For Quick Alerts
ALLOW NOTIFICATIONS  
For Daily Alerts

ಶನಿ ಸಂಚಾರ: ರಾಶಿಗಳ ಮೇಲೆ ಪ್ರಭಾವ ಮತ್ತು ಪರಿಹಾರ

|

ಜನವರಿ 24ರಂದು ಮಧ್ಯಾಹ್ನ 12.05ಕ್ಕೆ ಶನಿಯು ಧನುಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಇದರಿಂದ ಪ್ರತಿಯೊಂದು ರಾಶಿಗಳ ಮೇಲೆ ಹಲವಾರು ಪ್ರಭಾವಗಳು ಉಂಟಾಗಲಿವೆ. ಇದರಿಂದಾಗಿ ಕೆಲವು ರಾಶಿಗಳಿಗೆ ಒಳಿತಾದರೆ, ಇನ್ನು ಕೆಲವು ರಾಶಿಗಳಿಗೆ ತೊಂದರೆಗಳು ಕಾಣಿಸಿಕೊಳ್ಳಲಿದೆ.

saturn transit 2020

ಈ ಹಿಂದೆ 1990ರಲ್ಲಿ ಶನಿಯು ಮಕರ ರಾಶಿ ಪ್ರವೇಶಿಸಿದ್ದನು. ಶನಿಯೂ ನಿಧಾನ ಗತಿಯಲ್ಲಿ ಸಾಗುವುದರಿಂದ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗಲು ಎರಡೂವರೆ ವರ್ಷಗಳ ಅವಧಿ ತೆಗೆದುಕೊಳ್ಳುತ್ತಾನೆ.

ಇಲ್ಲಿ ಮಕರ ರಾಶಿಗೆ ಶನಿಯ ಸಂಚಾರದಿಂದ ಯಾವ ರಾಶಿಯ ಮೇಲೆ ಯಾವ ಪ್ರಭಾವ ಉಂಟಾಗುತ್ತದೆ, ಶನಿದೋಷದಿಂದ ಪಾರಾಗಲು ಮಾಡಬೇಕಾದ ಪರಿಹಾರವೇನು ಎಂದು ಹೇಳಿದ್ದೇವೆ ನೋಡಿ.

ಮೇಷ

ಮೇಷ

ಶನಿಯು ಮಕರ ರಾಶಿಯ ಹತ್ತನೇ ಮನೆಗೆ ಪ್ರವೇಶವಾಗುವುದರಿಂದ ಮೇಷ ರಾಶಿಯವರಿಗೆ ಉತ್ತಮ ಫಲ ಉಂಟಾಗುವುದು. ಈ ರಾಶಿ ಮೇಲೆ ಗುರುಗ್ರಹದ ಫಲವೂ ಇರುವುದರಿಂದ ಸೆಪ್ಟೆಂಬರ್‌, ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳು ಈ ರಾಶಿಯವರಿಗೆ ಉತ್ತಮ ಫಲವನ್ನು ನೀಡುವ ತಿಂಗಳಾಗಿವೆ. ಮೇಷರಾಶಿಯವರ ಧನ ಸಂಪತ್ತು ವೃದ್ಧಿಯಾಗಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಅಭಿವೃದ್ಧಿ ಉಂಟಾಗುವುದು. ಅನಗ್ಯತ ಖರ್ಚುಗಳ ಮೇಲೆ ಹಿಡಿತವಿರಲಿ. ಕೌಟಂಬಿಕ ಸಮಸ್ಯೆ ಬರಬಹುದು, ಸಮಧಾನದಿಂದ ವರ್ತಿಸಿ, ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕಾಣಿಸಬಹುದು, ವಿದ್ಯಾರ್ಥಿಗಳಿಗೆ ಒಳ್ಳೆಯ ಫಲ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶ ಪ್ರಯಾಣದ ಯೋಗವಿದೆ, ಉದ್ಯಮಿಗಳಿಗೂ ಆರ್ಥಿಕ ಲಾಭವಾಗಲಿದೆ.

ಈಶ್ವರ, ಆಂಜನೇಯ ಸ್ವಾಮಿಯ ಪೂಜೆ ಮಾಡುವುದರಿಂದ ಒಳಿತಾಗುತ್ತದೆ.

