿ; ಗಾಯಗೊಂಡಿರುವ ಶಿಖರ್ ಬದಲಿಗೆ ಕನ್ನಡಿಗನಿಗೆ ಸ್ಥಾನ ಬಹುತೇಕ ಖಚಿತ
ಇಂದು ಅಂತಾರಾಷ್ಟ್ರೀಯ ಶ್ವಾನದಿನ: ಈ ದಿನದ ಮಹತ್ವ, ಇತಿಹಾಸ ನಿಮಗೆ ಗೊತ್ತೇ?
ಈ ಜಗತ್ತಿನಲ್ಲಿ ನಂಬಿಕೆಗೆ ಪಾತ್ರನಾದ ಪ್ರಾಣಿ ಎಂದರೆ ನಾಯಿ ಹಾಗೂ ಇದೇ ಕಾರಣಕ್ಕೆ ಈ ಜಗತ್ತಿನಲ್ಲಿ ಅತಿ ಹೆಚ್ಚು ಸಾಕಲ್ಪಡುವ ಪ್ರಾಣಿಯೂ ಆಗಿದೆ. ನಾಯಿಗಳು ಪ್ರಾತಿಪಾತ್ರವೂ, ಸ್ವಾಮಿನಿಷ್ಠವೂ ಆಗಿರುವ ಜೊತೆಗೆ ಬುದ್ದಿವಂತಿಕೆಯನ್ನೂ ಪಡೆದಿರುತ್ತವೆ ಹಾಗೂ ಇವುಗಳ ಒಡೆಯರ ಸಾಮೀಪ್ಯವನ್ನು ಪಡೆದುಕೊಳ್ಳುತ್ತವೆ. ತಮ್ಮ ಮಾಲಿಕನನ್ನು ಒಪ್ಪಿಕೊಂಡ ಬಳಿಕ ಇವು ಜೀವನಪರ್ಯಂತ ನಿಸ್ವಾರ್ಥವಾದ ಪ್ರೀತಿಯನ್ನು ಪ್ರಕಟಿಸುತ್ತವೆ. ಈ ಎಲ್ಲಾ ಕಾರಣಗಳಿಂದಾಗಿಯೇ ನಾಯಿ "ಮಾನವನ ಅತ್ಯುತ್ತಮ ಸ್ನೇಹಿತ" ಎಂದೇ ಕರೆಯಲ್ಪಡುವುತ್ತಿರುವುದರಲ್ಲಿ ಅತಿಶಯೋಕ್ತಿಯಿಲ್ಲ.
ನಾಯಿಯ ಮೇಲಿನ ಪ್ರೀತಿಗೆ ವಿಶ್ವದಾದ್ಯಂತ ಒಂದು ದಿನವನ್ನು ನಿಗದಿಪಡಿಸಲಾಗಿದ್ದು ಪ್ರತಿವರ್ಷ ಆಗಸ್ಟ್ 26ರಂದು ಅಂತಾರಾಷ್ಟ್ರೀಯ ಶ್ವಾನದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಆಚರಣೆಯ ಮೂಲಕ ನಾಯಿಗಳು ತಮ್ಮ ನಿತ್ಯಜೀವನದ ಮೇಲೆ ಯಾವ ರೀತಿಯ ಪ್ರಭಾವ ಬೀರಿವೆ ಹಾಗೂ ನಾಯಿಗಳ ಅವಶ್ಯಕತೆಯನ್ನು ಜನರು ಅರಿತುಕೊಳ್ಳುವಂತಾಗಬೇಕು ಎಂದು ತಿಳಿಸುವುದು ಈ ಆಚರಣೆಯ ಮುಖ್ಯ ಉದ್ದೇಶವಾಗಿದೆ. ಅಷ್ಟೇ ಅಲ್ಲ, ವಿವಿಧ ಕ್ಷೇತ್ರಗಳಲ್ಲಿ ನಾಯಿಗಳು ಮಾನವನಿಗೆ ಸಲ್ಲಿಸುತ್ತಿರುವ ಸೇವೆ ಹಾಗೂ ನಿರ್ಗತಿಕ ಮತ್ತು ತ್ಯಜಿಸಲ್ಪಟ್ಟ ನಾಯಿಗಳ ಪೋಷಣೆಯ ಕುರಿತ ಕಾಳಜಿಯನ್ನು ವಹಿಸುವುದೂ ಆಗಿದೆ.

