For Quick Alerts
ALLOW NOTIFICATIONS  
For Daily Alerts

ನಮ್ಮ ಆತ್ಮ ನಮ್ಮಿಂದ ಬಯಸುವ ಸಂಗತಿಗಳು ಯಾವವು ಗೊತ್ತೇ ? ಇದನ್ನು ಓದಿ

|

ಪ್ರತಿಯೊಬ್ಬ ವ್ಯಕ್ತಿಯಲ್ಲೂ ಆತ್ಮ ಎನ್ನುವ ಒಂದು ವಿಶೇಷ ಶಕ್ತಿಯಿರುತ್ತದೆ. ಆ ಆತ್ಮವೇ ವ್ಯಕ್ತಿಯನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುತ್ತದೆ. ನಾವು ಯಾವುದೇ ಕೆಲಸ ಕಾರ್ಯಗಳನ್ನು ಕೈಗೊಂಡರೂ ಅದು ಸರಿಯಾ? ಅಥವಾ ತಪ್ಪಾ? ಎನ್ನುವುದನ್ನು ನಮ್ಮ ಆತ್ಮ ಎಚ್ಚರಿಸುತ್ತದೆ. ಆದರೂ ಕೆಲವು ಬಾರಿ ನಾವು ನಮ್ಮ ಆತ್ಮದ ಮಾತನ್ನು ಕೇಳುವುದಿಲ್ಲ. ನಾವು ಮಾಡುತ್ತಿರುವುದು ತಪ್ಪು ಎನ್ನುವ ಒಳ ಭಾವನೆ ಹೇಳುತ್ತಿದ್ದರೂ ತಪ್ಪನ್ನೇ ಮಾಡುತ್ತೇವೆ. ಆಗ ನಮ್ಮ ಆತ್ಮ ನೀನು ಮಾಡುತ್ತಿರುವುದು ತಪ್ಪು ಎನ್ನುವುದನ್ನು ಹೇಳುತ್ತಲೇ ಇರುತ್ತದೆ.

ನಾವು ಮಾಡುವ ಕೆಲಸ ಕಾರ್ಯಗಳನ್ನು ಇತರರಿಂದ ಸುಲಭವಾಗಿ ಮುಚ್ಚಿಡಬಹುದು. ಆದರೆ ನಮ್ಮಲ್ಲಿ ಇರುವ ಒಂದು ಆತ್ಮಸಾಕ್ಷಿಯಿಂದ ಮರೆಮಾಚಲು ಸಾಧ್ಯವಿಲ್ಲ. ಆತ್ಮ ಎನ್ನುವುದು ಪವಿತ್ರವಾದದ್ದು. ಅದಕ್ಕೆ ಎಂದಿಗೂ ಸಾವಿಲ್ಲ. ಅದು ಅಮರ. ನಿಷ್ಕಲ್ಮಶವಾದ ಆತ್ಮವು ನಮ್ಮಲ್ಲಿ ಸದಾಚಾರ ತುಂಬಿರಲಿ ಎಂದು ಬಯಸುತ್ತದೆ. ಆದರೆ ನಮ್ಮ ಸ್ವಾರ್ಥ ಭಾವನೆಗಳು ಅನುಚಿತ ಕೆಲಸ, ಮೋಸ, ಸುಳ್ಳು ಹಾಗೂ ದುರಾಸೆಗೆ ಒಳಗಾಗುವಂತೆ ಮಾಡುವುದು. ಅವುಗಳನ್ನು ಮೀರಿ ನಿಲ್ಲಬೇಕು ಎಂದರೆ ನಮ್ಮಲ್ಲಿರುವ ಆತ್ಮದ ಮಾತನ್ನು ಕೇಳಬೇಕು.

