Just In
Don't Miss
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- News
Vishnuvardhan Memorial: ಇಂದು ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ, ವಿಷ್ಣು ಅಭಿಮಾನಿಗಳ ಅಸಮಾಧಾನವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Movies
Breaking: ಕನ್ನಡ ಚಲನಚಿತ್ರರಂಗದ ಹಿರಿಯ ನಟ ಮನ್ದೀಪ್ ರಾಯ್ ನಿಧನ
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶುಕ್ರ ಸಂಚಾರ:ಈ 23 ದಿನಗಳು ಶುಕ್ರ ಬಲದಿಂದ ಈ 3 ರಾಶಿಯವರು ಮಟ್ಟಿದೆಲ್ಲಾ ಚಿನ್ನ!
ವೈದಿಕ ಶಾಸ್ತ್ರದ ಪ್ರಕಾರ ಶುಕ್ರ ಸಂಪತ್ತು ಮತ್ತು ವೈಭವವನ್ನು ನೀಡುವ ಗ್ರಹ.ಇದು ಡಿಸೆಂಬರ್ 5ಕ್ಕೆ ಧನು ರಾಶಿಗೆ ಸಂಚರಿಸಿದೆ. ಸುಖ, ಸಂಪತ್ತು, ವೈಭವ ಮತ್ತು ಐಶ್ವರ್ಯವನ್ನು ನೀಡುವ ಶುಕ್ರ ಧನು ರಾಶಿಯನ್ನು ಪ್ರವೇಶಿಸಿದಾಗ ಖಂಡಿತವಾಗಿಯೂ ಈ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ರಾಶಿಯ ಮೇಲೆ ಶುಕ್ರನ ಪ್ರಭಾವ ಹೇಗಿರುತ್ತದೆ ಎಂಬುವುದು ಅದು ನಿಮ್ಮ ರಾಶಿಯಲ್ಲಿರುವ ಸ್ಥಾನವನ್ನು ಅವಲಂಬಿಸಿದೆ. ಡಿಸೆಂಬರ್‌ನಲ್ಲಿ ಶುಕ್ರನ ಸಂಕ್ರಮಣದಿಂದಾಗಿ ಈ 5 ರಾಶಿಗಳಿಗೆ 23 ದಿನಗಳವರೆಗೆ ಅದೃಷ್ಟದ ಬೆಂಬಲ ಸಿಗಲಿದೆ ನೋಡಿ:
ಮಿಥುನ ರಾಶಿ
ಶುಕ್ರ ಗ್ರಹ ಧನು ರಾಶಿಗೆ ಸಂಚಾರ ಮಾಡಿರುವುದು ಪ್ರಯೋಜನಕಾರಿಯಾಗಿದೆ. ಏಕೆಂದರೆ ಈ ಸಂಕ್ರಮಣವು ನಿಮ್ಮರಾಶಿಯ ಏಳನೇ ಮನೆಯಲ್ಲಿ ಸಂಭವಿಸಿದೆ. ಇದರಿಂದ ನಿಮ್ಮ ವೈವಾಹಿಕ ಜೀವನದ ಮೇಲೆ ಒಳ್ಳೆಯ ರೀತಿಯಲ್ಲಿ ಪ್ರಭಾವ ಬೀರಿದೆ, ನೀವು ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುತ್ತಿದ್ದರೆ ಈ ಸಮಯ ಅನುಕೂಲಕರ. ಮತ್ತೊಂದೆಡೆ, ಬುಧ ಮತ್ತು ಶುಕ್ರವು ಮಿಥುನ ರಾಶಿಯ ಮೇಲೆ ನೇರವಾದ ಅಂಶವನ್ನು ಹೊಂದಿರುವುದರಿಮದ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ಈ ಸಮಯದಲ್ಲಿ ಪ್ರೇಮ ಹಾಗೂ ವೈವಾಹಿಕ ಜೀವನ ಸುಂದರವಾಗಿರುತ್ತದೆ.
