Just In
Don't Miss
- Movies
'ವಿಕ್ರಂ' ರವಿಚಂದ್ರನ್ ಮೊದಲ ಹೆಜ್ಜೆಯಲ್ಲೇ ಸೋಲು: ಮುಂದಿನ ನಡೆ ಏನು?
- Automobiles
25 ಸಾವಿರ ಎಸ್1 ಪ್ರೊ ಗ್ರಾಹಕರಿಗೆ ಮೂವ್ಒಎಸ್ 2.0 ನವೀಕರಣ ಒದಗಿಸಿದ ಓಲಾ ಎಲೆಕ್ಟ್ರಿಕ್
- Finance
ಸಾಲ ಬೇಕಾಗಿದೆಯೇ? ಮೊದಲು ಸಿಬಿಲ್ ಸ್ಕೋರ್ ಹೀಗೆ ಪರಿಶೀಲಿಸಿ
- News
ಮನೆಮುಂದೆ ಬಂದು ಕಿಟಕಿ ಗಾಜು ಒಡೆದುಹಾಕಿದ ಆನೆ: ಗ್ರಾಮಸ್ಥರು ಹೈರಾಣ
- Education
KIMS Kodagu Recruitment 2022 : 35 ನರ್ಸಿಂಗ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ನಿವೃತ್ತಿಯ ಚಿಂತನೆಯಲ್ಲಿ ಇಂಗ್ಲೆಂಡ್ ಕಂಡ ಶ್ರೇಷ್ಠ ನಾಯಕ!: ವಾರದೊಳಗೆ ನಿವೃತ್ತಿ ಘೋಷಿಸಲಿರುವ ಕ್ರಿಕೆಟಿಗ ಯಾರು?
- Technology
ಡೇಟಾ ಲಿಮಿಟ್ ಬಯಸದ ಗ್ರಾಹಕರಿಗೆ ಬಿಎಸ್ಎನ್ಎಲ್ನ ಈ ಪ್ಲಾನ್ ಬೆಸ್ಟ್!
- Travel
ಕರ್ನಾಟಕದಲ್ಲಿರುವ ಈ 5 ಹೆಸರಾಂತ ವಿಷ್ಣುದೇವರ ದೇವಾಲಯಗಳಿಗೆ ಭೇಟಿ ಕೊಟ್ಟು ಧನ್ಯರಾಗಿ!
ವೃಶ್ಚಿಕ, ಮಕರ, ಕುಂಭ, ಮೀನ ರಾಶಿಯವರಿಗೆ ಶನಿ ಸಾಡೇಸಾತಿ: ಶನಿಯ ಕೆಟ್ಟ ಪ್ರಭಾವ ತಗ್ಗಿಸಲು ಈ ಪರಿಹಾರ ಮಾಡಿ
ವ್ಯಕ್ತಿಯ ಜೀವನದಲ್ಲಿ ಒಂದೆಲ್ಲಾ ಒಂದು ಸಮಯದಲ್ಲಿ ಶನಿ ಸಾಡೇ ಸಾತಿ ಇರುತ್ತದೆ. ಕೆಲವರಿಗೆ ಬಂದು ಹೋಗಿರುತ್ತೆ, ಇನ್ನು ಕೆಲವರಿಗೆ ಬರಬೇಕು, ಕೆಲವರಲ್ಲಿ ನಡೆಯುತ್ತಾ ಇದೆ. ಶನಿ ಸಾಡೇಸಾತಿ ಪ್ರಾರಂಭವಾದರೆ ಶನಿಯ ಕೆಟ್ಟ ಪ್ರಬಾವ ಏಳು ವರ್ಷ ಇರುವುದರಿಂದ ಇದಕ್ಕೆ ಜನ ಹೆದರುತ್ತಾರೆ.
ನಮ್ಮ ರಾಶಿಯಲ್ಲಿ ಶನಿ ಸಾಡೇಸಾತಿ ಪ್ರಾರಂಭವಾದರೆ ಅದು ನೀಡುವ ತೊಂದರೆಗಳು ಹೇಗಿರುತ್ತೆ ಎಂಬುವುದು ಅನುಭವಿಸಿದವರಿಗೆ ಗೊತ್ತಿರುತ್ತೆ. ಆದ್ದರಿಂದಲೇ ಜನರು ಈ ಶನಿ ಸಾಡೇಸಾತಿಗೆ ತುಂಬಾನೇ ಭಯ ಪಡುತ್ತಾರೆ.
ಪ್ರಸ್ತುತ ಶನಿಯು ಮಕರ ರಾಶಿಯಲ್ಲಿ ಕುಳಿತಿದ್ದಾನೆ. 2022ರ ಏಪ್ರಿಲ್ 29ರಂದು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಮಯ ಧನು ರಾಶಿಯವರಿಗೆ ಸಮದಾನವಾಗಲಿದೆ, ಏಕೆಂದರೆ ಧನು ರಾಶಿಯಲ್ಲಿ ಶನಿ ಸಾಡೇಸಾತಿ ಮುಕ್ತಾಯವಾಗಲಿದೆ.
ಅದೇ ಶನಿ ಸಾಡೇ ಸಾತಿ ಮೀನ ರಾಶಿಯಲ್ಲಿ ಪ್ರಾರಂಭವಾಗಲಿದೆ. ಮಕರ, ಕುಂಭ ರಾಶಿಯಲ್ಲಿ ಶನಿ ಸಾಡೇಸಾತಿ ಇದೆ. ಕರ್ಕ ಮತ್ತು ವೃಶ್ಚಿಕ ರಾಶಿಯಲ್ಲಿ ಶನಿ ಧೈಯಾ ಇದೆ.
ಶನಿ ಸಾಡೇಸಾತಿ ನಿಮ್ಮ ಮೇಲೆ ಹೇಗೆಲ್ಲಾ ಪ್ರಭಾವ ಬೀರಿದೆ ಎಂದು ನೋಡುವುದಾದರೆ:

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಏಪ್ರಿಲ್‌ನಿಂದ ಜುಲೈವರೆಗಿನ ಸಮಯವು ಉತ್ತಮವಾಗಿರುತ್ತದೆ.ಜುಲೈ ನಂತರ, ಮತ್ತೊಮ್ಮೆ ಶನಿಯು ಸಾಡೇ ಸತಿಯ ಕೊನೆಯ ಹಂತಕ್ಕೆ ಬರುತ್ತಾನೆ. ಈ ಸಮಯದಲ್ಲಿ ನೀವು ವಿವಾದಗಳಿಂದ ದೂರವಿರಲು ಪ್ರಯತ್ನಿಸಬೇಕು.

ಮಕರ ರಾಶಿ
ಮಕರ ರಾಶಿಯವರ ಮೇಲೆ ಶನಿ ಸಾಡೇಸಾತಿ ಪ್ರಭಾವ ತುಂಬಾನೇ ಇರುತ್ತದೆ. ಇದರ ಪ್ರಭಾವದಿಂದಾಗಿ ಮಾಡಿದ ಕೆಲಸವೂ ಹಾಳಾಗುತ್ತದೆ. ಈ ಸಮಯದಲ್ಲಿ ನೀವು ಹೆಚ್ಚು ಕಠಿಣ ಕೆಲಸ ಮಾಡಬೇಕಾಗುತ್ತದೆ.

ಕುಂಭ ರಾಶಿ
ಈ ವರ್ಷ ಕುಂಭ ರಾಶಿಯವರಿಗೆ ಶನಿಯ ಸಾಡೇಸಾತಿಯಿಂದಾಗಿ ಸ್ವಲ್ಪ ಮಟ್ಟಿಗೆ ತೊಂದರೆಯಾಗಲಿದೆ. ಆದರೆ ಹೆಚ್ಚಿನ ದುಷ್ಪರಿಣಾಮಗಳನ್ನು ಎದುರಿಸಬೇಕಾಗಿಲ್ಲ.

ಮೀನ ರಾಶಿ
ಮೀನ ರಾಶಿಯವರಲ್ಲಿ ಶನಿ ಸಾಡೇಸಾತಿ ಪ್ರಾರಂಭವಾಗಲಿದೆ. ಶನಿಯ ಪ್ರಭಾವದಿಂದ ಮಾನಸಿಕ ಆತಂಕ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೆ ಕೆಲಸದಲ್ಲಿಯೂ ಅಡೆತಡೆಗಳು ಎದುರಾಗುತ್ತವೆ. ಕೆಲಸದಲ್ಲಿ ವೈಫಲ್ಯ, ರೋಗಗಳು ಮತ್ತು ಹಣಕಾಸಿನ ತೊಂದರೆಗಳ ಅವಧಿ ಪ್ರಾರಂಭವಾಗುತ್ತದೆ. ಆದರೆ ಇಚ್ಛಾಶಕ್ತಿಯಿಂದ ಕೆಲಸ ಮಾಡಿದರೆ ಶನಿದೇವನ ಕೃಪೆ ಸಿಗುವುದು.

ಕರ್ಕ ಮತ್ತು ವೃಶ್ಚಿಕ ರಾಶಿಯ ಮೇಲೆ ಶನಿಯ ಧೈಯಾ
ಶನಿಯು ಕುಂಭ ರಾಶಿಯಲ್ಲಿ ಬಂದಾಗ, ನಂತರ ಶನಿಯ ಧೈಯಾವು ಕರ್ಕ ಮತ್ತು ವೃಶ್ಚಿಕ ರಾಶಿಯಲ್ಲಿ ಪ್ರಾರಂಭವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕರ್ಕ ಮತ್ತು ವೃಶ್ಚಿಕ ರಾಶಿಯ ಜನರು ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು.