Things your soul wants you to know

ಹುಟ್ಟು ಮತ್ತು ಸಾವಿನ ನಡುವೆ ನಮ್ಮ ಬದುಕು ಕ್ಷಣಿಕ ದಿನಗಳಿಂದ ಕೂಡಿರುತ್ತವೆ. ಭೂಮಿಯ ಮೇಲೆ ಅಲ್ಪಾವಧಿಯ ಸಮಯವನ್ನು ಹೊಂದಿರುವ ನಾವು ಯಾವ ಉದ್ದೇಶಕ್ಕೆ ಬಂದಿದ್ದೇವೆ? ಏನು ಮಾಡಬೇಕು ಎನ್ನುವುದನ್ನು ಮರೆತು ಉಳಿದದ್ದನ್ನೆಲ್ಲಾ ಮಾಡುತ್ತೇವೆ. ಹಾಗಾಗಿ ನಮ್ಮ ಆತ್ಮವು ನಮ್ಮಿಂದ ಕೆಲವು ವಿಶೇಷ ಸಂಗತಿಗಳು ನೆರವೇರಬೇಕು ಎಂದು ಸದಾ ಬಯಸುತ್ತದೆ. ನಮಗೆ ಅದರ ಬಗ್ಗೆ ಅರಿವಿರುವುದಿಲ್ಲವಷ್ಟೆ. ನಮ್ಮ ಆತ್ಮ ನಮ್ಮಿಂದ ಬಯಸುವ ಸಂಗತಿಗಳು ಯಾವವು? ಎನ್ನುವುದನ್ನು ಲೇಖನದ ಮುಂದಿನ ಭಾಗ ವಿವರಿಸುತ್ತದೆ.

1. ನೀವು ನೀವಾಗಿಯೇ ಇರಬೇಕು

1. ನೀವು ನೀವಾಗಿಯೇ ಇರಬೇಕು

ಪ್ರತಿಯೊಬ್ಬರಲ್ಲೂ ಒಳ್ಳೆಯ ಹಾಗೂ ಕೆಟ್ಟ ಸಂಗತಿಗಳು ಇರುತ್ತವೆ. ಅವುಗಳಲ್ಲಿ ನಾವು ಒಳ್ಳೆಯ ಸಂಗತಿಯನ್ನು ಆರಿಸಿಕೊಳ್ಳಬೇಕು. ಆಗ ಮಾತ್ರ ನಾವು ವಿವೇಕದಿಂದ ವರ್ತನೆಯನ್ನು ತೋರಲು ಸಾಧ್ಯ. ಅದೇ ಕೆಟ್ಟದ್ದನ್ನು ಆರಿಸಿಕೊಂಡರೆ ನಮ್ಮಲ್ಲಿ ಬರೀ ಸ್ವಾರ್ಥ ಹಾಗೂ ಹುಳುಕು ಬುದ್ಧಿಯೇ ತುಂಬಿಕೊಳ್ಳುವುದು. ಹಾಗಾಗಿ ಅನುಚಿತ ಸಂಗತಿಗಾಗಿ ನಾವು ಆಸೆಗೆ ಬಲಿಯಾಗಬಾರದು. ಸದಾ ನಮ್ಮತನವನ್ನು ನಾವು ಕಾಪಾಡಿಕೊಳ್ಳಬೇಕು ಎಂದು ನಮ್ಮ ಆತ್ಮ ಬಯಸುವುದು.

2. ಭಾವನೆಗಳನ್ನು ಆಳವಾಗಿ ಅನುಭವಿಸಬೇಕು

2. ಭಾವನೆಗಳನ್ನು ಆಳವಾಗಿ ಅನುಭವಿಸಬೇಕು

ಬಹುತೇಕ ಸಂದರ್ಭದಲ್ಲಿ ನಾವು ನಮ್ಮ ಭಾವನೆಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತೇವೆ. ಕೆಲವೊಮ್ಮೆ ಲಂಗು ಲಗಾಮು ಇಲ್ಲದಂತೆ ಹರಿ ಬಿಡುತ್ತೇವೆ. ಇದರ ಪರಿಣಾಮದಿಂದ ಮಾನಸಿಕವಾಗಿ ಒಂದಿಷ್ಟು ಒತ್ತಡ ಹಾಗೂ ಬೇಸರವನ್ನು ಅನುಭವಿಸುವ ಸಾಧ್ಯತೆಗಳೇ ಹೆಚ್ಚು. ಅಲ್ಲದೇ ಬಹುತೇಕ ಸಂದರ್ಭದಲ್ಲಿ ನಾವು ನಮ್ಮ ತನವನ್ನು ಮರೆತು ಕೊರಗುತ್ತಲೇ ಇರುತ್ತೇವೆ. ಹಾಗಾಗಿ ಆತ್ಮವು ನೀವು ನಿಮ್ಮ ಭಾವನೆಗಳನ್ನು ತಡೆ ಹಿಡಿಯಬೇಡಿ ಎನ್ನುತ್ತದೆ. ನೀವು ನಿಜವಾಗಿಯೂ ಏನನ್ನು ಅನುಭವಿಸುತ್ತಿದ್ದೀರಿ ಅದನ್ನು ಹಾಗೆಯೇ ಸ್ವೀಕರಿಸಿ. ಆಗ ಮನಸ್ಸು ಹಗುರವಾಗುವುದು. ನಿಮ್ಮ ಆರೋಗ್ಯವೂ ಉತ್ತಮವಾಗಿರುವುದು.