ಸಿಂಹ ರಾಶಿ
ಧನು ರಾಶಿಗೆ ಶುಕ್ರ ಸಂಚಾರ ಸಿಂಹ ರಾಸಿಯವರಿಹೆ ಫಲಪ್ರದವಾಗಿದೆ. ಏಕೆಂದರೆ ಶುಕ್ರ ಗ್ರಹವು ನಿಮ್ಮ ರಾಶಿಯಿಂದ ಐದನೇ ಮನೆಯಲ್ಲಿ ಇರಲಿದೆ. ಇದು ಸಂತತಿ ಮತ್ತು ಪ್ರೇಮ ಸಂಬಂಧದ ಮನೆಯೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಈ ಶುಕ್ರ ಸಂಕ್ರಮಣವು ಮಕ್ಕಳನ್ನು ಹೊಂದಲು ಬಯಸುವ ದಂಪತಿಗೆ ಸಂತೋದ ಸುದ್ದಿ ನೀಡಲಿದೆ. ಮತ್ತೊಂದೆಡೆ, ಹಣಕಾಸಿನ ವಿಷಯಗಳಲ್ಲಿ ಅದೃಷ್ಟವನ್ನು ಕಾಣಬಹುದು. ಇದರೊಂದಿಗೆ ಆದಾಯವೂ ಹೆಚ್ಚಾಗುವ ಸಾಧ್ಯತೆಗಳಿವೆ. ಪ್ರೀತಿ-ಸಂಬಂಧಗಳಲ್ಲಿ ಮಾಧುರ್ಯವನ್ನು ಕಾಣಬಹುದು.
ಧನು ರಾಶಿ
ಧನು ರಾಶಿಗೆ ಶುಕ್ರ ಸಂಚಾರ ನಿಮಗೆ ಅನುಕೂಲಕರವಾಗಿದೆ. ಏಕೆಂದರೆ ಶುಕ್ರ ಗ್ರಹವು ನಿಮ್ಮದೇ ಲಗ್ನ ರಾಶಿಯಲ್ಲಿ ಸಾಗಿದೆ. ಆದ್ದರಿಂದ ಈ ಅವಧಿ ಆರ್ಥಿಕವಾಗಿ ತುಂಬಾ ಒಳ್ಳೆಯದಿದೆ. ಭವಿಷ್ಯದ ಹೂಡಿಕೆಗೆ ಈ ತಿಂಗಳು ಸೂಕ್ತವಾಗಿದೆ. ಇನ್ನು ವಿವಾಹಕ್ಕೆ ಸಂಬಂಧ ಹುಡುಕುತ್ತಿರುವವರಿಗೆ ಸಂಬಂಧ ಕೂಡಿ ಬರಲಿದೆ. ವೈವಾಹಿಕ ಜೀವನದಲ್ಲಿ ಖುಷಿ ಇರುತ್ತದೆ. ಲಕ್ಷುರಿ ವಸ್ತುಗಳಿಗೆ ಹಣ ಖರ್ಚು ಮಾಡುವಿರಿ. ಹಣ ಖರ್ಚು ಮಾಡಿದರೂ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ, ಈ ಸಮಯದಲ್ಲಿ ಉಳಿತಾಯ ಮಾಡಲು ಸಾಧ್ಯವಾಗುವುದು.
ಶುಕ್ರನಿಂದ ಮತ್ತಷ್ಟು ಲಾಭ ಪಡೆಯಲು ಹೀಗೆ ಮಾಡಿ
*ಶುಕ್ರವಾರ ನಿರ್ಗತಿಕರಿಗೆ ದಾನ ಮಾಡಿ
* ಬಿಳಿ ಆಹಾರ ವಸ್ತುಗಳನ್ನು ದಾನ ಮಾಡಿ
* ಶುಕ್ರವಾರ ಲಕ್ಷ್ಮಿಯನ್ನು ಪೂಜಿಸಿ
* ಶುಕ್ರವಾರ ಹೆಣ್ಮಕ್ಕಳಿಗೆ ಅಲಂಕಾರಿಕ ವಸ್ತುಗಳನ್ನು ದಾನ ಮಾಡಿ.