For Quick Alerts
ALLOW NOTIFICATIONS  
For Daily Alerts

ಸೆ. 17ಕ್ಕೆ ವಿಶ್ವಕರ್ಮ ಪೂಜೆ: ಈ ದಿನ ಪೂಜೆಗೆ 3 ಮುಹೂರ್ತ ಇದೆ

|

ಪ್ರತಿ ವರ್ಷ ಬ್ರಹ್ಮಾಂಡದ ವಾಸ್ತುಶಿಲ್ಪಿ ಭಗವಂತ ವಿಶ್ವಕರ್ಮರ ಜನ್ಮದಿನವನ್ನು ಸೆಪ್ಟೆಂಬರ್ 17 ರಂದು ಆಚರಿಸಲಾಗುತ್ತದೆ. ಈ ಭೂಮಿಯಲ್ಲಿ ಇರುವುದೆಲ್ಲವೂ ಭಗವಂತ ವಿಶ್ವಕರ್ಮನಿಂದ ಸೃಷ್ಟಿಯಾಗಿದೆ ಎಂಬುದು ಒಂದು ನಂಬಿಕೆ. ಶಾಸ್ತ್ರಗಳ ಪ್ರಕಾರ, ಬ್ರಹ್ಮ ದೇವರು ಈ ಸಂಪೂರ್ಣ ಭೂ ಮಂಡಲವನ್ನು ಸೃಷ್ಟಿಸಿದನು ಎಂದು ನಂಬಲಾಗಿದೆ.

Vishwakarma Puja

ಭಗವಂತ ವಿಶ್ವಕರ್ಮನನ್ನು ವಾಸ್ತು ಶಾಸ್ತ್ರದ ಪಿತಾಮಹ ಎಂದು ಪರಿಗಣಿಸಲಾಗಿದೆ. ಅದರಲ್ಲೂ ವಿಶ್ವಕರ್ಮ ಜಯಂತಿಯಂದು ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ಬಳಸುವ ಸಾಮಾನು, ಉಪಕರಣಗಳಿಗೆ ಪೂಜೆ ಸಲ್ಲಿಸಿ, ಈ ದಿನ ಕಟ್ಟಡ ನಿರ್ಮಾಣ ಕಾರ್ಯಗಳನ್ನು ಮಾಡುವುದಿಲ್ಲ.

ವಿಶ್ವಕರ್ಮ ಜಯಂತಿ ಪೂಜೆ 2022 ಶುಭ ಮುಹೂರ್ತ

ವಿಶ್ವಕರ್ಮ ಜಯಂತಿ ಪೂಜೆ 2022 ಶುಭ ಮುಹೂರ್ತ

ಹಿಂದೂ ಪಂಚಾಂಗದ ಪ್ರಕಾರ, ಸೆಪ್ಟೆಂಬರ್ 17 ರಂದು ವಿಶ್ವಕರ್ಮ ಪೂಜೆಗೆ ಮೂರು ಮಂಗಳಕರ ಸಮಯಗಳಿವೆ.

ಮೊದಲ ಶುಭ ಮುಹೂರ್ತ - ಬೆಳಗ್ಗೆ 07:39 ರಿಂದ ಬೆಳಗ್ಗೆ 09:11 ರವರೆಗೆ

ಎರಡನೇ ಶುಭ ಮುಹೂರ್ತ-ಮಧ್ಯಾಹ್ನ 01:48 ರಿಂದ 03:20 ರವರೆಗೆ

ಮೂರನೇ ಶುಭ ಮುಹೂರ್ತ - ಮಧ್ಯಾಹ್ನ 03:20 ರಿಂದ ಸಂಜೆ 04:52

ವಿಶ್ವಕರ್ಮ ಜಯಂತಿ ಪೂಜಾ ವಿಧಾನ

ವಿಶ್ವಕರ್ಮ ಜಯಂತಿ ಪೂಜಾ ವಿಧಾನ

* ಮೊದಲನೆಯದಾಗಿ ವಿಶ್ವಕರ್ಮ ಜಯಂತಿಯಂದು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಮಡಿ ಬಟ್ಟೆಗಳನ್ನು ಧರಿಸಿ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ.

* ನಂತರ ಸಂಕಲ್ಪ ತೆಗೆದುಕೊಂಡು ವಿಶ್ವಕರ್ಮ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ಪ್ರಾರಂಭಿಸಿ.

* ವಿಶ್ವಕರ್ಮ ದೇವರ ವಿಗ್ರಹಕ್ಕೆ ಸಂಬಂಧಿಸಿದ ಸಾಧನಗಳನ್ನು ಪೂಜಿಸಿ.

*ಭಗವಂತ ವಿಶ್ವಕರ್ಮನಿಗೆ ವೀಳ್ಯದೆಲೆ, ಅರಿಶಿನ, ಅಕ್ಷತೆ, ಹೂವುಗಳು, ಲವಂಗ, ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ.

* ನಂತರ ಧೂಪ ಮತ್ತು ದೀಪಗಳನ್ನು ಬೆಳಗಿಸಿ, ಭಗವಂತ ವಿಶ್ವಕರ್ಮನನ್ನು ಪೂಜಿಸಿ ಮತ್ತು ರಕ್ಷಾಸೂತ್ರವನ್ನು ಅರ್ಪಿಸಿ.

ಪ್ರಗತಿಗಾಗಿ ಪ್ರಾರ್ಥಿಸಿ

ಪ್ರಗತಿಗಾಗಿ ಪ್ರಾರ್ಥಿಸಿ

ವಿಶ್ವಕರ್ಮ ದೇವರ ಪೂಜೆಯ ನಂತರ ಕಚೇರಿಯ ಯಂತ್ರಗಳು ಮತ್ತು ಉಪಕರಣಗಳನ್ನು ಪೂಜಿಸಿ.

ಕೊನೆಯಲ್ಲಿ, ಪೂಜೆಯಲ್ಲಿ ಯಾವುದೇ ತಪ್ಪಾಗಿದ್ದರೆ ವಿಶ್ವಕರ್ಮ ದೇವರಲ್ಲಿ ಕ್ಷಮೆಯಾಚಿಸಿ, ವ್ಯಾಪಾರದಲ್ಲಿ ಪ್ರಗತಿಗಾಗಿ ಪ್ರಾರ್ಥಿಸಿ ಮತ್ತು ಪ್ರಸಾದವನ್ನು ವಿತರಿಸಿ.

English summary

Vishwakarma Puja 2022 date, shubh muhurat, puja vidhi, mantra and significance in Kannada

Vishwakarma Puja 2022: Here are Date, Shubh Muhurat, Puj Vidhi, Mantra and Significance read on....
Story first published: Saturday, September 17, 2022, 9:09 [IST]
X
Desktop Bottom Promotion