For Quick Alerts
ALLOW NOTIFICATIONS  
For Daily Alerts

ಪಿತೃಪಕ್ಷ (ಸೆ.10-25): ಶ್ರಾದ್ಧದ 15 ದಿನಗಳಲ್ಲಿ ಈ ರೀತಿಯೆಲ್ಲಾ ಮಾಡಿದರೆ ಕಷ್ಟ ತಪ್ಪಿದ್ದಲ್ಲ

|

ಭಾದ್ರಪದ ಮಾಸದಲ್ಲಿ ಬರುವ ಪಿತೃಪಕ್ಷ ಹಿಂದೂಗಳಿಗೆ ತುಂಬಾನೇ ಮಹತ್ವವಾದದ್ದು ಆಗಿದೆ. ಪಿತೃಪಕ್ಷ ಸೆಪ್ಟೆಂಬರ್ 10ರಿಂದ ಪ್ರಾರಂಭವಾಗಿ ಸೆಪ್ಟೆಂಬರ್‌ 25ಕ್ಕೆ ಮುಕ್ತಾಯವಾಗುತ್ತದೆ.

ಈ ಪಿತೃಪಕ್ಷದಲ್ಲಿ ಪಿತೃಗಳಿಗೆ ತರ್ಪಣ ನೀಡಿ ಪಿತೃದೋಷ ನಿವಾರಣೆ ಮಾಡಲಾಗುವುದು. ಪಿತೃಪಕ್ಷದಲ್ಲಿ ಪೂರ್ವಜರಿಗೆ ತರ್ಪಣ ನೀಡಿದರೆ ಅದರಿಂದ ಪುಣ್ಯಫಲ ಸಿಗುವುದು. ಅವರ ಆಶೀರ್ವಾದದಿಂದ ಮನೆಯಲ್ಲಿ ನೆಮ್ಮದಿ ನೆಲೆಸುವುದು, ಸಂತಾನ ಭಾಗ್ಯ ದೊರೆಯುವುದು ಅಲ್ಲದೆ ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ಪ್ರಗತಿ ಸಿಗುವುದು.

ಈ ಪಿತೃ ಪಕ್ಷದ ಸಮಯದಲ್ಲಿ ಶ್ರಾದ್ಧ ಮಾಡಲಾಗುವುದು ಅಂದರೆ ನಮ್ಮ ಪೂರ್ವಜರ ಆತ್ಮಗಳನ್ನು ಆಹ್ವಾನಿಸಿ ಅವರಿಗೆ ತರ್ಪಣ ನೀಡಲಾಗುವುದು.ಭಾದ್ರಪದ ಮಾಸದಲ್ಲಿ ಮರಣವೊಂದಿದ ಹಿರಿಯರು ಭೂಮಿಗೆ ಬರುತ್ತಾರೆ. ಹಾಗೆ ಬಂದ ಅವರಿಗೆ ತರ್ಪಣ ನೀಡಿ ಕಳುಹಿಸಿದರೆ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ, ಅವರು ನಮ್ಮನ್ನು ಆಶೀರ್ವದಿಸುತ್ತಾರೆ
ಎಂಬುವುದು ಧಾರ್ಮಿಕ ನಂಬಿಕೆ.

ಈ 15 ದಿಗಳಲ್ಲಿ ನಾವು ಮಾಡುವ ಕರ್ಮಫಲದಂತೆ ಫಲ ಸಿಗುವುದು, ಪಿತೃಪಕ್ಷ ನಿಯಮಗಳನ್ನು ಪಾಲಿಸಿದರೆ ಒಳಿತಾಗುವುದು. ಪಿತೃಪಕ್ಷದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ ಬನ್ನಿ:

ಪಿತೃ ಪಕ್ಷದಲ್ಲಿ ಏನು ಮಾಡಿದರೆ ಒಳ್ಳೆಯದು?

ಪಿತೃ ಪಕ್ಷದಲ್ಲಿ ಏನು ಮಾಡಿದರೆ ಒಳ್ಳೆಯದು?

* ಶ್ರಾದ್ಧ ಮಾಡಲು ಬಂದ ಬ್ರಾಹ್ಮಣರಿಗೆ ಬಟ್ಟೆ, ಆಹಾರಗಳನ್ನು ನೀಡಿ.

* ಈ ಸಮಯದಲ್ಲಿ ದನಗಳಿಗೆ, ನಾಯಿಗಳಿಗೆ ಆಹಾರವನ್ನು ನೀಡಿ.

