For Quick Alerts
ALLOW NOTIFICATIONS  
For Daily Alerts

ಅಧಿಕ ಮಾಸದಲ್ಲಿ ಈ ಕಾರ್ಯಗಳನ್ನು ಮಾಡಿದರೆ ಅದೃಷ್ಟ ಒಲಿಯುವುದು

|

ಮೂರು ವರ್ಷಗಳಿಗೊಮ್ಮೆ ಬರುವ ಅಧಿಕ ಮಾಸಕ್ಕೆ ಹಿಂದೂ ಧರ್ಮದಲ್ಲಿ ತುಂಬಾನೇ ಪ್ರಾಮುಖ್ಯತೆ ಇದೆ. ಒಂದೊಂದು ಮಾಸಕ್ಕೆ ಒಂದೊಂದು ದೇವರು ಅಧಿಪತಿಯಾಗಿದ್ದಾರೆ. ಆದರೆ ಅಧಿಕ ಮಾಸದ ಹೊರೆಯನ್ನು ಮಹಾವಿಷ್ಣು ಹೊತ್ತಿದ್ದಾನೆ ಎಂದು ಪುರಾಣವು ಹೇಳುತ್ತದೆ.

ಅಧಿಕ ಮಾಸದಲ್ಲಿ ಯಾವುದೇ ಶುಭಕಾರ್ಯ ಮಾಡುವಂತಿಲ್ಲ, ಆದರೆ ಧಾರ್ಮಿಕ ವಿಧಿ ವಿಧಾನಗಳನ್ನು ಪಾಲಿಸಿ ಮಹಾವಿಷ್ಣುವಿನ ಕೃಪೆಗೆ ಪಾತ್ರರಾಗಲು ಇದು ಸೂಕ್ತ ಸಮಯವಾಗಿದೆ. ಧಾರ್ಮಿಕ ವಿಚಾರಗಳಿಗೆ ತುಂಬಾ ಪ್ರಶಸ್ತವಾದ ಈ ಸಮಯದಲ್ಲಿ ಕೆಲವೊಂದು ಪುಣ್ಯದ ಕಾರ್ಯಗಳನ್ನು ಮಾಡುವುದರಿಂದ ಅದೃಷ್ಟ ಒಲಿಯುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.

ಅಧಿಕ ಮಾಸದಲ್ಲಿ ಯಜ್ಞ ಮಾಡಿದರೆ ತುಂಬಾ ಒಳ್ಳೆಯದು, ಆದರೆ ಎಲ್ಲರಿಗೂ ಯಜ್ಞ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಕೆಲವೊಂದು ಕಾರ್ಯಗಳನ್ನು ಎಲ್ಲರೂ ಮಾಡಬಹುದಾಗಿದ್ದು ನಿಮಗೆ ಭಗವಂತನ ಕೃಪೆ ದೊರೆಯಲು ಹಾಗೂ ಅದೃಷ್ಟ ಲಕ್ಷ್ಮಿ ಒಲಿಯಲು ಏನು ಮಾಡಬೇಕೆಂದು ಇಲ್ಲಿ ಹೇಳಲಾಗಿದೆ ನೋಡಿ:

ವಿಷ್ಣುವಿನ ಪೂಜೆ ಮಾಡುವುದು

ವಿಷ್ಣುವಿನ ಪೂಜೆ ಮಾಡುವುದು

ವಿಷ್ಣುವಿನ ಪ್ರತಿದಿನ ಪೂಜೆ ಮಾಡಿ, ವಿಷ್ಣುವಿಗೆ ತುಳಸಿ ಎಂದರೆ ತುಂಬಾ ಇಷ್ಡ, ಆದ್ದರಿಂದ ಪೂಜೆಗೆ ತುಳಸಿಯನ್ನು ಅರ್ಪಿಸಿ, ಹಳದಿ ಬಣ್ಣದ ಹೂಗಳನ್ನು ಪೂಜೆಗೆ ಅರ್ಪಿಸಿ, ಪಾಯಸವನ್ನು ನೈವೇದ್ಯವಾಗಿ ಇಡಿ.

ಹಳದಿ ವಸ್ತುಗಳನ್ನು ದಾನ ಮಾಡಿ

ಹಳದಿ ವಸ್ತುಗಳನ್ನು ದಾನ ಮಾಡಿ

ಅಧಿಕ ಮಾಸದಲ್ಲಿ ಹಳದಿ ಬಣ್ಣದ ವಸ್ತ್ರ, ಹಳದಿ ಬಣ್ಣದ ಬೇಳೆ ಕಾಳುಗಳು, ಹಳದಿ ಬಣ್ಣದ ಹಣ್ಣುಗಳನ್ನು ವಿಷ್ಣುವಿಗೆ ಪೂಜೆಯಲ್ಲಿ ಬಳಸಿ ನಂತರ ಆ ವಸ್ತುಗಳನ್ನು ಬಡವರಿಗೆ ದಾನ ಮಾಡಿ.

