For Quick Alerts
ALLOW NOTIFICATIONS  
For Daily Alerts

ಕ್ವಾರೆಂಟೈನ್‌ನಲ್ಲಿ ಏಪ್ರಿಲ್ ಫೂಲ್ ಮಜಾ ತೆಗೆದುಕೊಳ್ಳಬೇಕೆ?

|

ಏಪ್ರಿಲ್ 1 ಅಂದರೆ ಅದನ್ನು ಮೂರ್ಖರ ದಿನವೆಂದೇ ಹೇಳುತ್ತಾರೆ. ಆ ದಿನವನ್ನು ಬೇರೆಯವರನ್ನು ಮೂರ್ಖರನ್ನಾಗಿ ಮಾಡಿ ಮಜಾ ತೆಗೆದುಕೊಳ್ಳುವುದರಲ್ಲಿ ಏನೋ ಖುಷಿ. ಆ ದಿನ ಯಾರನ್ನು ಹೇಗೆ ಫೂಲ್ ಮಾಡಬೇಕೆಂದೇ ಎಲ್ಲರೂ ಯೋಚಿಸುತ್ತಿರುತ್ತಾರೆ. ಇತರ ವರ್ಷಗಳಲ್ಲಾದರೆ ಏಪ್ರಿಲ್ ಫೂಲ್ ಮಾಡಲು ಅನೇಕ ಮಾರ್ಗಗಳಿದ್ದೆವು.

Tips To Do April Fool In This Quarantine Time

ಆದರೆ ಈ ವರ್ಷ ಏನೇ ಫೂಲ್ ಮಾಡಬೇಕೆಂದು ಯೋಚಿಸಿದರೂ ಮನೆಯಿಂದ ಹೊರಹೋಗುವಂತಿಲ್ಲ. ಹಾಗಂತ ಏಪ್ರಿಲ್ ಫೂಲ್‌ ಖುಷಿಗೆ ಬ್ರೇಕ್ ಹಾಕಬೇಕಾಗಿಲ್ಲ. ಇಲ್ಲಿ ಕೆಲವೊಂದು ನಮಗೆ ತೋಚಿದ ಸಿಂಪಲ್ ಐಡಿಯಾಗಳನ್ನು ನೀಡಿದ್ದೇವೆ. ಇದೇ ರೀತಿಯ ಅನೇಕ ಐಡಿಯಾಗಳು ನಿಮಗೂ ಹೊಳೆಯುತ್ತವೆ. ನಿಮಗೆ ತೋಚಿದ ಐಡಿಯಾ ಪ್ರಯೋಗಿಸಿ ಬೇರೆಯವರನ್ನು ಬೇಸ್ತು ಬೀಳಿಸಿ.

ಆದರೆ ಒಂದು ವಿಷಯ ನೆನಪಿಟ್ಟುಕೊಳ್ಳಿ, ಬೇಸ್ತು ಬೀಳಿಸುವುದೇನೋ ಸರಿ, ಹಾಗಂತ ಅವರನ್ನು ತುಂಬಾ ಭಯ ಪಡಿಸುವುದಾಗಲಿ, ಮನಸ್ಸಿಗೆ ನೋವುಂಟು ಮಾಡುವಂಥ ಮೆಸೇಜ್ ಕಳುಹಿಸುವುದಾಗಲಿ ಮಾಡಬೇಡಿ.

ಮನೆಯೊಳಗೆ ಕುಳಿತು ಮನಸ್ಸಿಗೆ ಮೂಡಿದ ಬೇಸರವನ್ನು ಹೀಗೆ ಹೋಗಲಾಡಿಸಿ:

ಮನೆಯೊಳಗೆ ಕುಳಿತು ಮನಸ್ಸಿಗೆ ಮೂಡಿದ ಬೇಸರವನ್ನು ಹೀಗೆ ಹೋಗಲಾಡಿಸಿ:

