For Quick Alerts
ALLOW NOTIFICATIONS  
For Daily Alerts

ರಾಶಿಗೆ ಅನುಗುಣವಾಗಿ ಮಹಿಳೆಯರ ಗುಣಲಕ್ಷಣ ಹೇಗಿರುತ್ತದೆ ಗೊತ್ತೆ?

|

ಮಹಿಳೆಯ ಗುಣ-ಸ್ವಭಾವ ಮೀನಿನ ಹೆಜ್ಜೆಯಂತೆ ಪತ್ತೆ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ. ಅಂದರೆ ಅಷ್ಟು ಭಿನ್ನ ಸ್ವಭಾವ, ಗುಣಲಕ್ಷಣಗಳನ್ನ್ನು ಮಹಿಳೆ ಹೊಂದಿದ್ದಾಳೆ ಅಥವಾ ವ್ಯಕ್ತಪಡಿಸುತ್ತಾಳೆ. ಪುರುಷರಿಗೆ ಹೋಲಿಸಿದರೆ ಮಹಿಳೆಯ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇ.

ಆದರೆ ಜ್ಯೋತಿಶಾಸ್ತ್ರದ ಪ್ರಕಾರ ಪ್ರತಿ ಮಹಿಳೆಯ ಗುಣ-ಲಕ್ಷಣ, ನಡತೆ ಹೇಗಿರುತ್ತದೆ?, ಯಾವ ರಾಶಿಯಯ ಮಹಿಳೆಯರು ಮೃದು, ಯಾವ ರಾಶಿ ಮಹಿಳೆಯರು ಕಠಿಣ ಅಥವಾ ಹಠಮಾರಿ ಸ್ವಭಾವವುಳ್ಳವರು ಎಂದು ತಿಳಿಯಬಹುದು. ನಿಮಗೂ ಮಹಿಳೆಯ ಮನಸ್ಸನ್ನು ಅರಿಯುವ ಆಸಕ್ತಿ ಇದೆಯೇ ಹಾಗಿದ್ದರೆ ಈ ಲೇಖನ ಓದಿ...

ಮೇಷ - ನಿಯಂತ್ರಿಸುವ ಸ್ವಭಾವ

ಮೇಷ - ನಿಯಂತ್ರಿಸುವ ಸ್ವಭಾವ

ಮೇಷ ರಾಶಿಯ ಮಹಿಳೆಯರು ನಿಯಂತ್ರಣ ಮತ್ತು ಶಕ್ತಿಯ ಸ್ವರೂಪ ಎಂದೇ ಹೇಳಬಹುದು. ಇವರು ನಾಯಕರಾಗಿರುವ ಕಾರಣ ತಮ್ಮದೇ ನಾಯಕತ್ವದಲ್ಲಿ ನಿಯಮಗಳನ್ನು ರೂಪಿಸುತ್ತಾರೆ. ಮೇಷ ರಾಶಿಯ ಮಹಿಳೆಯರಿಗೆ ತಮ್ಮಲ್ಲಿರುವ ಶಕ್ತಿಯ ಬಗ್ಗೆ ಸಂಪೂರ್ಣವಾಗಿ ಎಚ್ಚರವಿರುತ್ತದೆ ಮತ್ತು ಅವರು ಅದನ್ನು ಅತ್ಯಂತ ವಿವೇಚನೆಯಿಂದ ಮತ್ತು ಕಾಳಜಿಯಿಂದ ಬಳಸಿಕೊಳ್ಳುತ್ತಾಳೆ. ಪರಿಣಾಮಗಳನ್ನು ಕೂಲಂಕಷವಾಗಿ ಮೊದಲೇ ಯೋಚಿಸದೆ ಅವರು ಏನನ್ನೂ ಮಾಡುವುದಿಲ್ಲ. ಇವರ ಸಾಧನೆ ಕಂಡು ಇಡೀ ಜಗತ್ತು ಇವರನ್ನು ವಿಸ್ಮಯದಿಂದ ನೋಡುತ್ತದೆ. ಇದು ನಿಯಂತ್ರಿಸುವ ಸಾಮರ್ಥ್ಯವನ್ನು ಪಡೆದ ಮೇಷ ರಾಶಿಯ ಮಹಿಳೆಯ ಶಕ್ತಿಯಾಗಿದೆ.

