For Quick Alerts
ALLOW NOTIFICATIONS  
For Daily Alerts

ನವ ಆಷಾಢ ಗಂಡ-ಹೆಂಡತಿ ಜೊತೆಗಿರಬಾರದು, ಏಕೆ?

|

ಕರ್ನಾಟಕದಲ್ಲಿ ಜೂನ್‌ 11ರಿಂದ ಆಗಸ್ಟ್‌ 8ರವರೆಗೆ ಆಷಾಢ. ಆಷಾಢಮಾಸ ಶುರುವಾದರೆ ಯಾವುದೇ ಶುಭಕಾರ್ಯಗಳನ್ನು ಮಾಡುವುದಿಲ್ಲ, ಆದರೆ ಹೊಸದಾಗಿ ಮದುವೆಯಾದ ಹೆಣ್ಮಕ್ಕಳಿಗೆ ತವರಿಗೆ ಹೋಗುವ ಸಂಭ್ರಮ ಗರಿಗೆದರುವುದು.

Why Newly Married Couple Seperated On Ashada Masa

ಹೊಸದಾಗಿ ಮದುವೆಯಾದವರು ಆಷಾಢಮಾಸದಲ್ಲಿ ಗಂಡ-ಹೆಂಡತಿ ಜೊತೆಗಿರಬಾರದೆಂದು ಹೇಳುತ್ತಾರೆ. ಇನ್ನು ಆಂಧ್ರ ಕಡೆಯಲ್ಲಿ ಅತ್ತೆ-ಸೊಸೆ ಆಷಾಢ ಮಾಸದಲ್ಲಿ ಜೊತೆಗಿರಬಾರದೆಂದು ಹೇಳುತ್ತಾರೆ. ಅತ್ತೆ-ಸೊಸೆ ಜೊತೆಗಿರಬಾರದು, ಹೊಸದಾಗಿ ಮದುವೆಯಾದ ಗಂಡ-ಹೆಂಡತಿ ಜೊತೆಗಿರಬಾರದು ಎಲ್ಲವೂ ಒಂದೇ ಅರ್ಥ ಸೂಚಿಸುತ್ತದೆ.

ಏಕೆಂದರೆ ಹಿಂದಿನ ಕಾಲದಲ್ಲಿ ಕೂಡು ಕುಟುಂಬ ಇತ್ತು, ಅತ್ತೆ, ಗಂಡನ ಜೊತೆ ವಾಸಿಸುತ್ತಿದ್ದರು, ಆಷಾಢದಲ್ಲಿ ಅತ್ತೆ-ಸೊಸೆ ಜೊತೆಗಿರಬಾರದೆಂದರೆ ಪರೋಕ್ಷವಾಗಿ ಗಂಡನ ಬಿಟ್ಟು ಹೆಣ್ಮಕ್ಕಳು ದೂರವಿರಬೇಕೆಂಬುವುದಾಗಿದೆ.

ಹಿರಿಯರು ಮಾಡಿರುವ ಈ ರೀತಿಯ ಸಂಪ್ರದಾಯಕ್ಕೆ ಒಂದು ರೀತಿಯ ಅರ್ಥವಿರುತ್ತದೆ. ಏಕೆ ಈ ರೀತಿ ಹೇಳುತ್ತಾರೆ ಎಂಬುವುದನ್ನು ಕೆಲವರು ವೈಜ್ಞಾನಿಕವಾಗಿ ಅವಲೋಕಿಸಿದರೆ ಇನ್ನು ಕೆಲವರು ಇದರ ಸಾಮಾಜಿಕ- ಆರ್ಥಿಕ ಕಾರಣವಿದೆ ಎನ್ನುತ್ತಾರೆ. ಇನ್ನು ಜ್ಯೋತಿಷ್ಯ ಕೂಡ ಏಕೆ ಈ ರೀತಿಯ ಸಂಪ್ರದಾಯವಿದೆ ಎಂಬುವುದಕ್ಕೆ ತನ್ನದೇ ಆದ ವ್ಯಾಖ್ಯಾನ ನೀಡುತ್ತದೆ.

