For Quick Alerts
ALLOW NOTIFICATIONS  
For Daily Alerts

Surya Grahan 2022: ದೀಪಾವಳಿ ಸಮಯದಲ್ಲಿಯೇ ಸೂರ್ಯಗ್ರಹಣ: ದೀಪಾವಳಿ ಪೂಜೆಯ ಮೇಲೆ ಪರಿಣಾಮ ಬೀರುವುದೇ?

|

ಹಿಂದೂ ಸನಾತನ ಧರ್ಮದಲ್ಲಿ ದೀಪಾವಳಿ ಹಾಗೂ ಗೋವರ್ಧನ ಪೂಜೆಯನ್ನು ತುಂಬಾನೇ ಸಡಗರ-ಸಂಭ್ರಮದಿಂದ ಆಚರಿಸಲಾಗುವುದು. ಈ ವರ್ಷ ದೀಪಾವಳಿ ಮತ್ತು ಗೋವರ್ಧನ ಪೂಜೆಯ ನಡುವೆ ಸೂರ್ಯಗ್ರಹಣ ಸಂಭವಿಸಲಿದೆ. ಬೆಳಕಿನ ಹಬ್ಬವಾದ ಮರು ದಿನವೇ ಸೂರ್ಯನಿಗೆ ಕತ್ತಲು ಆವರಿಸಲಿದೆ.

Solar Eclipse

ಇಡೀ ಜಗತ್ತಿಗೆ ಬೆಳಕನ್ನು ನೀಡುತ್ತಿರುವ ಸೂರ್ಯನಿಗೆ ಗ್ರಹಣ ಹಿಡಿಯಲಿದೆ, ಇದರಿಂದ ಜನರಲ್ಲಿ ನಾನಾ ಪ್ರಶ್ನೆಗಳು ಮೂಡಿವೆ, ಹಬ್ಬದ ಸಮಯದಲ್ಲಿ ಗ್ರಹಣ ಬಂದಿರುವುದರಿಂದ ಇದು ಬೀರುವ ಪ್ರಭಾವವೇನು?

ಸೂತಕ ಕಾಲ ಯಾವಾಗ, ಈ ದಿನ ಪಾಲಿಸಬೇಕಾದ ನಿಯಮಗಳೇನು ಎಂದು ನೋಡೋಣ ಬನ್ನಿ:

ಸೂರ್ಯಗ್ರಹಣ ಯಾವಾಗ? ಎಷ್ಟು ಸಮಯವಿರುತ್ತದೆ?

ಸೂರ್ಯಗ್ರಹಣ ಯಾವಾಗ? ಎಷ್ಟು ಸಮಯವಿರುತ್ತದೆ?

ದೀಪಾವಳಿಯ ಎರಡನೇ ದಿನದಂದು ಗೋವರ್ಧನ ಪೂಜೆಯನ್ನು ಮಾಡಲಾಗುತ್ತದೆ ಆದರೆ ಈ ಬಾರಿ ಸೂರ್ಯಗ್ರಹಣವೂ ಸಂಭವಿಸಲಿದೆ. ಅಕ್ಟೋಬರ್ 25 ರ ಸಂಜೆ 4:22 ಕ್ಕೆ ಸೂರ್ಯಗ್ರಹಣ ಪ್ರಾರಂಭವಾಗಲಿದ್ದು, ಸಂಜೆ 6.25 ಕ್ಕೆ ಕೊನೆಗೊಳ್ಳುತ್ತದೆ. ಎರಡು ಗಂಟೆ ಮೂರು ನಿಮಿಷಗಳ ಕಾಲ ಗ್ರಹಣವಿರುತ್ತದೆ.

 ದೀಪಾವಳಿಯಂದೇ ಗ್ರಹಣದ ಸೂತಕವಿರುತ್ತದೆಯೇ?

ದೀಪಾವಳಿಯಂದೇ ಗ್ರಹಣದ ಸೂತಕವಿರುತ್ತದೆಯೇ?

ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಗ್ರಹಣ ಸಂಭವಿಸುವ 12 ಗಂಟೆ ಮೊದಲು ಸೂತಕ ಅವಧಿಪ್ರಾರಂಭವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಬಾರಿ ದೀಪಾವಳಿ ಮತ್ತು ಗೋವರ್ಧನ ಪೂಜೆಯ ನಡುವಿನ ಸೂರ್ಯಗ್ರಹಣದ ಸೂತಕ ಅವಧಿಯು ಅಕ್ಟೋಬರ್ 25 ರ ಬೆಳಗ್ಗೆ 4:22 ರಿಂದ ಪ್ರಾರಂಭವಾಗಲಿದೆ.

