For Quick Alerts
ALLOW NOTIFICATIONS  
For Daily Alerts

ಡಿ. 21ಕ್ಕೆ ಗುರು-ಶನಿ ಸಂಗಮ: ಯಾವ ರಾಶಿಗಳಿಗೆ ಒಳ್ಳೆಯದು?

|

ಡಿಸೆಂಬರ್‌ 21ರಂದು ಮಕರ ರಾಶಿಯಲ್ಲಿ ಗುರು ಮತ್ತು ಶನಿ ಗ್ರಹಗಳ ಸಂಗಮವಾಗುತ್ತಿದೆ. 794 ವರ್ಷಗಳ ಬಳಿಕ ಖಗೋಮಂಡಲ ಇಂಥದ್ದೊಂದು ವಿಶ್ಮಯಕ್ಕೆ ಸಾಕ್ಷಿಯಾಗಲಿದೆ. ಈ ರೀತಿ ಗ್ರಹಗಳು ಮುಖಾಮುಖಿಯಾಗುವುದರಿಂದ ಈ ವಿಸ್ಮಯದ ಪ್ರಭಾವ ನೇರವಾಗಿ 12 ರಾಶಿಗಳ ಮೇಲೆ ಇರಲಿದೆ ಎಂದು ಜ್ಯೋತಿಷ್ಯವು ಹೇಳುತ್ತದೆ.

The Great Conjunction of Jupiter and Saturn on Dec 21, 2020 Effects on All Zodiac Signs in Kannada

ಎರಡು ಗ್ರಹಗಳು ಹೀಗೆ ಮುಖಾಮುಖಿ ಬಂದರೆ ಅದನ್ನು ಗ್ರಹಗಳ ಯುದ್ಧ ಎಂದು ಜ್ಯೋತಿಷ್ಯದಲ್ಲಿ ಪರಿಗಣಿಸಲಾಗಿದೆ. ಈ ರೀತಿ ಗುರು ಮತ್ತು ಶನಿ ಜೊತೆಗೆ ಕಾಣಿಸಿದರೆ ಜನರಲ್ಲಿ ಕೋಪ-ದ್ವೇಷ ಹೆಚ್ಚಾಗುವುದು, ಜನರು ಸರಕಾರದ ವಿರುದ್ಧ ದಂಗೆ ಏಳುವ ಸಾಧ್ಯತೆ ಇದೆ, ಇನ್ನು ಆಸ್ತಿ ವ್ಯವಹಾರ, ಚಿನ್ನದ ಬೆಲೆ ಇವುಗಳಲ್ಲಿ ವ್ಯತ್ಯಾಸ ಉಂಟಾಗುವುದು. ಅಲ್ಲದೆ ಆಕಾಶದಲ್ಲಿನ ಗ್ರಹಗಳ ಈ ಸಂಗಮ ಭೂಮಿಯಲ್ಲಿನ ಜನರ ಮೇಲೆ ಅವರ ರಾಶಿಗೆ ಅನುಸಾರ ಭಿನ್ನ ಪ್ರಭಾವ ಬೀರಲಿದೆ. ನಿಮ್ಮ ರಾಶಿಯ ಮೇಲೆ

ಈ ಗುರು-ಶನಿ ಸಂಗಮದ ಪ್ರಭಾವವೇನು ಎಂದು ನೋಡೋಣ:

