Just In
- 1 hr ago
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- 4 hrs ago
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- 15 hrs ago
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- 20 hrs ago
February Festivals 2023 : ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
Don't Miss
- News
ಡಿಕೆಶಿ ಪತ್ನಿ ನನಗೆ ಕಾಂಗ್ರೆಸ್ ತೊರೆಯದಂತೆ ಕೋರಿದ್ದರು: ರಮೇಶ್ ಜಾರಕಿಹೊಳಿ
- Technology
MusicLM :ಗೂಗಲ್ನಿಂದ ಹೊಸ ಟೂಲ್; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Movies
'ಕ್ರಾಂತಿ' ₹100 ಕೋಟಿ ಕ್ಲಬ್ ಸೇರಿದ್ದು ಹೇಗೆ? ಥಿಯೇಟರ್ನಿಂದ ಎಷ್ಟು? ಟಿವಿ ರೈಟ್ಸ್ನಿಂದ ಎಷ್ಟು?
- Automobiles
ಬಹುನೀರಿಕ್ಷಿತ 'ಅಲ್ಟ್ರಾವೈಲೆಟ್ F77' ಬೈಕ್ ಹೇಗಿದೆ ಗೋತ್ತಾ.. ಇಲ್ಲಿದೆ ವಿಮರ್ಶೆ
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಡಿಸೆಂಬರ್ನಲ್ಲಿ ಧನು ರಾಶಿಗೆ ಸಂಚರಿಸಲಿದೆ ಈ 3 ಪ್ರಮುಖ ಗ್ರಹಗಳು: 3 ರಾಶಿಯವರಿಗೆ ತುಂಬಾನೇ ಅದೃಷ್ಟ
ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿ ತಿಂಗಳು ಕೆಲವೊಂದು ಗ್ರಹಗಳ ಸಂಚಾರ ಇದ್ದೇ ಇರುತ್ತದೆ. ಈ ಡಿಸೆಂಬರ್ನಲ್ಲಿ 3 ಪ್ರಮುಖ ಗ್ರಹಗಳು ನಮ್ಮ ರಾಶಿ ಬದಲಾವಣೆ ಮಾಡಲಿವೆ. ಮೊದಲನೆಯದಾಗಿ ಬುಧ ಗ್ರಹವು ಡಿಸೆಂಬರ್ 3 ರಂದು ಧನು ರಾಶಿಗೆ ಪ್ರವೇಶಿಸಲಿದೆ, ನಂತರ ಶುಕ್ರವು ಡಿಸೆಂಬರ್ 5 ರಂದು ಧನು ರಾಶಿಗೆ ಪ್ರವೇಶಿಸಲಿದೆ. ಇದರ ನಂತರ, ಗ್ರಹಗಳ ರಾಜ ಸೂರ್ಯನು ಡಿಸೆಂಬರ್ 16 ರಂದು ಧನು ರಾಶಿಯಲ್ಲಿ ಸಾಗುತ್ತಾನೆ. ಈ ಗ್ರಹಗಳ ತಮ್ಮ ರಾಶಿ ಬದಲಾವಣೆ ಮಾಡಿದಾಗ ತಮ್ಮ ಸ್ಥಾನಕ್ಕೆ ತಕ್ಕಂತೆ ಫಲ ನೀಡಲಿದೆ.
ಇವುಗಳು ತಮ್ಮ ರಾಶಿಯಲ್ಲಿ ಪ್ರಬಲ ಸ್ಥಾನದಲ್ಲಿದ್ದರೆ ಒಳ್ಳೆಯ ಫಲ ನೀಡುತ್ತದೆ. ಅದೇ ದುರ್ಬಲ ಸ್ಥಾನದಲ್ಲಿ ಸ್ವಲ್ಪ ಜಾಗ್ರತೆಯಿಂದಿರಬೇಕಾಗುತ್ತದೆ. ಡಿಸೆಂಬರ್ ತಿಂಗಳಿನಲ್ಲಿ ನಡೆಯುವ 3 ಗ್ರಹಗಳ ರಾಶಿ ಬದಲಾವಣೆಯ ಪ್ರಭಾವ ನೋಡುವುದಾದರೆ ಈ ತಿಂಗಳು ಈ ಮೂರು ರಾಶಿಯವರಿಗೆ ತುಂಬಾನೇ ಒಳ್ಳೆಯದಿದೆ.
