For Quick Alerts
ALLOW NOTIFICATIONS  
For Daily Alerts

Navagraha Stotram in Kannada: ನವಗ್ರಹ ಸ್ತೋತ್ರ, ಅದರ ಅರ್ಥ ಹಾಗೂ ಪಠಿಸುವುದರಿಂದ ಆಗುವ ಪ್ರಯೋಜನ

|

ಮಗು ಹುಟ್ಟಿದ ಸಮಯದಲ್ಲಿ ಚಂದ್ರ ಗ್ರಹದ ಸ್ಥಾನವು ಎಲ್ಲಿದೆ ಎಂಬುದರ ಮೇಲೆ ಅವರ ಜ್ಯೋತಿಷ್ಯ ನಿರ್ಧರಿಸಲಾಗುತ್ತದೆ. ನವಗ್ರಹಗಳು ಯಾವ ಸ್ಥಾನದಲದಲ್ಲಿದೆ ಎಂಬುದರ ಮೇಲೆ ಅವರ ಅದೃಷ್ಟ ಅಥವಾ ದುರದೃಷ್ಟ ಬದಲಾಗುತ್ತಿರುತ್ತದೆ. ಜ್ಯೋತಿಶಾಸ್ತ್ರದ ಪ್ರಕಾರ ನವಗ್ರಗಳು ನಮ್ಮ ಜೀವನದ ಮೇಲೆ ಒಂದಿಲ್ಲೊಂದು ರೀತಿ ಪ್ರಭಾವ ಬೀರುತ್ತಲೇ ಇರುತ್ತದೆ.
ನವಗ್ರಹ ಸ್ತೋತ್ರ ಹಿಂದೂ ಧರ್ಮಶಾಸ್ತ್ರದ ಪ್ರಮುಖ ಭಾಗವಾಗಿದೆ. ನವಗ್ರಹಗಳನ್ನು ಅಥವಾ ಆಕಾಶ ಗ್ರಹಗಳನ್ನು ಹೊಗಳಲು ಋಷಿ ವ್ಯಾಸರಿಂದ ಈ ನವಗ್ರಹ ಸ್ತೋತ್ರ ಸಂಯೋಜಿಸಲ್ಪಟ್ಟಿದೆ. ಈ ದೈವಿಕ ಸ್ತೋತ್ರದ ಮುಖ್ಯ ಭಾಗವು ಸೂರ್ಯ, ಚಂದ್ರ, ಕುಜ, ಬುಧ, ಬೃಹಸ್ಪತಿ (ಗುರು), ಶುಕ್ರ, ಶನಿ, ರಾಹು ಮತ್ತು ಕೇತುಗಳಂತಹ ಗ್ರಹಗಳಿಗೆ ಸಮರ್ಪಿತವಾದ 9 ಚರಣಗಳನ್ನು ಒಳಗೊಂಡಿದೆ. ಸ್ತೋತ್ರದ ಸಾಹಿತ್ಯವು ಸರಳವಾದ ರೀತಿಯಲ್ಲಿ ಇನ್ನೂ ಉತ್ತಮ ಅರ್ಥವನ್ನು ಹೊಂದಿದೆ. ಚರಣಗಳು ನವಗ್ರಹಗಳ ನೋಟ, ವಂಶಾವಳಿ ಮತ್ತು ಅವರ ದೈವಿಕ ಗುಣಲಕ್ಷಣಗಳನ್ನು ವಿವರಿಸುತ್ತದೆ.

navagraha

ಈ ನವಗ್ರಹ ಸ್ತೋತ್ರವನ್ನು ಪಠಿಸುವ ಪ್ರಯೋಜನಗಳನ್ನು ಸಹ ವ್ಯಾಸರು ಫಲಸ್ತುತಿ ಭಾಗದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ, ಅಲ್ಲಿ ಒಬ್ಬರು ಗ್ರಹಗಳು ಮತ್ತು ನಕ್ಷತ್ರಗಳಿಂದ ಉಂಟಾಗುವ ತೊಂದರೆಗಳನ್ನು ತೊಡೆದುಹಾಕಬಹುದು ಮತ್ತು ಅದೇ ಸಮಯದಲ್ಲಿ ಅವರು ಉತ್ತಮ ಸಂಪತ್ತು ಮತ್ತು ಅದೃಷ್ಟದಿಂದ ಲಾಭ ಪಡೆಯಬಹುದು ಎಂದು ಹೇಳುತ್ತದೆ.
ನವಗ್ರಹ ಸ್ತೋತ್ರ, ಅದರ ಅರ್ಥ ಹಾಗೂ ಇದರ ಪ್ರಯೋಜನಗಳನ್ನು ಮುಂದೆ ತಿಳಿಯೋಣ:

ನವಗ್ರಹ ಸ್ತೋತ್ರದ ಸಾಹಿತ್ಯ ಮತ್ತು ಅರ್ಥ

ನವಗ್ರಹ ಸ್ತೋತ್ರದ ಸಾಹಿತ್ಯ ಮತ್ತು ಅರ್ಥ

ಸೂರ್ಯ ದೇವನ ನವಗ್ರಹ ಸ್ತೋತ್ರ

ಜಪಾಕುಸುಮ ಸಂಕಾಸಂ ಕಸ್ಯಪೇಯಂ ಮಹದ್ಯುತಿಮ್

ತಮೋರಿಂ ಸರ್ವ ಪಾಪಜ್ಞಾಂ ಪ್ರಣತೋಸ್ಮಿ ದಿವಾಕರಮ್

ಅರ್ಥ

ದಾಸವಾಳದ ಹೂವಿನಂತೆ ಕೆಂಪಾಗಿರುವ, ಕಶ್ಯಪ ವಂಶದಲ್ಲಿ ಹುಟ್ಟಿದವನೇ, ತೇಜಸ್ವಿಯೇ.

ಕತ್ತಲೆಯನ್ನು ಹೋಗಲಾಡಿಸುವವನು, ಪಾಪಗಳ ನಾಶಕ, ಭಗವಾನ್ ದಿವಾಕರ (ಸೂರ್ಯದೇವನ ಇನ್ನೊಂದು ಹೆಸರು), ನಾನು ನಿನಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ.

ಚಂದ್ರ ದೇವನ ನವಗ್ರಹ ಸ್ತೋತ್ರ

ಚಂದ್ರ ದೇವನ ನವಗ್ರಹ ಸ್ತೋತ್ರ

ದಧಿ ಸಂಖ ತುಷಾರಮ್ಭಂ ಕ್ಷೀರೋದರ್ಣವ ಸಂಭವಮ್

ನಮಾಮಿ ಸಸಿನಂ ಸೋಮಂ ಶಂಭೋರ್ಮುಕುಟ ಭೂಷಣಂ

ಅರ್ಥ

ಮೊಸರು, ಶಂಖ ಅಥವಾ ಹಿಮದಂತಹ ಬಿಳಿ ಬಣ್ಣದಲ್ಲಿ ಹೊಳೆಯುವವನು, ಕ್ಷೀರಸಾಗರದಿಂದ ಜನಿಸಿದವನು.

ಶಿವನ ಕಿರೀಟದ ಮೇಲೆ ಭೂಷಣವಾಗಿರುವ ಚಂದ್ರನಿಗೆ ನಾನು ನಮಸ್ಕರಿಸುತ್ತೇನೆ.

ಮಂಗಳ ದೇವನ ನವಗ್ರಹ ಸ್ತೋತ್ರ

ಮಂಗಳ ದೇವನ ನವಗ್ರಹ ಸ್ತೋತ್ರ

ಧರಣಿ-ಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಮ್ ॥

ಕುಮಾರಂ ಶಕ್ತಿಹಸ್ತಂ ತಂ ಮಂಗಳಂ ಪ್ರಣಮಾಮ್ಯಹಂ

ಅರ್ಥ

ಓ, ಭೂಮಿಗೆ ಹುಟ್ಟಿದವನೇ, ಸಿಡಿಲಿನ ತೇಜಸ್ಸಿನಂತೆ ಹೊರಹೊಮ್ಮುವವನು.

ತನ್ನ ಕೈಯಲ್ಲಿ ದೈವಿಕ ಶಕ್ತಿಯನ್ನು ಹೊಂದಿರುವ (ಭೂಮಿಯ) ಮಗ, ನಾನು ನಿಮಗೆ ಕುಜ (ಮಂಗಳ) ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ.