 ಮೇಷ ರಾಶಿಯವರಲ್ಲಿ 10ನೇ ಮನೆಯಲ್ಲಿ ಗುರು-ಶನಿ ಸಂಗಮ

ಮೇಷ ರಾಶಿಯವರಲ್ಲಿ 10ನೇ ಮನೆಯಲ್ಲಿ ಗುರು-ಶನಿ ಸಂಗಮ

ಮೇಷ ರಾಶಿಯವರಲ್ಲಿ 10ನೇ ಮನೆಯಲ್ಲಿ ಗುರು-ಶನಿ ಸಂಗಮವಾಗಿರುವುದರಿಂದ ಇದು ಅನುಕೂಲಕರವಾಗಿದೆ. ಅಲ್ಲದೆ ನಿಮ್ಮ ವೃತ್ತಿಯಲ್ಲಿ ಮತ್ತಷ್ಟು ಪ್ರಗತಿ ಹೊಂದಲು ಸಹೋದ್ಯೋಗಿಯೊಬ್ಬರ ನೆರವು ಕೂಡ ಸಿಗುವುದು. ವೈವಾಹಿಕ ಜೀವನದಲ್ಲಿ ಅಷ್ಟು ಸರಿಯಿರಲ್ಲ. ಮನೆಯಲ್ಲಿ ಹಿರಿಯರಿದ್ದರೆ ಅವರ ಆರೋಗ್ಯದ ಕಡೆ ಹೆಚ್ಚು ಗಮನ ನೀಡಿ. ಮೇಷ ರಾಶಿಯವರಲ್ಲಿ ಕೆಲವರಿಗೆ ಹಿರಿಯರ ಆಸ್ತಿಯಿಂದ ಪ್ರಯೋಜನ ಸಿಗುವುದು.

ವೃಷಭ ರಾಶಿಯವರಲ್ಲಿ ರಾಶಿಯವರಲ್ಲಿ 9ನೇ ಮನೆಯಲ್ಲಿ ಗುರು-ಶನಿ ಸಂಗಮ

ವೃಷಭ ರಾಶಿಯವರಲ್ಲಿ ರಾಶಿಯವರಲ್ಲಿ 9ನೇ ಮನೆಯಲ್ಲಿ ಗುರು-ಶನಿ ಸಂಗಮ

ವೃಷಭ ರಾಶಿಯವರಲ್ಲಿ ಗುರು-ಶನಿ ಸಂಗಮ 9ನೇ ಮನೆಯಲ್ಲಿ ಆಗುವುದರಿಂದ ನೀವು ಆಧ್ಯಾತ್ಮದ ಕಡೆ, ದೇವಾಲಯಗಳಿಗೆ ಭೇಟಿ ನೀಡುವುದರ ಕುರಿತು ಹೆಚ್ಚಿನ ಆಸಕ್ತಿ ತೋರಿಸುತ್ತೀರಿ. ಸಾಮಾಜಿಕವಾಗಿಯೂ ಬೆಳೆಯುವಿರಿ. ನಿಮಗೆ ಉದ್ಯೋಗ ಬದಲಾವಣೆ ಅಥವಾ ವರ್ಗಾವಣೆ ಆಗಬಹುದು.

ಮಿಥುನ ರಾಶಿಯವರಲ್ಲಿ 8ನೇ ಮನೆಯಲ್ಲಿ ಗುರು-ಶನಿ ಸಂಗಮ

ಮಿಥುನ ರಾಶಿಯವರಲ್ಲಿ 8ನೇ ಮನೆಯಲ್ಲಿ ಗುರು-ಶನಿ ಸಂಗಮ

ಮಿಥುನ ರಾಶಿಯವರಲ್ಲಿ 8ನೇ ಮನೆಯಲ್ಲಿ ಗುರು-ಶನಿ ಸಂಗಮವಾಗಿರುವುದರಿಂದ ನಿಮ್ಮನ್ನು ಧಾರ್ಮಿಕ ಕಾರ್ಯಗಳತ್ತ ಸೆಳೆಯುತ್ತದೆ. ಅಲ್ಲದೆ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಆದರೆ ಮನೆಯಲ್ಲಿ ಆದಾಯ ಹಾಗೂ ಆರ್ಥಿಕ ಸ್ಥಿತಿ ಚೆನ್ನಾಗಿಯೇ ಇರುವುದರಿಂದ ತೊಂದರೆಯಿಲ್ಲ. ನೀವು ಆರೋಗ್ಯದ ಕಡೆಗೆ ಗಮನ ನೀಡಿ, ಅದರಲ್ಲೂ ಕಣ್ಣು ಮತ್ತು ಮೂಳೆಯ ಆರೋಗ್ಯದ ಕಡೆ ಹೆಚ್ಚು ಗಮನ ನೀಡಿ.