ವೃಷಭ ರಾಶಿ - ಬಲಶಾಲಿಗಳು

ವೃಷಭ ರಾಶಿ - ಬಲಶಾಲಿಗಳು

ವೃಷಭ ರಾಶಿಯ ಮಹಿಳೆಯರು ಇಚ್ಛಾಶಕ್ತಿ ಮತ್ತು ಸಾಕಷ್ಟು ಬಲಶಾಲಿ ಸ್ವಭಾವದವರು. ಇವರು ಹೆಚ್ಚು ಮುನ್ನುಗ್ಗುವ ಛಾತಿ ಉಳ್ಳವರು ಹಾಗೂ ಹಠಮಾರಿ ಗುಣ ಹೊಂದಿದ್ದಾರೆ. ಇವರು ತಮಗಾಗಿ ಹಾಗೂ ತಮ್ಮನ್ನು ಅಗಾಧವಾಗಿ ಪ್ರೀತಿಸುವವರ ಪರವಾಗಿ ನಿಲ್ಲುವ ಧೈರ್ಯವನ್ನು ಹೊಂದಿದ್ದಾರೆ. ಆದರೆ ಇವರ ಹಠಮಾರಿ ಅಥವಾ ಬಲಶಾಲಿ ಸ್ವಭಾವದಿಂದ ಇವರಿಗಿರುವ ಚಿನ್ನದಂಥ ಹೃದಯವನ್ನು ಮರೆಮಾಚುತ್ತದೆ. ವೃಷಭ ರಾಶಿಯ ಮಹಿಳೆಯರು ಎಂದಿಗೂ ಕಾಳಜಿ ಮತ್ತು ಪ್ರೀತಿ ಉಳ್ಳವರು, ಅಗತ್ಯವಿರುವವರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧರಿರುತ್ತಾರೆ. ವೃಷಭ ರಾಶಿಯ ಮಹಿಳೆಯರು ಹೋರಾಡಿದರೆ ಜಗತ್ತ ನಿಲ್ಲಿಸುವಂಥ ಸಾಮರ್ಥ್ಯವನ್ನು ಹೊಂದಿದ್ದಾರೆ, ಇನ್ನು ಅವರು ಪ್ರೀತಿಸಿದರೆ ಪ್ರಪಂಚವು ಮೆಚ್ಚುತ್ತದೆ.

ಮಿಥುನ ರಾಶಿ - ಸೃಜನಾತ್ಮಕ ಚಿಂತಕರು

ಮಿಥುನ ರಾಶಿ - ಸೃಜನಾತ್ಮಕ ಚಿಂತಕರು

ಮಿಥುನ ರಾಶಿ ಮಹಿಳೆಯರು ಚಿಂತಕರು ಮತ್ತು ಸೃಷ್ಟಿಕರ್ತರು. ಇವರ ಸದಾ ಚಿಲುಮೆಯ ವ್ಯಕ್ತಿತ್ವವು ಚೌಕಟ್ಟನ್ನು ಮೀರಿ ಹೊರಗೆ ಯೋಚಿಸಲು ಶಕ್ತಗೊಳಿಸುತ್ತದೆ. ಇವರ ಕಲ್ಪನೆಯು ಅಕ್ಷರಶಃ ಇವರನ್ನು ಸಾಧನೆಯತ್ತ ಕರೆದೊಯ್ಯಬಹುದು, ಏಕೆಂದರೆ ಇವರು ತುಂಬಾ ಸಮರ್ಥ ಮಹಿಳೆ ಆದ್ದರಿಂದ ಆಲೋಚನೆಗಳನ್ನು ಸುಲಭವಾಗಿ ವಾಸ್ತವಕ್ಕೆ ಬದಲಾಯಿಸುವ ಚಾತುರ್ಯ ಇವರಿಗಿದೆ. ಇವರು ತಮ್ಮ ಸಾಮರ್ಥ್ಯವನ್ನು ಎಚ್ಚರಿಕೆಯಿಂದ ಬಳಸುತ್ತಾರೆ ಹಾಗೂ ದುರ್ಬಲರಲ್ಲದ ಕಾರಣ ತಮ್ಮ ಪ್ರಾಬಲ್ಯ ಸಾಧಿಸಲು ಇಷ್ಟಪಡುವುದಿಲ್ಲ. ಇವರು ತಮ್ಮ ಬುದ್ದಿ ಉಪಯೋಗಿಸಿ ಮಾತನಾಡುವಾಗ ಅವಳ ಆಲೋಚನೆಗಳ ಚಾಣಾಕ್ಷತಗೆ ಇಡೀ ಜಗತ್ತೆ ಮೆಚ್ಚುತ್ತದೆ.

