For Quick Alerts
ALLOW NOTIFICATIONS  
For Daily Alerts

ಅಧಿಕ ವರ್ಷದ ವಿಲಕ್ಷಣ ಸಂಗತಿಗಳು

|

ವರ್ಷಗಳಿಂದ ವರ್ಷಗಳು ಕಳೆಯುತ್ತಿರುತ್ತವೆ ಅದಕ್ಕೆ ತಕ್ಕ ಹಾಗೆ ನಮ್ಮ ಜೀವನ ಶೈಲಿಗಳೂ ಬದಲಾಗುತ್ತಿರುತ್ತವೆ. ಆದರೆ ಈ ವರ್ಷಗಳು ಅದರಲ್ಲಿ ಬರುವ ದಿನಗಳು, ನಿಮಿಷ, ಸೆಕೆಂಡುಗಳೂ ಎಷ್ಟು ವಿಚಿತ್ರವಾಗಿರುತ್ತವೆ ಅಲ್ವಾ?

Weird Facts About Leap Year

ವರ್ಷದ ಒಂದು ದಿನ ಹುಟ್ಟಿದ ದಿನ, ಆದಿನದ ಸಂಭ್ರಮ, ಆಚರಣೆ ಎಲ್ಲವೂ ಸೊಗಸು. ಆದರೆ ಫೆಬ್ರವರಿ 29 ನೇ ತಾರಿಕಿಗೆ ಜನಿಸಿದವರ ಹುಟ್ಟಿದ ದಿನದ ಆಚರಣೆ!? ಅದು ಪ್ರತಿ 4 ವರ್ಷಗಳಿಗೊಮ್ಮೆ! ಆಶ್ವರ್ಯವೇ? ಹೌದು ಇಂಥ ಹತ್ತು ಹಲವು ವೈವಿಧ್ಯಗಳು ನಮ್ಮ ಕ್ಯಾಲೆಂಡರ್ ವರ್ಷಗಳಲ್ಲಿವೆ.

ನಾವೆಲ್ಲರೂ ನಮ್ಮ ಶಾಲೆಯ ಅವಧಿಯಲ್ಲಿಯೇ ಅಧಿಕ ವರ್ಷದ ಬಗ್ಗೆ ತಿಳಿದುಕೊಂಡೆದ್ದೇವೆ. ಆದರೆ ನಮ್ಮ ಶಾಲೆಗಳು ಈ ಅಧಿಕ ವರ್ಷದ ಬಗ್ಗೆ ನಮಗೆ ಹೇಳದ ಕೆಲವು ವಿಲಕ್ಷಣ ಸಂಗತಿಗಳಿವೆ. ಈ ಲೇಖನದ ಮೂಲಕ ನಾವು ಅವರ ಬಗ್ಗೆ ಇನ್ನಷ್ಟು ಚರ್ಚಿಸೋಣ.

ಹಾಗಾದರೆ ಅಧಿಕ ವರ್ಷ ಯಾವುದು?

ಹಾಗಾದರೆ ಅಧಿಕ ವರ್ಷ ಯಾವುದು?

ಹೌದು ನಾವಿರುವ ಈ ಫೆಬ್ರವರಿ ತಿಂಗಳು ಒಂದು ಹೆಚ್ಚುವರಿ ದಿನದೊಂದಿಗೆ ಬಂದಿದೆ, ಅಂದರೆ ಅಧಿಕ ವರ್ಷದಲ್ಲಿ 'ಫೆಬ್ರವರಿ 29' ದಿನಾಂಕವಿರುತ್ತದೆ. ಇಂದು, ಅಧಿಕ ದಿನ ಮತ್ತು 2020 ಅಧಿಕ ವರ್ಷವಾಗಿದೆ.

ಒಂದು ಹೆಚ್ಚುವರಿ ದಿನವನ್ನು ಸೇರಿಸುವ ಹಿಂದಿನ ಮುಖ್ಯ ಕಾರಣವೆಂದರೆ ಸಾಮಾನ್ಯ ಕ್ಯಾಲೆಂಡರ್ ವರ್ಷಗಳನ್ನು ಖಗೋಳ ವರ್ಷಗಳೊಂದಿಗೆ ಸರಿಪಡಿಸುವುದು ಮತ್ತು ಹೊಂದಾಣಿಕೆ ಮಾಡುವುದು. ಫೆಬ್ರವರಿ 29, 4 ವರ್ಷಗಳಲ್ಲಿ ಒಮ್ಮೆ ಮಾತ್ರ ಸಂಭವಿಸುತ್ತದೆ. ಪ್ರತಿ ವರ್ಷ 365 ದಿನಗಳನ್ನು ಹೊಂದಿದ್ದರೂ, ಸೂರ್ಯನನ್ನು ಪರಿಭ್ರಮಿಸಲು ಭೂಮಿಯು 365 ದಿನಗಳಿಗಿಂತ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಹೆಚ್ಚುವರಿ ದಿನವನ್ನು ಸೇರಿಸಲಾಗುತ್ತದೆ.

