For Quick Alerts
ALLOW NOTIFICATIONS  
For Daily Alerts

ಯಾವ ರಾಶಿಚಕ್ರದವರನ್ನು ಹೇಗೆ ಹೊಗಳಿದರೆ ಮೆಚ್ಚಿಸಬಹುದು ಗೊತ್ತೆ?

|

ನಮಗೆ ಹೊಗಳಿಕೆ ಎಂಬುದು ಜೀವನದಲ್ಲಿ ಮತ್ತಷ್ಟು ಸಾಧನೆ ಮಾಡಲು ಪ್ರೇರಣೆ ನೀಡುತ್ತದೆ ಎಂದರೆ ತಪ್ಪಾಗಲಾರದು. ನಾವು ಎಷ್ಟೇ ಸಂಯೋಜಿತ ಮನಸ್ಸುಳ್ಳವರಾದರೂ, ಸಾಧಕರಾದರೂ ಇನ್ನಷ್ಟು ಮೇಲೇರಲು ಇತರರ ಹೊಗಳಿಕೆ, ಅಭಿನಂದನೆಯ ಮಾತುಗಳು ನಮಲ್ಲಿ ಉತ್ಸಾಹ, ಆತ್ಮವಿಶ್ವಾಸವನ್ನು ತುಂಬುತ್ತದೆ.

ಆದರೆ ನಿಮಗೆ ಗೊತ್ತೆ, ಪ್ರತಿಯೊಂದು ರಾಶಿಚಕ್ರಗಳಲ್ಲೂ ತನ್ನದೇ ಆದ ಸದ್ಗುಣಗಳಿರುತ್ತದೆ, ಅವರಿಗೆ ತಮ್ಮ ಸುಗುಣಗಳ ಬಗ್ಗೆ ಅಭಿನಂದಿಸಿದರೆ ಸಾಕಷ್ಟು ಹಿಗ್ಗುತ್ತಾರೆ, ಸಂತಸಪಡುತ್ತಾರಂತೆ. ಹಾಗಾದರೆ, ಯಾವೆಲ್ಲಾ ರಾಶಿಗಳಿಗೆ ಹೇಗೆಲ್ಲಾ ಹೊಗಳಿಕೆ ಇಷ್ಟಪಡುತ್ತಾರೆ, ಈ ರಾಶಿಗಳ ಒಳ್ಳೆಯ ಗುಣಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ:

ಕುಂಭ ರಾಶಿ

ಕುಂಭ ರಾಶಿ

ಕುಂಭ ರಾಶಿಯವರು ಸ್ವತಂತ್ರರು ಹಾಗೂ ತಾವು ತಾವಾಗಿಯೇ ಇರುವಂಥವರು. ಈ ರಾಶಿಯವರಿಗೆ "ನೀವು ನಾಯಕರು,ಇತರರನ್ನು ಹಿಂಬಾಲಿಸುವ ಹಿಂಬಾಲಕರಲ್ಲ'' ಎಂದು ಅಭಿನಂದಿಸಿದರೆ ಇವರು ಬಹಳ ಇಷ್ಟಪಡುತ್ತಾರೆ ಹಾಗೂ ಇವರಲ್ಲಿರುವ ಸ್ವಭಾವವನ್ನು ಅರಿತುಕೊಂಡಿದ್ದಾರೆ ಎಂದು ನಿಮ್ಮ ಬಗ್ಗೆಗೂ ಅವರಲ್ಲಿ ಗೌರವ ಹೆಚ್ಚುತ್ತದೆ.

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರು ಎಂದಿಗೂ ಸುಮ್ಮನೆ ಕುಳಿತುಕೊಳ್ಳುವವರಲ್ಲ, ಅವರು ಯಾವಾಗಲೂ ಏನನ್ನಾದರೂ ಮಾಡುತ್ತಲೇ ಇರುತ್ತಾರೆ, ಅಲ್ಲದೇ ಈ ಕೆಲಸಗಳು ಸಾಧನೆಯ ಮೆಟ್ಟಿಲುಗಳಾಗಿರುತ್ತದೆ. ಹೀಗಾಗಿ, ಅವರನ್ನು ಈ ವಿಷಯದಲ್ಲಿ ಯಾರಾದರೂ ಹೊಗಳಿದರೆ, ನೀವು ಈ ಸಾಧನೆ ಮಾಡಬೇಕು ಎಂದು ಪ್ರೇರೇಪಿಸಿದರೆ ಇವರು ತಮ್ಮ ಸಾಧನೆಯ ಹಾದಿಯಲ್ಲಿ ಎದುರಾಗುವ ಎಲ್ಲಾ ಅಪಾಯಗಳನ್ನೂ ದಾಟಿ ಸಾಧಿಸಿಯೇ ತೀರುತ್ತಾರೆ.