ಕೋಲೀನ್ ಪೇಯ್ಜ್ರಿಂದ ಅಚರಣೆ ಆರಂಭ
ಸ್ವತಃ ಶ್ವಾನಪ್ರಿಯ ಹಾಗೂ ಪ್ರಾಣಿ ನಡವಳಿಕೆ ತಜ್ಞರಾಗಿರುವ ಕೋಲೀನ್ ಪೇಯ್ಜ್ ರವರು ಈ ಆಚರಣೆಯನ್ನು 2004ರಿಂದ ಪ್ರಾರಂಭಿಸಿದರು. ಈ ದಿನವನ್ನು ಕೇವಲ ರಜಾದಿನವನ್ನಾಗಿ ಆಚರಿಸದೇ ಶ್ವಾನಗಳ ಪ್ರತಿ ತಮ್ಮ ಪ್ರೀತಿಯನ್ನು ತೋರುವ ಅವಕಾಶವೆಂದು ಆಕೆ ತಿಳಿಸುತ್ತಾರೆ. ಆದರೆ ಈ ದಿನದ ಆಚರಣೆಯ ಮಹತ್ವ ಇದಕ್ಕಿಂತಲೂ ಹೆಚ್ಚು ಗಹನವಾದ ವಿಷಯಗಳಿಗೂ ಅನ್ವಯಿಸುತ್ತದೆ. ನಿಂದನೆಗೊಳಗಾದ ನಾಯಿಗಳಿಗೆ ಆಶ್ರಯ, ಮಿಶ್ರತಳಿಗಳನ್ನು ಸೃಷ್ಟಿಸುವ ಕಾರ್ಖಾನೆಗಳನ್ನು ನಿಲ್ಲಿಸುವುದು ಹಾಗೂ ತಳಿ-ನಿರ್ದಿಷ್ಟ ಶಾಸನವನ್ನು ನಿಯಂತ್ರಿಸುವ ಅಥವಾ ಸಂಪೂರ್ಣ ನಿಷೇಧಿಸುವುದು, ನಾಯಿಗಳ ಆಕ್ರಮಣವನ್ನು ತಡೆಯಲು ಕೆಲವು ತಳಿಗಳನ್ನು ನಿಷೇಧಿಸುವುದು ಮೊದಲಾದವು ಈ ಆಚರಣೆಯ ಇತರ ಮಹತ್ವದ ಕಾಳಜಿಗಳಾಗಿವೆ.

ಶ್ವಾನದಿನದ ಆಚರಣೆ ಹೇಗೆ?
ಈ ದಿನವನ್ನು ಹಲವು ರೀತಿಯಲ್ಲಿ ಆಚರಿಸಬಹುದು. ಕೆಲವರು ಸರಳವಾಗಿ, ಈ ದಿನದಂದು ತಮ್ಮ ನೆಚ್ಚಿನ ನಾಯಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ, ನಾಯಿಗೆ ಇಷ್ಟವಾಗುವಂತಹ ಆಟಿಕೆ, ತಿಂಡಿಗಳನ್ನು ಕೊಡಿಸುತ್ತಾರೆ. ಇತರರು ತಮ್ಮ ಸಮಯ ಮತ್ತು ಧನವನ್ನು ಪ್ರಾಣಿದಯಾ ಸಂಸ್ಥೆಗಳಿಗೆ ವಿನಿಯೋಗಿಸುವ ಮೂಲಕ ಆಚರಿಸುತ್ತಾರೆ. ಶ್ವಾನದಿನದ ವ್ಯಾಪ್ತಿಯು ಪಾರುಗಾಣಿಕಾ ಮನೆಯಿಂದ ನಾಯಿಯನ್ನು ದತ್ತು ತೆಗೆದುಕೊಳ್ಳುವುದರಿಂದ ಹಿಡಿದು ನಿಮ್ಮ ನಾಯಿಗೆ ಸಮಗ್ರ ಸ್ಪಾ ಚಿಕಿತ್ಸೆಯನ್ನು ನೀಡುವುದು ಅಥವಾ ನಿಮ್ಮ ಮತ್ತು ನಿಮ್ಮ ನಾಯಿ ಹೊಂದಾಣಿಕೆಯ ಟೀ ಶರ್ಟ್ ಗಳನ್ನು ಖರೀದಿಸುವುದು ಮೊದಲಾದವುಗಳೂ ಸೇರಿವೆ.
