For Quick Alerts
ALLOW NOTIFICATIONS  
For Daily Alerts

ಶನಿ ಜಯಂತಿಯಂದು ಸೂರ್ಯಗ್ರಹಣ: ಈ ದಿನ ಏನು ಮಾಡಬಾರದು, ಏನು ಮಾಡಬೇಕು?

|

2021ರ ಜೂನ್‌ 10 ಹಲವಾರು ಕಾರಣಗಳಿಂದ ಬಹು ವಿಶೇಷವಾದ ದಿನವಾಗಿದೆ. ಈ ದಿನ ಎರಡು ಪ್ರಮುಖ ಆಚರಣೆಗಳಿವೆ ಹಾಗೂ ಒಂದು ಪ್ರಮುಖ ಘಟನೆ ಸಂಭವಿಸಲಿದೆ. ಜೂನ್‌ 10ರಂದು ವಟ ಸಾವತ್ರಿ ವ್ರತ, ಶನಿ ಜಯಂತಿ ಆಚರಿಸಲಾಗುವುದು, ಇದರ ಜೊತೆಗೆ ಈ ದಿನ ವಾರ್ಷಿಕ ಸೂರ್ಯಗ್ರಹಣ ಸಂಭವಿಸಲಿದೆ.

Solar eclipse on shani jayanti

ಶನಿ ಜಯಂತಿ ಹಾಗೂ ಸೂರ್ಯಗ್ರಹಣ ಜೊತೆಗೆ ಬಂದಿರುವುದು ವೈದಿಕ ದೃಷ್ಟಿಯಿಂದ ಬಹು ವಿಶೇಷವಾದ ದಿನವಾಗಿದೆ. ಶನಿ ಜಯಂತಿಯನ್ನು ವೈಶಾಖ ಮಾಸದ ಜ್ಯೇಷ್ಠ ಅಮವಾಸ್ಯೆಯಂದು ಆಚರಿಸಲಾಗುವುದು, ಸೂರ್ಯಗ್ರಹಣವು ಅಮವಾಸ್ಯೆಯೆಂದೇ ಘಟಿಸುವುದು, ಈ ಬಾರಿ ಅದು ಶನಿ ಜಯಂತಿ ಇದ್ದ ದಿನವೇ ಬಂದಿದೆ.

ಶನಿಯನ್ನು ನ್ಯಾಯದ ದೇವರೆಂದು ಪರಿಗಣಿಸಲಾಗಿದೆ. ಶನಿಯು ಸೂರ್ಯನ ಪುತ್ರ. ಆದ್ದರಿಂದ ಸೂರ್ಯಗ್ರಹಣದ ಪ್ರಭಾವ ಹೆಚ್ಚೇನು ಶನಿ ಜಯಂತಿ ಮೇಲೆ ಬೀರಲ್ಲ.

ಶನಿ ಜಯಂತಿಯ ಮುಹೂರ್ತ ಹಾಗೂ ಸೂರ್ಯಗ್ರಹಣ ಸೂತಕ ಸಮಯ

ಶನಿ ಜಯಂತಿಯ ಮುಹೂರ್ತ ಹಾಗೂ ಸೂರ್ಯಗ್ರಹಣ ಸೂತಕ ಸಮಯ

ಶನಿ ಜಯಂತಿಯ ಮುಹೂರ್ತ

ಜೂನ್‌ 9 ರಾತ್ರಿ 2:25ರಿಂದ ಜೂನ್ 10 4:24ರವರೆಗೆ

ಸೂರ್ಯಗ್ರಹಣ ಸೂತಕ ಸಮಯ

ಮಧ್ಯಾಹ್ನ 1.42 ರಿಂದ ಸಂಜೆ 6.41 ರವರೆಗೆ

ಶನಿ ಜಯಂತಿ ಆಚರಣೆ

ಶನಿ ಜಯಂತಿ ಆಚರಣೆ

ಶನಿ ಜಯಂತಿಯಂದು ಮಾಡುವ ದಾನಕ್ಕೆ ತುಂಬಾನೇ ಪ್ರಾಶಸ್ತ್ಯ ಇದೆ. ಈ ದಿನ ಅಗ್ಯತವಿರುವ ಬಡವರಿಗೆ ಅಗ್ಯತ ವಸ್ತುಗಳನ್ನು ದಾನ ಮಡಿ. ಈ ದಿನ ಶನಿ ದೇವನ ಜಿತೆಗೆ , ಶ್ರೀ ಹನುಮಾನ್‌ ಚಾಲಿಸಾ ಪಠಿಸಿ ಅಲ್ಲದೆ ಸೂರ್ಯನನ್ನು ಕೂಡ ಆರಾಧಿಸಬೇಕು.

ಶನಿ ಜಯಂತಿಯಂದು ಏನು ಮಾಡಬಾರದು?

ಶನಿ ಜಯಂತಿಯಂದು ಏನು ಮಾಡಬಾರದು?

* ಈ ದಿನ ಸುಳ್ಳು ಹೇಳಬಾರದು, ಮೋಸ ಮಾಡಬಾರದು

* ಯಾರಿಗೂ ನೋವುಂಟು ಮಾಡಬಾರದು

* ಮದ್ಯಪಾನ, ಜೂಜು ಇವುಗಳನ್ನು ಮಾಡಬರದು

* ಸುಳ್ಳು ಸಾಕ್ಷ್ಯ ನೀಡಬಾರದು

* ಬಡ್ಡಿ ಹಣ ಪಡೆಯಬಾರದು

* ಹಿರಿಯರಿಗೆ ಅಗೌರವ ತೋರಬಾಋದು

* ಮಹಿಳೆಯರಿಗೆ ಅವಮಾನ ಮಾಡಬಾರದು

ಶನಿ ದೇವ ಜಯಂತಿಯಂದು ಹೀಗೆ ಮಾಡಿ

ಶನಿ ದೇವ ಜಯಂತಿಯಂದು ಹೀಗೆ ಮಾಡಿ

ಭೈರವನಿಗೆ ಕಚ್ಚಾ ಹಾಲನ್ನು ಅರ್ಪಿಸಿ

ಕಾಗೆಗೆ ಆಹಾರ ಅರ್ಪಿಸಿ

ಬಡವರಿಗೆ ದಾನ ಮಾಡಿ

ಶ್ರೀ ಹನುಮಾನ್ ಚಾಲಿಸಾ ಓದಿ

ಕಬ್ಬಿಣ, ಎಣ್ಣೆ, ಕಪ್ಪು ಬಟ್ಟೆ, ಕಪ್ಪು ಹಸು ಮತ್ತು ಬೂಟುಗಳನ್ನು ದಾನ ಮಾಡಿ

English summary

Solar Eclipse On Shani Jayanti What to Do And What Not To Do In Kannada

Solar eclipse on shani jayanti what to do and what not to do in kannada, read on...
X
Desktop Bottom Promotion