ಮೊದಲಿಗೆ ಯಾವ ಗ್ರಹ ಯಾವಾಗ ರಾಶಿ ಬದಲಾವಣೆ ಮಾಡಲಿದೆ ನೋಡೋಣ:
ಬುಧ ಸಂಚಾರ: ಬುಧನು ಧನು ರಾಶಿಗೆ ಡಿಸೆಂಬರ್ 3, ಬೆಳಗ್ಗೆ 06:34 ಸಂಚರಿಸಲಿದೆ
ಈ ತಿಂಗಳಿನಲ್ಲಿ ಪ್ರಥಮವಾಗಿ ಬುಧ ಗ್ರಹದ ಸಂಚಾರವಾಗಲಿದೆ. ಬುಧನು ಧನು ರಾಶಿಯಲ್ಲಿ ಸಾಗಲಿದ್ದಾನೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಧನು ರಾಶಿಯನ್ನು ಸಂಪತ್ತು, ಸ್ಫೂರ್ತಿ, ಬುದ್ಧಿವಂತಿಕೆ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಬುಧದ ಈ ಸಂಕ್ರಣವು ತತ್ವಜ್ಞಾನಿಗಳು, ಸಲಹೆಗಾರರು, ಮಾರ್ಗದರ್ಶಕರು ಮತ್ತು ಶಿಕ್ಷಕರಿಗೆ ಫಲಪ್ರದವಾಗಿದೆ.
ಶುಕ್ರ ಸಂಚಾರ
ಡಿಸೆಂಬರ್ 5, ಸಂಜೆ 5: 39ಕ್ಕೆ ಶುಕ್ರ ಕೂಡ ಧನು ರಾಶಿಗೆ ಸಂಚರಿಸಲಿದೆ.
ವೈದಿಕ ಜ್ಯೋತಿಷ್ಯದ ಪ್ರಕಾರ, ಶುಕ್ರವು ಸ್ತ್ರೀ ಗ್ರಹವಾಗಿದೆ. ಶುಕ್ರ ಶುಕ್ರ ವೃಷಭ ಮತ್ತು ತುಲಾ ರಾಶಿಯವರಲ್ಲಿ ಒಳ್ಳೆಯ ಫಲ ನೀಡಲಿದೆ ಎಂದು ಹೇಳಲಾಗುವುದು.
ಧನು ರಾಶಿಗೆ ಸೂರ್ಯ ಸಂಚಾರ
ಗ್ರಹಗಳ ಅಧಿಪತಿ ಸೂರ್ಯ ಡಿಸೆಂಬರ್ 16ರಂದು ಶುಕ್ರವಾರ ಬೆಳಗ್ಗೆ 09:38ಕ್ಕೆ ಶನಿ ರಾಶಿ ಪ್ರವೇಶಿಸಲಿದೆ.
ವೈದಿಕ ಶಾಸ್ತ್ರದ ಪ್ರಕಾರ ಸೂರ್ಯನು ಆತ್ಮದ ಅಂಶವಾಗಿದೆ. ಅಲ್ಲದೆ, ಇದು ವ್ಯಕ್ತಿಯ ಘನತೆ, ಸ್ವಾಭಿಮಾನ, ಅಹಂ ಮತ್ತು ವೃತ್ತಿಜೀವನದ ಸಂಕೇತವಾಗಿದೆ. ಆದ್ದರಿಂದ ಪ್ರತಿತಿಂಗಳು ನಡೆಯುವ ಸೂರ್ಯ ಸಂಚಾರಕ್ಕೆ ತುಂಬಾನೇ ಮಹತ್ವವಿದೆ. ಈ ಬಾರಿ ಸೂರ್ಯನ ಧನು ಸಂಚಾರ ಒಳ್ಳೆಯ ಫಲಿತಾಂಶ ನೀಡಲಿದೆ ಎಂದು ಹೇಳಲಾಗುವುದು.
ಈ ಮೂರು ಗ್ರಹಗಳ ಸಂಚಾರದಿಂದಾಗಿ ಈ ಗ್ರಹಗಳಿಗೆ ತುಂಬಾನೇ ಒಳ್ಳೆಯದು:

ಮಿಥುನ ರಾಶಿ
ಸೂರ್ಯಬುಧ ಮತ್ತು ಶುಕ್ರ ಸಂಕ್ರಮಣವು ನಿಮಗೆ ಪ್ರಯೋಜನಕಾರಿಯಾಗಲಿದೆ. ಏಕೆಂದರೆ ಈ ಗ್ರಹವು ನಿಮ್ಮ ರಾಶಿಯ ಏಳನೇ ಮನೆಯಲ್ಲಿ ಸಾಗಲಿದೆ. ಇದನ್ನು ವೈವಾಹಿಕ ಜೀವನ ಮತ್ತು ಪಾಲುದಾರಿಕೆಯ ಮನೆಯಾಗಿದೆ. ಆದ್ದರಿಂದ, ಈ ಸಮಯದಲ್ಲಿ ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ನೀವು ಪಡೆಯಬಹುದು. ಇದರೊಂದಿಗೆ ವ್ಯಾಪಾರಕ್ಕೆ ಸಂಬಂಧಿಸಿದವರು ಸಹ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ಗ್ರಹಗಳ ಶುಭ ಪರಿಣಾಮಗಳೊಂದಿಗೆ ಆದಾಯದ ಇತರ ಮೂಲಗಳನ್ನು ಹೆಚ್ಚಿಸುವ ಮಾರ್ಗಗಳು ಹೆಚ್ಚಾಗಲಿದೆ, ನಿಮ್ಮ ಪ್ರಯತ್ನಗಳಲ್ಲಿ ಯಶಸ್ವಿ ಕಾಣುವಿರಿ. ದಾಂಪತ್ಯ ಜೀವನದಲ್ಲಿ ಮಾಧುರ್ಯವನ್ನು ಕಾಣಬಹುದು. ನಿಮ್ಮ ಕಾರ್ಯಗಳಿಗೆ ಸಂಗಾತಿಯ ಬೆಂಬಲ ಸಿಗಲಿದೆ.