ವೃಷಭ ರಾಶಿ

ವೃಷಭ ರಾಶಿ

ವೃಷಭ ರಾಶಿಯ ಒಂಭತ್ತನೇ ಮನೆಗೆ ಶನಿಯು ಸಂಚರಿಸುವುದರಿಂದ ಮಿಶ್ರಫಲವನ್ನು ಉಂಟಾಗಲಿದೆ. ಶನಿಯು ಒಂಭತ್ತನೇಯ ಮನೆಗೆ ಪ್ರವೇಶಿಸಿರುವುದರಿಂದ ಸಾಡೇಸಾತಿ ಪ್ರಭಾವಕೊನೆಯಾಗಿ ಕಷ್ಟಗಳು ದೂರವಾಗುವುದು, ಕುಟುಂಬದಲ್ಲಿ ನೆಮ್ಮದಿ ನೆಲೆಸುವುದು. ಇನ್ನು ವ್ಯವಹಾರ ಚೆನ್ನಾಗಿ ಆಗುತ್ತದೆ. ಅವಿವಾಹಿತರಿಗೆ ಮದುವೆಯ ಯೋಗವಿದೆ, ಸಂತಾನ ಭಾಗ್ಯ ದೊರೆಯುವುದು. ಹೊಂದಾಣಿಕೆ ಮಾಡಿಕೊಂಡು ಸಾಗಿದರೆ ಜೀವನ ಚೆನ್ನಾಗಿರುತ್ತದೆ. ಕೆಲವೊಂದು ಆರ್ಥಿಕ ತೊಂದರೆಗಳು ಬರಬಹುದು. ಕುಲದೇವರನ್ನುಆರಾಧನೆ ಮಾಡಿ, ಎಳ್ಳಿನ ದಾನ ಮಾಡಿದರೆ ಒಳಿತಾಗುವುದು.

ಮಿಥುನ ರಾಶಿ

ಮಿಥುನ ರಾಶಿ

ಶನಿಯು ಮಕರ ರಾಶಿಯನ್ನು ಪ್ರವೇಶಿಸುವುದರಿಂದ ಶನಿಯು ಮಕರ ರಾಶಿಯ ಎಂಟನೇ ಮನೆಯಲ್ಲಿ ನೆಲೆಸುತ್ತಾನೆ. ಇದರಿಂದ ಸ್ವಲ್ಪ ತೊಂದರೆಗಳು ಕಾಣಿಸಿಕೊಳ್ಳಬಹುದು. ಕೌಟಂಬಿಕ ಸಮಸ್ಯೆ ಬರಬಹುದು. ಆರೋಗ್ಯದಲ್ಲಿಯೂ ತೊಂದರೆ ಉಂಟಾಗಬಹುದು. ವ್ಯಾಪಾರದಲ್ಲಿ ಸ್ವಲ್ಪ ತೊಂದರೆ ಕಾಣಿಸಿಕೊಳ್ಳಬಹುದು. ಆದಾಯ ಕಡಿಮೆಯಾಗುವುದು ಆದರೆ ಪ್ರಯತ್ನ ಮಾಡಿ ನಿಧಾನಕ್ಕೆ ಫಲ ಸಿಗುವುದು. ಅವಿವಾಹಿತರಿಗೆ ವಿವಾಹ ಯೋಗವಿದೆ, ಸಂತಾನವಿಲ್ಲದವರಿಗೆ ಸಂತಾನ ಭಾಗ್ಯವಿದೆ. ಅನಗ್ಯತ ವಿಷಯಗಳಲ್ಲಿ ತಲೆ ಹಾಕಬೇಡಿ. ದಾಂಪತ್ಯ ಜೀವನದಲ್ಲಿ ಸಣ್ಣ ಪುಟ್ಟ ಸಮಸ್ಯೆ ಎದುರಾದರೂ ನಂತರ ಎಲ್ಲವೂ ಸರಿಯಾಗುವುದು. ಸಮಾಜಮುಖಿ ಕೆಲಸದಿಂದ ನಿಮಗೆ ಗೌರವ ಸಿಗುವುದು.

ಶನಿದೋಷ ಪರಿಹಾರಕ್ಕಾಗಿ ದೇವಿಯನ್ನು ಆರಾಧಿಸಿ ಕುಂಕುಮಾರ್ಚನೆ ಮಾಡಿಸಿ.

