For Quick Alerts
ALLOW NOTIFICATIONS  
For Daily Alerts

ಈ ರಾಶಿಚಕ್ರಗಳು ಚೌಕಾಶಿ ಮಾಡುವುದರಲ್ಲಿ ಎತ್ತಿದ ಕೈ!

|

ಚೌಕಾಶಿ ಮಾಡುವುದು ಒಂದು ಕಲೆಯೇ ಹೌದು. ಕೆಲವರಿಗೆ ಚೌಕಾಶೀ ಮಾಡದೇ ವ್ಯಾಪಾರ ಮಾಡಿದರೆ ಸಮಾಧಾನವೇ ಆಗುವುದಿಲ್ಲ, ಇನ್ನೂ ಕೆಲವರು ಚೌಕಾಶಿ ಮಾಡಲು ಸಾಕಷ್ಟು ಮುಜುಗರಕ್ಕೆ ಒಳಗಾಗುವರೂ ಅಥವಾ ಚೌಕಾಶಿ ಮಾಡಿದರೆ ನಮ್ಮ ಘನತೆಗೆ ಧಕ್ಕೆ ಬರುತ್ತದೆ ಎಂದು ನಂಬುವವರೂ ಇದ್ದಾರೆ.

 Which Zodiac Signs Expert in Bargain

ಆದರೆ ಈ ಚೌಕಾಶಿ ಎಂಬ ಪದ ಹೆಚ್ಚು ಆಪ್ಯವಾಗುವುದು ಪುರುಷರಿಗಿಂತ ಹೆಚ್ಚು ಮಹಿಳೆಯರಿಗೇ. ಪತಿ ನೀಡಿರುವ ಹಣದಲ್ಲೇ ತರಕಾರಿ, ಸೊಪ್ಪು, ಹೂ, ಹಣ್ಣು ನಿತ್ಯ ಬೇಕಾಗುವ ಸಾಮಾಗ್ರಿಗಳನ್ನು ಖರೀದಿಸಿ ಅದರಲ್ಲೂ ಇಷ್ಟು ಹಣ ಉಳಿಸುವ ಚೌಕಾಶಿ ಗುಣ ಇರುವುದು ಮಹಿಳೆಯರಿಗೆ ಎಂದರೆ ಯಾರಿಗೂ ಅಚ್ಚರಿ ಎನಿಸದು.

ಅಂತೆಯೇ, ಜ್ಯೋತಿಶಾಸ್ತ್ರದ ಪ್ರಕಾರ ಯಾವ ರಾಶಿಯವರು ಚೌಕಾಶಿ ಮಾಡುವುದರಲ್ಲಿ ಎತ್ತಿದ ಕೈ, ಹೇಗೆ ಚೌಕಾಶಿ ಮಾಡುತ್ತಾರೆ ಎಂದು ಮುಂದೆ ತಿಳಿಯೋಣ.

1. ಮಕರ ರಾಶಿ

1. ಮಕರ ರಾಶಿ

ಮಕರ ರಾಶಿಯವರಿಗೆ ಚಿಲ್ಲರೆ ಹಣವನ್ನು ಕೊಟ್ಟು ಅಭ್ಯಾಸವೇ ಇಲ್ಲ ಎನ್ನಬಹುದು. ಇವರು ಏನೇ ಖರೀದಿಸಿದರೂ ಇರುವ ಬೆಲೆಯನ್ನು ಕಡಿಮೆ ಮಾಡಿ ರೌಂಡ್‌ ಫಿಗರ್‌ ಮಾಡಿ ಖರೀದಿಸುವುದು ಇವರಿಗೆ ಕರಗತ. ಅಲ್ಲದೇ ಇವರು ಗುಣಮಟ್ಟದ ವಸ್ತುಗಳನ್ನು ಮಾತ್ರ ಇಷ್ಟಪಡುತ್ತಾರೆ. ತಮಗೇ ಬೇಕಾದ ಬೆಲೆಗೆ ವ್ಯವಹಾರವನ್ನು ಕುದುರಿಸಲು ಕೊಂಚ ಸಸಮಯ ತಗುಲಿದರೂ ಪರವಾಗಿಲ್ಲ ಅಂತಿಮವಾಗಿ ಯಶಸ್ವಿಯಾಗಿ ಅಂದುಕೊಂಡಂತೆ ವ್ಯಾಪಾರ ಮಾಡುತ್ತಾರೆ.

ಇವರು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುತ್ತಿದ್ದರೆ ತಮಗೆ ಬೇಕಾದ ವಸ್ತುವನ್ನು ಕಾರ್ಟ್‌ನಲ್ಲಿ ಹಾಕಿ ಇಡುತ್ತಾರೆ, ನಂತರ ಬೆಲೆ ಕುಸಿಯುವವರೆಗೆ ಕಾಯುತ್ತಾರೆ, ನಂತರ ಮತ್ತೆ ಕಂಡುಕೊಳ್ಳಬಹುದಾದ ಎಲ್ಲಾ ಆನ್‌ಲೈನ್ ಕೂಪನ್ ಕೋಡ್‌ಗಳನ್ನು ಬಳಸುತ್ತಾರೆ. ಇವರು ಯಾವುದೇ ಪ್ರಚೋದನೆಗೆ ಒಳಪಟ್ಟು ವಸ್ತುಗಳನ್ನು ಖರೀದಿಸುವುದಿಲ್ಲ.