3. ಆದಷ್ಟು ಎಚ್ಚರವಾಗಿರಬೇಕು

3. ಆದಷ್ಟು ಎಚ್ಚರವಾಗಿರಬೇಕು

ನಾವು ಏನು ಮಾಡುತ್ತಿದ್ದೇವೆ ಎನ್ನುವುದರ ಅರಿವು ನಮಗೆ ಇರಬೇಕು. ಏಕೆಂದರೆ ನಾವು ಕೈಗೊಳ್ಳುವ ಕೆಲಸ ಅಥವಾ ನಿರ್ಧಾರಗಳು ಇತರರಿಗೆ ನೋವು ಅಥವಾ ತೊಂದರೆಯನ್ನು ಉಂಟುಮಾಡುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹಾಗಾಗಿ ನಾವು ಕೈಗೊಳ್ಳುವ ಕೆಲಸಗಳು ಧನಾತ್ಮಕವಾಗಿ ಇರಬೇಕು. ಅದನ್ನು ನಿರ್ವಹಿಸುವಾಗ ನಾವು ಎಚ್ಚರಿಕೆಯಿಂದ ಇರಬೇಕು. ಕೈಗೊಳ್ಳುವ ಕೆಲಸ ಒಳ್ಳೆಯದ್ದಾಗಿದ್ದರೂ ಕೆಲವು ಅನುಚಿತ ಸಂಗತಿಗಳು ಅಥವಾ ಅನಿರೀಕ್ಷಿತ ಕಾರಣಗಳಿಂದ ತೊಂದರೆ ಉಂಟಾಗಬಹುದು. ಹಾಗಾಗಿ ನಾವು ಕೈಗೊಳ್ಳುವ ಎಲ್ಲಾ ವಿಚಾರವು ಸರಿಯಾಗಿ ನೆರವೇರುವಾಗ ನಮ್ಮ ಕಾಳಜಿಯು ಅತ್ಯಗತ್ಯ. ಅದರ ಬಗ್ಗೆ ನಮ್ಮಲ್ಲಿ ಎಚ್ಚರಿಕೆ ಇರಬೇಕು ಎಂದು ಆತ್ಮ ಬಯಸುವುದು.

4. ಸ್ಥಿರತೆಯಿಂದ ಕೂಡಿರಬೇಕು

4. ಸ್ಥಿರತೆಯಿಂದ ಕೂಡಿರಬೇಕು

ನಮ್ಮ ಸುತ್ತಲು ನಡೆಯುವ ಸಂಗತಿಗಳು ಅಥವಾ ಘಟನೆಗಳ ಬಗ್ಗೆ ನಾವು ಹೆಚ್ಚು ಆಸಕ್ತರಾಗಿರುತ್ತೇವೆ. ನಮ್ಮ ಆಸಕ್ತಿಯು ಕೆಲವೊಮ್ಮೆ ಗಡಿ ಮೀರಿ ಹೋಗಬಹುದು. ಅತಿಯಾದ ಕುತೂಹಲವು ನಮ್ಮನ್ನು ಋಣಾತ್ಮಕವಾದ ಅಥವಾ ತಪ್ಪು ಹಾದಿಯಲ್ಲಿ ನಡೆಯುವಂತೆ ಪ್ರೇರೇಪಿಸಬಹುದು. ಹಾಗಾಗಿ ನಾವು ನಮ್ಮ ಮಾನಸಿಕ ಸ್ಥಿತಿ ಮತ್ತು ವರ್ತನೆಯಲ್ಲಿ ಸೂಕ್ತ ರೀತಿಯ ಸ್ಥಿರತೆಯ ಗುಣವನ್ನು ಹೊಂದಿರಬೇಕು ಎಂದು ಆತ್ಮವು ಬಯಸುವುದು.

