For Quick Alerts
ALLOW NOTIFICATIONS  
For Daily Alerts

ವರಮಹಾಲಕ್ಷ್ಮಿ ಹಬ್ಬಕ್ಕೆ ಇರಬೇಕಾದ ಪೂಜಾ ಸಾಮಗ್ರಿಗಳಿವು

|

ವರಮಹಾಲಕ್ಷ್ಮಿ ಹಬ್ಬಕ್ಕೆ ಇನ್ನು ಕೆಲವು ದಿನಗಳಷ್ಟೇ ಬಾಕಿದೆ. ಜುಲೈ 31ಕ್ಕೆ ವರಮಹಾಲಕ್ಷ್ಮಿ ಹಬ್ಬ ಆಚರಿಸಲಾಗುವುದು. ವರಮಹಾಲಕ್ಷ್ಮಿ ಹಬ್ಬದ ಆಚರಣೆಗೆ ಕೆಲವು ದಿನಗಳ ಮುಂಚೆಯೇ ಹಬ್ಬಕ್ಕೆ ಬೇಕಾದ ವಸ್ತುಗಳ ಜೋಡಣೆ ಮಾಡಿಡುವುದು ಒಳ್ಳೆಯದು. ನಾವು ವರಮಹಾಲಕ್ಷ್ಮಿ ಹಬ್ಬದಂದು ಕುಂದನ್‌ ವಿನ್ಯಾಸ ಬಳಸಿ ಅಲಂಕರಿಸುವುದು ಹೇಗೆ ಎಂದು ಈ ಹಿಂದಿನ ಲೇಖನದಲ್ಲಿ ಹೇಳಿದ್ದೆವು.

ವರಮಹಾಲಕ್ಷ್ಮಿ ಹಬ್ಬಕ್ಕೆ ಇರಬೇಕಾದ ಪೂಜಾ ಸಾಮಗ್ರಿಗಳಿವು | Boldsky Kannada
Pooja Ingredients For Varamahalaxmi Pooja


ಈ ಲೇಖನದಲ್ಲಿ ವರಮಹಾಲಕ್ಷ್ಮಿ ಹಬ್ಬದಲ್ಲಿ ಪೂಜೆಗೆ ಅಗ್ಯತವಾದ ಸಾಮಗ್ರಿಗಳ ಪಟ್ಟಿ ನೀಡಿದ್ದೇವೆ. ಬೆಳಗ್ಗೆ ಎದ್ದು ಮಡಿ ಸ್ನಾನ ಮಾಡಿ ಅಷ್ಟದಳ ಪದ್ಮ'ದ ರಂಗೋಲಿಯನ್ನು ಬರೆದು, ಅದರ ಮೇಲೆ ಕಲಶವನ್ನು ಪ್ರತಿಷ್ಠಾಪಿಸಿ, ಪೂಜೆಯನ್ನು ಮಾಡಿ, ಹದಿನಾರು ಗಂಟುಳ್ಳಂತಹ ದಾರವನ್ನು ಕೈಗೆ ಕಟ್ಟಿಕೊಳ್ಳುವುದು ಈ ಹಬ್ಬದ ಸಂಪ್ರದಾಯ. ಈ ಹಬ್ಬಕ್ಕೆ ನಿಮ್ಮಲ್ಲಿ ಇರಬೇಕಾದ ಪೂಜಾ ಸಾಮಗ್ರಿ:

ಕಲಶ:

ಕಲಶ:

ವರಮಹಾಲಕ್ಷ್ಮಿ ಪೂಜೆಯಲ್ಲಿ ಕಲಶ ಲಕ್ಷ್ಮಿಯ ಕಲಶ ಪ್ರತಿಷ್ಠಾಪನೆ ಮಾಡುವುದೇ ಪ್ರಮುಖವಾಗಿರುತ್ತದೆ. ಕಲಶಕ್ಕೆ ನೀರನ್ನು ತುಂಬಿ, ಅದನ್ನು ವೀಳ್ಯೆದೆಲೆ ಅಥವಾ ಮಾವಿನ ಎಲೆಗಳಿಂದ ಅಲಂಕರಿಸಬೇಕು. ಕಲಶ ಪ್ರತಿಷ್ಠಾಪನೆಗೆ ಕೆಲವರು ಪುಟ್ಟದಾಗ ಬಂದಿಗೆ ಇನ್ನು ಕೆಲವರು ಚಿನ್ನ, ಬೆಳ್ಳಿ ಹಿತ್ತಾಳೆ ಅಥವಾ ಸ್ಟೀಲ್‌ನ ಚೊಂಬು ಬಳಸುತ್ತಾರೆ. ಲಕ್ಷ್ಮೀ ಪೂಜೆಗೆ ಹೆಚ್ಚಿನವರು 'ಅಷ್ಟಲಕ್ಷ್ಮಿ'ಯರ ಚಿತ್ರವಿರುವಂತಹ 'ತಂಬಿಗೆ' ಅಥವಾ 'ಚೊಂಬನ್ನು' ಬಳಸುತ್ತಾರೆ.