ಕರ್ಕ ರಾಶಿ- ನಡೆದಾಡುವ ಒಗಟು

ಕರ್ಕ ರಾಶಿ- ನಡೆದಾಡುವ ಒಗಟು

ಕರ್ಕ ರಾಶಿಯ ಮಹಿಳೆ ಒಗಟಿನ ಸ್ವಭಾವ ಹೊಂದಿರುವುದರಿಂದ ಕೆಲವರು ಮಾತ್ರ ಅವರನ್ನು ಅರ್ಥಮಾಡಿಕೊಳ್ಳಬಹುದು. ಇವರು ಒಂದು ಕಡೆ ಉಗ್ರ ಮತ್ತು ಭಾವೋದ್ರಿಕ್ತರಾಗಿದ್ದರೆ, ಮತ್ತೊಂದೆಡೆ ಉದಾರ ಮತ್ತು ಕಾಳಜಿಯುಳ್ಳವರಾಗಿಸುತ್ತಾರೆ. ಇವರು ತಮ್ಮ ಮನಸ್ಥಿತಿಯನ್ನು ಕ್ಷಣಮಾತ್ರದಲ್ಲೇ ಬದಲಾಯಿಸಲು ಸಮರ್ಥರಾಗಿಸುತ್ತಾರೆ. ಒಬ್ಬ ಸ್ನೇಹಿತೆ ಮತ್ತು ಪ್ರೇಮಿಯಾಗಿ ಇವರು ತಿಂಬಾ ನಿಷ್ಠರಾಗಿರುತ್ತಾರೆ. ಏಕೆಂದರೆ ನಿಷ್ಠೆಗಿಂತ ಇವರಿಗೆ ಬೇರೇನೂ ಮುಖ್ಯವಲ್ಲ. ಆದರೆ ಇವರಿಗೆ ದ್ರೋಹ ಬಗೆದರೆ ಮಾತ್ರ ಅವರ ನಿಜವಾದ ಮತ್ತೊಂದು ರೂಪ ತೋರಿಸುತ್ತಾರೆ. ಆದ್ದರಿಂದ ಕರ್ಕ ರಾಶಿಯ ಮಹಿಳೆಗೆ ಎಂದಿಗೂ ದ್ರೋಹ ಬಗೆಯದಂತೆ ಎಚ್ಚರವಹಿಸಿ!

ಸಿಂಹ ರಾಶಿ- ಭವಿಷ್ಯದ ನಾಯಕಿ

ಸಿಂಹ ರಾಶಿ- ಭವಿಷ್ಯದ ನಾಯಕಿ

ಸಿಂಹ ರಾಶಿಯ ಮಹಿಳೆಯರು ವಿಶ್ವದ ಶ್ರೇಷ್ಠ ದಾರ್ಶನಿಕರು ಮತ್ತು ನಾಯಕರು. ಅವರ ಗುರಿಗಳನ್ನು ತಲುಪುವ ವಿಚಾರಕ್ಕೆ ಬಂದರೆ ಅವರು ಯಾವುದನ್ನೂ ನಿಲ್ಲಿಸುವುದಿಲ್ಲ. ಅವರ ಕನಸು ಯಾವಾಗಲೂ ಎತ್ತವಾಗಿಯೇ ಇರುತ್ತದೆ ಮತ್ತು ಇದು ಅವರ ಅತ್ಯುತ್ತಮ ಕಾರ್ಯಕ್ಷಮತೆಗೆ ಸಹ ಹೊಂದಿಕೆಯಾಗುತ್ತದೆ. ಈ ಮಹಿಳೆಯರು ಯಶಸ್ಸಿನ ಏಣಿಯನ್ನು ಏರುತ್ತಾರೆ ಮತ್ತು ಇತರರನ್ನು ತಮ್ಮೊಂದಿಗೆ ಕರೆದೊಯ್ಯುವುದನ್ನು ಹೆಚ್ಚು ಸಂತೋಷಪಡುತ್ತಾರೆ. ಮತ್ತು ಅವರು ವಿಫಲವಾದಾಗ ಸಹ ಘನತೆಯಿಂದ ವಿಫಲರಾಗುತ್ತಾರೆ. ಸಿಂಹ ರಾಶಿಯ ಮಹಿಳೆಯರೆಂದರೆ ವಿನಮ್ರತೆ ಮತ್ತು ಸದ್ಗುಣಗಳ ಪರಿಪೂರ್ಣ ಮಿಶ್ರಣವಿದ್ದಂತೆ. ಎಲ್ಲರೂ ಮೆಚ್ಚುತ್ತಾರೆ.