ಈ ದಿನವನ್ನು ಪ್ರೋತ್ಸಾಹಿಸುವ ಗಣ್ಯರ ಸಂಖ್ಯೆಯೇನೂ ಕಡಿಮೆಯಿಲ್ಲ. ಸ್ವತಃ ನಾಯಿಯೊಂದರ ಒಡೆಯರಾಗಿರುವ ಅಮೇರಿಕಾದ ಪ್ರೂವಾರ್ಧ್ಯಕ್ಷ ಜಾರ್ಜ್ ಬುಶ್, ಸ್ಕಾಟ್ಲೆಂಡಿನ ಹಿಡುವಳಿ ದಾಖಲೆದಾರ ಬಾರ್ನಿಯವರು ತಮ್ಮ ಅಂತರ್ಜಾಲ ತಾಣದಲ್ಲಿ ನಾಯಿಯ ಚಿತ್ರವನ್ನು ಸ್ಥಾಪಿಸಿರುವ ಜೊತೆಗೇ ಕೆಲವಾರು ಕಿರುಚಿತ್ರಗಳನ್ನೂ ನಿರ್ಮಿಸಿದ್ದಾರೆ.

ನೀವು ಸಹಾ ಶ್ವಾನಪ್ರಿಯರೇ?
ನೀವು ಸಹಾ ಶ್ವಾನಪ್ರಿಯರಾಗಿದ್ದರೆ ಈ ದಿನವನ್ನು ಶ್ವಾನಗಳ ಪ್ರತಿಭೆಯನ್ನು ಶ್ಲಾಘಿಸುವ ಮೂಲಕವೂ ಸರಳವಾಗಿ ಆಚರಿಸಬಹುದು. ನಿಮ್ಮ ಒಡೆತನದಲ್ಲಿರುವ ನಾಯಿಗಳ ಜೊತೆಗೆ ಪ್ರೀತಿಯ ಅಗತ್ಯವುಳ್ಳ ನಾಯಿಗಳಿಗೂ ನಿಮ್ಮ ಪ್ರೀತಿಯನ್ನು ತೋರಬಹುದು. ಒಂದು ವೇಳೆ ನೀವು ಬಹುಕಾಲದಿಂದ ನಾಯಿಯೊಂದಿಗಿನ ಒಡನಾಟದಿಂದ ದೂರವಾಗಿದ್ದರೆ ಈ ದಿನ ಅತಿ ಸೂಕ್ತವಾಗಿದೆ. ಆದರೆ ನಾಯಿಗಳ ಪ್ರಾಮುಖ್ಯತೆಯನ್ನು ಅರಿತುಕೊಳ್ಳುವ ಜೊತೆಗೇ ನೀವು ಸಮಾಜಕ್ಕೆ ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಮತ್ತು ಅಗತ್ಯವಿರುವ ನಾಯಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಹೇಗೆ ಹೆಚ್ಚು ಮಾನವೀಯವಾಗಬಹುದು ಎಂಬುದನ್ನೂ ನೀವು ತಿಳಿದುಕೊಳ್ಳಬಹುದು.