ಮದುವೆ ಸುಳ್ಳು

ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ನಿಮ್ಮ ಫ್ರೆಂಡ್ಸ್‌ಗೆ ಫೂಲ್‌ ಮಾಡಲು ಹೀಗೆ ಮಾಡಿ. ಅವರಿಗೆಲ್ಲಾ ಕರೆ ಮಾಡಿ ಅಥವಾ ಒಂದು ವಾಟ್ಸಾಪ್ ಗ್ರೂಪ್ ಮಾಡಿ... ಅದರಲ್ಲಿ ನೀವು ಪ್ರೀತಿಸುತ್ತಿರುವ ವಿಷಯ ಮನೆಯವರಿಗೆ ಗೊತ್ತಾಗಿ ರಂಪಾಟವಾಯಿತು... ನಾನು ನನ್ನ ಲವ್ವರ್ ಮದುವೆ ಮಾಡ್ಕೊಂಡು ಬಿಟ್ವಿ... ಕ್ವಾರೆಂಟೈನ್‌ ಆಗಿರುವುದಕ್ಕೆ ನಿಮಗೆ ಪಾರ್ಟಿ ಕೊಡಿಸೋಕೂ ಆಗ್ತಾ ಇಲ್ಲ.... ಸ್ವಾರಿ ಅಂತ ಹಾಕಿ.....

ಸಂಜೆ ಹೊತ್ತಿಗೆ ಅವರು ಏಪ್ರಿಲ್ ಫೂಲ್‌ ಆಗಿರುವ ವಿಷಯ ಹೇಳಿದರೆ ಸಾಕು.

ಪಕ್ಕದ ಮನೆಯವರಿಗೆ ನೋಟೀಸ್ ನೀಡಿ

ಪಕ್ಕದ ಮನೆಯವರಿಗೆ ನೋಟೀಸ್ ನೀಡಿ

ಇದೀಗ ಕ್ವಾರೆಂಟೈನ್ ಸಮಯದಲ್ಲಿ ಎಲ್ಕಾ ಅವರವರ ಮನೆಯಲ್ಲಿ ಇರುತ್ತಾರೆ. ಅವರ ಡೋರ್ ಮುಂದೆ ನೀವು ಈ ದಿನ ಕ್ವಾರೆಂಟೈನ್‌ನಲ್ಲಿರಬೇಕು ಎಂದು ಜಾಕ್‌ಪೀಸ್‌ನಲ್ಲಿ ಬರೆಯಿರಿ...ಕೆಳಗಡೆ ಬೆಂಗಳೂರು ಪೊಳಿಸರು, ಮಂಗಳೂರು ಪೊಲೀಸರು ಅಂತ ಬರೆಯಿರಿ. ಅವರಿಗೆ ಡೌಟ್ ಬರದಿರಲಿ ಅಂತ ನಿಮ್ಮ ಮನೆ ಮುಂದೆಯೂ ಹೀಗೆ ಬರೆಯಿರಿ.

ನಂತರ ಹೌದು ನೀವು ಎದ್ದಿರಲಿಲ್ಲ, ಬೆಳಗ್ಗೆ ಪೊಲೀಸರು ಬರೆದು ಹೋಗಿದ್ದು, ಅದನ್ನು ಮುಟ್ಟಬೇಡಿ ಅನ್ನಿ. ಸಂಜೆ ಅವರು ಫೂಲ್ ಆದ ವಿಚಾರ ಹೇಳಿದರೆ ಸಾಕು.

