For Quick Alerts
ALLOW NOTIFICATIONS  
For Daily Alerts

ಈ ವಾಸ್ತು ಸಲಹೆಗಳನ್ನು ಪಾಲಿಸಿ ವಾಹನ ಅಪಘಾತ ತಪ್ಪಿಸಿ

|

ಯಾರೂ ಜೀವನದಲ್ಲಿ ಅನಾಹುತಗಳು, ಕೆಟ್ಟ ಘಟನೆಗಳು ಆಗಬೇಕೆಂದು ಬಯಸುವುದಿಲ್ಲ, ಆದರೆ ಆಕಸ್ಮಿಕವಾಗಿ ಘಟಿಸುವ ಕೆಟ್ಟ ಘಟನೆಗಳು ಜೀವನವನ್ನೇ ಕಸಿದಿರುತ್ತದೆ. ಅದರಲ್ಲೂ ರಸ್ತೆ ಅಪಘಾತಗಳಂಥ ದುರಂತಗಳು ಜೀವ, ಜೀವನ ಹಲವು ಬಾರಿ ಕುಟುಂಬವನ್ನೇ ನಾಶ ಮಾಡಿರುತ್ತದೆ.

Vastu Tips To Help You Avoid Accidents in Kannada

ಅದಕ್ಕಾಗಿಯೇ ಬಹುತೇಕ ಎಲ್ಲರೂ ವಾಹನ ಖರೀದಿ ಸಮಯದಲ್ಲಿ ಯಾವುದೇ ದುರಂತಗಳು, ಕೆಟ್ಟ ಘಟನೆಗಳು ನಡೆಯಬಾರದೆಂದು ಶುಭ ದಿನ, ಸಮಯ ನೋಡಿ, ಜ್ಯೋತಿಶಾಸ್ತ್ರಜ್ಞರನ್ನು ಕೇಳಿ ಖರೀದಿಸುತ್ತಾರೆ. ಆದರೆ ನಾವಿಂದು ವಾಹನ ಖರೀದಿಗೂ ವಾಸ್ತು ನೋಡಿ ಹೇಗೆ ಖರೀದಿಸಬೇಕು, ವಾಸ್ತು ಪ್ರಕಾರ ವಾಹನಗಳನ್ನು ಹೇಗೆ, ಯಾವಾಗ ಖರೀದಿಸಬೇಕು ಮುಂದೆ ತಿಳಿಸಲಿದ್ದೇವೆ:

* ಕೆಂಪು ಮತ್ತು ಕಪ್ಪು ಕಾರುಗಳನ್ನು ಖರೀದಿಸುವುದನ್ನು ತಪ್ಪಿಸಬೇಕು. ಭಯ, ಒತ್ತಡ ಇರುವವರಿಗೆ ಕೆಂಪು ಬಣ್ಣವು ಹೆಚ್ಚು ಒತ್ತಡವನ್ನು ಉಂಟು ಮಾಡುತ್ತದೆ ಎಂದು ಪರಿಗಣಿಸಲಾಗುತ್ತದೆ. ಇದು ಖಿನ್ನತೆ ಮತ್ತು ಉದ್ವಿಗ್ನತೆಯ ಅನುಭವವನ್ನು ನೀಡುತ್ತದೆ. ಅದರಲ್ಲೂ ಕಾರುಗಳಲ್ಲಿ ಕಪ್ಪು ಬಣ್ಣವನ್ನು ತಪ್ಪಿಸಿ ಏಕೆಂದರೆ ಇದು ಹತಾಶೆಗೆ ಕಾರಣವಾಗಬಹುದು.

* ಮುಖ್ಯ ದ್ವಾರದ ಪ್ರವೇಶದ್ವಾರ ಉತ್ತರ ಅಥವಾ ವಾಯುವ್ಯ ದಿಕ್ಕಿನಲ್ಲಿರಬೇಕು ಎಂದು ಖಚಿತಪಡಿಸಿಕೊಳ್ಳಿ. ಇದು ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ. ಈ ವಲಯವು ಸಕ್ರಿಯ ಶಕ್ತಿ ಮತ್ತು ಶಾಂತಿ ಮತ್ತು ಸಂತೋಷದಂಥ ಆಕರ್ಷಕ ಶಕ್ತಿಯನ್ನು ಹೊಂದಿದೆ.