5. ಫಲಿತಾಂಶವನ್ನು ನಿರೀಕ್ಷಿಸದಿರಿ

5. ಫಲಿತಾಂಶವನ್ನು ನಿರೀಕ್ಷಿಸದಿರಿ

ಯಾವುದಾದರೂ ಗುರಿ ಅಥವಾ ಸಾಧನೆಯ ವಿಷಯದಲ್ಲಿ ಸಾಕಷ್ಟು ಶ್ರಮವನ್ನು ವಹಿಸುತ್ತೇವೆ. ಜೀವನದಲ್ಲಿ ಬಹುತೇಕ ಸಂದರ್ಭಗಳು ಹಾಗೂ ಸಂಗತಿಗಳು ನಾವು ಅಂದುಕೊಂಡಂತೆ ಇರುವುದಿಲ್ಲ. ಎಲ್ಲವೂ ವಿಭಿನ್ನವಾಗಿರುತ್ತವೆ. ಯಾವುದೇ ಕೆಲಸದಲ್ಲಿ ನಾವು ನಮ್ಮನ್ನು ತೊಡಗಿಸಿಕೊಂಡಾಗ ಅದರ ಫಲಿತಾಂಶ ಹೀಗೇ ಇರಬೇಕು ಎಂದು ಬಯಸಬಾರದು. ನಮ್ಮ ಕರ್ಮ ಅಥವಾ ಕೆಲಸವು ಯಾವ ರೀತಿಯಲ್ಲಿದೆ? ಎನ್ನುವುದನ್ನು ಸಮಯವೇ ನಿರ್ಧರಿಸುತ್ತದೆ. ಅದಕ್ಕಾಗಿ ನಾವು ನಮ್ಮ ಪ್ರಯತ್ನ ಹಾಗೂ ಕೆಲಸದಲ್ಲಿ ಧನಾತ್ಮಕ ಚಿಂತನೆ ಹಾಗೂ ಕ್ರಮವನ್ನು ಕೈಗೊಳ್ಳಬೇಕು. ಹೊರತು ಫಲಿತಾಂಶದ ಬಗ್ಗೆ ನಿರೀಕ್ಷೆಗಳನ್ನಲ್ಲ ಎಂದು ಆತ್ಮ ಹೇಳುವುದು.

6. ಪ್ರಸ್ತುತ ಸಮಯವು ಅತ್ಯಂತ ಅಮೂಲ್ಯವಾದದ್ದು

6. ಪ್ರಸ್ತುತ ಸಮಯವು ಅತ್ಯಂತ ಅಮೂಲ್ಯವಾದದ್ದು

ನಾವು ಈ ಕ್ಷಣ ಏನನ್ನು ಅನುಭವಿಸುತ್ತಿದ್ದೇವೆಯೋ ಅದು ಮಾತ್ರ ನಮ್ಮದು. ಹಿಂದೆ ನಡೆದಿದ್ದು ಮತ್ತು ಮುಂದೆ ನಡೆಯುವ ವಿಷಯಗಳನ್ನು ನಾವು ಗಣನೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಮುಂದಿನ ಕ್ಷಣ ಹೇಗಿರುತ್ತದೆ ಎನ್ನುವುದನ್ನು ನಾವು ಅಂದಾಜಿಸಲು ಸಾಧ್ಯವಿಲ್ಲ. ನಮ್ಮ ಜೀವನ ಹಾಗೂ ಪರಿಸ್ಥಿತಿ ಎನ್ನುವುದು ಅನಿರೀಕ್ಷಿತ ಹಾಗೂ ಅಪರಿಚಿತ. ಹಾಗಾಗಿ ಈಗ ಸಿಕ್ಕಿರುವ ಕ್ಷಣದಲ್ಲಿ ಜೀವನವನ್ನು ಹೆಚ್ಚು ಆನಂದಿಸುವ ಗುಣವನ್ನು ಹೊಂದಿರಬೇಕು ಎಂದು ಆತ್ಮ ಬಯಸುತ್ತದೆ.