2. ವೃಷಭ ರಾಶಿ

2. ವೃಷಭ ರಾಶಿ

ವೃಷಭ ರಾಶಿಯವರು ಸಹ ಚೌಕಾಶಿ ಮಾಡುವುದರಲ್ಲಿ ಹಿಂದಿಲ್ಲ. ಕಡಿಮೆ ಬೆಲೆಗೆ ಸಿಗುತ್ತಿದೆ ಎಂದು ಸಿಕ್ಕಿದ್ದನ್ನೆಲ್ಲಾ ಖರೀದಿಸುವ ಗುಣ ಇವರಿಗಿಲ್ಲ. ಅತ್ಯುತ್ತಮ ಗುಣಮಟ್ಟದ ವಸ್ತುವೇ ಬೇಕು ಇವರಿಗೆ. ಉದಾಹರಣೆಗೆ, ಕಾಶ್ಮೀರಿ, ಡಿಸೈನರ್ ಸರಕುಗಳು ಮತ್ತು ಉನ್ನತ-ಮಟ್ಟದ ಗುಣಮಟ್ಟದ ವಸ್ತುಗಳನ್ನು ಬಯಸುತ್ತಾರೆ. ಆದ್ದರಿಂದ ಇವರು ಬಯಸುವ ವಸ್ತುವನ್ನು ಪಡೆಯಲು ಎಷ್ಟು ಬೇಕಾದರೂ ಕಾಯುತ್ತಾರೆ.

ಪ್ರತಿಯಂದು ವಸ್ತುವಿಗೂ ಒಂದು ಕಾಲವಿದೆ ಎಂಬುದು ವೃಷಭ ರಾಶಿಯವರಿಗೆ ಚೆನ್ನಾಗಿ ಗೊತ್ತು, ಆದ್ದರಿಂದ ಮೊದಲೇ ಪ್ಲಾನ್‌ ಮಾಡಿ ಅಂಗಡಿಗಳಿಗೆ ಯೋಜನೆಯೊಂದಿಗೇ ಬರುತ್ತಾರೆ. ಈ ರಾಶಿಚಕ್ರಗಳು ಎಂಡ್‌ ಆಫ್ ಸೀಸನ್‌ ಸೇಲ್‌, ಡಿಸ್ಕೌಂಟ್‌ ಸೇಲ್‌ಗೆ ಹೆಚ್ಚು ಪ್ರಾಮುಖ್ಯತೆ

ನೀಡುತ್ತಾರೆ.

3. ಸಿಂಹ ರಾಶಿ

3. ಸಿಂಹ ರಾಶಿ

ಸಿಂಹ ರಾಶಿಯವರು ತಮ್ಮ ಜೀವನದಲ್ಲಿ ಬಹುತೇಕ ಚೌಕಾಶಿಗಳಾಗಿಯೇ ಬದುಕುತ್ತಾರೆ. ಮತ್ತು ಚೌಕಾಶಿ ಮಾಡುವುದನ್ನು ಸಹ ಅತ್ಯುತ್ತಮ ಸಂವಹನದ ಮೂಲಕ ಮಾಡುವುದು ಇವರ ಕುಶಲತೆ. ಈ ರಾಶಿಚಕ್ರದವರು ವರ್ಷಪೂರ್ತಿ ಉಡುಗೊರೆಗಳನ್ನು ಶಾಪಿಂಗ್ ಮಾಡಲು ಒಲವು ತೋರುತ್ತಾನೆ ಮತ್ತು ಕಡಿಮೆ ಬೆಲೆಗೆ ಇಷ್ಟದ ವಸ್ತಿಗಳು ಸಿಕ್ಕರೆ ಬಹಳ ಸಂತೋಷಗೊಳ್ಳುತ್ತಾರೆ.

ಇವರಿಗೆ ವ್ಯಾಪಾರದ ಸೀಕ್ರೆಟ್ ಗಳು, ಚೌಕಾಶಿ ಮಾಡುವ ಬಗೆ ಚೆನ್ನಾಗಿ ಗೊತ್ತು. ಇವರು ಎಲ್ಲೇ ಶಾಪಿಂಗ್‌ ಮಾಡಲಿ ಕಂಫರ್ಟಬಲ್‌ ಆಗಿ ವ್ಯವಹಾರ ಮಾಡುತ್ತಾರೆ. ಇನ್ನೊಂದು ವಿಶೇಷತೆ ಎಂದರೆ ಸಿಂಹ ರಾಶಿಯವರು ಎಷ್ಟೇ ಶ್ರೀಮಂತರಾಗಿದ್ದರೂ ಚೌಕಾಶಿ ಮಾಡುವುದನ್ನು ಮಾತ್ರ ಬಿಡುವುದಿಲ್ಲ.