ಸೂರ್ಯಗ್ರಹಣದ ಸಮಯದಲ್ಲಿ ಪೂಜೆ ಮಾಡಬಾರದು

ಸೂರ್ಯಗ್ರಹಣದ ಸಮಯದಲ್ಲಿ ಪೂಜೆ ಮಾಡಬಾರದು

ಸೂತಕ ಕಾಲ ಆರಂಭವಾದಂದಿನಿಂದ ಪೂಜೆಗೆ ಸಂಬಂಧಿಸಿದ ಕೆಲಸಗಳು ನಡೆಯುವುದಿಲ್ಲ. ಆದರೆ, ಗ್ರಹಣದ ಸಮಯದಲ್ಲಿ ಮಂತ್ರಗಳ ಪಠಣ (ಧ್ವನಿ ಮಾಡದೆ) ಮತ್ತು ಕೀರ್ತನೆ ಮತ್ತು ದೇವರ ಸ್ಮರಣೆಯನ್ನು ಮಾಡಿದರೆ ಒಳ್ಳೆಯದು. ಗ್ರಹಣ ಕಾಲದಲ್ಲಿ ದೇವಸ್ಥಾನದ ಬಾಗಿಲು ಮುಚ್ಚಲಾಗುವುದು. ಗ್ರಹಣದ ಸಮಯದಲ್ಲಿ, ಈ ಸಮಯದಲ್ಲಿ ತಿನ್ನುವುದು, ಕುಡಿಯುವುದು ಮತ್ತು ಮಲಗುವುದನ್ನು ನಿಷೇಧಿಸಲಾಗಿದೆ. ನಿಮ್ಮ ಮನೆಯಲ್ಲಿ ಆಹಾರವನ್ನು ತಯಾರಿಸುತ್ತಿದ್ದರೆ, ಸೂತಕದ ಮೊದಲು ತುಳಸಿ ಎಲೆಗಳನ್ನು ಹಾಕಬೇಕು.

ಗರ್ಭಿಣಿಯರಿಗೆ ಯಾವ ಮುನ್ನೆಚ್ಚರಿಕೆ ಅಗತ್ಯ?

ಗರ್ಭಿಣಿಯರಿಗೆ ಯಾವ ಮುನ್ನೆಚ್ಚರಿಕೆ ಅಗತ್ಯ?

ಗ್ರಹಣ ಕಾಲದಲ್ಲಿ ಗರ್ಭಿಣಿಯರು ವಿಶೇಷ ಕಾಳಜಿ ವಹಿಸಬೇಕು. ಗರ್ಭಿಣಿಯರು ಗ್ರಹಣದ ಸಮಯದಲ್ಲಿ ಹೊರಗೆ ಹೋಗಬಾರದು ಅಥವಾ ಮಲಗಬಾರದು. ಈ ಸಮಯದಲ್ಲಿ ಯಾವುದೇ ಕತ್ತರಿ,ಸೂಜಿಗಳು, ಇತರ ಚೂಪಾದ ವಸ್ತುಗಳನ್ನು ಬಳಸಬೇಡಿ.

ಸೂರ್ಯಗ್ರಹಣ ಮುಗಿದ ನಂತರ ಏನು ಮಾಡಬೇಕು?

ಸೂರ್ಯಗ್ರಹಣ ಮುಗಿದ ನಂತರ ಏನು ಮಾಡಬೇಕು?

ಧಾರ್ಮಿಕ ನಂಬಿಕೆಗಳ ಪ್ರಕಾರ ಗ್ರಹಣದ ನಂತರ ಶುದ್ಧೀಕರಣವನ್ನು ಮಾಡುವುದು ಬಹಳ ಮುಖ್ಯ ಎಂದು ಹೇಳುತ್ತದೆ. ಆದ್ದರಿಂದ, ಸೂರ್ಯಗ್ರಹಣ ಮುಗಿದ ನಂತರ, ಇಡೀ ಮನೆಯನ್ನು ಸ್ವಚ್ಛಗೊಳಿಸುವ ಜೊತೆಗೆ, ನಿಮ್ಮ ದೇವರ ಕೋಣೆಯನ್ನು ಸ್ವಚ್ಛಗೊಳಿಸಿ, ಮನೆಯ ಮೂಲೆ ಮೂಲೆಗಳಲ್ಲಿ ಗಂಗಾಜಲವನ್ನು ಸಿಂಪಡಿಸಿ. ಗ್ರಹಣದ ನಂತರ ನದಿಯಲ್ಲಿ ಸ್ನಾನ ಮಾಡುವುದು ಮತ್ತು ದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

 ದೀಪಾವಳಿಯಂದು ಪೂಜೆ ಮಾಡಬಹುದೇ?

ದೀಪಾವಳಿಯಂದು ಪೂಜೆ ಮಾಡಬಹುದೇ?

ಹಿಂದೂ ಕ್ಯಾಲೆಂಡರ್ ಪ್ರಕಾರ, ದೀಪಾವಳಿಯನ್ನು 24 ಅಕ್ಟೋಬರ್ 2022 ರಂದು ಆಚರಿಸಲಾಗುತ್ತದೆ, ಆದರೆ ಮರುದಿನ ಸೂರ್ಯಗ್ರಹಣ ಸಂಭವಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ದೀಪಾವಳಿ ಪೂಜೆಯ ಮೇಲೆ ಸೂರ್ಯಗ್ರಹಣದ ಪರಿಣಾಮ ಇರುವುದಿಲ್ಲ.

English summary

Solar Eclipse October 2022 on Diwali, Know Sutal Kaal and Other Details in Kannada

Solar Eclipse October 2022: Solar Eclipse Between Diwali and govardhan puje Know Sutal Kaal and Other Details,
X
Desktop Bottom Promotion