 ಬ್ರಾಹ್ಮಿ ಮುಹೂರ್ತದಲ್ಲಿ ಹೀಗೆ ಮಾಡಿ

ಬ್ರಾಹ್ಮಿ ಮುಹೂರ್ತದಲ್ಲಿ ಹೀಗೆ ಮಾಡಿ

ನೀವು ಪ್ರತಿದಿನ ಸೂರ್ಯೋದಕ್ಕೆ 48 ನಿಮಿಷಗಳಿಗೆ ಮುನ್ನ ಹಾಗೂ ಸೂರ್ಯಾಸ್ತದ 48 ನಿಮಿಷಗಳ ನಂತರ ಕೇಸರಿ ಹಾಕಿದ ಹಾಲಿನಿಂದ ವಿಷ್ಣುವಿಗೆ ಅಭಿಷೇಕ ಮಾಡಿ.

ವಿಷ್ಣುವಿಗೆ ಪೂಜೆ ಮಾಡುವಾಗ ಓಂ ನಮೋ ಭಗವತೇ ವಾಸುದೇವಾಯ ನಮಃ ಎಂಬ ಮಂತ್ರ ಪಠಿಸುವುದು ಒಳ್ಳೆಯದು.

 ತುಳಸಿ ಕಟ್ಟೆಗೆ ಪೂಜೆ ಮಾಡಿ

ತುಳಸಿ ಕಟ್ಟೆಗೆ ಪೂಜೆ ಮಾಡಿ

ಸಾಮಾನ್ಯವಾಗಿ ಮನೆ ಮುಂದೆ ತುಳಸಿ ಕಟ್ಟೆಗೆ ಪೂಜೆ ಸಲ್ಲಿಸುತ್ತೇವೆ, ಈ ಅಧಿಕ ಮಾಸದಲ್ಲಿ ವಿಷ್ಣುವಿನ ಮಂತ್ರ ಹೇಳುತ್ತಾ ತುಳಸಿಯ ಸುತ್ತ 11 ಬಾರಿ ಪ್ರದಕ್ಷಣೆ ಬನ್ನಿ. ಹೀಗೆ ಮಾಡಿದರೆ ಮನೆಗೆ ಒಳ್ಳೆಯದು ಉಂಟಾಗುವುದು.

ಮನದ ಆಸೆ ಈಡೇರಿಸಲು ಅಶ್ವತ್ಥ ಮರಕ್ಕೆ ಪೂಜೆ ಮಾಡಿ

ಮನದ ಆಸೆ ಈಡೇರಿಸಲು ಅಶ್ವತ್ಥ ಮರಕ್ಕೆ ಪೂಜೆ ಮಾಡಿ

ಅಧಿಕ ಮಾಸದಲ್ಲಿ ಅಶ್ವತ್ಥ ಮರದ ಬಳಿ ಹೋಗಿ ತುಪ್ಪದ ದೀಪ ಪ್ರದರ್ಶಣೆ ಹಾಕಿದರೆ ಮನಸ್ಸಿನಲ್ಲಿ ನೆನೆಸಿದ್ದು ನೆರವೇರುತ್ತದೆ ಎಂದು ಹೇಳಲಾಗುತ್ತದೆ. ಅಶ್ವತ್ಥ ಮರದಲ್ಲಿ ವಿಷ್ಣುವು ನೆಲೆಸಿರುತ್ತಾನೆ ಎಂಬ ನಂಬಿಕೆ ಇದೆ.

 ಸೂರ್ಯನಿಗೆ ನೀರು ಅರ್ಪಿಸಿ

ಸೂರ್ಯನಿಗೆ ನೀರು ಅರ್ಪಿಸಿ

ಪ್ರತಿದಿನ ಸೂರ್ಯನಿಗೆ ಅರ್ಘ್ಯ ಅರ್ಪಿಸಬೇಕು, ಇದರಿಂದ ಇಷ್ಟಾರ್ಥ ಬೇಗನೆ ನೆರವೇರುವುದು ಎನ್ನಲಾಗುತ್ತದೆ. ಹೀಗೆ ಮಾಡುವುದರಿಂದ ವ್ಯಾಪಾರ, ವ್ಯವಹಾರಗಳಲ್ಲಿ ಏಳಿಗೆಯನ್ನು ಕಾಣುವಿರಿ ಎಂದು ಹೇಳಲಾಗುತ್ತದೆ.

English summary

Things You Can do on Adhika Masa to get Good Luck

Adhika Masa is best to perform yajna and pooja, Here are things you can do on Adhika Masa to get good luck, read on....
X