ಪಂಚಪಾತ್ರೆ ಹಾಗೂ ಉದ್ಧರಣೆ

ಪಂಚಪಾತ್ರೆ ಹಾಗೂ ಉದ್ಧರಣೆ

ಲಕ್ಷ್ಮೀ ಪೂಜೆ ಮಾಡುವಾಗ 'ಪಂಚಪಾತ್ರೆ'ಗೆ ಹೆಚ್ಚಿನ ಮಹತ್ವವಿದೆ. ಇದನ್ನು ಪೂಜೆ ಕಾರ್ಯ ಮಾಡುವಾಗ ಪಂಚಪಾತ್ರೆಗೆ ಶುದ್ಧವಾದ ನೀರು ತುಂಬಿ, ಅದರಲ್ಲಿ ಹೂ, ಗಂಧ, ಅಕ್ಷತೆ, ಅರಿಶಿಣ, ಕುಂಕುಮ ಹಾಕಿ ಈ ನೀರನ್ನು ಪ್ರೋಕ್ಷಣೆ ಮಾಡಿ ಪೂಜಾ ಸ್ಥಳಗಳನ್ನು ಶುದ್ಧೀಕರಿಸುತ್ತಾರೆ. ಈ ಪಾತ್ರೆಯನ್ನು ಚಿನ್ನ, ಬೆಳ್ಳಿ, ತಾಮ್ರ, ಪಂಚಲೋಃಗಳಲ್ಲೂ ತಯಾರಿಸಲಾಗುವುದು.

ತಟ್ಟೆ ಅಥವಾ ಹರಿವಾಣ:

ತಟ್ಟೆ ಅಥವಾ ಹರಿವಾಣ:

ಇನ್ನು ಹೂ, ಹಣ್ಣುಗಳನ್ನು ಇಡಲು ಹರಿವಾಣ ತಟ್ಟೆಗಳನ್ನು ಬಳಸುತ್ತಾರೆ. ಈ ಹರಿವಾಣ ಸ್ಟೀಲ್‌ನದ್ದು ಆಗಿರಬಹುದು ಅಥವಾ ಇತರ ಲೋಹದ್ದು ಪಾತ್ರೆಗಳಾಗಿರಬಹುದು, ಅರಿಶಿಣ, ಕುಂಕುಮ ಬಟ್ಟಲು ಕೂದ ಇದರಲ್ಲೇ ಇಡಲಾಗುವುದು.

ಪಂಚಾಮೃತ ಬಟ್ಟಲು

ಪಂಚಾಮೃತ ಬಟ್ಟಲು

ಪೂಜೆ ಪ್ರಸಾದದಲ್ಲಿ ಪಂಚಾಮೃತ ಮಾಡಲಾಗುವುದು. ಹಾಲು, ಜೇನು, ತುಪ್ಪ, ಬಾಳೆಹಣ್ಣು, ಸಕ್ಕರೆ ಬಳಸಿ ಪಂಚಾಮೃತ ತಯಾರಿಸಲಾಗುವುದು. ' ಪಂಚಾಮೃತ ಬಟ್ಟಲಿ ಸಿಗುತ್ತದೆ, ಇಲ್ಲದಿದ್ದರೆ ಮನೆಯಲ್ಲಿರುವ ಸ್ವಲ್ಪ ಅಗಲ ಬಾಯಿಯ ಚಿಕ್ಕ ಪಾತ್ರೆಯನ್ನು ಕೂಡ ಪಂಚಾಮೃತ ಬಡಿಸಲು ಇಡಬಹುದು.