7. ಉತ್ತಮ ದೃಷ್ಟಿಕೋನ

7. ಉತ್ತಮ ದೃಷ್ಟಿಕೋನ

ನಾವು ಬಯಸುವ ವಿಷಯ ಅಥವಾ ಕಾಣುವ ಸಂಗತಿಗಳ ಬಗ್ಗೆ ಧನತ್ಮಕವಾದ ಚಿಂತನೆ ಮತ್ತು ದೃಷ್ಟಿಕೋನವನ್ನು ಹೊಂದಿರಬೇಕು. ಸದಾ ನಕಾರಾತ್ಮಕವಾಗಿಯೇ ಚಿಂತಿಸಿದರೆ ಅದರಿಂದ ಯಾವ ಲಾಭವೂ ಉಂಟಾಗದು. ಧನಾತ್ಮಕ ದೃಷ್ಟಿಕೋನ ಹೊಂದಿದ್ದರೆ ಎಲ್ಲವೂ ಉತ್ತಮವಾಗಿಯೇ ಇರುತ್ತದೆ. ಹಾಗಾಗಿ ನಾವು ಹೊಂದುವ ದೃಷ್ಟಿಕೋನವು ಧನಾತ್ಮಕತೆಯಿಂದ ಕೂಡಿರಬೇಕು ಎಂದು ಆತ್ಮ ಬಯಸುವುದು.

8. ಸ್ವಯಂ ಮೌಲ್ಯವನ್ನು ಇತರರು ಗುರುತಿಸಲಿ ಎಂದು ಬಯಸದಿರಿ

8. ಸ್ವಯಂ ಮೌಲ್ಯವನ್ನು ಇತರರು ಗುರುತಿಸಲಿ ಎಂದು ಬಯಸದಿರಿ

ನಮ್ಮಲ್ಲಿರುವ ಸಾಮರ್ಥ್ಯ ಅಥವಾ ಶಕ್ತಿಯ ಬಗ್ಗೆ ನಮಗೆ ಸೂಕ್ತವಾದ ಅರಿವಿರಬೇಕು. ಅಂತೆಯೇ ನಮ್ಮ ಪ್ರತಿಭೆಯನ್ನು ಇತರರು ಪ್ರಶಂಸಿಸಲಿ ಅಥವಾ ಗುರುತಿಸಲಿ ಎಂದು ಬಯಸಬಾರದು. ಹಾಗೆ ಮಾಡಿದರೆ ನಮಗೆ ಹೆಚ್ಚು ದುಃಖ ಕಾಡುವುದು. ಹಾಗಾಗಿ ಸ್ವಯಂ ಮೌಲ್ಯವನ್ನು ನೀವೇ ಗುರುತಿಸಿಕೊಂಡು, ತೃಪ್ತರಾಗಬೇಕು ಎಂದು ಆತ್ಮ ಬಯಸುತ್ತದೆ.

