Latest Updates
-
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ಬಾಲಕನ ವಯಸ್ಸು ಬರೀ 16, ಆದರೆ ಈತನ ದೇಹದ ತೂಕ ಬರೋಬ್ಬರಿ ನೂರು ಕೆಜಿ!
ಬಾಯಿಗೆ ರುಚಿಯಾಗಿ ಇರುವುದನ್ನು ನಾವೆಲ್ಲರೂ ತಿಂದುಬಿಡುತ್ತೇವೆ. ಇದರಿಂದ ಮುಂದೆ ನಮ್ಮ ದೇಹ ಹಾಗೂ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನುವ ಬಗ್ಗೆ ಆಲೋಚನೆ ಮಾಡುವುದಿಲ್ಲ. ಇಂದಿನ ದಿನಗಳಲ್ಲಿ ಹೆಚ್ಚಿನವರು ಜಂಕ್ ಫುಡ್ ಗಳಿಗೆ ಮಾರು ಹೋಗಿದ್ದಾರೆ. ಅದರ ಬಲೆಯಿಂದ ಹೊರಬರಲು ಅವರಿಗೆ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಆರೋಗ್ಯಕಾರಿ ಆಹಾರವಿದ್ದರೂ ನಾವು ಅದನ್ನು ಕಡೆಗಣಿಸುತ್ತೇವೆ. ಆದರೆ ಜಂಕ್ ಫುಡ್ ಎನ್ನುವುದು ಎಲ್ಲರಿಗೂ ಒಂದೇ ರೀತಿಯಾಗಿ ಇರುವುದಿಲ್ಲ. ಇದರಿಂದ ದೇಹ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇಂತಹ ಒಂದು ಪ್ರಕರಣವು ಚೀನಾದಲ್ಲಿ ನಡೆದಿದೆ. ಬಾಲಕನ ರಕ್ತದಲ್ಲಿನ ಸಕ್ಕರೆ ಮಟ್ಟವು ಸಾಮಾನ್ಯಕ್ಕಿಂತ 20 ಪಟ್ಟು ಹೆಚ್ಚಾಗಿ, ಸಾಯುವ ಸ್ಥಿತಿಗೆ ತಲುಪಿದ್ದಾನೆ. ಆದರೆ ಆತ ಅದೃಷ್ಟವಶಾತ್ ಬದುಕುಳಿದಿದ್ದಾನೆ. ಈ ಘಟನೆ ಬಗ್ಗೆ ನೀವು ಹೆಚ್ಚಿನ ಮಾಹಿತಿ ತಿಳಿಯಿರಿ

ಚೀನಾದ ಮಾಧ್ಯಮಗಳ ಪ್ರಕಾರ, ಕ್ಸಿಯೊ ಯಿಂಗ್ ಎಂಬ ಬಾಲಕನಿಗೆ ತುಂಬಾ ಬಾಯಾರಿಕೆ ಆಗುತ್ತಿತ್ತು ಮತ್ತು ಇದರಿಂದಾಗಿ ಆತ ಪ್ರತೀ ದಿನ ಸುಮಾರು ನಾಲ್ಕು ಬಾಟಲಿ ನೀರು ಕುಡಿಯುತ್ತಿದ್ದ. ಇದೇ ವೇಳೆ ಆತನಿಗೆ ವಾಕರಿಕೆ ಕೂಡ ಬರುತ್ತಿತ್ತು. ಇಂತಹ ಸಮಸ್ಯೆಯಿಂದಾಗಿ ಆತ ತುಂಬಾ ತೂಕ ಕಳೆದುಕೊಂಡ. ಆದರೆ ಒಂದು ದಿನ ಆತ ಕುಸಿದುಬಿದ್ದ. ಆತನನ್ನು ಚೀನಾದ ಝೆಜಿಯಾಂಗ್ ಪ್ರದೇಶದಲ್ಲಿನ ಆಸ್ಪತ್ರೆಗೆ ದಾಖಲಿಸಲಾಯಿತು. ಸಾಮಾನ್ಯ ವ್ಯಕ್ತಿಯೊಬ್ಬನ ರಕ್ತದಲ್ಲಿರುವ ಸಕ್ಕರೆ ಮಟ್ಟಕ್ಕಿಂತ 20 ಪಟ್ಟು ಹೆಚ್ಚಾಗಿತ್ತು. ಇದನ್ನು ನೋಡಿದ ವೈದ್ಯರಿಗೆ ಕೂಡ ತುಂಬಾ ಅಚ್ಚರಿಯಾಯಿತು. ರಕ್ತ ಪರೀಕ್ಷೆಯ ಪ್ರಕಾರ ಯಿಂಗ್ ರಕ್ತದಲ್ಲಿನ ಸಕ್ಕರೆ ಮಟ್ಟವು 12ಎಂಎಂಒಎಲ್/ಎಲ್ ಇತ್ತು. ಇದು ಸಾಮಾನ್ಯವಾಗಿ 3.9 ಮತ್ತು 6.1ಎಂಎಂಒಎಲ್/ಎಲ್ ಮಧ್ಯೆ ಇರಬೇಕು.