ಕರ್ಕ ರಾಶಿಯವರಲ್ಲಿ 7ನೇ ಮನೆಯಲ್ಲಿ ಗುರು-ಶನಿ ಸಂಗಮ

ಕರ್ಕ ರಾಶಿಯವರಲ್ಲಿ 7ನೇ ಮನೆಯಲ್ಲಿ ಗುರು-ಶನಿ ಸಂಗಮ

ಕರ್ಕ ರಾಶಿಯವರಲ್ಲಿ 7ನೇ ಮನೆಯಲ್ಲಿ ಗುರು-ಶನಿ ಸಂಗಮವಾಗಿರುವುದರಿಂದ ಐಶ್ವರ್ಯ ಪ್ರಾಪ್ತಿ. ವ್ಯವಹಾರ ಮತ್ತಷ್ಟು ಅಭಿವೃದ್ಧಿಯಾಗುವುದು. ವೈವಾಹಿಕ ಜೀವನದಲ್ಲಿ ಸ್ವಲ್ಪ ಏರಳಿತ ಉಂಟಾಗಬಹುದು. ಉದ್ಯೋಗಸ್ಥರು ಕೆಲಸದ ಜಾಗದಲ್ಲಿ ಕೋಪವನ್ನು ನಿಯಂತ್ರಿಸಲು ಸೂಚಿಸಲಾಗಿದೆ.

ಸಿಂಹ ರಾಶಿಯವರಲ್ಲಿ 6ನೇ ಮನೆಯಲ್ಲಿ ಗುರು-ಶನಿ ಸಂಗಮ

ಸಿಂಹ ರಾಶಿಯವರಲ್ಲಿ 6ನೇ ಮನೆಯಲ್ಲಿ ಗುರು-ಶನಿ ಸಂಗಮ

ಸಿಂಹ ರಾಶಿಯವರಲ್ಲಿ 6ನೇ ಮನೆಯಲ್ಲಿ ಗುರು-ಶನಿ ಸಂಗಮವಾಗಿರುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಬಹುದು. ಅಜೀರ್ಣ, ಗ್ಯಾಸ್‌ ಸಮಸ್ಯೆ, ಅಸಿಡಿಟಿ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಣಿಸಬಹುದು. ಅಲ್ಲದೆ ಕೋರ್ಟ್ ವಿವಾದದಲ್ಲಿ ಸಿಲುಕಬೇಡಿ, ಒಂದು ವೇಳೆ ಕೋರ್ಟ್‌ನಲ್ಲಿ ನಿಮ್ಮ ಕೇಸ್‌ ಈಗಾಗಲೇ ಇದ್ದರೆ ಜಯ ನಿಮ್ಮ ಪರವಾಗಿರುತ್ತದೆ. ಮನೆಯ ಸದಸ್ಯರ ಆರೋಗ್ಯ ಸಮಸ್ಯೆ ನಿಮ್ಮನ್ನು ಚಿಂತೆಗೀಡು ಮಾಡುವುದು. ವೃತ್ತಿ ಜೀವನದಲ್ಲಿ ಪ್ರಗತಿ ಕಾಣುವಿರಿ.

ಕನ್ಯಾ ರಾಶಿಯವರಲ್ಲಿ 5ನೇ ಮನೆಯಲ್ಲಿ ಗುರು-ಶನಿ ಸಂಗಮ

ಕನ್ಯಾ ರಾಶಿಯವರಲ್ಲಿ 5ನೇ ಮನೆಯಲ್ಲಿ ಗುರು-ಶನಿ ಸಂಗಮ

ಕನ್ಯಾ ರಾಶಿಯವರಲ್ಲಿ 5ನೇ ಮನೆಯಲ್ಲಿ ಗುರು-ಶನಿ ಸಂಗಮವಾಗಿರುವುದರಿಂದ ಪ್ರೇಮಿಗಳು ಸ್ವಲ್ಪ ಸವಾಲು ಎದುರಿಸಬೇಕಾಗುವುದು, ನೀವಿಬ್ಬರು ಒಬ್ಬರನ್ನು ಅರ್ಥ ಮಾಡಿಕೊಳ್ಳದೇ ಇರುವುದೇ ಸಮಸ್ಯೆಗೆ ಕಾರಣ. ಆದರೆ ನಿಮ್ಮಿಬ್ಬರ ನಡುವೆ ಇರುವ ಅಗಾಧ ಪ್ರೀತಿಯಿಂದಾಗಿ ಸಂಬಂಧ ಮತ್ತಷ್ಟು ಗಟ್ಟಿಯಾಗುವುದು. ಕನ್ಯಾ ರಾಶಿಯ ಅವಾಹಿತರಿಗೆ ಕಂಕಣ ಬಲ ಕೂಡಿ ಬರುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಉತ್ತಮ ಸಮಯ. ಓದು ಮುಗಿದವರಿಗೆ ಉತ್ತಮ ಕೆಲಸ ಸಿಗುವ ಸಾಧ್ಯತೆಯೂ ಇದೆ.