ಮಕರ ರಾಶಿ
ಡಿಸೆಂಬರ್‌ನಲ್ಲಿ ಮೂರು ಗ್ರಹಗಳ ರಾಶಿಚಕ್ರ ಬದಲಾವಣೆಯು ನಿಮಗೆ ಅನುಕೂಲಕರವಾಗಿದೆ. ಈ ಸಮಯದಲ್ಲಿ ನಿರುದ್ಯೋಗಿಗಳು ಹೊಸ ಉದ್ಯೋಗದ ಪ್ರಸ್ತಾಪವನ್ನು ಪಡೆಯಬಹುದು ಅಥವಾ ಮಾತುಕತೆ ಮುಂದುವರಿಯಬಹುದು. ಮತ್ತೊಂದೆಡೆ, ನೀವು ಕೆಲಸದಲ್ಲಿ ಉದ್ಯೋಗದಲ್ಲಿದ್ದರೆ, ನೀವು ಹೊಸ ಜವಾಬ್ದಾರಿಯನ್ನು ಪಡೆಯಬಹುದು.
ಕೆಲಸದ ಸ್ಥಳದಲ್ಲಿ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧದ ಲಾಭವನ್ನು ಪಡೆಯುವಿರಿ. ಕುಟುಂಬ ಜೀವನದ ಬಗ್ಗೆ ನೋಡುವುದಾದರೆ ನೀವು ಡಿಸೆಂಬರ್‌ನಲ್ಲಿ ಸಂಬಂಧಿಕರಿಂದ ಬೆಂಬಲವನ್ನು ಪಡೆಯಬಹುದು. ಈ ಸಮಯದಲ್ಲಿ ದುಂದು ವೆಚ್ಚಗಳ ಮೇಲೆ ನಿಯಂತ್ರಣವಿರಲಿ, ಈ ಸಮಯದಲ್ಲಿ ನೀವು ಉಳಿದಾಯದತ್ತ ತುಂಬಾನೇ ಗಮನ ನೀಡುವಿರಿ.

ಕುಂಭ ರಾಶಿ
ಮೂರು ಗ್ರಹಗಳ ಮಂಗಳಕರ ಪರಿಣಾಮದಿಂದಾಗಿ, ಡಿಸೆಂಬರ್ ತಿಂಗಳು ಕುಂಭ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ಏಕೆಂದರೆ ಈ ಗ್ರಹಗಳ ಸಂಚಾರವು ನಿಮ್ಮ ರಾಶಿಯ 11 ನೇ ಮನೆಯಲ್ಲಿ ಸಂಭವಿಸಲಿದೆ. ಇದನ್ನು ಆದಾಯ ಮತ್ತು ಲಾಭದ ಮನೆಯೆಂದು ಪರಿಗಣಿಸಲಾಗಿದೆ. ಈ ತಿಂಗಳಿನಲ್ಲಿ ನಿಮ್ಮ ಆದಾಯವು ಹೆಚ್ಚಾಗುವ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ನೀವು ನಿರೀಕ್ಷೆಗಿಂತ ಹೆಚ್ಚಿನ ಯಶಸ್ಸನ್ನು ಪಡೆಯಬಹುದು. ಅದೇ ಸಮಯದಲ್ಲಿ, ಷೇರುಗಳು, ಬೆಟ್ಟಿಂಗ್ ಮತ್ತು ಲಾಟರಿಗಳಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದ ಪ್ರಯೋಜನಗಳನ್ನು ಪಡೆಯಬಹುದು. ಅಲ್ಲದೇ ರಾಜಕೀಯದಲ್ಲಿ ಸಕ್ರಿಯರಾಗಿರುವವರಿಗೆ ಒಂದಿಷ್ಟು ಸ್ಥಾನಮಾನ ಸಿಗಬಹುದು.