For Quick Alerts
ALLOW NOTIFICATIONS  
For Daily Alerts

ಸೆಪ್ಟೆಂಬರ್‌ಕ್ಕೆ 4 ರಾಧಾ ಅಷ್ಟಮಿ: ಕಷ್ಟ ನಿವಾರಣೆಗೆ ಈ ಶುಭ ಮುಹೂರ್ತದಲ್ಲಿ ಪೂಜೆಯನ್ನು ಮಾಡಿ

|

ಶ್ರೀಕೃಷ್ಣನ ಜೊತೆ ರಾಧೆಯನ್ನುಪೂಜಿಸುತ್ತೇವೆ. ಕರಷ್ಣ ಜನ್ಮಾಷ್ಟಮಿ ಆಗಿ 15 ದಿನಗಳಲ್ಲಿ ಅಷ್ಟಮಿಯಂದು ರಾಧಾಷ್ಟಮಿ ಆಚರಿಸಲಾಗುವುದು. ರಾಧಾ ಅಷ್ಟಮಿಯನ್ನು ಭಾದ್ರಪದ ಅಷ್ಟಮಿ ದಿನದಂದು ಆಚರಿಸಲಾಗುತ್ತದೆ. ಈ ವರ್ಷ ರಾಧಾ ಅಷ್ಟಮಿಯನ್ನು ಸೆಪ್ಟೆಂಬರ್ 4, ಭಾನುವಾರದಂದು ಆಚರಿಸಲಾಗುತ್ತದೆ.
ರಾಧೆ ಇಲ್ಲದೆ ಶ್ರೀಕೃಷ್ಣನ ಆರಾಧನೆ ಅಪೂರ್ಣ ಎಂದು ನಂಬಲಾಗಿದೆ. ಅದಕ್ಕಾಗಿಯೇ ರಾಧೆಯ ಹೆಸರನ್ನು ಕೃಷ್ಣನ ಹೆಸರಿನೊಂದಿಗೆ ತೆಗೆದುಕೊಳ್ಳಲಾಗಿದೆ. ಕೃಷ್ಣ ಜನ್ಮಾಷ್ಟಮಿ ಹಬ್ಬದಂತೆಯೇ ರಾಧಾ ಅಷ್ಟಮಿಯನ್ನೂ ವಿಜೃಂಭಣೆಯಿಂದ ಆಚರಿಸಲಾಗುವುದು.

Radha Ashtami

ಈ ವರ್ಷ ರಾಧಾಷ್ಟಮಿಯ ಪೂಜೆಗೆ ಶುಭ ಮುಹೂರ್ತ ಯಾವಾಗ, ಇದರ ಮಹತ್ವವೇನು, ಪೂಜಾ ವಿಧಿಗಳೇನು ಎಂದು ನೋಡೋಣ ಬನ್ನಿ:

ರಾಧಾಷ್ಟಮಿ ಶುಭ ಸಮಯ-

ರಾಧಾಷ್ಟಮಿ ಶುಭ ಸಮಯ-

ಅಷ್ಟಮಿ ತಿಥಿ ಪ್ರಾರಂಭ - ಸೆಪ್ಟೆಂಬರ್ 03, 2022 ಮಧ್ಯಾಹ್ನ 12:28 ಕ್ಕೆ ಪ್ರಾರಂಭ

ಅಷ್ಟಮಿ ತಿಥಿ ಮುಕ್ತಾಯ - ಸೆಪ್ಟೆಂಬರ್ 04, 2022 ಬೆಳಗ್ಗೆ 10:39 ಕ್ಕೆ

ಪೂಜಾ ಮುಹೂರ್ತ

ಸೆಪ್ಟೆಂಬರ್ 04 ರಂದು ರಾಧಾಷ್ಟಮಿ ಪೂಜೆಯ ಶುಭ ಮುಹೂರ್ತವು ಮುಂಜಾನೆ 04:36 ರಿಂದ 05.02 ರವರೆಗೆ ಇರುತ್ತದೆ.

ರಾಧಾಷ್ಟಮಿಯ ಮಹತ್ವ-

ರಾಧಾಷ್ಟಮಿಯ ಮಹತ್ವ-

ಜನ್ಮಾಷ್ಟಮಿಯಂತೆ ರಾಧಾ ಅಷ್ಟಮಿಗೂ ವಿಶೇಷ ಮಹತ್ವವಿದೆ. ರಾಧಾ ಅಷ್ಟಮಿಯಂದು ಉಪವಾಸ ಮಾಡುವುದರಿಂದ ಎಲ್ಲಾ ಪಾಪಗಳು ನಾಶವಾಗುತ್ತವೆ ಎಂಬ ನಂಬಿಕೆ ಇದೆ. ಈ ದಿನದಂದು ವಿವಾಹಿತ ಮಹಿಳೆಯರು ಮಕ್ಕಳ ಸಂತೋಷಕ್ಕಾಗಿ ಮತ್ತು ಅಖಂಡ ಸೌಭಾಗ್ಯ ಪ್ರಾಪ್ತಿಗಾಗಿ ಉಪವಾಸವನ್ನು ಆಚರಿಸುತ್ತಾರೆ.