ತುಲಾ ರಾಶಿಯವರಲ್ಲಿ 4ನೇ ಮನೆಯಲ್ಲಿ ಗುರು-ಶನಿ ಸಂಗಮ

ತುಲಾ ರಾಶಿಯವರಲ್ಲಿ 4ನೇ ಮನೆಯಲ್ಲಿ ಗುರು-ಶನಿ ಸಂಗಮ

ತುಲಾ ರಾಶಿಯವರಲ್ಲಿ 4ನೇ ಮನೆಯಲ್ಲಿ ಗುರು-ಶನಿ ಸಂಗಮವಾಗಿರುವುದರಿಂದ ಕುಟುಂಬದಲ್ಲಿ ಕೆಲವು ಸಮಸ್ಯೆ ಎದುರಿಸಬಹುದು. ಅಲ್ಲದೆ ಈ ಸಮಯದಲ್ಲಿ ಮನೆ ದುರಸ್ಥಿ ಅಥವಾ ಹೊಸ ಮನೆಕೊಳ್ಳುವ ಸಾಧ್ಯತೆ ಇದೆ, ಈ ಸಮಯ ಉದ್ಯೋಗಿಗಳು ಹಾಗೂ ವ್ಯವಹಾರಸ್ಥರಿಗೆ ಫಲಪ್ರದವಾಗಿದೆ.

ವೃಶ್ಚಿಕ ರಾಶಿಯವರಲ್ಲಿ 3ನೇ ಮನೆಯಲ್ಲಿ ಗುರು-ಶನಿ ಸಂಗಮ

ವೃಶ್ಚಿಕ ರಾಶಿಯವರಲ್ಲಿ 3ನೇ ಮನೆಯಲ್ಲಿ ಗುರು-ಶನಿ ಸಂಗಮ

ವೃಶ್ಚಿಕ ರಾಶಿಯವರಲ್ಲಿ 3ನೇ ಮನೆಯಲ್ಲಿ ಗುರು-ಶನಿ ಸಂಗಮವಾಗುವುದರಿಂದ ಸಮಾಜದಲ್ಲಿ ಗೌರವ ಹೆಚ್ಚಾಗುವುದು, ಪ್ರಸಿದ್ಧಿ ಗಳಿಸುವಿರಿ. ಅಲ್ಲದೆ ಆರ್ಥಿಕ ಸ್ಥಿತಿ ಕೂಡ ಉತ್ತಮವಾಗಿರುತ್ತದೆ, ಸೋಮಾರಿತನದಿಂದ ಉತ್ತಮ ಅವಕಾಶ ಕೈ ತಪ್ಪದಂತೆ ನೋಡಿಕೊಳ್ಳಿ.

ಧನು ರಾಶಿಯವರಲ್ಲಿ 2ನೇ ಮನೆಯಲ್ಲಿ ಗುರು-ಶನಿ ಸಂಗಮ

ಧನು ರಾಶಿಯವರಲ್ಲಿ 2ನೇ ಮನೆಯಲ್ಲಿ ಗುರು-ಶನಿ ಸಂಗಮ

ಧನು ರಾಶಿಯವರಲ್ಲಿ 2ನೇ ಮನೆಯಲ್ಲಿ ಗುರು-ಶನಿ ಸಂಗಮವಾಗಿರುವುದರಿಂದ ಮನೆಯ ಸದಸ್ಯರ ಜೊತೆ ಆಸ್ತಿಗೆ ಸಂಬಂಧಿಸಿ ಸಮಸ್ಯೆ ಕಾಣಿಸಬಹುದು. ಆರೋಗ್ಯದ ಕಡೆ ಗಮನ ನೀಡಿ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