ಕರ್ಕ ರಾಶಿ

ಕರ್ಕ ರಾಶಿ

ಕರ್ಕ ರಾಶಿಯವರು ತಮ್ಮ ಪ್ರೀತಿಪಾತ್ರರನ್ನು ಸಾಕಷ್ಟು ಪ್ರೇಮದಿಂದ ಮತ್ತು ಸುರಕ್ಷಿತವಾಗಿದ್ದೇವೆ ಎಂದು ಭಾವಿಸುವಂತೆ ಮಾಡುತ್ತಾರೆ. ಈ ವಿಚಾರವಾಗಿ ಇವರನ್ನು ಇತರರು ಪ್ರಶಂಸಿಸಿದರೆ ಅವರು ತಾವು ಕಾಳಜಿವಹಿಸುವವರನ್ನು ಇನ್ನಷ್ಟು ಪ್ರೀತಿಯಿಂದ ಸಂರಕ್ಷಿಸುತ್ತಾರೆ.

ಮಕರ ರಾಶಿ

ಮಕರ ರಾಶಿ

ಮಕರ ರಾಶಿಯವರು ಬಹಳ ಮಹತ್ವಾಕಾಂಕ್ಷಿಗಳು ಹಾಗೂ ದೃಢಸಂಕಲ್ಪ ಉಳ್ಳವರು. ಈ ರಾಶಿಯವರು ತಮ್ಮಲ್ಲಿ ಸಾಧ್ಯವಾದಷ್ಟು ಶ್ರಮಿಸಲು, ಕಷ್ಟಪಡಲು ಪ್ರಯತ್ನಿಸುತ್ತಾರೆ. ಮಕರ ರಾಶಿಯವರಿಗೆ ತಮ್ಮ ವೃತ್ತಿಯನ್ನೇ ವೈಯಕ್ತಿಕ ಜೀವನ ಎಂದೇ ಪರಿಗಣಿಸುತ್ತಾರೆ. ಇವರಿಗೆ ಬೇಕಾಗಿರುವುದು ಬೆನ್ನುತಟ್ಟುವ ಮಾತುಗಳು, ಪ್ರೋತ್ಸಾಹ ಮಾತ್ರ.

ಮಿಥುನ ರಾಶಿ

ಮಿಥುನ ರಾಶಿ

ಮಿಥುನ ರಾಶಿಯವರು ಎಲ್ಲರಿಗೂ ಸ್ನೇಹಿತರಾಗಿ ಇರುತ್ತಾರೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಇತರರೊಂದಿಗೆ ಅವರ ಸ್ನೇಹ-ಸಂಬಂಧವನ್ನು ಬಹಳವಾಗಿ ಗೌರವಿಸುತ್ತಾರೆ. ಆದ್ದರಿಂದ, ಪ್ರತಿಯೊಬ್ಬರ ಇವರು ಮಾಡುವ ಕಾಳಜಿ ಹಾಗೂ ಸ್ನೇಹಪರತೆಯ ಸ್ವಭಾವವನ್ನು ಹೊಗಳಿ ಗುರುತಿಸಿದರೆ ಅದನ್ನು ಮೆಚ್ಚುತ್ತಾರೆ.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರು ಎಲ್ಲರ ಗಮನ ಸೆಳೆಯುವುದು, ತಾನು ಯಾವಾಗಲೂ ಮುಂದಾಳತ್ವ ವಹಿಸಬೇಕು, ಲೈಮ್‌ಲೈಟ್‌ನಲ್ಲಿ ಇರಬೇಕು ಎಂದು ಹಂಬಲಿಸುತ್ತಾರೆ. ಅಲ್ಲದೇ, ಜನರನ್ನು ಸಂತೋಷಪಡಿಸುವ ಮೂಲಕ ಮತ್ತು ಹೀಗೆ ಇರಬೇಕು ಎಂದು ಮಾದರಿಯಾಗುವ ವ್ಯಕ್ತಿತ್ವ. ಆದ್ದರಿಂದ, ಸಿಂಹ ರಾಶಿಯವರು ನಮ್ಮನ್ನು ಇನ್ನಷ್ಟು ಉತ್ತಮವಾಗಿಸಿದ್ದಾರೆ ಎಂಬ ಮಾತಿಗಿಂತ ಇವರಿಗೆ ಮತ್ತೇನೂ ಸಂತೋಷವೆನಿಸದು.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯವರು ಸಂಘರ್ಷ, ಜಗಳದ ವಿಚಾರದಲ್ಲಿ ಅಷ್ಟೇನೂ ಉತ್ತಮವಲ್ಲದಿದ್ದರೂ, ಇಬ್ಬರ ಜಗಳದ ಮಧ್ಯೆ ಹೋಗಿ ಕಲಹವನ್ನು ಸಮಾಧಾನಗೊಳಿಸಿ ಎಲ್ಲರನ್ನು ಸಂತೊಷವಾಗಿಡಲು ಪ್ರಯತ್ನಿಸುತ್ತಾರೆ. ಇವರು ಮಾಡುತ್ತಿರುವ ಈ ಕೆಲಸದಿಂದ ಎಲ್ಲರೂ ಸಂತೋಷವಾಗಿದ್ದಾರೆ ಹಾಗೂ ನೀವು ಸರಿಯಾದ ಕೆಲಸವನ್ನೇ ಮಾಡುತ್ತಿದ್ದೀಯ ಎಂದು ಹೇಳುವ ಮೂಲಕ ಇವರಲ್ಲಿ ಇನ್ನಷ್ಟು ಆತ್ಮವಿಶ್ವಾಸವನ್ನು ತುಂಬಬಹುದು.

