For Quick Alerts
ALLOW NOTIFICATIONS  
For Daily Alerts

ನಾಗಪಂಚಮಿ 2021: ರಾಶಿಚಕ್ರದ ಪ್ರಕಾರ ನಾಗಪಂಚಮಿಯಂದು ಹೇಗೆ ಪೂಜಿಸಬೇಕು

|

ಭಾರತದಾದ್ಯಂತ ಶ್ರದ್ಧಾ ಭಕ್ತಿಯಿಂದ ಮಾಡುವ ನಾಗ ಪಂಚಮಿ 2021ನೇ ಸಾಲಿನಲ್ಲಿ ಆಗಸ್ಟ್‌ 13ರಂದು ಆಚರಿಸಲಾಗುತ್ತಿದೆ. ಸಂತೋಷ, ಸಮೃದ್ಧಿ, ಉತ್ತಮ ಆರೋಗ್ಯ, ಸಂತಾನ ಪ್ರಾಪ್ತಿ ಸೇರಿದಂತೆ ಸಮೃದ್ಧ ಜೀವನ, ಕುಟುಂಬದ ಒಳಿತಿಗಾಗಿ ಶ್ರಾವಣ ಶುಕ್ಲ ಪಕ್ಷದಲ್ಲಿ ಬರುವ ನಾಗಪಂಚಮಿಯಂದು ನಾಗದೇವರನ್ನು ಪೂಜಿಸುವುದು ಸಂಪ್ರದಾಯ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ರಾವಣಮಾಸ ಶುಕ್ಲ ಪಕ್ಷದ ಪಂಚಮಿಯಂದು ನಾಗದೇವರನ್ನು ಪೂಜಿಸಿದರೆ ಕಾಳಸರ್ಪ ದೋಷ, ವಿಷ ದೋಷ, ಕೇತು ದೋಷ, ಪಿತೃ ದೋಷ, ಮದುವೆಯ ಸಮಸ್ಯೆಯ ಪರಿಹರಕ್ಕಾಗಿ, ರಾಹುಗಳಿಂದ ಉಂಟಾಗುವ ಸಮಸ್ಯೆಗಳ ಪರಿಹಾರವನ್ನು ಪಡೆಯಬಹುದು. ಆದ್ದರಿಂದ ಈ ವಿಶೇಷ ದಿನ ಎಲ್ಲರೂ ನಾಗ ದೇವರನ್ನು ಆರಾಧಿಸುತ್ತಾರೆ.

ನಮ್ಮ ಜಾತಕದಲ್ಲಿ ಅಥವಾ ನಮಗೆ ಸರ್ಪದೋಷವಿದ್ದರೆ ನಾಗ ಪಂಚಮಿಯಂದು ಇದನ್ನು ಸುಲಭವಾಗಿ ತೊಡೆದುಹಾಕಲು ಸಾಧ್ಯವಿದೆ. ನಿಮ್ಮ ರಾಶಿಚಕ್ರದ ಪ್ರಕಾರ ನಾಗಂಚಮಿಯಂದು ನಾಗದೇವತೆಯನ್ನು ಹೇಗೆ ಆರಾಧಿಸಬೇಕು, ಏನನ್ನು ಅರ್ಪಿಸಬೇಕು ಎಂಬ ಮಾಹಿತಿಯನ್ನು ನೀಡಲಿದ್ದೇವೆ:

ರಾಶಿಚಕ್ರ ಚಿಹ್ನೆಗಳ ಪ್ರಕಾರ ನಾಗದೇವರನ್ನು ಪೂಜಿಸಲು ಕೆಲವು ಪ್ರಮುಖ ಸಲಹೆಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಪೂಜೆಯನ್ನು ಮನಃಪೂರ್ವಕವಾಗಿ ಮಾಡಿದರೆ ನಿಸ್ಸಂದೇಹವಾಗಿ ಯಶಸ್ಸು ನಿಮ್ಮದಾಗುತ್ತದೆ.

ಮೇಷ ಮತ್ತು ವೃಶ್ಚಿಕ ರಾಶಿ

ಮೇಷ ಮತ್ತು ವೃಶ್ಚಿಕ ರಾಶಿ

ಮೇಷ ಮತ್ತು ವೃಶ್ಚಿಕ ರಾಶಿಚಕ್ರದ ಅಧಿಪತಿ ಮಂಗಳ ಗ್ರಹ. ಈ ರಾಶಿಚಕ್ರದವರು ನಾಗ ದೇವತೆಯನ್ನು ದಕ್ಷಿಣ ದಿಕ್ಕಿನಲ್ಲಿ ಇಟ್ಟು ಕೆಂಪು ಹೂವುಗಳು ಹಾಗೂ ದೇವರಿಗೆ ಇಷ್ಟವಾದ ಫಲ, ತಿಂಡಿಗಳ ಮೂಲಕ ಪೂಜಿಸಿದರೆ ಅವರಿಗೆ ಹೆಚ್ಚು ಲಾಭವಾಗುತ್ತದೆ. ಭಕ್ತರು ಪೂಜಿಸುವ ವೇಳೆ ಗಣೇಶ ಸ್ತೋತ್ರ ಮತ್ತು ಸರ್ಪ ಸ್ತ್ರೋತ್ರಗಳನ್ನು ಪಠಿಸಿದರೆ ಒಳ್ಳೆಯದು.