ಕನ್ಯಾ ರಾಶಿ- ಸದ್ಗುಣಗಳ ಮಹಿಳೆ

ಕನ್ಯಾ ರಾಶಿ- ಸದ್ಗುಣಗಳ ಮಹಿಳೆ

ಕನ್ಯಾರಾಶಿ ಮಹಿಳೆಯರು ಸದ್ಗುಣಗಳಿಂದ ತುಂಬಿರುತ್ತಾರೆ. ಇವರು ಯಾವಾಗಲೂ ಆಯ್ಕೆಯ ವಿಷಯಕ್ಕೆ ಬಂದಾಗ ಸರಿಯಾದ ವಿಷಯವನ್ನೇ ಆಯ್ಕೆ ಮಾಡುತ್ತಾರೆ. ಈ ಮಹಿಳೆಯರು ದೇವದೂತರ ಆತ್ಮಗಳನ್ನು ಹೊಂದಿದ್ದಾರೆ ಮತ್ತು ನಿಮ್ಮ ಜೀವನದಲ್ಲೇನಾದರೂ ಕನ್ಯಾರಾಶಿ ಮಹಿಳೆ ಇದ್ದರೆ ಅದು ನಿಜವಾದ ಆಶೀರ್ವಾದ. ಅವರು ಪ್ರೀತಿಯಿಂದ, ದಯೆಯಿಂದ ಮತ್ತು ಸ್ವಭಾವತಃ ಸಹಾಯ ಮಾಡುತ್ತಾರೆ. ಅವರು ನೋಯಿಸಿದಾಗಲೂ, ಅವರು ಯಾವಾಗಲೂ ಎಲ್ಲರ ಒಟ್ಟಿಗೆ ಇರಲು ಬಯಸುತ್ತಾರೆ ಮತ್ತು ತಮ್ಮಷ್ಟಕ್ಕೇ ಹೋರಾಡುತ್ತಾರೆ. ಇವರ ಪ್ರೀತಿಪಾತ್ರರನ್ನು ಕಳೆದುಕೊಂಡರೆ ಅತೀವ ದುಃಖ ಅನುಭವಿಸುತ್ತಾರೆ.