ಪುರಾಣಗಳ ಪ್ರಕಾರ, ರಾಧೆಯನ್ನು ಮೆಚ್ಚಿಸುವವರಿಂದ ಭಗವಾನ್ ಕೃಷ್ಣನು ಸಂತೋಷಪಡುತ್ತಾನೆ. ವ್ರತವನ್ನು ಆಚರಿಸುವುದರಿಂದ ಲಕ್ಷ್ಮಿ ದೇವಿಯು ಮನೆಗೆ ಬರುತ್ತಾಳೆ ಮತ್ತು ಇಷ್ಟಾರ್ಥಗಳು ಈಡೇರುತ್ತವೆ ಎಂಬ ಧಾರ್ಮಿಕ ನಂಬಿಕೆ ಇದೆ.

ರಾಧಾ ಅಷ್ಟಮಿ ಉಪವಾಸದ ಪೂಜಾ ವಿಧಾನ-

ರಾಧಾ ಅಷ್ಟಮಿ ಉಪವಾಸದ ಪೂಜಾ ವಿಧಾನ-

* ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಬೇಕು.

* ನಂತರ, ಮಂಟಪದ ಅಡಿಯಲ್ಲಿ ವೃತ್ತವನ್ನು ಮಾಡಿ ಮತ್ತು ಅದರ ಕೇಂದ್ರ ಭಾಗದಲ್ಲಿ ಮಣ್ಣಿನ ಅಥವಾ ತಾಮ್ರದ ಕಲಶವನ್ನು ಸ್ಥಾಪಿಸಿ.

ಕಲಶದ ಮೇಲೆ ತಾಮ್ರದ ಪಾತ್ರೆ ಇಡಿ.

ಈಗ ಈ ಮಡಕೆಯ ಮೇಲೆ ಬಟ್ಟೆ ಮತ್ತು ಚಿನ್ನದ ಆಭರಣಗಳಿಂದ ಅಲಂಕರಿಸಲ್ಪಟ್ಟ ರಾಧೆಯ ವಿಗ್ರಹವನ್ನು ಸ್ಥಾಪಿಸಿ.

* ಅದಾದ ನಂತರ ಷೋಡಶೋಪಚಾರದಿಂದ ರಾಧೆಯನ್ನು ಪೂಜಿಸಬೇಕು.

* ಈ ದಿನ ಉಪವಾಸವಿದ್ದು ಪೂಜೆ ಮಾಡಬೇಕು, ಈ ದಿನದಂದು ಒಪ್ಪೊತ್ತಿನ ಆಹಾರ ಮಾತ್ರ ಸೇವಿಸಬೇಕು, ಹಣ್ಣುಗಳನ್ನು ತಿನ್ನಬಹುದು.

* ನಂತರ ಮಾರನೇಯ ದಿನ ಮುತ್ತೈದೆಯರಿಗೆ ತಾಂಬೂಲ ನೀಡಿ ಹಾಗೂ ಬ್ರಾಹ್ಮಣರಿಗೆ ಹಣ್ಣುಗಳು ಹಾಗೂ ದಕ್ಷಿಣೆಯನ್ನು ಬ್ರಾಹ್ಮಣರಿಗೆ ಆಹಾರವನ್ನು ನೀಡಿ ಮತ್ತು ಅವರಿಗೆ ದಕ್ಷಿಣೆಯನ್ನು ನೀಡಿ.

ರಾಧಾಷ್ಟಮಿ ಪ್ರಯೋಜನಗಳು

* ರಾಧಾಷ್ಟಮಿ ವ್ರತ ಮಾಡುವುದರಿಂದ ರಾಧೆ-ಕೃಷ್ಣನ ಅನುಕಂಪಕ್ಕೆ ಪಾತ್ರರಾಗುತ್ತೀರಿ.

* ಕಷ್ಟಗಳು ನಿವಾರಣೆಯಾಗಿ ಆರ್ಥಿಕ ಸ್ಥಿತಿ ಉತ್ತಮವಾಗುವುದು.

English summary

Radha Ashtami 2022: Date, Time, Shubh Muhurat, History, Puja Vidhi and Significance in Kannada

Radha Ashtami 2022: Here is information about subha muhurat for puja, how to do puja, what are signficance
X
Desktop Bottom Promotion