ಬುಧ ದೇವನ ನವಗ್ರಹ ಸ್ತೋತ್ರ

ಬುಧ ದೇವನ ನವಗ್ರಹ ಸ್ತೋತ್ರ

ಪ್ರಿಯಂಗು ಕಲಿಕಾ-ಶ್ಯಮಂ ರೂಪೇಣಾ-ಪ್ರತಿಮಂ ಭೂಧಮ್

ಸೌಮ್ಯಂ ಸೌಮ್ಯಗುಣೋಪೇತಂ ತಂ ಬುಧಂ ಪ್ರಣಮಾಮ್ಯಹಂ

ಅರ್ಥ

ಕದಂಬ ವೃಕ್ಷದ ಮೊಗ್ಗು ಹೋಲುವ ಹಸಿರು ಬಣ್ಣದಲ್ಲಿ ಪ್ರಸ್ತುತ, ಓ ಭಗವಂತ ಬುಧ ಅಸಮಾನ ದೇಹ.

ಶಾಂತ, ದೈವಿಕ ಗುಣಗಳಿಂದ ತುಂಬಿದ, ಭಗವಾನ್ ಬುಧ, ನಾನು ನಿನಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ.

ಗುರು ದೇವನ ನವಗ್ರಹ ಸ್ತೋತ್ರ

ಗುರು ದೇವನ ನವಗ್ರಹ ಸ್ತೋತ್ರ

ದೇವಾನಾಂ ಚ ಋಷಿಣಾಂ ಚ ಗುರುಂ ಕಾಂಚನ ಸನ್ನಿಭಮ್

ಬುದ್ಧಿಭೂತಂ ತ್ರಿಲೋಕೇಶಂ ತಾಂ ನಮಾಮಿ ಬೃಹಸ್ಪತಿಮ್

ಅರ್ಥ

ಚಿನ್ನದಂತೆ ಹೊಳೆಯುವ ದೇವತೆಗಳ ಮತ್ತು ಋಷಿಗಳ ಗುರು.

ಬುದ್ಧಿಜೀವಿ, ಭಗವಂತ (ಗುರು) ಮೂರು ಲೋಕಗಳಿಗೆ, ನಾನು ಭಗವಾನ್ ಬೃಹಸ್ಪತಿ ನಿನಗೆ ನಮಸ್ಕರಿಸುತ್ತೇನೆ.

ಶುಕ್ರ ದೇವನ ನವಗ್ರಹ ಸ್ತೋತ್ರ

ಶುಕ್ರ ದೇವನ ನವಗ್ರಹ ಸ್ತೋತ್ರ

ಹಿಮ ಕುಮ್ದ ಮೃಣಾಲಾಭಂ ದೈತ್ಯಾನಂ ಪರಮಂ ಗುರುಮ್ ॥

ಸರ್ವ-ಶಾಸ್ತ್ರ ಪ್ರವಕ್ತರಂ ಭಾರ್ಘವಂ ಪ್ರಣಮಾಮ್ಯಹಂ

ಅರ್ಥ

ಹಿಮ, ಮಲ್ಲಿಗೆ ಮತ್ತು ಕಮಲದ ಕಾಂಡ (ಮೃಣಾಲ) ದಂತಹ ಗುಣಲಕ್ಷಣಗಳಿಗೆ ಹೋಲಿಸಿದವನು, ದೈತ್ಯನಿಗಿಂತ ಉತ್ತಮ ಅಥವಾ ಶ್ರೇಷ್ಠ ಗುರು.

ಎಲ್ಲಾ ಶಾಸ್ತ್ರಗಳಲ್ಲಿ ಪರಿಣಿತನಾದ ಓ ಭಾರ್ಗವ/ಶುಕ್ರ (ಶುಕ್ರಾಚಾರ್ಯರ ಇನ್ನೊಂದು ಹೆಸರು) ನಾನು ನಿಮ್ಮ ಮುಂದೆ ನಮಸ್ಕರಿಸುತ್ತೇನೆ.

ಶನಿ ದೇವನ ನವಗ್ರಹ ಸ್ತೋತ್ರ

ಶನಿ ದೇವನ ನವಗ್ರಹ ಸ್ತೋತ್ರ

ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಮ್

ಛಾಯಾ-ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ

ಅರ್ಥ

ಕಪ್ಪು ಸಾಂಪ್ರದಾಯಿಕ ಬಣ್ಣದಲ್ಲಿ ಹೊಳೆಯುತ್ತಿರುವ ರವಿ (ಸೂರ್ಯ) ಪುತ್ರ ಮತ್ತು ಯಮನ ಸಹೋದರ.

ಛಾಯಾದೇವಿ ಮತ್ತು ಮಾರ್ತಾಂಡ ಸೂರ್ಯನಿಗೆ ಯಾರು ಜನಿಸಿದರೋ, ನಾನು ಶನಿಶ್ಚರನಿಗೆ ನಮಸ್ಕರಿಸುತ್ತೇನೆ.