ಮೀನ ರಾಶಿ

ಮೀನ ರಾಶಿ

ಮೀನ ರಾಶಿಯವರು ಸಹಾನುಭೂತಿ ಉಳ್ಳವರು, ಸೃಜನಶೀಲರು ಮತ್ತು ಅರ್ಥಗರ್ಭಿತವಾಗಿರುವವರು. ಇವರು ನಿಮಗೆ ತಿಳಿದಿರುವಂತೆ ಅತ್ಯುತ್ತಮ ಕೇಳುಗರು ಸಹ. ಅವರು ಸ್ವಭಾವತಃ ಭಾವನಾತ್ಮಕವಾಗಿದ್ದಾರೆ, ಆದರೆ ಕರುಣಾಳು ಹೃದಯವು ನಮ್ಮನ್ನು ಹೆಚ್ಚು ಆಕರ್ಷಿಸಿದೆ ಎಂದು ತಿಳಿಯಲು ಅವರು ಇನ್ನೂ ಇಷ್ಟಪಡುತ್ತಾರೆ.

ಧನು ರಾಶಿ

ಧನು ರಾಶಿ

ಧನು ರಾಶಿ ಆಶಾವಾದಿಗಳು ಮತ್ತು ಅವರು ತಮ್ಮ ಮನಸ್ಸಿನಿಂದ ಮಾತನಾಡಲು ಹೆದರುವುದಿಲ್ಲ. ಇವರ ಈ ಸ್ವಭಾವವನ್ನು ಇತರರು ಹೊಗಳಿದರೆ ಅದನ್ನು ಮೆಚ್ಚುತ್ತಾರೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರ ಬಗ್ಗೆ ಕೆಲವು ನಿಗೂಢವಾದ ವಿಷಯಗಳಿವೆ, ಇದು ಇವರೊಂದಿಗೆ ಹೆಚ್ಚು ಸಂವಹನ ಮಾಡುವಂತೆ ಮಾಡುತ್ತದೆ. ಜನರನ್ನು ಸೆಳೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂಬುದನ್ನು ಈ ಮೂಲಕ ನೀವು ತಿಳಿದುಕೊಳ್ಳಬಹುದು, ಇದನ್ನು ಅವರಿಗೆ ತಿಳಿಸುವ ಮೂಲಕ ಅವರಿಗೆ ಸಂತೋಷಪಡಿಸಬಹುದು.

ವೃಷಭ ರಾಶಿ

ವೃಷಭ ರಾಶಿ

ವೃಷಭ ರಾಶಿಯವರು ಪ್ರಾಮಾಣಿಕ ಮತ್ತು ನಂಬಲರ್ಹರು. ಅದಕ್ಕಾಗಿಯೇ ನೀವು ಅವರ ಸ್ವಭಾವವನ್ನು ನಿಜವಾಗಿಯೂ ಅಭಿನಂದಿಸಲು ಬಯಸಿದರೆ, ನೀವು ಅವರನ್ನು ಎಷ್ಟು ನಂಬುತ್ತೀರಿ ಎಂಬುದನ್ನು ಅವರಿಗೆ ತಿಳಿಸಿ.

ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯವರು ಹಲವು ವಿಚಾರಗಳಲ್ಲಿ ನುರಿತವರಾಗಿರಬಹುದು, ಅದಕ್ಕೆ ಕಾರಣ ಅವರು ಎಲ್ಲೇ ಇದ್ದರೂ ಅವರ ಅವಲೋಕನ ಮತ್ತು ವಿಶ್ಲೇಷಣೆಯ ತೀವ್ರ ಪ್ರಜ್ಞೆಯೇ ಕಾರಣ. ಆದ್ದರಿಂದ, ನೀವು ಜನರನ್ನು ಅರ್ಥೈಸಿಕೊಳ್ಳುವುದರಲ್ಲಿ ಪ್ರವೀಣರು ಎಂಬ ಹೊಗಳಿಕೆಯನ್ನು ಇವರು ಮೆಚ್ಚತ್ತಾರೆ.

English summary

The best compliments each zodiac sign enjoys the most

Here we are discussing about Here is a look at the compliments each zodiac sign enjoys the most. No matter how composed and oblivious we are, compliments and praises do make us feel good and elated. Whether they come from our partners, friends or colleagues, compliments do make us swell with confidence a bit. Read more.
Story first published: Wednesday, May 12, 2021, 19:00 [IST]
X