ವಿವಿಧ ದೇಶಗಳು ಮತ್ತು ಸಂಸ್ಕೃತಿಗಳಿಂದ ಬರುವ ಅನೇಕ ಕ್ಯಾಲೆಂಡರ್‌ಗಳಿವೆ. ಹಿಂದೂ ಕ್ಯಾಲೆಂಡರ್, ಚೈನೀಸ್ ಕ್ಯಾಲೆಂಡರ್, ಜೂಲಿಯನ್ ಕ್ಯಾಲೆಂಡರ್, ಬಂಗಾಳಿ ಕ್ಯಾಲೆಂಡರ್, ರೋಮನ್ ಕ್ಯಾಲೆಂಡರ್ ಮತ್ತು ಹೀಬ್ರೂ ಕ್ಯಾಲೆಂಡರ್ ಹೀಗೆ ಪ್ರಪಂಚದ ವಿವಿಧ ಭಾಗಗಳಲ್ಲಿ ಅನುಸರಿಸುತ್ತಿರುವ ವಿಭಿನ್ನ ಕ್ಯಾಲೆಂಡರ್‌ಗಳ ಕೆಲವು ಉದಾಹರಣೆಗಳಾಗಿವೆ. ಬನ್ನಿ, ಈಗ, ನಾವು ಕೆಲವು ವಿಲಕ್ಷಣ ಸಂಗತಿಗಳನ್ನು ಚರ್ಚಿಸೋಣ.

ಸಂಗತಿ # 1:

ಸಂಗತಿ # 1:

ಕೆಲವು ದೇಶಗಳಲ್ಲಿ, ಜನರು ಅಧಿಕ ವರ್ಷವನ್ನು ಕೆಟ್ಟ ಅದೃಷ್ಟ ಮತ್ತು ಹಾನಿಕಾರಕವೆಂದು ಪರಿಗಣಿಸುವುದರಿಂದ ಅಧಿಕ ವರ್ಷಗಳಲ್ಲಿ ಮದುವೆ ಸಮಾರಂಭಗಳನ್ನು ಮಾಡುವುದಿಲ್ಲ.

ಸಂಗತಿ # 2:

ಸಂಗತಿ # 2:

ಒಬ್ಬ ವ್ಯಕ್ತಿಯು ಅಧಿಕ ದಿನದಂದೇ ಜನಿಸಿದರು ಮತ್ತು ಅಧಿಕ ದಿನದಲ್ಲಿ ಮರಣ ಹೊಂದಿದರು. ಆದರೆ ಸುಮಾರು 68 ವರ್ಷಗಳ ಕಾಲ ಬದುಕಿದ್ದದ್ದು ಐತಿಹಾಸಿಕ ದಾಖಲೆಯಾಗಿದೆ. ಅವರು ಟ್ಯಾಸ್ಮೆನಿಯಾದ ರಾಜ್ಯಪಾಲರಾಗಿದ್ದರು.

ಸಂಗತಿ # 3:

ಸಂಗತಿ # 3:

ತೈವಾನ್‌ನಂತಹ ದೇಶಗಳಲ್ಲಿ, ಅಧಿಕ ತಿಂಗಳನ್ನು ವಯಸ್ಸಾದ ಪೋಷಕರಿಗೆ ಕೆಟ್ಟ ತಿಂಗಳು ಎಂದು ಪರಿಗಣಿಸಲಾಗುತ್ತದೆ. ಇದಕ್ಕಾಗಿಯೇ ವಿವಾಹಿತ ಹೆಣ್ಣುಮಕ್ಕಳು ಸಾಮಾನ್ಯವಾಗಿ ಈ ತಿಂಗಳಲ್ಲಿ ತಮ್ಮ ಹೆತ್ತವರನ್ನು ಭೇಟಿ ಮಾಡುತ್ತಾರೆ ಮತ್ತು ಅವರ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ.

ಸಂಗತಿ # 4:

ಸಂಗತಿ # 4:

ಪ್ರತಿ 1400 ಜನರಲ್ಲಿ ಒಬ್ಬ ವ್ಯಕ್ತಿಯು ಅಧಿಕ ದಿನದಲ್ಲಿ ಜನಿಸುತ್ತಾನೆ ಎಂದು ಹೇಳಲಾಗುತ್ತದೆ! ಅಂದರೆ ಅವನು ಅಥವಾ ಅವಳು ನಾಲ್ಕು ವರ್ಷಗಳಿಗೊಮ್ಮೆ ತಮ್ಮ ಜನ್ಮದಿನವನ್ನು ಆಚರಿಸಬೇಕಾಗುತ್ತದೆ!

ಸಂಗತಿ# 5:

ಸಂಗತಿ# 5:

ರಷ್ಯನ್ನರು, ಅಧಿಕ ವರ್ಷಗಳು ನೈಸರ್ಗಿಕ ವಿಪತ್ತುಗಳು, ಕೆಟ್ಟ ಹವಾಮಾನ ಮತ್ತು ಸಾವುಗಳನ್ನು ತರಬಹುದು ಎಂದು ನಂಬುತ್ತಾರೆ.

ಸಂಗತಿ # 6:

ಸಂಗತಿ # 6:

ಐರ್ಲೆಂಡ್‌ನಂತಹ ದೇಶಗಳಲ್ಲಿ, ಫೆಬ್ರವರಿ 29 ಮಹಿಳೆಯರು ಪುರುಷರಿಗೆ ಪ್ರೀತಿ ನಿವೇದನೆ ಮಾಡಿಕೊಳ್ಳುವ ದಿನ. ಹೌದು, ಈ ದಿನವನ್ನು ಬ್ಯಾಚುಲರ್ ಡೇ ಎಂದು ಕರೆಯಲಾಗುತ್ತದೆ.

English summary

Weird Facts About Leap Year

Here we are discussing about Weird Facts About Leap Year. We all came to know about the leap year during high school. But there are some weird facts that our schools didn't tell us. In this post, let us discuss about them. Read more.
Story first published: Saturday, February 29, 2020, 13:13 [IST]
X
Desktop Bottom Promotion