ಕರ್ಕ ರಾಶಿ

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಶನಿಯು ಏಳನೇ ಮನೆಪ್ರವೇಶಿಸುತ್ತಾನೆ. ಇದರಿಂದಾಗಿ ವೈಯಕ್ತಿಕ ಹಾಗೂ ಸಾಮಜಿಕ ಜೀವನದಲ್ಲಿ ಕೆಲವೊಂದು ಸಮಸ್ಯೆಗಳು ಸಮಸ್ಯೆಗಳು ಕಂಡು ಬರಬಹುದು. ಉದ್ಯೋಗದಲ್ಲಿ ಅಲ್ಪ ಯಶಸ್ಸು ದೊರೆಯುವುದು, ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕಾಣಿಸಿಕೊಳ್ಳಬಹುದು. ಕಷ್ಟಪಟ್ಟರೂ ಫಲ ಸಿಗಲ್ಲ ಅಂತ ನಿರಾಸೆಯಾಗಬೇಡಿ, ಮೊದಲಿಗೆ ಬಡತನ ಕಾಡಿದರೂ ನಂತರ ಆರ್ಥಿಕ ಸ್ಥಿತಿ ಉತ್ತಮವಾಗುವುದು. ಆದಾಯ ಹೆಚ್ಚಿದರೂ ಖರ್ಚುಗಳನ್ನು ನಿಭಾಯಿಸಲು ಕಷ್ಟವಾಗಬಹುದು. ವಾಹನ ಖರೀದಿಯ ಯೋಗವಿದೆ. ಕೋರ್ಟ್-ಕೇಸ್‌ ವಿವಾದದಲ್ಲಿ ಜಯ ಸಿಗುವುದು, ಮನೋಧೈರ್ಯದಿಂದ ಇರಿ ಒಳಿತಾಗುವುದು.

ಶನಿ ದೋಷದಿಂದ ಪಾರಾಗಲು ದೇವಿ ಕ್ಷೇತ್ರಕ್ಕೆ ಭೇಟಿ ನೀಡಿ ಅರ್ಚನೆ ಮಾಡಿಸಿ.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಶನಿಯು ಆರನೇ ಮನೆ ಪ್ರವೇಶಿಸುತ್ತಾನೆ. ಇದರಿಂದಾಗಿ ಒಳಿತಾಗಲಿದೆ. ಆದಾಯ ದುಪ್ಪಟ್ಟು ಆಗುವುದು, ಆದರೆ ಶನಿಯ ದೋಷದಿಂದ ಕೆಲ ತೊಂದರೆಗಳು ಕಾಣಿಸಿಕೊಳ್ಳಬಹುದು, ಕೆಟ್ಟ ಹೆಸರು ಬರದಂತೆ ಎಚ್ಚರವಹಿಸಿ. ವೈವಾಹಿಕ ಬದುಕಿನಲ್ಲಿ ಸಣ್ಣ ಪುಟ್ಟ ಜಗಳ ಬಂದರೂ ಸಂಗಾತಿಯೊಂದಿಗೆ ಖುಷಿಯಾಗಿಯೇ ಇರುವಿರಿ. ಪ್ರಯಾಣದ ಸಂದರ್ಭದಲ್ಲಿ ಎಚ್ಚರವಿರಲಿ. ಅವಾಹಿತರಿಗೆ ಕಂಕಣ ಭಾಗ್ಯವಿದೆ. ಕೋರ್ಟ್ ಕೇಸ್‌ಗಳಲ್ಲಿ ಜಯ ನಿಮ್ಮದಾಗುವುದು.

ಶನಿ ದೋಷದಿಂದ ಪಾರಾಗಲು ಗಣೇಶನ ಪೂಜೆ ಮಾಡಿ.

