For Quick Alerts
ALLOW NOTIFICATIONS  
For Daily Alerts

ಜ್ಯೋತಿಶಾಸ್ತ್ರದ ಪ್ರಕಾರ ನೀರಿನ ಚಿಹ್ನೆ ಇರುವ ಕರ್ಕ, ವೃಶ್ಚಿಕ, ಮೀನ ರಾಶಿಗಳ ಗುಣ ಸ್ವಭಾವ ಹೇಗಿರುತ್ತದೆ?

|

ಜ್ಯೋತಿಶಾಸ್ತ್ರದ ಪ್ರಕಾರ ಇರುವ ಹನ್ನೆರಡು ರಾಶಿಚಕ್ರ ಚಿಹ್ನೆಗಳು ಮುಖ್ಯವಾಗಿ ಬೆಂಕಿ, ಭೂಮಿ, ಗಾಳಿ ಮತ್ತು ನೀರು ಎಂಬ ನಾಲ್ಕು ಅಂಶಗಳಿಂದ ವಿಭಾಗಿಸಲಾಗಿದೆ. ಪ್ರತಿಯೊಂದೂ ರಾಶಿಯೂ ತನ್ನದೇ ಆದ ಕೆಲವು ವ್ಯಕ್ತಿತ್ವ, ಗುಣಲಕ್ಷಣಗಳನ್ನು ಹೊಂದಿದೆ.

ನಾವಿಂದು ನೀರಿನ ಚಿಹ್ನೆ ಎಂದರೇನು, ಇದರ ಅಡಿ ಬರುವ ರಾಶಿಚಕ್ರಗಳ ಸಂಪೂರ್ಣ ಅರ್ಥ, ವ್ಯಕ್ತಿತ್ವದ ಬಗ್ಗೆ ವಿವರಿಸಲಿದ್ದೇವೆ:

ನೀರಿನ ಚಿಹ್ನೆ ಎಂದರೇನು ಮತ್ತು ಯಾವುವು?

ನೀರಿನ ಚಿಹ್ನೆ ಎಂದರೇನು ಮತ್ತು ಯಾವುವು?

ನೀರು ದ್ರವ ವಸ್ತು, ಇದು ಹರಿಯುತ್ತದೆ, ಅಲೆದಾಡುವ ಮತ್ತು ವಿನಾಶಕಾರಿ ಮುಂತಾದ ವಿವರಣೆಯನ್ನು ನೀರಿನ ವಿಚಾರದಲ್ಲಿ ನಾವು ವಿಭಿನ್ನವಾಗಿ ಚಿಂತಿಸುತ್ತೇವೆ. ಆದರೆ ಜ್ಯೋತಿಷ್ಯದ ಪ್ರಕಾರ ನೀರಿನ ಅಂಶವು ಇತರೆ ಅಂಶಗಳಿಗಿಂತ ಹೆಚ್ಚು ಶಕ್ತಿಯುತವಾಗಿದೆ ಎನ್ನಲಾಗುತ್ತದೆ.

ಜ್ಯೋತಿಷ್ಯದಲ್ಲಿ ಮೂರು ನೀರಿನ ಚಿಹ್ನೆಗಳು ಇವೆ. ಕರ್ಕ, ವೃಶ್ಚಿಕ ಮತ್ತು ಮೀನ ರಾಶಿಗಳು. ಈ ಮೂರು ರಾಶಿಗಳ ವ್ಯಕ್ತಿತ್ವದಲ್ಲಿ ಸಾಮ್ಯತೆಗಳ ಜೊತೆಗೆ, ಪ್ರತಿ ನೀರಿನ ಚಿಹ್ನೆಯು ತನ್ನದೇ ಆದ ವಿಶಿಷ್ಟ ಶಕ್ತಿಯನ್ನು ಹೊಂದಿದೆ. ಜ್ಯೋತಿಷ್ಯದಲ್ಲಿ ಮೂರು ವಿಧಾನಗಳಿವೆ - ಪ್ರಧಾನ, ಸ್ಥಿರ ಮತ್ತು ರೂಪಾಂತರಿ- ರಾಶಿಚಕ್ರದ ನಾಲ್ಕು ಚಿಹ್ನೆಗಳು ಪ್ರತಿ ವಿಧಾನಕ್ಕೂ ಸಂಬಂಧಿಸಿವೆ. ನೀರಿನ ಚಿಹ್ನೆಗಳಲ್ಲಿ, ಕರ್ಕ ಒಂದು ಪ್ರಧಾನ ಚಿಹ್ನೆ, ವೃಶ್ಚಿಕ ಒಂದು ಸ್ಥಿರ ಚಿಹ್ನೆ ಮತ್ತು ಮೀನ ರಾಶಿಯು ರೂಪಾಂತರಿತ ಚಿಹ್ನೆಯಾಗಿದೆ.