ತುಲಾ ರಾಶಿ- ಸೂಕ್ಷ್ಮಾಭಿರುಚಿಯ ಮಹಿಳೆ

ತುಲಾ ರಾಶಿ- ಸೂಕ್ಷ್ಮಾಭಿರುಚಿಯ ಮಹಿಳೆ

ತುಲಾ ರಾಶಿಯವರು ಸೂಕ್ಷ್ಮಾಭಿರುಚಿಯ, ಹಾಸ್ಯ ಪ್ರವೃತ್ತಿವುಳ್ಳ ಮತ್ತು ಚಾಣಾಕ್ಷ ಮಹಿಳೆಯರಾಗಿರುತ್ತಾರೆ. ಇವರ ಉನ್ನತ ಮಟ್ಟದ ತಿಳುವಳಿಕೆ ಮತ್ತು ಬುದ್ಧಿಶಕ್ತಿಯಿಂದ ಅತ್ಯುತ್ತಮ ಹಾಸ್ಯಪ್ರಜ್ಞೆ ಇವರದ್ದಾಗಿರುತ್ತದೆ. ತುಲಾ ರಾಶಿಯ ಮಹಿಳೆಯರು ಜೀವನವನ್ನು ಘನತೆ ಮತ್ತು ಸಮತೋಲನದಿಂದ ನಡೆಸುತ್ತಾರೆ ಮತ್ತು ಅವರು ತಮ್ಮ ಭಾವನೆಗಳನ್ನು ಸಾರ್ವಜನಿಕವಾಗಿ ತೋರಿಸುವುದು ಅಪರೂಪ. ಇವರು ಯಾವಾಗಲೂ ತನ್ನ ಸ್ವಭಾವದಂತೆಯೇ ಇರುತ್ತಾರೆ ಮತ್ತು ಸ್ವಯಂ-ಅರಿವು ಅವರಿಗೆ ಜೀವನದಲ್ಲಿ ಬೇಕಾದ ವಿಷಯಗಳ ಬಗ್ಗೆ ಖಚಿತವಾಗಿಸುತ್ತದೆ. ಇವರು ಆತ್ಮವಿಶ್ವಾಸ ಹೊಳಪಿಗೆ ಕಾರಣ ಮತ್ತು ಅದು ಅದರಿದಲೇ ಇವರನ್ನು ಸಾಮಾನ್ಯ ಮಹಿಳೆಯರಿಂದ ಬೇರ್ಪಡಿಸುತ್ತದೆ.

ವೃಶ್ಚಿಕ ರಾಶಿ - ನಿಗೂಢ ಸ್ವಭಾವ

ವೃಶ್ಚಿಕ ರಾಶಿ - ನಿಗೂಢ ಸ್ವಭಾವ

ಪ್ರತಿಯೊಬ್ಬ ವೃಶ್ಚಿಕ ರಾಶಿಯ ಮಹಿಳೆ ತನ್ನ ವ್ಯಕ್ತಿತ್ವದಲ್ಲಿ ಕುಟುಕು ಬುದ್ದಿ ಹೊಂದಿರುತ್ತಾರೆ. ವೃಶ್ಚಿಕ ಮಹಿಳೆ ಎಚ್ಚರಿಕೆಯಿಂದ, ತೀಕ್ಷ್ಣವಾಗಿರುತ್ತಾಳೆ ಮತ್ತು ಅವರು ಯಾರೆಂದು ಮತ್ತು ಅವರು ಏನು ಬಯಸಬೇಕೆಂದು ತಿಳಿದಿರುತ್ತಾಳೆ. ಇವರು ಎಲ್ಲರೊಂದಿಗೂ ಬಹಳ ಪ್ರಾಮಾಣಿಕಳಾಗಿರುತ್ತಾರೆ ಮತ್ತು ಅವರ ಮಾತಿನಿಂದ ಯಾರಿಗಾದರೂ ನೋವಾದರೂ ಇವರು ಹೆದರುವುದಿಲ್ಲ. ನೇರವಾದ ಮಾತುಗಾರರು ಮತ್ತು ಭಾವೋದ್ರಿಕ್ತ ಪ್ರೇಮಿ. ಇವರು ಸುಳ್ಳಿನಿಂದ ನೋಯಿಸುವುದಕ್ಕಿಂತ ಸತ್ಯದಿಂದ ನೋಯಿಸಲು ಬಯಸುತ್ತಾರೆ. ಸತ್ಯವನ್ನು ವೃಶ್ಚಿಕ ರಾಶಿಯವರಂತೆ ಯಾರೂ ನಿಭಾಯಿಸಲು ಸಾಧ್ಯವಿಲ್ಲ.