9. ನಿಮಗೆ ಬೇಕಾಗಿರುವುದು ನಿಮ್ಮೊಳಗೆ ಇರುತ್ತದೆ

9. ನಿಮಗೆ ಬೇಕಾಗಿರುವುದು ನಿಮ್ಮೊಳಗೆ ಇರುತ್ತದೆ

ನಮ್ಮಲ್ಲಿ ಎಂತಹದ್ದೇ ವಸ್ತುವಾಗಲೀ ಅಥವಾ ವಿಷಯವಾಗಲೀ ಅದರ ಬಗ್ಗೆ ಹೆಮ್ಮೆ ಹಾಗೂ ತೃಪ್ತಿ ಇರಬೇಕು. ಬೇರೆಯವರ ಬಳಿ ಇರುವುದನ್ನು ನಿಮ್ಮ ಬಳಿಯೂ ಇರಬೇಕು ಎಂದು ಕೊರಗುವುದನ್ನು ತಪ್ಪಿಸಬೇಕು. ದಿನಕ್ಕೆ 5-10 ನಿಮಿಷಗಳ ಕಾಲ ಶಾಂತವಾಗಿ ಧ್ಯಾನ ಮಾಡಿದರೆ ಮಾನಸಿಕವಾಗಿಯೂ ಶಾಂತಿ ದೊರೆಯುವುದು. ಆಗ ನಿಮ್ಮೊಳಗಿನ ಆಂತರಿಕ ಶಕ್ತಿ ಹಾಗೂ ಭಾವನೆಯ ಬಗ್ಗೆ ಅರಿವನ್ನು ಹೊಂದುವಿರಿ. ಅದರಬಗ್ಗೆ ನೀವು ಸರಿಯಾಗಿ ಅರಿತುಕೊಳ್ಳಬೇಕು ಎಂದು ಆತ್ಮ ಬಯಸುವುದು.

10. ಎಲ್ಲವೂ ತಾತ್ಕಾಲಿಕ ಎಂದು ಭಾವಿಸಿ

10. ಎಲ್ಲವೂ ತಾತ್ಕಾಲಿಕ ಎಂದು ಭಾವಿಸಿ

ಜೀವನವೇ ನಶ್ವರ. ಇಲ್ಲಿ ನಾವು ತಂದಿದ್ದೇನೂ ಇಲ್ಲ. ತೆಗೆದುಕೊಂಡು ಹೋಗುವುದು ಏನೂ ಇಲ್ಲ. ಪ್ರಸ್ತುತವಾಗಿ ನಾವೇನು ಅನುಭವಿಸುತ್ತಿದ್ದೇವೆಯೋ ಅದು ತಾತ್ಕಾಲಿಕ. ಹಾಗಾಗಿ ನಾವು ಯಾವುದರ ಬಗ್ಗೆಯೂ ಹೆಚ್ಚು ಆಸೆ ಹಾಗೂ ಮೋಹವನ್ನು ಹೊಂದಬಾರದು ಎಂದು ಆತ್ಮವು ಬಯಸುತ್ತದೆ.

11. ಸ್ವೀಕರಿಸುವ ಗುಣ ಇರಬೇಕು

11. ಸ್ವೀಕರಿಸುವ ಗುಣ ಇರಬೇಕು

ನಾವು ನಮ್ಮ ಜೀವನದಲ್ಲಿ ಏನೆಲ್ಲಾ ಎದುರಿಸುತ್ತೇವೆ ಅಥವಾ ಪಡೆದುಕೊಳ್ಳುತ್ತೇವೆ ಎನ್ನುವುದರ ಬಗ್ಗೆ ಯಾವುದೇ ಸೂಚನೆಯು ಸಿಗುವುದಿಲ್ಲ. ಕೇವಲ ಕಲ್ಪನೆಯ ನಂಬಿಕೆಯ ಮೇಲೆಯೇ ಕನಸುಗಳ ಗೋಪುರವನ್ನು ಕಟ್ಟುತ್ತೇವೆ. ನಾವು ನಮ್ಮ ಜೀವನದಲ್ಲಿ ಯಶಸ್ಸು ಅಥವಾ ಮೋಕ್ಷವನ್ನು ಸಾಧಿಸಬೇಕು ಎಂದರೆ ನಮ್ಮಲ್ಲಿ ಸಹಿಸಿಕೊಳ್ಳುವ ಹಾಗೂ ಸ್ವೀಕರಿಸುವ ಗುಣ ಇರಬೇಕು ಎಂದು ಆತ್ಮ ಬಯಸುವುದು.

12. ದಯೆಯ ದಾರಿಯಲ್ಲಿ ಹೋಗಬೇಡಿ

12. ದಯೆಯ ದಾರಿಯಲ್ಲಿ ಹೋಗಬೇಡಿ

ನಾವು ಇಷ್ಟಪಡುವ ವ್ಯಕ್ತಿ, ವಸ್ತು, ಪ್ರಾಣಿಗಳ ಬಗ್ಗೆ ಹೆಚ್ಚು ಪ್ರೀತಿ ಹಾಗೂ ದಯಾ ಮನೋಭಾವವನ್ನು ಹೊಂದಿರುತ್ತೇವೆ. ಅವು ಮಧ್ಯದಲ್ಲಿ ನಮ್ಮಿಂದ ದೂರವಾದರೆ ಆ ದುಃಖ ಅಥವಾ ನೋವನ್ನು ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ನಾವು ಯಾವ ಸಂಗತಿಯ ಕುರಿತಾಗಿ ಅತಿಯಾದ ದಯೆ ಹಾಗೂ ಪ್ರೀತಿಯನ್ನು ತೋರಬಾರದು ಎಂದು ಆತ್ಮವು ಬಯಸುವುದು.