ನಿಮ್ಮ ಚಿಹ್ನೆಯು ಬಾಹ್ಯ ಪರಿಸರದಲ್ಲಿನ ಅಂಶಗಳನ್ನು ನೀವು ತೆಗೆದುಕೊಳ್ಳುವ, ಪ್ರಕ್ರಿಯೆಗೊಳಿಸುವ ಮತ್ತು ವ್ಯವಹರಿಸುವ ವಿಧಾನದ ಮೇಲೆ ಪರಿಣಾಮ ಬೀರುತ್ತದೆ. ಪ್ರಧಾನ ಚಿಹ್ನೆಗಳು ಮುಂದಾಳತ್ವ ವಹಿಸುವವರಾಗಿರುತ್ತಾರೆ, ಸ್ಥಿರ ಚಿಹ್ನೆಗಳು ಸ್ಥಿರವಾಗಿರುತ್ತವೆ ಮತ್ತು ಉದ್ದೇಶಪೂರ್ವಕವಾಗಿರುತ್ತವೆ ಮತ್ತು ರೂಪಾಂತರಿತ ಚಿಹ್ನೆಗಳು ಹರಿವಿನೊಂದಿಗೆ ಹೋಗುತ್ತವೆ.

ನೀರಿನ ಚಿಹ್ನೆಯ ರಾಶಿಚಕ್ರದ ವಿಶಿಷ್ಟ ಗುಣಲಕ್ಷಣಗಳು

ಕರ್ಕ ರಾಶಿ

ಕರ್ಕ ರಾಶಿ

ಚಿಹ್ನೆ: ಏಡಿ

ಆಳುವ ಗ್ರಹ: ಚಂದ್ರ

ಅದೃಷ್ದ ಅಂಶ: ಬೆಳ್ಳಿ

ವಿಧಾನ: ಪ್ರಧಾನ

ವ್ಯಕ್ತಿತ್ವದ ಪ್ರಮುಖ ಲಕ್ಷಣಗಳು: ಸೂಕ್ಷ್ಮ, ಅನುಭೂತಿ, ಭಾವನಾತ್ಮಕ

ಕರ್ಕ ರಾಶಿ ಒಂದು ಪ್ರಮುಖ ಚಿಹ್ನೆಯಾಗಿದೆ, ಅಂದರೆ ಅವು ನಿಯಂತ್ರಣವನ್ನು ಗೌರವಿಸುತ್ತವೆ. ಅವರು ಮೊದಲು ಆರಂಭಿಸುವ ವ್ಯಕ್ತಿತ್ವ ಉಳ್ಳವರು ಮತ್ತು ಚಾರ್ಜ್ ಆಗುವುದರಿಂದ ಅಭಿವೃದ್ಧಿ ಹೊಂದುವವರು ಆದ್ದರಿಂದ ಅವರನ್ನು ರಾಶಿಚಕ್ರದ ಪ್ರಾರಂಭಕರು ಎಂದು ಕರೆಯಲಾಗುತ್ತದೆ.

ಕರ್ಕ ರಾಶಿಚಕ್ರವು ಪೋಷಣೆ, ಕೋಮಲ ಮತ್ತು ಸೂಕ್ಷ್ಮ ಎಂದು ತಿಳಿದುಬಂದಿದೆ, ಆದರೆ ಭಾವನಾತ್ಮಕವಾಗಿ ಬುದ್ಧಿವಂತರು. ಇವರು ತಮ್ಮ ಭಾವನೆಗಳ ಬಗ್ಗೆ ತುಂಬಾ ಅರಿವನ್ನು ಹೊಂದಿರುತ್ತಾರೆ ಮತ್ತು ಇತರರ ಭಾವನೆಗಳನ್ನು ಸಹ ಗೌರವಿಸುತ್ತಾರೆ. ಅವರು ಸುಲಭವಾಗಿ ನೊಂದುಕೊಳ್ಳುವ ಹಾಗೂ ಮನಸ್ಸಿಗೆ ನೋವುಂಟು ಮಾಡಿಕೊಳ್ಳುವ ಗುಣದವರು. ಆದರೆ ಅದನ್ನು ಬಹಳ ಸೌಮ್ಯವಾಗಿ ವ್ಯಕ್ತಪಡಿಸುತ್ತಾರೆ.