ಕನ್ಯಾ ರಾಶಿ

ಕನ್ಯಾ ರಾಶಿ

ಶನಿಯು ಮಕರ ರಾಶಿ ಪ್ರವೇಶಿಸಿರುವುದರಿಂದ ಕನ್ಯಾ ರಾಶಿಯ ಮನೆಯ ಐದನೇ ಸ್ಥಾನದಲ್ಲಿ ಶನಿಯು ಸಂಚರಿಸುತ್ತಾನೆ. ಶನಿಯು ಪಂಚಮ ಸ್ಥಾನದಲ್ಲಿರುವುದರಿಂದ ಸ್ವಲ್ಪ ಕಷ್ಟಗಳು ಎದುರಾಗುವುದು. ಒಡಹುಟ್ಟಿದವರಿಂದಲೇ ತೊಂದರೆ ಉಂಟಾಗಬಹುದು, ಸ್ವಲ್ಪ ಆರ್ಥಿಕ ತೊಂದರೆ ಕಾಣಿಸಿಕೊಳ್ಳುವುದು. ಆದರೆ ನಂತರದ ದಿನಗಳಲ್ಲಿ ಯಶಸ್ಸು ದೊರೆಯುತ್ತದೆ. ಉದ್ಯೋಗದ ಜಾಗದಲ್ಲಿ ಹೆಚ್ಚು ವಾದ ಮಾಡಲು ಹೋಗಬೇಡಿ, ಯಾರೊಂದಿಗೆ ವಿರೋಧ ಕಟ್ಟಿಕೊಳ್ಳಬೇಡಿ. ಒಳ್ಳೆಯ ಕಾರ್ಯ ಮಾಡಿ, ನೀವು ಮಾಡುವ ಪುಣ್ಯ ಕಾರ್ಯಗಳಿಗೆ ತಕ್ಕಂತೆ ಶನಿ ಫಲ ನೀಡುತ್ತಾನೆ.

ಶಿವನ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿದರೆ ಶನಿದೋಷ ಕಡಿಮೆಯಾಗುವುದು.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯ ನಾಲ್ಕನೇ ಮನೆಯನ್ನು ಶನಿಯು ಪ್ರವೇಶಿಸಿರುವುದರಿಂದ ಕೆಲಸ ನಿದಾನ ಗತಿಯಲ್ಲಿ ಸಾಗಿದ್ರೂ ಆರ್ಥಿಕ ಲಾಭ ಗಳಿಸುವಿರಿ. ಬಂಧುಗಳ ಜೊತೆ ವೈಮನಸ್ಸು ಉಂಟಾಗಿ ಮನದ ಶಾಂತಿಗೆ ಭಂಗ ಉಂಟಾಗಬಹುದು. ಸಂತಾನ ಯೋಗವಿದ್ದು, ಕುಟುಂಬದಲ್ಲಿ ಸಂತಸ ನೆಲೆಸಿರುತ್ತದೆ. ಆಲಸ್ಯವಾಗಿ ಸಮಯವನ್ನು ವ್ಯರ್ಥ ಮಾಡಬೇಡ. ಉದ್ಯೋಗ ಬಿಡಲು ಹೋಗಬೇಡಿ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಎದುರಾಗಬಹುದು,

ಶನಿ ದೋಷ ಪರಿಹಾರಕ್ಕಾಗಿ ದೇವಿ ಕ್ಷೇತ್ರಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಮೂರನೇ ಮನೆಗೆ ಶನಿ ಪ್ರವೇಶ ಮಾಡುವುದರಿಂದ ಒಳಿತಾಗಲಿದೆ. ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಉದ್ಯೋಗದಲ್ಲಿ ಬಾಸ್‌ ಜೊತೆ ಮಾತನಾಡುವಾಗ ಎಚ್ಚರವಹಿಸಿ. ಅವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಆರೋಗ್ಯ ಸ್ಥಿತಿಯೂ ಚೆನ್ನಾಗಿರುತ್ತದೆ. ದೂರ ಪ್ರಯಾಣ ಮಾಡುವಾಗ ಎಚ್ಚರ.

ಶನಿದೋಷ ಪರಿಹಾರಕ್ಕೆ ಗುರುವನ್ನು ಆರಾಧಿಸಿ, ವಿಷ್ಣುವಿನ ದೇವಾಲಯಕ್ಕೆ ಹೋಗಿ ಪೂಜೆ ಮಾಡಿ.

ಧನುಸ್ಸು ರಾಶಿ

ಧನುಸ್ಸು ರಾಶಿ

ಧನಸ್ಸು ರಾಶಿಯವರಿಗೆ ಶನಿಯು ಎರಡನೇ ಮನೆಯನ್ನು ಪ್ರವೇಶಿಸುವುದರಿಂದ ಉದ್ಯೋಗದಲ್ಲಿ ಬಡ್ತಿ ಸಿಗುವುದು . ಕೌಟಂಬಿಕ ಜೀವನ ಚೆನ್ನಾಗಿರುತ್ತಿದೆ. ಸಂಗಾತಿ ಬಳಿ ಸುಳ್ಳು ಹೇಳಬೇಡಿ. ಅವಾಹಿತರಿಗೆ ಕಂಕಣ ಭಾಗ್ಯವಿದೆ, ಕೆಲವೊಂದು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಾಡುವುದು, ಆರ್ಥಿಕ ತೊಂದರೆ ಉಂಟಾಗುವುದಿಲ್ಲ

ಶನಿ ದೋಷದಿಂದ ಪಾರಾಗಲು ಕುಲ ದೇವರನ್ನು ಪೂಜಿಸಿ.