ರಾಹು ಸ್ವಾಮಿ ನವಗ್ರಹ ಸ್ತೋತ್ರ

ರಾಹು ಸ್ವಾಮಿ ನವಗ್ರಹ ಸ್ತೋತ್ರ

ಅರ್ಧಕಾಯಂ ಮಹಾವೀರ್ಯಂ ಚನ್ದ್ರಾದಿತ್ಯ ವಿಮರ್ಧನಮ್

ಸಿಂಹಿಕಾ-ಗರ್ಭ ಸಂಭೂತಂ ತಾಂ ರಾಹುಂ ಪ್ರಣಮಾಮ್ಯಹಂ

ಅರ್ಥ

ಅರ್ಧ ದೇಹವುಳ್ಳವನು, ಶೌರ್ಯದಿಂದ ತುಂಬಿರುವವನು (ಆಧಿಪತ್ಯವನ್ನು ಸೂಚಿಸುತ್ತದೆ), ಸೂರ್ಯ ಮತ್ತು ಚಂದ್ರರನ್ನು ತಡೆಯುವ ಮತ್ತು ವಿರೋಧಿಸುವವನು.

ಸಿಂಹಿಕಾ (ಹಿರಣ್ಯ ಕಶಿಪನ ಸಹೋದರಿ) ಯ ಮಗನಾಗಿ ಜನಿಸಿದ, ರಾಹು ಸ್ವಾಮಿಯಾದ ನಿನ್ನ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ.

ಕೇತು ಸ್ವಾಮಿ ನವಗ್ರಹ ಸ್ತೋತ್ರ

ಕೇತು ಸ್ವಾಮಿ ನವಗ್ರಹ ಸ್ತೋತ್ರ

ಪಲಾಶ ಪುಷ್ಪ ಸಂಕಾಸಂ ತಾರಕಾಗ್ರಹ ಮಸ್ತಕಮ್ ॥

ರೌದ್ರಂ ರೌದ್ರಾತ್ಮಕಂ ಘೋರಂ ತಂ ಕೇತುಂ ಪ್ರಣಮಾಮ್ಯಹಂ

ಅರ್ಥ

ನಕ್ಷತ್ರಗಳು ಮತ್ತು ಗ್ರಹಗಳಿಗೆ ತಲೆಯಂತೆ ವರ್ತಿಸುವ ಪಲಾಶ ಹೂವುಗಳ ಬಣ್ಣದಲ್ಲಿ (‘ಕಾಡಿನ ಜ್ವಾಲೆ' ಮರದ ಹೂವುಗಳು) ಹೊಳೆಯುತ್ತದೆ.

ಯಾರು ಕ್ರೋಧಗೊಂಡಿದ್ದಾರೆ, ಕೋಪದ ಅಂಶಗಳಿಂದ ತುಂಬಿದ್ದಾರೆ, ಭಯಾನಕ (ದುಷ್ಟ ಜನರಿಗೆ), ಓ ಕರ್ತನೇ ಕೇತು ನಾನು ನಿನ್ನ ಮುಂದೆ ನಮಸ್ಕರಿಸುತ್ತೇನೆ.

ನವಗ್ರಹ ಸ್ತೋತ್ರವನ್ನು ಪಠಿಸುವುದರಿಂದ ಆಗುವ ಪ್ರಯೋಜನಗಳು

ನವಗ್ರಹ ಸ್ತೋತ್ರವನ್ನು ಪಠಿಸುವುದರಿಂದ ಆಗುವ ಪ್ರಯೋಜನಗಳು

* ಇತಿ ವ್ಯಾಸ ಮುಖೋದ್-ಗೀತಂ ಯಃ ಪಠೇತ್-ಸುಸಮಾಹಿತಃ

ದಿವಾ ವಾ ಯದಿ ವಾ ರಾತ್ರೌ ವಿಘ್ನ ಸನ್ತಿರ್ ಭವಿಷ್ಯತಿ

ವ್ಯಾಸರು ಬರೆದಿರುವ ಈ ಸ್ತೋತ್ರವನ್ನು ಪಠಿಸುವುದರಿಂದ ಸಾರ್ವಭೌಮತ್ವವು ಲಭಿಸುತ್ತದೆ ಮತ್ತು ಅವರು ಶಕ್ತಿಶಾಲಿಯಾಗುತ್ತಾರೆ.