ಕರ್ಕ ರಾಶಿಯ ಆಳುವ ಗ್ರಹ ಚಂದ್ರ ಸೂಕ್ತವಾಗಿದೆ, ಏಕೆಂದರೆ ಈ ಗ್ರಹವು ಸ್ತ್ರೀತ್ವ ಮತ್ತು ಭಾವನೆಗಳೊಂದಿಗೆ ಸಂಬಂಧ ಹೊಂದಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಚಿಹ್ನೆ: ಚೇಳು

ಆಳುವ ಗ್ರಹಗಳು: ಮಂಗಳ ಮತ್ತು ಪ್ಲುಟೊ

ಬಣ್ಣ: ಕಪ್ಪು

ವಿಧಾನ: ಸ್ಥಿರ

ಪ್ರಮುಖ ವ್ಯಕ್ತಿತ್ವದ ಲಕ್ಷಣಗಳು: ಭಾವೋದ್ರಿಕ್ತ, ದೃಢವಾದವರು, ನಿಷ್ಠಾವಂತ

ವೃಶ್ಚಿಕ ಒಂದು ಸ್ಥಿರ ಚಿಹ್ನೆ, ಅಂದರೆ ಅವರ ಭಾವನೆಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದಿವೆ ಮತ್ತು ಬದಲಾವಣೆಗೆ ಬೇಗ ಹೊಂದಿಕೊಳ್ಳದವರು, ಅವರು ಸ್ಥಿರತೆಯನ್ನು ಹಂಬಲಿಸುತ್ತಾರೆ.

ನೀರಿನ ಚಿಹ್ನೆಯಂತೆ, ವೃಶ್ಚಿಕ ರಾಶಿಯವರು ಸಹ ಭಾವನಾತ್ಮಕವಾಗಿರುವವರು, ಆದರೆ ಅವರು ತಮ್ಮ ಭಾವನೆಗಳನ್ನು ಪ್ರಪಂಚದಿಂದ ಮರೆಮಾಡುತ್ತಾರೆ. ಈ ರಾಶಿಚಕ್ರ ಚಿಹ್ನೆಯು ತೀವ್ರತೆ ಮತ್ತು ಉತ್ಸಾಹ, ಮಹತ್ವಾಕಾಂಕ್ಷೆ ಮತ್ತು ನಿಷ್ಠೆಗೆ ಹೆಸರುವಾಸಿಯಾಗಿದೆ, ಜೊತೆಗೆ ಅವುಗಳ ನಿಯಂತ್ರಣ ಮತ್ತು ಬಾಹ್ಯ ಅಗತ್ಯತೆಗಳಿಗೆ ಹೆಸರುವಾಸಿಯಾಗಿದೆ.

ಮಂಗಳ ಮತ್ತು ಪ್ಲುಟೊ ವೃಶ್ಚಿಕವನ್ನು ಆಳುತ್ತದೆ; ಮಂಗಳನ ಪ್ರತಿಪಾದಕ ಶಕ್ತಿಯು ವೃಶ್ಚಿಕದ ಅಸೂಯೆ ಪಡುವ ಪ್ರವೃತ್ತಿಯನ್ನು ವಹಿಸುತ್ತದೆ, ಆದರೆ ಉಪಪ್ರಜ್ಞೆಯೊಂದಿಗೆ ಸಂಬಂಧಿಸಿರುವ ಪ್ಲುಟೊ, ವೃಶ್ಚಿಕದ ಗುಣವನ್ನು ಅಥವಾ ಭಾವನೆಯನ್ನು ಮರೆಮಾಚುವ ಮತ್ತು ಕಾಣದಂತೆ ಇರುವುದು ಎಂಬುದನ್ನು ವಿವರಿಸುತ್ತದೆ.

ವೃಶ್ಚಿಕ ರಾಶಿಯವರು ನಕಾರಾತ್ಮಕ ಪರಿಸ್ಥಿತಿಯನ್ನು ಸಕಾರಾತ್ಮಕವಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿವೆ. ಅವರನ್ನು ಕಠಿಣ ಸ್ಥಾನದಲ್ಲಿರಿಸಿದರೆ, ಅವರು ಯಾವಾಗಲೂ ಸತತ ಪ್ರಯತ್ನ ಮಾಡುತ್ತಾರೆ.