ಮಕರ ರಾಶಿ

ಮಕರ ರಾಶಿ

ಮಕರ ರಾಶಿಯ ಅಧಿಪತಿಯಾಗಿರುವ ಶನಿಯು ಜನ್ಮರಾಶಿಯನ್ನು ಪ್ರವೇಶಿಸುವನು. ಇದರಿಂದ ಆಲಸ್ಯ ಉಂಟಾಗುವುದು. ಇದರಿಂದಾಗಿ ಸ್ವಲ್ಪ ಆರ್ಥಿಕ ತೊಂದರೆ ಉಂಟಾಗುವುದು. ಉದ್ಯೋಗದಲ್ಲಿ ತೊಂದರೆ ಉಂಟಾಗಬಹುದು. ದುರ ಪ್ರಯಾಣದ ವೇಳೆ ಎಚ್ಚರವಹಿಸಿ. ಆಲಸ್ಯ ಬಿಟ್ಟು ಕೆಲಸ ಮಾಡದಿದ್ದರೆ ತೊಂದರೆ ಎದುರಾಗಲಿದೆ. ಕಠಿಣ ಶ್ರಮಕ್ಕೆ ಫಲ ಸಿಗುವುದು

ಈಶ್ವರ, ಆಂಜನೇಯ ದೇವಾಯಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿ.

ಕುಂಭ ರಾಶಿ

ಕುಂಭ ರಾಶಿ

ಕುಂಭ ರಾಶಿಯವರಲ್ಲಿ ಶನಿಯು ಹನ್ನೆರಡನೇ ಮನೆಯನ್ನು ಪ್ರವೇಶಿಸಿದ್ದಾನೆ. ಇವರಿಗೆ ಸಾಡೇ ಸಾತಿ ಶನಿ ಫಲ ಆರಂಭವಾಗುವುದರಿಂದ ಕೆಲವು ತೊಂದರೆಗಳು ಕಾಣಿಸಬಹುದು. ಆದರೆ ಹೆದರಬೇಕಾಗಿಲ್ಲ. ಕರ್ಮಫಲದ ಅನುಗುಣವಾಗಿ ಶನಿಯು ಫಲವನ್ನು ನೀಡುತ್ತಾನೆ. ಅನಗ್ಯತ ವಿವಾದಗಳಲ್ಲಿ ತೊಡಗಿಕೊಳ್ಳಬೇಡಿ. ನಿಮ್ಮ ಕೆಲಸದ ಕಡೆ ಹೆಚ್ಚಿನ ಗಮನ ನೀಡಿ. ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಮಾಡಿ, ಇಷ್ಟ ದೇವರನ್ನು ಆರಾಧಿಸಿ. ದಾನ-ಧರ್ಮ ಮಾಡಿದರೆ ಒಳ್ಳೆಯ ಫಲ ಸಿಗುತ್ತದೆ.

ಮೀನ ರಾಶಿ

ಮೀನ ರಾಶಿ

ಮೀನ ರಾಶಿಯ ಹನ್ನೊಂದನೇ ಮನೆಯನ್ನು ಶನಿಯು ಪ್ರವೇಶಿಸುತ್ತಾನೆ. ಇವರಿಗೆ ವಿದೇಶದಲ್ಲಿ ಕೆಲಸ, ವಿಧ್ಯಾಭ್ಯಾಸ ಮಾಡುವ ಯೋಗವಿದೆ. ವ್ಯಾಪಾರದಲ್ಲಿ ಲಾಭ ಉಂಟಾಗುವುದು. ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ಧಿ ಹೊಂದುವುದು. ಈ ರಾಶಿಯವರಿಗೆ ಆಸ್ತಿ ಕೊಳ್ಳುವ ಯೋಗವಿದೆ.

ಶನಿ ದೋಷ ನಿವಾರಣೆಗೆ ಬಡ ಬಗ್ಗರಿಗೆ, ಅನಾಥರಿಗೆ ಕೈಲಾದ ಸಹಾಯ ಮಾಡಿ.

English summary

Saturn Transit 2020 Effects and Remedies for 12 Zodiac Signs

Saturn Transit 2020 effects and remedial measures for each zodiac signs to lessen the influence of saturn's sade sati
X
Desktop Bottom Promotion