ಇದರಿಂದಾಗಿ ಆತನ ದೇಹದ ಅಂಗಾಂಗಗಳು ಕೆಲಸ ಮಾಡಲು ವಿಫಲವಾಗಿದ್ದವು ಮತ್ತು ಆತನ ದೇಹದ ತಾಪಮಾನವು 39 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಅದೃಷ್ಟವಶಾತ್ ವೈದ್ಯರು ಪ್ರಾಣವನ್ನು ರಕ್ಷಿಸಿದರು. ಚಿಕಿತ್ಸೆ ಬಳಿಕ ಆ ಬಾಲಕನನ್ನು ತುರ್ತು ನಿಗಾ ವಿಭಾಗಕ್ಕೆ ಸ್ಥಳಾಂತರಿಸಲಾಯಿತು. ಯಿಂಗ್ ಗೆ ಟೈಪ್-2 ಮಧುಮೇಹ ಮತ್ತು ಡಯಾಬೆಟಿಕ್ ಕೀಟೋಆಸಿಡೋಸಿಸ್ ಇತ್ತು. ಇದು ಪ್ರಾಣಹಾನಿ ಉಂಟು ಮಾಡುವಂತಹ ಸಮಸ್ಯೆಯಾಗಿದೆ. ಈ ಪರಿಸ್ಥಿತಿಯಲ್ಲಿ ದೇಹವು ತುಂಬಾ ವೇಗವಾಗಿ ಕೊಬ್ಬನ್ನು ಕರಗಿಸುವುದು ಮತ್ತು ಇದರ ಪರಿಣಾಮವಾಗಿ ರಕ್ತವು ಆಮ್ಲೀಯವಾಗುವುದು.
ದೇಹದಲ್ಲಿ ಇಷ್ಟು ಮಟ್ಟದಲ್ಲಿ ಸಕ್ಕರೆ ಪ್ರಮಾಣವು ಕಾಣಿಸಿಕೊಳ್ಳಲು ಆತನ ಜೀವನಶೈಲಿ ಕೂಡ ಕಾರಣವಾಗಿದೆ. ಆತನ ಕೆಟ್ಟ ಆಹಾರ ಕ್ರಮವೇ ಇದಕ್ಕೆ ಕಾರಣವೆಂದು ಹೇಳಲಾಗುತ್ತದೆ. ಆತನ ತೂಕವು 100ಕೆಜಿ ಇತ್ತು. ಆತ ಯಾವಾಗಲು ಬಬಲ್ ಟಿ, ಸೋಡಾ, ಬರ್ಬೆಕ್ಯೂ ಮತ್ತು ಕರಿದ ತಿಂಡಿಗಳನ್ನು ತಿನ್ನುತ್ತದೆ. ಈ ಬಾಲಕ ಯಾವಾಗಲೂ ತುಂಬಾ ಹಸಿದಿರುತ್ತಿದ್ದ ಮತ್ತು ಯಾವಾಗಲೂ ತಿನ್ನುತ್ತಿದ್ದ ಎಂದು ಆತನ ಪೋಷಕರು ಹೇಳಿದ್ದಾರೆ. ಇದು ಅನಾರೋಗ್ಯಕರ ಆಹಾರ ಮತ್ತು ಪ್ರಾಣಹಾನಿ ಉಂಟು ಮಾಡಬಹುದು ಎಂದು ಅವರಿಗೂ ತಿಳಿದಿರಲಿಲ್ಲ. ಸಾವಿನ ದವಡೆಯಿಂದ ಯಿಂಗ್ ನ್ನು ಪಾರು ಮಾಡಿರುವ ಕಾರಣದಿಂದಾಗಿ ಈಗ ಆತ ತುಂಬಾ ಆರೋಗ್ಯಕರ ಆಹಾರ ಮತ್ತು ಪ್ರತಿನಿತ್ಯವು ವ್ಯಾಯಾಮ ಮಾಡುವುದಾಗಿ ಹೇಳಿದ್ದಾನೆ.



Click it and Unblock the Notifications