ಧನು ರಾಶಿ- ಭಾವನಾತ್ಮಕ ಮಹಿಳೆ

ಧನು ರಾಶಿ- ಭಾವನಾತ್ಮಕ ಮಹಿಳೆ

ಧನು ರಾಶಿ ಮಹಿಳೆಯರು ನಂಬಲಾಗದಷ್ಟು ಸೂಕ್ಷ್ಮತೆಯನ್ನು ಹೊಂದಿರುತ್ತಾರೆ. ಇವರು ತಮ್ಮ ಭಾವನೆಗಳನ್ನು ಮತ್ತು ಇತರರ ಭಾವನೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಇವರು ಇತರರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಸಲುವಾಗಿ ಅನುಭೂತಿ ಹೊಂದುವ ಮಹಿಳೆ ಎನ್ನಲಾಗುತ್ತದೆ. ತಮ್ಮನ್ನು ಸಾಧ್ಯವಾದಷ್ಟು ತಳಮಟ್ಟಕ್ಕೆ ಹಾಕಿಕೊಂಡು ಬೇರೆಯವರ ಭಾವನೆಯನ್ನು ಅನುಭವಿಸುತ್ತಾರೆ. ಆದರೆ, ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಬಂದಾಗ ಇವರು ಜಿಪುಣರು. ಕೆಲವರು ಮಾತ್ರ ತಮ್ಮ ನಿಜವಾದ ವ್ಯಕ್ತಿತ್ವವನ್ನು ಅರಿಯಲು ಇವರು ಅವಕಾಶ ನೀಡುತ್ತಾರೆ. ಧನು ರಾಶಿಯವರೇನಾದರೂ ನಿಮ್ಮನ್ನು ತಮ್ಮ ವೈಯಕ್ತಿಕ ಜಗತ್ತಿಗೆ ನಿಮಗೆ ಅವಕಾಶ ನೀಡಿದರೆ ನೀವು ಬಹಳ ವಿಶೇಷವೆಂದು ಪರಿಗಣಿಸಬಹುದು.

ಮಕರ ರಾಶಿ - ಸ್ವತಂತ್ರ ಚಿಂತನಶೀಲೆ

ಮಕರ ರಾಶಿ - ಸ್ವತಂತ್ರ ಚಿಂತನಶೀಲೆ

ಮಕರ ರಾಶಿಯ ಮಹಿಳೆಯರು ಚಿಂತನಶೀಲರು, ಸ್ವತಂತ್ರರು ಮತ್ತು ಸ್ವಭಾವತಃ ಸ್ವಯಂ-ಅರಿವುಳ್ಳವರು. ಇವರು ತಮ್ಮ ಆತ್ಮ ಪ್ರಜ್ಞೆಯನ್ನು ಪರಿಪೂರ್ಣಗೊಳಿಸಿದ್ದಾರೆ, ಆದ್ದರಿಂದ ಇವರು ಯಾರೆಂಬುದರ ಬಗ್ಗೆ ಅವರಿಗೆ ಯಾವುದೇ ಭ್ರಮೆಗಳಿಲ್ಲ. ಇವರು ತಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಚೆನ್ನಾಗಿ ತಿಳಿದಿದ್ದಾರೆ, ಆದ್ದರಿಂದ ಅವರು ಜೀವನದಲ್ಲಿ ಏನನ್ನು ನಿರೀಕ್ಷಿಸಬಹುದು ಎಂದು ತಿಳಿದಿದ್ದಾರೆ. ಇವರ ಎದ್ದುಕಾಣುವ ಆಂತರಿಕ ಸೌಂದರ್ಯವು ಇತರರು ಸ್ಪೂರ್ತಿದಾಯಕವಾಗಿದೆ ಏಕೆಂದರೆ ಮಕರ ರಾಶಿಯ ಮಹಿಳೆ ಮಾಡುವಂತೆ ಅನೇಕರು ತಮ್ಮ ಆತ್ಮವನ್ನು ತಿಳಿದಿದ್ದಾರೆಂದು ಹೇಳಲಾಗುವುದಿಲ್ಲ. ಆದ್ದರಿಂದ, ಈ ಮಹಿಳೆ ಮಾತನಾಡುವಾಗ ಅವಳು ತನ್ನ ಆತ್ಮದಿಂದ ಮಾತನಾಡುತ್ತಾಳೆ.