ಆರತಿ ತಟ್ಟೆ

ಆರತಿ ತಟ್ಟೆ

ದೇವರ ಪೂಜೆಯಲ್ಲಿ ಆರತಿ ಎತ್ತಲಾಗುವುದು. ಆರತಿ ಎತ್ತಲು ಏಕಾರತಿ, ಪಂಚಾರತಿ, ಷೋಡಷಾರತಿ ಮುಂತಾದುವುಗಳ ಬಳಕೆ ವರಮಹಾಲಕ್ಷ್ಮಿ ಪೂಜೆಯಲ್ಲಿ ಮಹತ್ವವನ್ನು ಹೊಂದುತ್ತದೆ. ಐದು ಸೊಡರುಗಳಿಂದ ಕೂಡಿದಂತಹ ಹಾಗೂ ಹದಿನಾರು ಸೊಡರುಗಳಿಂದ ಕೂಡಿದಂತಹ 'ಆರತಿ'ಯನ್ನು ಮಾರುಕಟ್ಟೆಯಲ್ಲಿನ ಖರೀದಿಸಬಹುದು.

ಗಂಟೆ:

ಗಂಟೆ:

ಇನ್ನು ದೇವರ ಪೂಜೆಯಲ್ಲಿ ಗಂಟೆಯ ನಿನಾದ ಕೇಳುವುದೇ ಕಿವಿಗೆ ಇಂಪು. ಮನೆಯಲ್ಲ ಬಳಕೆಗೆ ಚಿಕ್ಕ ಗಂಟೆ ಬಳಸಬಹುದು. ಇನ್ನು ದೇವರು ಕೋಣೆಯಲ್ಲಿ ದೊಡ್ಡ ಗಣಟೆಯನ್ನೂ ನೇತು ಹಾಕಬಹುದು.

ಅರಿಶಿನ-ಕುಂಕುಮ ಬಟ್ಟಲು:

ಅರಿಶಿನ-ಕುಂಕುಮ ಬಟ್ಟಲು:

ಇನ್ನು ಅರಿಶಿಣ -ಕುಂಕುಮ ಇಡಲು 'ಪಂಚವಾಳ' ಎಂದು ಕರೆಯಲ್ಪಡುವ ವಿವಿಧ ಬಟ್ಟಲುಗಳು ಸಿಗತ್ತವೆ. ಈ ಬಟ್ಟಲುಗಳು ಹಲವಾರು ವಿನ್ಯಾಸದಲ್ಲಿ ದೊರೆಯುತ್ತವೆ. ಮನೆಗೆ ಬಂದ ಅರಿಶಿಣ-ಕುಂಕುಮವನ್ನು ಇದೇ ಅರಿಶಿಣ-ಕುಂಕುಮ ಬಟ್ಟಲಿನಲ್ಲಿ ನೀಡುವುದು ವಾಡಿಕೆ.

 ಸಲಹೆ:

ಸಲಹೆ:

  • ಪೂಜಾ ಪರಿಕರಗಳನ್ನು ಮೊದಲೇ ಜೋಡಿಸಿಡುವುದು ಒಳ್ಳೆಯದು. ಈ ಪರಿಕರಗಳನ್ನು ಎಲ್ಲಾ ಪೂಜೆಯಲ್ಲಿ ಮುಗಿಸಬಹುದು.
  • ಪೂಜಾ ಪರಿಕರಗಳನ್ನು ಖರೀದಿಸುವಾಗ ಅಗತ್ಯಕ್ಕೆ ತಕ್ಕಂತೆ ಗಾತ್ರ, ವಿನ್ಯಾಸಗಳನ್ನು ಗಮನಿಸಿ ಖರೀದಿಸಬೇಕು.
  • ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ, ಬೆಳ್ಳಿ, ತಾಮ್ರದ ಪೂಜಾ ಸಾಮಗ್ರಿ ಬಳಸುತ್ತಾರೆ.
  • ಹಿತ್ತಾಳೆ ಅಥವಾ ತಾಮ್ರದ ಪೂಜಾ ಪಾತ್ರೆ-ಪರಿಕರಗಳನ್ನು ತೊಳೆಯುವಾಗ ಹುಣಸೆಹಣ್ಣಿಗೆ ಸ್ವಲ್ಪ ಉಪ್ಪು ಹಾಕಿ ತಿಕ್ಕಿದರೆ ಫಳ-ಫಳ ಹೊಳೆಯುತ್ತದೆ.
  • ಬೆಳ್ಳಿಯ ಪೂಜಾ ವಸ್ತುಗಳನ್ನು ತೊಳೆಯಲು ಬೇಯಿಸಿದ ಆಲೂಗಡ್ಡೆ ಹಾಗೂ ಅಂಟ್ವಾಳ ಕಾಯಿ ಬಳಸಬಹುದು.
English summary

Pooja Ingredients For Varamahalaxmi Pooja

Here are list of pooja ingredients for varamahalaxmi pooja, Read on,
X
Desktop Bottom Promotion