ಆಷಾಢದಲ್ಲಿ ನವ ದಂಪತಿ ಏಕೆ ದೂರವಿರಬೇಕೆಂಬುವುದನ್ನು ನೋಡೋಣ ಬನ್ನಿ:

ವೈದ್ಯಕೀಯ ಕಾರಣ:

ವೈದ್ಯಕೀಯ ಕಾರಣ:

ಆಷಾಢ ಮಾಸದಲ್ಲಿ ಗರ್ಭಧಾರಣೆಯಾದರೆ ಮಗು ಏಪ್ರಿಲ್ ತಿಂಗಳಿನಲ್ಲಿ ಜನಿಸುತ್ತದೆ. ಆ ಸಮಯದಲ್ಲಿ ಉಷ್ಣಾಂಶ ಅಧಿಕವಿರುತ್ತದೆ. ಇದರಿಂದಾಗಿ ನವಜಾತ ಶಿಶುಗೆ ತೊಂದರೆಗಳು ಉಂಟಾಗುತ್ತದೆ. ಇನ್ನು ನೀರಿನಿಂದ ಬರುವ ಸಮಸ್ಯೆಗಳು ಕೂಡ ಈ ಸಂದರ್ಭದಲ್ಲಿ ಅಧಿಕ. ಈ ಎಲ್ಲಾ ದೃಷ್ಟಿಯಿಂದ ನೋಡುವುದಾದರೆ ಆಷಾಢ ಮಾಸದಲ್ಲಿ ಗರ್ಭಧಾರಣೆಯಾಗದಿರಲು ಆ ಸಮಯದಲ್ಲಿ ಗಂಡ-ಹೆಂಡತಿ ಪ್ರತ್ಯೇಕವಾಗಿರುವುದು ಒಳ್ಳೆಯದು.

ಸಾಮಾಜಿಕ- ಆರ್ಥಿಕ ಕಾರಣ

ಸಾಮಾಜಿಕ- ಆರ್ಥಿಕ ಕಾರಣ

ಆಷಾಢ ಮಾಷದಲ್ಲಿ ಮಳೆ ಹೆಚ್ಚಾಗುತ್ತದೆ, ಕೃಷಿ ಚಟುವಟಿಕೆಗಳೂ ಚುರುಕಾಗುವುದು. ಹೊಸದಾಗಿ ಮದುವೆಯಾದ ದಂಪತಿ ಜೊತೆಯಲ್ಲಿಯೇ ಇದ್ದರೆ ಸದಾ ರೊಮ್ಯಾಂಟಿಕ್‌ ಮೂಡ್‌ನಲ್ಲಿರುತ್ತಾರೆ. ಇತರ ಕೆಲಸ ಕಾರ್ಯಗಳ ಕಡೆ ಗಮನ ಹರಿಸುವುದಿಲ್ಲ. ಆದ್ದರಿಂದ ಈ ಸಮಯದಲ್ಲಿ ಹೆಂಡತಿ ತವರಿಗೆ ಹೋದರೆ ಗಂಡ ತನ್ನ ಹೊಲ-ಗದ್ದೆಗಳ ಕೆಲಸದಲ್ಲಿ ಗಮನ ಹರಿಸಬಹುದು. ಹೀಗಾಗಿ ಆಷಾಢ ಸಮಯದಲ್ಲಿ ನವ ದಂಪತಿ ದೂರವಿರಬೇಕೆಂದು ಹೇಳುತ್ತಾರೆ.

 ಜ್ಯೋತಿಷ್ಯ

ಜ್ಯೋತಿಷ್ಯ

ಸಂತಾನ ಪಡೆಯಲು ಆಷಾಢ ಮಾಸ ಒಳ್ಳೆಯದಲ್ಲವೆಂದು ಜ್ಯೋತಿಷ್ಯಶಾಸ್ತ್ರ ಕೂಡ ಹೇಳುತ್ತದೆ. ಮಗು ಜನಿಸಿದಾಗ ಜಾತಕದಲ್ಲಿ ಸೂರ್ಯ ಮತ್ತು ಶುಕ್ರ ಇದ್ದರೆ ಒಳ್ಳೆಯದು ಅಂತಾರೆ. ಆದರೆ ಯಾರೂ ತಮ್ಮ ಮಕ್ಕಳ ಜಾತಕದಲ್ಲಿ ಬುಧ ದುರ್ಬಲನಾಗಿರುವುದು ಬಯಸುವುದಿಲ್ಲ. ಆಷಾಢದಲ್ಲಿ ಗರ್ಭಧಾರಣೆಯಾದರೆ ಬುಧ ದುರ್ಬಲನಾಗಿರುತ್ತಾನೆ .