* ಪೂಜಾ ಕೋಣೆಯ ಸ್ಥಳ ಪೂರ್ವ, ಉತ್ತರ ಅಥವಾ ಉತ್ತರ ಪೂರ್ವ ದಿಕ್ಕಿನಲ್ಲಿರಬೇಕು. ಕಾಂತಕ್ಷೇತ್ರದ ಅಸ್ತಿತ್ವದಿಂದಾಗಿ ಪೂಜೆಗೆ ಅದು ಅತ್ಯುತ್ತಮವಾದ ಸ್ಥಳವಾಗಿದೆ. ಇದು ಸಂಪತ್ತು ಮತ್ತು ಸಮೃದ್ಧಿಗೆ ಮಾತ್ರವಲ್ಲದೆ ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ. ಪೂಜೆಯಂತಹ ಯಾವುದೇ ಪವಿತ್ರ ಕಾರ್ಯಗಳಿಗೆ ಉತ್ತರವು ಅತ್ಯುತ್ತಮ ದಿಕ್ಕಾಗಿದೆ.

* ಮನೆಯ ನಿರ್ಮಾಣವು ಇಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಿಮ್ಮ ಮನೆಯನ್ನು ನೈಋತ್ಯ ದಿಕ್ಕಿನಲ್ಲಿ ನಿರ್ಮಿಸಿದ್ದರೆ, ಆ ದಿಕ್ಕನ್ನು ಶುಭವಲ್ಲದ ಅಥವಾ ನಿಷೇಧಿತ ವಲಯ ಎಂದು ವಾಸ್ತುವಿನಲ್ಲಿ ಹೇಳಲಾಗುತ್ತದೆ. ಈ ದಿಕ್ಕಿನಲ್ಲಿರುವ ಮನೆಗಳ ಬಳಿ ಅಥವಾ ರಸ್ತೆಗಳಲ್ಲಿ ಹೆಚ್ಚು ಅಪಘಾತಗಳಿಗೆ ಕಾರಣವಾಗುತ್ತದೆ ಎಂದು ತಿಳಿದುಬಂದಿದೆ. ಮನೆಯಲ್ಲಿ ಅತಿ ಹೆಚ್ಚು ಮೆಟ್ಟಿಲುಗಳನ್ನು ಕಟ್ಟಿಸಬೇಡಿ ಇದು ಶುಭವಲ್ಲ.

* ದಕ್ಷಿಣ ದಿಕ್ಕಿನಲ್ಲಿ ಬೋರ್‌ವೆಲ್‌ ಅಥವಾ ನೀರಿನ ಸಂಪ್ ಕಟ್ಟಿಸಬೇಡಿ, ಇದು ವಾಹನ ಅಪಘಾತಕ್ಕೆ ಕಾರಣವಾಗಬಹುದು. ಅಲ್ಲದೇ ಮಹಿಳೆಯರಿಗೆ ಇದರಿಂದ ಅಪಾಯ ಹೆಚ್ಚು ಎಂದು ಹೇಳಲಾಗುತ್ತದೆ.

* ವಾಸ್ತು ಪ್ರಕಾರ ಶನಿವಾರ ಮತ್ತು ಗುರುವಾರ ವಾಹನ ಖರೀದಿಗೆ ಶುಭದಿನವಲ್ಲ. ಕಾರಣ ಶನಿವಾರ ಮಂಗಳ ಹಾಗೂ ಗುರುವಾರ ಶನಿ ಆಳುವ ದಿನ. ಆದ್ದರಿಂದ ಈ ದಿನ ವಾಹನ ಖರೀದಿ ಶುಭವಲ್ಲ ಹಾಗೂ ಖರೀದಿಸಿದರೆ ಹೆಚ್ಚು ಜಾಗ್ರತೆಯಿಂದ ಇರಬೇಕು ಎಂದು ಹೇಳಲಾಗುತ್ತದೆ.

English summary

Vastu Tips To Help You Avoid Accidents in Kannada

Here we are discussing about Vastu Tips To Help You Avoid Accidents in Kannada. India is home to one road accident in every 4 minutes and 80% of those who are involved in serious road accidents don't live to tell the tale. However, what if we told you that Vastu can help you in preventing road accidents? Read on to know more.
X
Desktop Bottom Promotion