4. ಮೇಷ ರಾಶಿ

4. ಮೇಷ ರಾಶಿ

ಮೇಷ ರಾಶಿಯವರು ಬಯಸಿದರೆ ಉತ್ತಮ ಸ್ಪರ್ಧಾತ್ಮಕ ಅಥವಾ ಶೀಘ್ರ ನಿರ್ಧಾರ ತೆಗೆದುಕೊಳ್ಳುವ ವ್ಯಾಪಾರಿ ಆಗಿರಬಹುದು. ಇದಕ್ಕೆ ಮುಖ್ಯ ಕಾರಣ ಇವರು ಶಾಪಿಂಗ್ ಅನ್ನು ಸ್ಪರ್ಧಾತ್ಮಕ ಕ್ರೀಡೆಯಾಗಿ ನೋಡುತ್ತಾರೆ. ಇವರಿಗೆ ಅಂಗಡಿಯ ಹೊರಗೆ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವ ತಾಳ್ಮೆ ಇಲ್ಲವಾದರೆ, ಮೊದಲ ಅಂಗಡಿಯಲ್ಲೇ ಇಷ್ಟವಾದ ವಸ್ತುಗಳನ್ನು ಖರೀದಿಸುತ್ತಾರೆ.

ಇನ್ನೊಂದು ಕುತೂಹಲಕಾರಿ ಗುಣವೆಂದರೆ, ಇವರು ತಮಗೆ ಬೇಕಾದ ವಸ್ತು ಕಡಿಮೆ ಬೆಲೆಗೆ ಬೇಕೆಂದರೆ ಒಂದು ಅಂಗಡಿಗೆ ಹೋಗಿ ಚೌಕಾಶಿ ಮಾಡುವುದಿಲ್ಲ, ಬದಲಾಗಿ ಆ ವಸ್ತುವಿನ ಬಗ್ಗೆ ಬೇಹುಗಾರಿಕೆ ಮಾಡಿ, ಹಲವೆಡೆ ಸುತ್ತಾಡಿ ತಿಳಿದು ನಂತರ ಕಡಿಮೆ ಬೆಲೆಗೆ ಖರೀದಿಸುತ್ತಾರೆ.

5. ಕನ್ಯಾ ರಾಶಿ

5. ಕನ್ಯಾ ರಾಶಿ

ಅತ್ಯುತ್ತಮ ವಸ್ತುಗಳನ್ನು ಹುಡುಕುವ ವಿಷಯದಲ್ಲಿ ಕನ್ಯಾರಾಶಿ ಮೊದಲ ಸ್ಥಾನ ಪಡೆಯುತ್ತದೆ. ಇವರು ತಮಗೆ ಬೇಕಾದ ಉತ್ತಮ ವಸ್ತುಗಳನ್ನು ಪಡೆಯಲು ಸಾಕಷ್ಟು ಯೋಚನೆ ಮಾಡುತ್ತಾರೆ ಮತ್ತು ಅತ್ಯುತ್ತಮ ಡೀಲ್ಸ್‌ಗಳಿಗಾಗಿ ಹುಡುಕಾಡುತ್ತಾರೆ. ಇದರ ನಡುವೆ ಅತೀ ಕಡಿಮೆ ಬೆಲೆಗೆ ವಸ್ತು ಖರೀದಿಸಿದರೆ ಸಾಕಷ್ಟು ಸಂತೋಷಗೊಳ್ಳುತ್ತಾರೆ. ಇವರಿಗೆ ಇಷ್ಟವಾಗದ ವಸ್ತು ಸಿಗದಿದ್ದರೆ ಸಾಕಷ್ಟು ತಾಳ್ಮೆಯಿಂದ ಕಾಯುತ್ತಾರೆ.

ಸಾಕಷ್ಟು ಚೌಕಾಶಿ ಮಾಡಿ ವಸ್ತುವನ್ನು ಖರೀದಿಸಿದಾಗ ಇದನ್ನು ಎಲ್ಲರಿಗೂ ಹೇಳಿ ಸಂತೋಷ ಹಂಚಿಕೊಳ್ಳುವಲ್ಲಿ ಇವರು ಹಿಂಜರಿಯುವುದಿಲ್ಲ. ಇತರರಿಗಿಂತ ತಮಗೆ ಅತೀ ಕಡಿಮೆ ಬೆಲೆಗೆ ವಸ್ತು ಸಿಕ್ಕರೆ ಇವರು ತುಂಬಾ ಖುಷಿಪಡುತ್ತಾರೆ.

English summary

Which Zodiac Signs Expert in Bargain

Here we are discussing about which zodiac signs are expert in bargain. When you live for a bargain, you work at it. You’ve got every kind of money-saving app, collect coupons and scour the weekly flyers. It doesn’t matter if the bargain is at a discount store or at a higher-end store — it’s the bargain itself that counts. Read more.
Story first published: Friday, February 28, 2020, 16:31 [IST]
X
Desktop Bottom Promotion