ಈ ಸಮಯದಲ್ಲಿ ಬ್ರಾಹ್ಮಣರಿಗೆ ಆಹಾರವನ್ನು ನೀಡಲೇಬೇಕು, ಏಕಂದರೆ ನಮ್ಮ ಪೂರ್ವಜರಿಗೂ ನಮಗೂ ಅವರು ತಾವು ಮಾಡುವ ಶ್ರಾದ್ಧ ಕಾರ್ಯದ ಮುಖಾಂತರ ಸಂಪರ್ಕ ಕಲ್ಪಿಸುತ್ತಾರೆ, ಆದ್ದರಿಂದ ಅವರಿಗೆ ಆಹಾರವನ್ನು ನೀಡಲೇಬೇಕು.

ಇದರ ಹಿಂದೆ ಒಂದು ಪೌರಾಣಿಕ ಕತೆ ಕೂಡ ಇದೆ. ಮಹಾಭಾರತದಲ್ಲಿ ಕುಂತಿ ಪುತ್ರ ಕರ್ಣ ಮಹಾನ್ ದಾನ ಸೂರ. ಆತ ತನ್ನಲ್ಲಿರುವ ಆಸ್ತಿ, ಸಂಪತ್ತು ಎಲ್ಲಾ ದಾನ ಮಾಡಿರುತ್ತಾನೆ, ಆದರೆ ಆಹಾರ ದಾನ ಮಾಡಿರುವುದಿಲ್ಲ. ಸತ್ತು ಸ್ವರ್ಗಕ್ಕೆ ಹೋದಾಗ ಅವನಿಗೆ ಅಭೂತವಾದ ಸ್ವಾಗತ ದೊರೆಯುತ್ತದೆ, ಸ್ವರ್ಗಲೋಕದಲ್ಲಿ ಕರ್ಣನಿಗೆ ಚಿನ್ನದ ಆಸನ, ಎಲ್ಲಾ ಸೌಲಭ್ಯ ಒದಗಿಸಲಾಗುವುದು, ಆದರೆ ಆಹಾರ ನೀಡಲಾಗುವುದಿಲ್ಲ, ಆಗ ಕರ್ಣ ನನಗೇಕೆ ಆಹಾರ ನೀಡುತ್ತಿಲ್ಲ ಎಂದು ಯಮಧರ್ಮರಾಜ ಏಕೆ ಎಂದು ಕತೆ ಹೇಳುತ್ತಾನೆ. ಆಗನ ಕರ್ಣ 15 ದಿನ ನನ್ನನ್ನು ಭೂಮಿಗೆ ಬಿಡುವಂತೆ ಕೋರುತ್ತಾನೆ, ಅವನ ಕೋರಿಕೆಗೆ ಯಮಧರ್ಮ ರಾಜ ಸಮ್ಮಿತಿಸುತ್ತಾನೆ. ಭೂಮಿಗೆ ಬಂದಾಗ ಕರ್ಣನಿಗೆ ಸಾಕಷ್ಟು ಆಹಾರ ಸಿಗುತ್ತದೆ. ಆದ್ದರಿಂದ ಶ್ರಾದ್ಧದಲ್ಲಿ ಬ್ರಾಹ್ಮಣರಿಗೆ ಆಹಾರ ದಾನ ಮಾಡುವುದು ತುಂಬಾನೇ ಮುಖ್ಯವಾಗಿದೆ.

ಶ್ರಾದ್ಧ ಮಾಡುವಾಗ ಏನು ಮಾಡಬಾರದು?

ಶ್ರಾದ್ಧ ಮಾಡುವಾಗ ಏನು ಮಾಡಬಾರದು?

ಈ ಸಮಯದಲ್ಲಿ ಅನ್ನ, ಮಾಂಸಾಹಾರ ಸೇವಿಸಬಾರದು, ಬದನೆಕಾಯಿ ತಿನ್ನಬಾರದು, ಈರುಳ್ಳಿ ಹಾಕಬಾರದು, ಬರೀ ಸಾತ್ವಿಕ ಆಹಾರ ಮಾತ್ರ ಸೇವಿಸಬೇಕು.