ಕುಂಭ ರಾಶಿ - ಹುಟ್ಟು ಕನಸುಗಾರ್ತಿ

ಕುಂಭ ರಾಶಿ - ಹುಟ್ಟು ಕನಸುಗಾರ್ತಿ

ಕುಂಭ ರಾಶಿಯ ಮಹಿಳೆಯರು ಹುಟ್ಟು ಕನಸುಗಾರರು ಮತ್ತು ಹೋರಾಟಗಾರರು. ಕುಂಭ ರಾಶಿ ಮಹಿಳೆಯರು ದೊಡ್ಡದನ್ನು ಸಾಧಿಸಲು ಆಂತರಿಕವಾಗಿ ಪ್ರೇರೇಪಿಸಲ್ಪಡುತ್ತಾರೆ ಮತ್ತು ಇವರ ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ಮುನ್ನುಗ್ಗುತ್ತಾರೆ. ಏನನ್ನಾದರೂ ಮಾಡಲು ಹೋರಾಡುವ ಈ ಮಹಿಳೆಯನ್ನು ನೋಡುವುದು ನಿಜವಾಗಿಯೂ ಭವ್ಯವಾದ ದೃಶ್ಯವಾಗಿದೆ. ಹೆಚ್ಚು ಮಹತ್ವಾಕಾಂಕ್ಷೆಯ ಮತ್ತು ಹಿಂಜರಿಕೆ ಇಲ್ಲದೆ ನಿರ್ದಯವಾಗಿ ಮುಂದುವರೆಯುವ ಇವರು ಬಯಸಿದರೆ ಜಗತ್ತನ್ನು ಚಲಿಸುವ ಮತ್ತು ರೂಪಿಸುವ ಮಹಿಳೆಯಾಗುತ್ತಾಳೆ.

ಮೀನ ರಾಶಿ - ಸಾಮಾನ್ಯ ಪ್ರೀತಿ

ಮೀನ ರಾಶಿ - ಸಾಮಾನ್ಯ ಪ್ರೀತಿ

ಮೀನ ರಾಶಿಯ ಮಹಿಳೆಯರು ಪ್ರಾಮಾಣಿಕತೆ, ಔದಾರ್ಯ ಮತ್ತು ಪ್ರೀತಿಯ ನಿಜವಾದ ಕಾರಂಜಿಗಳು. ಇವರ ನಿಜವಾದ ಸ್ವರೂಪವನ್ನು ಪ್ರೀತಿಯ ಮೇಲೆ ಮಾತ್ರ ನಿರ್ಮಿಸಲಾಗಿದೆ. ಇವರು ಹೆಚ್ಚು ಭಾವನಾತ್ಮಕ ಮತ್ತು ಸೂಕ್ಷ್ಮತೆಯನ್ನು ಹೊಂದಿದ್ದಾರೆ, ಆದರೆ ತಮ್ಮ ಭಾವನೆಗಳನ್ನು ಮರೆಮಾಡಲು ಪ್ರಯತ್ನಿಸುತ್ತಾರೆ. ತಮ್ಮ ಯುದ್ಧಗಳನ್ನು ಮೌನವಾಗಿಯೇ ಅಳಬಹುದು ಮತ್ತು ಹೋರಾಡಬಹುದು. ಇವರು ತಮ್ಮ ನೋವನ್ನು ತೋರಿಸಿಕೊಳ್ಳುವುದಕ್ಕಿಂತ ಸಾಯಲು ಬಯಸುತ್ತಾರೆ. ಅಂತೆಯೇ ನೋವಿನಿಂದ ಬಳಲುತ್ತಿರುವ ವ್ಯಕ್ತಿಯನ್ನು ಪ್ರೀತಿಸುವ ಮತ್ತು ಸಹಾಯ ಮಾಡುವವರಲ್ಲಿ ಮೊದಲಿಗರು ಇವರೇ. ಕುಂಭ ರಾಶಿಯ ಮಹಿಳೆಯರು ನೋವು ನಿವಾರಕರು ಆದ್ದರಿಂದ ಈ ಜಗತ್ತಿಗೆ ಹೆಚ್ಚು ಬೇಕಿರುವುದು ಕುಂಭ ರಾಶಿಯ ಮಹಿಳೆಯರೇ.

English summary

What Kind Of A Woman You Are, Based On Your Zodiac Sign

One of the things astrology can do is to give us a few clues about the types men and women various people typically find themselves most attracted to, as well as the type they'll ultimately choose when it comes to forming long-term, serious relationships.
Story first published: Saturday, October 12, 2019, 16:31 [IST]
X