13. ಗೊಂದಲಗಳಿಂದ ಹೊರಬನ್ನಿ

13. ಗೊಂದಲಗಳಿಂದ ಹೊರಬನ್ನಿ

ಜೀವನದಲ್ಲಿ ನಾವು ಅಂದುಕೊಂಡಿದ್ದು ನಡೆಯದೆ ಇದ್ದಾಗ ಮತ್ತು ನಮ್ಮವರು ನಾವು ಅಂದುಕೊಂಡಂತೆ ವರ್ತಿಸದೆ ಇದ್ದರೆ ಆಗ ನಮ್ಮಲ್ಲಿ ಅತಿಯಾದ ಗೊಂದಲ ಉಂಟಾಗುವುದು. ಆಗ ಮನಸ್ಸಿನಲ್ಲಿ ಎಲ್ಲಾ ತಪ್ಪು ಕಲ್ಪನೆ ಹಾಗೂ ಚಿಂತನೆಗಳೇ ಮೂಡುತ್ತವೆ. ಹಾಗಾಗಿ ವಿಷಯವನ್ನು ಸರಿಯಾಗಿ ಪರಿಶೀಲಿಸಿ. ಜೊತೆಗೆ ಮನಸ್ಸಿನಲ್ಲಿ ಯಾವುದೇ ಗೊಂದಲವನ್ನು ಇಟ್ಟುಕೊಳ್ಳದೆ ಮಾನಸಿಕವಾಗಿ ಶಾಂತಿಯಿಂದ ಇರಬೇಕು ಎಂದು ಆತ್ಮವು ಬಯಸುತ್ತದೆ.

14. ತೊಂದರೆಗಳು ನಿಧಾನವಾಗಿ ಸುಧಾರಿಸುತ್ತವೆ

14. ತೊಂದರೆಗಳು ನಿಧಾನವಾಗಿ ಸುಧಾರಿಸುತ್ತವೆ

ಬದುಕಿನ ಪಯಣದಲ್ಲಿ ಸಾಕಷ್ಟು ಸಮಸ್ಯೆಗಳು ಹಾಗೂ ಅನುಕೂಲತೆಗಳನ್ನು ಎದುರಿಸುತ್ತೇವೆ. ತೊಂದರೆ ಎದುರಾದಾಗ ಜೀವನದಲ್ಲಿ ಭರವಸೆಯನ್ನು ಕಳೆದುಕೊಳ್ಳಬಾರದು. ಎಂತಹ ಸಮಸ್ಯೆ ಅಥವಾ ಕಷ್ಟಗಳಿದ್ದರೂ ಅದಕ್ಕೆ ನಿಧಾನವಾಗಿ ನಿವಾರಣೆಯಾಗುತ್ತದೆ. ಜೀವನದ ಪರಿಸ್ಥಿತಿಗಳು ಸುಧಾರಿಸುತ್ತವೆ ಎನ್ನುವ ಉತ್ತಮ ನಂಬಿಕೆಯನ್ನು ಹೊಂದಿರಬೇಕು ಎಂದು ಆತ್ಮವು ಬಯಸುತ್ತದೆ.

Read more about: insync life ಜೀವನ
English summary

Things your soul wants you to know

We get so involved in the nitty-gritty of life that we often forget the most important lessons we came here to learn – the lessons that our inner spirit is trying to teach us during our relatively short stay here on earth. Since the soul is the fountainhead of wisdom of guidance, it is always trying to communicate with us. Each life experience is an invitation to live as closely as possible to our soul’s true essence. This is what your soul wants you know…
X
Desktop Bottom Promotion