 ಮಕರ ರಾಶಿಯಲ್ಲಿ ಗುರು-ಶನಿ ಸಂಗಮ

ಮಕರ ರಾಶಿಯಲ್ಲಿ ಗುರು-ಶನಿ ಸಂಗಮ

ಮಕರ ರಾಶಿಯವರೇ ನಿಮ್ಮ ಬದುಕಿನಲ್ಲಿ ಪ್ರಗತಿ ಉಂಟಾಗಲಿದೆ. ನಿಮ್ಮ ವೈವಾಹಿಕ ಜೀವನ ಚೆನ್ನಾಗಿರುತ್ತದೆ, ಉದ್ಯೋಗದಲ್ಲಿ ಪ್ರಗತಿ, ಪ್ರಸಿದ್ಧಿ ಪಡೆಯುವಿರಿ. ಉದ್ಯೋಗಸ್ಥರು ಕೆಲಸದಲ್ಲಿ ಬಡ್ತಿ ಪಡೆಯುವಿರಿ.

ಕುಂಭ ರಾಶಿಯವರಲ್ಲಿ 12ನೇ ಮನೆಯಲ್ಲಿ ಗುರು-ಶನಿ ಸಂಗಮ

ಕುಂಭ ರಾಶಿಯವರಲ್ಲಿ 12ನೇ ಮನೆಯಲ್ಲಿ ಗುರು-ಶನಿ ಸಂಗಮ

ಕುಂಭ ರಾಶಿಯವರಲ್ಲಿ 12ನೇ ಮನೆಯಲ್ಲಿ ಗುರು-ಶನಿ ಸಂಗಮವಾಗಿರುವುದರಿಂದ ನಿಮ್ಮ ಸ್ಪರ್ಧಿಗಳ ಬಗ್ಗೆ ಎಚ್ಚರಿಕೆ. ಇಲ್ಲದಿದ್ದರೆ ನೀವು ಕೋರ್ಟ್ ಕೇಸ್‌ಗಳಿಗೆ ಹಣ ಖರ್ಚು ಮಾಡುವ ಸಾಧ್ಯತೆ ಇದೆ, ಅಲ್ಲದೆ ನಿಮ್ಮಿಂದ ಸಹಾಯ ಪಡೆದವರೇ ಮೋಸ ಮಾಡಬಹುದು, ನಿಮ್ಮ ಖರ್ಚು ಅಧಿಕವಾಗುವುದರಿಂದ ಮಾನಸಿಕ ಒತ್ತಡ ಹೆಚ್ಚುವುದು.

ಮೀನ ರಾಶಿಯವರಲ್ಲಿ 11ನೇ ಮನೆಯಲ್ಲಿ ಗುರು-ಶನಿ ಸಂಗಮ

ಮೀನ ರಾಶಿಯವರಲ್ಲಿ 11ನೇ ಮನೆಯಲ್ಲಿ ಗುರು-ಶನಿ ಸಂಗಮ

ಮೀನ ರಾಶಿಯವರಲ್ಲಿ 11ನೇ ಮನೆಯಲ್ಲಿ ಗುರು-ಶನಿ ಸಂಗಮವಾಗಿರುವುದರಿಂದ ಉದ್ಯೋಗ ಸ್ಥಳದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ಕೆಲಸದಲ್ಲಿ ಪ್ರಗತಿ ಕಾಣುವಿರಿ. ನಿಮ್ಮ ಪ್ರೀತಿ ಜೀವನದಲ್ಲಿ ಕೆಲವೊಂದು ಅಡೆತಡೆ ಎದುರಾಗುವುದು. ವಿದ್ಯಾರ್ಥಿಗಳಿಗೆ ಪರಿಸ್ಥಿತಿ ಅನುಕೂಲಕರ, ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು.

English summary

The Great Conjunction of Jupiter and Saturn on Dec 21, 2020 Effects on All Zodiac Signs in Kannada

The Great Conjunction of Jupiter and Saturn on Dec 21, 2020 Effects on All Zodiac Signs, read on.
Story first published: Monday, December 21, 2020, 17:30 [IST]
X
Desktop Bottom Promotion