ಊರಿಗೆ ಬರ್ತಾ ಇದ್ದೇವೆ ಅನ್ನಿ

ಊರಿಗೆ ಬರ್ತಾ ಇದ್ದೇವೆ ಅನ್ನಿ

ಊರಲ್ಲಿ ನಿಮ್ಮ ಸ್ನೇಹಿತರಿಗೆ ಬೆಂಗಳೂರಿನಲ್ಲಿ ಇದ್ದು ಸಾಕಾಗಿದೆ ಇವತ್ತು ಊರಿಗೆ ಬರ್ತಾ ಇದ್ದೇನೆ, ಬಂದ ಮೇಲೆ ನಿನ್ನನ್ನ ಮೀಟ್ ಮಾಡ್ತೀನಿ ಅನ್ನಿ. ಮೊದಲೇ ಅವರಿಗೆ ಬೆಂಗಳೂರಿನಿಂದ ಬರುವವರ ಮೇಲೆ ಈಗ ಅನುಮಾನ ಪಡುತ್ತಾರೆ. ಅದರಲ್ಲಿ ನೀವು ಅವನನ್ನೇ ಮೀಟ್ ಮಾಡ್ತೀನಿ ಅಂದ್ರೆ ಇನ್ನೂ ಭಯ ಪಡುತ್ತಾನೆ. ಸಂಜೆ ಅವನು ಫೂಲ್ ಆದ ವಿಷಯ ಹೇಳಿದರೆ ಸಾಕು.

ನಾಳೆ ಪಿಯುಸಿ, ಎಸ್‌ಎಲ್‌ಎಲ್‌ಸಿ ಎಕ್ಸಾಂ ಮಾಡುತ್ತಾರೆ

ನಾಳೆ ಪಿಯುಸಿ, ಎಸ್‌ಎಲ್‌ಎಲ್‌ಸಿ ಎಕ್ಸಾಂ ಮಾಡುತ್ತಾರೆ

ಮನೆಯಲ್ಲಿ ಪಿಯುಸಿ,ಮ, SSLc ಓದುವ ಮಕ್ಕಳಿದ್ದರೆ ಈ ಕ್ವಾರೆಂಟೈನಲ್ಲಿ ಬುಕ್ಸ್‌ ನೀಟಾಗಿ ಮಡಚಿಟ್ಟು ಆರಾಮ ಇರುತ್ತಾರೆ. ಅವರೇನೋ ಆಡ್ತಾ ಇರುವಾಗ ಆಡ್ತಾ ಇದ್ದೀರಾ, ನಾಳೆಯಿಂದ ನಿಮಗೆ ಪರೀಕ್ಷೆ ಮಾಡುತ್ತಾರಂತೆ ಅಂತ ಟಿವಿಯಲ್ಲಿ ಸುದ್ದಿ ಬರ್ತಾ ಇದೆ ಅಂತ ಗದರಿಸಿ, ಒಂದು ಕ್ಷಣ ಪೇಚು ಬಿದ್ದು ಬಿಡುವುದು ಗ್ಯಾರಂಟಿ.

ಮನೆ ಮುಂದೆ ಪಾರ್ಸೆಲ್ ಇಡಿ

ಮನೆ ಮುಂದೆ ಪಾರ್ಸೆಲ್ ಇಡಿ

ಒಂದು ಡಬ್ಬದಲ್ಲಿ ಏನಾದರೂ ತುಂಬಿ ಅದನ್ನು ಪಾರ್ಸೆಲ್ ರೀತಿ ಇಡಿ. ಏನೋ ಪಾರ್ಸೆಲ್ ಬಂದಿದೆ ಎಂದು ತೆಗೆದು ನೋಡಿದವರು ಏಪ್ರಿಲ್ ಫೂಲ್ ಆಗುತ್ತಾರೆ.

ಹೀಗೆ ಯಾರ ಮನಸ್ಸಿಗೂ ನೋವುಂಟು ಮಾಡದೆ ನಿಮಗೆ ಹೊಳೆದ ಐಡಿಯಾವನ್ನು ಉಪಯೋಗಿಸಿ ನಿಮ್ಮ ಸ್ನೇಹಿತರು, ಮನೆಯವರನ್ನು ಏಪ್ರಿಲ್ ಫೂಲ್ ಮಾಡಿ ಮಜಾ ತೆಗೆದುಕೊಳ್ಳಿ.

English summary

Tips To Do April Fool In This Quarantine Time

Here are april fool idea to take fun in this year. This qurantine time it will give bit happiness for you, Let check out an ideas..
Story first published: Tuesday, March 31, 2020, 16:01 [IST]
X
Desktop Bottom Promotion