ಶನಿದೇವನ ಕೆಟ್ಟ ಪ್ರಭಾವ ತಗ್ಗಿಸಲು ಪರಿಹಾರಗಳು
ಶನಿ ಸಾಡೇಸಾತಿ, ಸನಿ ಧೈಯಾ ಇರುವವರು ಕೆಲವೊಂದು ಕಾರ್ಯಗಳನ್ನು ಮಾಡುವುದರಿಂದ ಶನಿ ಕೃಪೆಗೆ ಪಾತ್ರರಾಗಬಹುದು, ಇದರಿಂದಾಗಿ ಶನಿಯ ಕೆಟ್ಟ ಪರಿಣಾಮ ತಗ್ಗುವುದು.
ಜ್ಯೋತಿಷ್ಯ ಪರಿಹಾರ
* ನೀಲಿ ಹರಳಿನ ಉಂಗುರ ಬಳಸುವುದು
* ಕುದುರೆ ಉಗುರಿನ ಉಂಗುರ ಬೆಳೆಸುವುದು
* ಶನಿ ಯಂತ್ರ ಬಳಸುವುದು
* ಶನಿವಾರ ಕಪ್ಪು ಬಟ್ಟೆ ಧರಿಸುವುದು
* ಶನಿ ಮಂತ್ರ ಪಠಿಸುವುದು, ಹನುಮಾನ್ ಚಾಲೀಸ, ಮೃತ್ಯಂಜಯ ಮಂತ್ರ ಹಾಗೂ ನವಗ್ರಹ ಮಂತ್ರ ಪಠಿಸಿ.

ಪೂಜೆ:
* ಶನಿವಾರ ಶನಿಯನ್ನು ಪೂಜಿಸಿ. ಶನಿ ದೇವಾಲಯಕ್ಕೆ ಹೋಗಿ ಸಾಸಿವೆಯೆಣ್ಣೆ , ಎಳ್ಳು ಅರ್ಪಿಸಿ. ಶನಿವಾರ ಹನುಮಂತನ ದೇವಾಲಯಕ್ಕೂ ಹೋಗಿ ಪ್ರಸಾದ ಅರ್ಪಿಸಿ. ಸೋಮವಾರ ಶಿವನ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ.
* ದೈವಿಕ ಕಾರ್ಯಗಳಲ್ಲಿ ಭಾಗಿಯಾಗಿ, ಪುನ್ಯ ಕ್ಷೇತ್ರಗಳಿಗೆ ಬೇಟಿ ನೀಡಿ. ಪೂಜೆ, ಹವನ ಇವುಗಳನ್ನು ಮಾಡಿಸುವುದು ಕೂಡ ಒಳ್ಳೆಯದು.

ದಾನ ಮಾಡಿ:
* ಬಡವರಿಗೆ ಆಹಾರವನ್ನು ದಾನ ಮಾಡಿ.
* ಸಾಸಿವೆಯೆಣ್ಣೆ, ಕಪ್ಪು ಎಳ್ಳು, ಎಳ್ಳೆಣ್ಣೆ, ಕಬ್ಬಿಣದ ವಸ್ತುಗಳು, ಕಪ್ಪು ಬಟ್ಟೆ, ಕಪ್ಪು ಹಸು, ಹಣ ಇವುಗಳನ್ನು ದಾನ ಮಾಡಿ. ಅದರಲ್ಲೂ ಶನಿವಾರ ಹೀಗೆ ಮಾಡುವುದರಿಂದ ಶನಿಯ ಕೆಟ್ಟ ಪ್ರಭಾವ ಕಡಿಮೆ ಮಾಡಬಹುದು.

ಇವುಗಳ ಬಗ್ಗೆ ಎಚ್ಚರವಿರಲಿ
ಶನಿ ಸಾಡೇಸಾತಿ ಇರುವಾಗ ಸಾಹಸ ಕ್ರಿಡೆ, ಪ್ರಯಾಣ, ಗಾಡಿ ಓಡಿಸುವಾಗ ಎಚ್ಚರವಹಿಸಿ. ಅಲ್ಲದೆ ಯಾವುದೇ ವಿವಾದಗಳಿಗೆ ಸಿಲುಕಿಕೊಳ್ಳದಂತೆ ಎಚ್ಚರವಹಿಸಿ. ಮದ್ಯ ವರ್ಜಿಸಿ. ಯಾವುದೇ ಕಾನೂನು ಬಾಹಿರ ಚಟುವಟಿಕೆಯಿಂದ ದೂರವಿರಿ.