* ಕಪ್ಪು ಉದ್ದು, ಚಕ್ಕೆ ಲಚಂಗ, ಕಪ್ಪು ಜೀರಿಗೆ, ಕಪ್ಪು ಉಪ್ಪು, ಸಾಸಿವೆ, ಧಾನ್ಯಗಳು, ಶಚಿಯಿಲ್ಲದ ಆಹಾರ ಯಾವುದೂ ಬಳಸಬಾರದು

* ಶ್ರಾದ್ಧ ಮಾಡುವವರು, ಉಗುರು, ಕೂದಲು, ಗಡ್ಡ ಕತ್ತರಿಸಬಾರದು,

* ಚರ್ಮದಿಂದ ಮಾಡಿದ ಚಪ್ಪಲಿ, ಬೆಲ್ಟ್‌ ಯಾವುದೂ ಧರಿಸಬಾರದು

* ಮಂತ್ರ ಪಠಿಸುವಾಗ ಬೇರೆಯವರ ಜೊತೆ ಮಾತನಾಡಲು ಮಂತ್ರ ಪಠಣೆ ನಿಲ್ಲಿಸಬಾರದು

* ತಂಬಾಕು ಸೇವನೆ, ಮದ್ಯಪಾನ, ಗುಟುಕ ಯಾವುದೂ ಮಾಡಬಾರದು

* ಸುಳ್ಳು ಹೇಳಬಾರದು, ಕೆಟ್ಟ ಪದಗಳಿಂದ ಬೈಯ್ಯುವುದು ಮಾಡಬಾರದು.

* ಶ್ರಾದ್ಧ ಮಾಡುವವರು ದೈಹಿಕ ಸಂಪರ್ಕ ಬೆಳೆಸಬಾರದು.

* ಶ್ರಾದ್ಧ ಮಾಡುವವರು ತಂಗಳು ಆಹಾರ ತೆಗೆದುಕೊಳ್ಳಬಾರದು

*ಶ್ರಾದ್ಧ ಕಾರ್ಯಕ್ಕೆ ಕಬ್ಬಿಣದ ಪಾತ್ರೆ ಬಳಸಬಾರದು

* ಶ್ರಾದ್ಧ ಅವಧಿಯಲ್ಲಿ ಯಾವುದೇ ಹೊಸ ಬಟ್ಟೆ ಖರೀದಿಸಿ, ಧರಿಸಬಾರದು

* ಈ ಸಮಯದಲ್ಲಿ ಹೊಸ ಮನೆಗೆ ಹೋಗಬಾರದು

* ಮನೆಗೆ ಯಾವುದೇ ಹೊಸ ವಸ್ತುಗಳನ್ನು ಖರೀದಿಸಬೇಡಿ, ವಾಹನ ಮುಂತಾದುಗಳು

* ಪಿತೃಪಕ್ಷ ಶ್ರಾದ್ಧ ಮಾಡುವ ದಿನ ಬಟ್ಟೆಗಳ್ನು ಒಗೆಯಬೇಡಿ.

* ಶ್ರಾದ್ಧವನ್ನು ಮಧ್ಯಾಹ್ನ, ಸಂಜೆ, ರಾತ್ರ ಮಾಡಬಾರದು.

* ಶ್ರಾದ್ಧ ಕಾರ್ಯ ಮಾಡುವವಾಗ ಮನೆಯವರಿಗೆ, ಮನೆಗೆ ಒಳ್ಳೆಯದಾಗಲಿ ಎಂದು ಭಕ್ತಿಯಿಂದ ಕೇಳಿಕೊಳ್ಳಬೇಕು.

ಪಿತೃ ಪಕ್ಷದಲ್ಲಿ ಏನು ಮಾಡಬೇಕು?

ಪಿತೃ ಪಕ್ಷದಲ್ಲಿ ಏನು ಮಾಡಬೇಕು?

* ಬಡವರಿಗೆ ದಾನ ಮಾಡಿ.

* ಯಾರಿಗೆ ಶ್ರಾದ್ಧ ಕಾರ್ಯ ಮಾಡಲು ಹಣವಿರುವುದಿಲ್ಲವೋ ಅವರಿಗೆ ಹಣದ ಸಹಾಯ ಮಾಡಿ.

* ಪೂರ್ವಜರ ಮನೆಯಲ್ಲಿ ಬೆಳಗ್ಗೆ ಮತ್ತು ಸಂಜೆ ದೀಪ ಹಚ್ಚುವುದು ಒಳ್ಳೆಯದು.

* ಪಿತೃ ಪಕ್ಷದಲ್ಲಿ ಬಡವರಿಗೆ, ಬ್ರಾಹ್ಮಣರಿಗೆ ಆಹಾರ ನೀಡಿ

* ದನ-ಕರುಗಳು, ನಾಯಿಗೆ ಆಹಾರ ನೀಡಿ.

English summary

Pitru Paksha 2022 dos and don'ts: what you must and must not do during this fortnight

Pitru Paksha 2022 dos and don'ts:These things should not be done on pitru paksha, do this for benefits,
Story first published: Tuesday, September 6, 2022, 17:43 [IST]
X
Desktop Bottom Promotion