ಮೀನ ರಾಶಿ

ಮೀನ ರಾಶಿ

ಚಿಹ್ನೆ: ಮೀನು

ಆಳುವ ಗ್ರಹಗಳು: ಗುರು ಮತ್ತು ನೆಪ್ಚೂನ್

ಬಣ್ಣ: ಹಸಿರು ಅಥವಾ ತಿಳಿ ಹಸಿರು

ವಿಧಾನ: ರೂಪಾಂತರಿತ

ಪ್ರಮುಖ ವ್ಯಕ್ತಿತ್ವದ ಲಕ್ಷಣಗಳು: ಅರ್ಥಗರ್ಭಿತ, ಸಹಾನುಭೂತಿ, ಸೃಜನಶೀಲ

ರೂಪಾಂತರಿತ ಚಿಹ್ನೆಯಾಗಿರುವ ಮೀನ ರಾಶಿಯು ಬದಲಾವಣೆಗೆ ಒಗ್ಗಿಕೊಳ್ಳುವ ಉತ್ತಮ ರಾಶಿಯಾಗಿದೆ. ಆದರೆ ಅವರು ತಮ್ಮ ಸುತ್ತಮುತ್ತ ಇರುವ ಪರಿಸರಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತಾರೆ ಮತ್ತು ಭದ್ರವಾದ ಅಡಿಪಾಯವನ್ನು ಕಂಡುಕೊಳ್ಳಲು ಹೆಣಗಾಡುತ್ತಾರೆ.

ಮೀನ, ಕರ್ಕ ಎರಡೂ ರಾಶಿಗಳು ಅತೀ ಭಾವನಾತ್ಮಕ ಮತ್ತು ಸೂಕ್ಷ್ಮ ರಾಶಿಚಕ್ರ ಚಿಹ್ನೆಯಾಗಿದೆ. ಮೀನ ರಾಶಿಯು ಸಹಾನುಭೂತಿ, ಪರಾನುಭೂತಿ, ತಿಳುವಳಿಕೆ ಮತ್ತು ಪ್ರೀತಿಯ ಸ್ವಭಾವಕ್ಕೆ ಹೆಸರುವಾಸಿ. ಇವರು ಅಸುರಕ್ಷಿತ ಗುಣ, ಅಳುವ ಸ್ವಭಾವ ಮತ್ತು ಸ್ವಾರ್ಥ ವರ್ತನೆಯವರಾಗಿರುತ್ತಾರೆ.

ಗುರು ಮತ್ತು ನೆಪ್ಚೂನ್ ಎರಡೂ ಗ್ರಹಗಳು ಮೀನರಾಶಿಯನ್ನು ಆಳುತ್ತವೆ. ಗುರುವು ಸಮೃದ್ಧಿ ಮತ್ತು ಅದೃಷ್ಟದ ಗ್ರಹವಾಗಿದ್ದರೆ, ನೆಪ್ಚೂನ್ ಕಲ್ಪನೆ ಮತ್ತು ಕನಸುಗಳೊಂದಿಗೆ ಸಂಬಂಧ ಹೊಂದಿದೆ. ಈ ಗ್ರಹಗಳು ಮೀನ ರಾಶಿಯಲ್ಲಿ ಭಾವನಾತ್ಮಕ ಮತ್ತು ಸ್ವಪ್ನಶೀಲ ಸ್ವಭಾವವನ್ನು ಪ್ರಭಾವಿಸುತ್ತವೆ.

ಎಲ್ಲಾ ರಾಶಿಚಕ್ರ ಚಿಹ್ನೆಗಳಲ್ಲಿ ಮೀನವು ಹೆಚ್ಚು ಅತೀಂದ್ರಿಯವಾಗಿದೆ. ಇವರು ಒಂದು ಸನ್ನಿವೇಶವನ್ನು ಅರ್ಥಮಾಡಿಕೊಳ್ಳುವಲ್ಲಿ ಇವರ ಸಾಮರ್ಥ್ಯವು ಉನ್ನತ ಸ್ಥಾನದಲ್ಲಿದೆ.

ಇವರು ಸಂತೋಷ ಮತ್ತು ಉತ್ಸಾಹವನ್ನು ತರುವಂತಹ ಕೆಲಸಗಳನ್ನು ಆನಂದಿಸುತ್ತಾರೆ. ಮೀನವು ಎಷ್ಟೇ ದೊಡ್ಡವರಾದರೂ ಅವರ ಕನಸುಗಳನ್ನು ಮತ್ತು ಮಹತ್ವಾಕಾಂಕ್ಷೆಗಳನ್ನು ಧೈರ್ಯದಿಂದ ಅನುಸರಿಸುತ್ತದೆ. ವಾಸ್ತವವಾಗಿ, ಇವರು ಹೆಚ್ಚಾಗಿ ತಮ್ಮದೇ ಆದ ಕನಸಿನ ಜಗತ್ತಿನಲ್ಲಿ ವಾಸಿಸುತ್ತಿದ್ದಾರೆ.

English summary

Water Signs -Traits of Cancer, Scorpio, and Pisces Zodiac Signs in Kannada

Each of the twelve zodiac signs is associated with one of four elements — fire, earth, air, and water — each of which shares certain personality traits, characteristics, and factors that determine love compatibility.
X
Desktop Bottom Promotion