ಅಲ್ಲದೆ, ಹಗಲು ಅಥವಾ ರಾತ್ರಿಯಲ್ಲಿ ಸಂಭವಿಸುವ ಅಡೆತಡೆಗಳು ಅಥವಾ ತೊಂದರೆಗಳಲ್ಲಿ ಅವರು ಯಶಸ್ವಿಯಾಗುತ್ತಾರೆ.

ನವಗ್ರಹ ಸ್ತೋತ್ರವನ್ನು ಪಠಿಸುವುದರಿಂದ ಆಗುವ ಪ್ರಯೋಜನಗಳು

ನವಗ್ರಹ ಸ್ತೋತ್ರವನ್ನು ಪಠಿಸುವುದರಿಂದ ಆಗುವ ಪ್ರಯೋಜನಗಳು

* ನರನಾರೀ ನೃಪಣಂ ಚ ಭವೇದ್ದುಃ ಸ್ವಪ್ನ ನಾಶನಮ್॥

ಐಶ್ವರ್ಯಾ ಮಾತುಲಂ ತೇಷಾಮಾರೋಗ್ಯಂ ಪುಷ್ಟಿವರ್ಧನಮ್

ಅರ್ಥ

ಈ ಸ್ತೋತ್ರವನ್ನು ಪಠಿಸುವ ಪುರುಷರು, ಮಹಿಳೆಯರು ಅಥವಾ ರಾಜರು ಕೆಟ್ಟ ಕನಸುಗಳ ಪರಿಣಾಮಗಳಿಂದ ಪಾರಾಗುತ್ತಾರೆ.

ಅಪ್ರತಿಮ ಸಂಪತ್ತು, ಉತ್ತಮ ಆರೋಗ್ಯ ಮತ್ತು ಪೋಷಣೆಯೊಂದಿಗೆ ಅವರಿಗೆ ನೀಡಲಾಗುವುದು.

ನವಗ್ರಹ ಸ್ತೋತ್ರವನ್ನು ಪಠಿಸುವುದರಿಂದ ಆಗುವ ಪ್ರಯೋಜನಗಳು

ನವಗ್ರಹ ಸ್ತೋತ್ರವನ್ನು ಪಠಿಸುವುದರಿಂದ ಆಗುವ ಪ್ರಯೋಜನಗಳು

* ಗ್ರಹ-ನಕ್ಷತ್ರಜಃ ಪೀಡಾಃ ತಸ್ಕರಾಗ್ನಿ ಸಮುದ್ಭವಃ

ತಾಃ ಸರ್ವಾಃ ಪ್ರಸಮಂ ಯಮತಿ ವ್ಯಾಸೋ ಬ್ರೂತೇ ನ ಸಂಶಯಃ॥

ಅರ್ಥ

ಜಪ ಮಾಡುವವರು ಗ್ರಹಗಳು ಮತ್ತು ನಕ್ಷತ್ರಗಳಿಂದ ಉಂಟಾಗುವ ತೊಂದರೆಗಳಿಂದ ಮತ್ತು ಕಳ್ಳರು ಅಥವಾ ಬೆಂಕಿಯ ತೊಂದರೆಗಳಿಂದ ಕೂಡ ರಕ್ಷಿಸಲ್ಪಡುತ್ತಾರೆ.

ವ್ಯಾಸರ ಈ ಸಂಪೂರ್ಣ ಮಾತುಗಳ ಬಗ್ಗೆ ಯಾವುದೇ ಸಂದೇಹ ಇರಬಾರದು.

* ಇತಿ ಶ್ರೀ ವ್ಯಾಸ ವಿರಚಿತಂ ನವಗ್ರಹ ಸ್ತೋತ್ರಂ ಸಂಪೂರ್ಣಮ್॥

ಶ್ರೀ ವ್ಯಾಸರು ರಚಿಸಿದ ನವಗ್ರಹ ಸ್ತೋತ್ರ (ನವಗ್ರಹಗಳ ಸ್ತುತಿ ಸ್ತೋತ್ರಗಳು) ಕೊನೆಗೊಳ್ಳುತ್ತದೆ.

English summary

Navagraha Stotram in Kannada: Know Lyrics, Meaning, and Benefits of Chanting

Navagraha Stotram in Telugu/Tamil/Hindi/Kannada: Navagraha stotram is to praise the Navagrahas as per the Hindu theology. Know Lyrics, Meaning, and Benefits of Chanting. Read more.
X
Desktop Bottom Promotion