ಯೋಗ್ಯ ಸಂತಾನಕ್ಕೆ ಸಂಸ್ಕಾರ ಆಷಾಢ ಕಳೆದು ಶ್ರಾವಣಮಾಸ ಒಳ್ಳೆಯದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ನಿಮ್ಮಲ್ಲಿ ಮೂಡುವ ಪ್ರಶ್ನೆಗಳಿವು...

ನಿಮ್ಮಲ್ಲಿ ಮೂಡುವ ಪ್ರಶ್ನೆಗಳಿವು...

ಇಷ್ಟೆಲ್ಲಾ ವಿವರಣೆ ನೀಡಿದ ಮೇಲೂ ನಿಮಗೊಂದು ಪ್ರಶ್ನೆ ಮೂಢಬಹುದು. ನವ ದಂಪತಿಗಳನ್ನು ಮಾತ್ರ ಆಷಾಢದಲ್ಲಿ ಪ್ರತ್ಯೇಕವಾಗಿರಲು ಹೇಳುತ್ತಾರೆ ಏಕೆ? ಪ್ರತಿವರ್ಷವೂ ಆಷಾಢ ಬರುತ್ತದೆ, ಎರಡನೇ ಬಾರಿ ಗರ್ಭಧಾರಣೆಗೆ ಆಷಾಢ ಮಾಸ ಲೆಕ್ಕಕ್ಕೆ ಇಲ್ಲವೇ, ಏಕೆ ಮದುವೆಯಾದ ಮೊದಲ ವರ್ಷ ಮಾತ್ರ ರೀತಿಯ ಸಂಪ್ರದಾಯಗಳು? ನಿಮ್ಮ ಈ ರೀತಿಯ ಪ್ರಶ್ನೆಗೆ ನಿಖರ ಉತ್ತರವಿಲ್ಲ. ಆದರೆ ಏಕೆ ಮದುವೆಯಾದ ಮೊದಲನೇ ವರ್ಷಕ್ಕೆ ಇಷ್ಟೊಂದು ಪ್ರಾಮುಖ್ಯತೆ ಕೊಡುತ್ತಾರೆ ಎಂಬುವುದು ಬಹುಶಃ ಈ ಕಾರಣಗಳಿಂದ ಇರಬಹುದು...

ಮೊದಲ ವರ್ಷವೇ ಏಕೆ ಎಂಬುವುದಕ್ಕೆ ದೊರೆಯುವ ಕಾರಣಗಳು

ಮೊದಲ ವರ್ಷವೇ ಏಕೆ ಎಂಬುವುದಕ್ಕೆ ದೊರೆಯುವ ಕಾರಣಗಳು

  • ವೈದ್ಯಕೀಯವಾಗಿ ಚೊಚ್ಚಲ ಹೆರಿಗೆಯನ್ನು ಹೆಣ್ಣಿಗೆ ಮರು ಹುಟ್ಟು ಎಂದು ಪರಿಗಣಿಸಲಾಗಿದೆ
  • ಅಲ್ಲದೆ ಹುಟ್ಟಿದ ಮೊದಲನೇ ಮಗುವನ್ನು ಮನೆಯ ವಾರಾಸುದಾರ ಎಂದು ಹೇಳುತ್ತಾರೆ
  • ಜ್ಯೋತಿಷ್ಯ ಪ್ರಕಾರ ಕೂಡ ಹುಟ್ಟುವ ಮೊದಲ ಮಗು ಒಳ್ಳೆಯ ನಕ್ಷತ್ರದಲ್ಲಿ ಹುಟ್ಟುವಂತಾಗಬೇಕು ಎಂದು ಹೇಳುತ್ತಾರೆ.
  • ಈ ಎಲ್ಲಾ ಕಾರಣಗಳಿಂದ ಬಹುಶಃ ಆಷಾಢ ಮಾಸದಲ್ಲಿ ನವ ಜೋಡಿಗಳು ಒಟ್ಟಿಗೆ ಇರಬಾರದು ಎನ್ನುತ್ತಾರೆ. ಇದರ ಕುರಿತು ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಇದ್ದರೆ boldsky.oneindia.co.inಗೆ ಇಮೇಲ್ ಮಾಡಿ.

English summary

Why Newly Married Couple Separated On Ashada Masa

In India, there is a tradition of separating newly married couple in the month of Ashada masa,. Here are reasons have a look.
X
Desktop Bottom Promotion