ವೃಷಭ ಮತ್ತು ತುಲಾ ರಾಶಿ

ವೃಷಭ ಮತ್ತು ತುಲಾ ರಾಶಿ

ವೃಷಭ ಮತ್ತು ತುಲಾ ರಾಶಿಯ ಯಜಮಾನ ಶುಕ್ರ. ಈ ರಾಶಿಯವರು ಉತ್ತರ ದಿಕ್ಕಿಗೆ ಮುಖ ಮಾಡಿ ನಾಗದೇವತೆಗೆ ಬಿಳಿ ಹೂವುಗಳು ಮತ್ತು ಶ್ರೀಗಂಧವನ್ನು ಹಚ್ಚಿ ಪೂಜಿಸಿದರೆ ಒಳ್ಳೆಯದು. ಅಲ್ಲದೇ ಪೂಜಿಸುವ ವೇಳೆ ನಾಗಸ್ತ್ರೋತ್ರ ಮತ್ತು ಗಣೇಶ ಚಾಲೀಸವನ್ನು ಪಠಿಸಿದರೆ ಶುಭ ಫಲ ನಿಮ್ಮದಾಗುತ್ತದೆ.

ಮಿಥುನ ಮತ್ತು ಕನ್ಯಾ ರಾಶಿ

ಮಿಥುನ ಮತ್ತು ಕನ್ಯಾ ರಾಶಿ

ಮಿಥುನ ಮತ್ತು ಕನ್ಯಾ ರಾಶಿಯನ್ನು ಆಳುವ ಗ್ರಹ ಬುಧ. ಈ ರಾಶಿಯ ಭಕ್ತರು ಈಶಾನ್ಯ ದಿಕ್ಕಿಗೆ ಮುಖ ಮಾಡಿ ಪೂಜೆ ಮಾಡುವುದು ಒಳ್ಳೆಯದು. ಪೂಜೆಯ ವೇಳೆ ಬಿಲ್ಪತ್ರೆ ಮತ್ತು ಕಬ್ಬಿನ ಹಾಲನ್ನು ಬಳಸಿ ಪೂಜೆ ಆರಭಿಸಿ. ಗಣೇಶ ಕವಚವನ್ನು ಪಠಿಸಿದರೆ ನಿಮ್ಮ ಅಪೇಕ್ಷೆಗಳು ಈಡೇರುತ್ತದೆ.

ಕರ್ಕ ರಾಶಿ

ಕರ್ಕ ರಾಶಿ

ಕರ್ಕ ರಾಶಿಯ ಅಧಿಪತಿ ಚಂದ್ರ. ಕರ್ಕ ರಾಶಿಯವರು ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಪೂಜೆ ಮಾಡುವುದು ಒಳ್ಳೆಯದು. ಮೊಸರು ಮತ್ತು ಬಿಳಿ ಹೂವುಗಳನ್ನು ನಾಗದೇವತೆಗೆ ಅರ್ಪಿಸಿ ಗಣೇಶ ಅಥರ್ವಶೀರ್ಷ ಪಠಿಸಿ ಭಕ್ತಿಯಿಂದ ಪೂಜಿಸಿ.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯ ಯಜಮಾನ ಸೂರ್ಯ. ಸಿಂಹ ರಾಶಿಯವರು ಪೂರ್ವ ದಿಕ್ಕಿನಲ್ಲಿ ಪೂಜಿಸಿ. ಕೆಂಪು ಹೂವುಗಳು ಮತ್ತು ಕೇಸರಿಯನ್ನು ನೀಡಿ ಸರ್ಪವನ್ನು ಪೂಜಿಸಿ. ಸಮೃದ್ಧಿಗಾಗಿ ದೇವರಿಗೆ ಇಷ್ಟವಾದ ಖಾದ್ಯಗಳನ್ನು ಪುಜೆಗೆ ಇಟ್ಟು ನಾಗ ಸ್ಟ್ರೋತ್ರವನ್ನು ಪಠಿಸಿ.

ಧನು ಮತ್ತು ಮೀನ ರಾಶಿ

ಧನು ಮತ್ತು ಮೀನ ರಾಶಿ

ಧನು ಮತ್ತು ಮೀನ ರಾಶಿಯನ್ನುಆಳುವ ಗ್ರಹ ಗುರು. ಪೂರ್ವ-ಉತ್ತರ ದಿಕ್ಕಿಗೆ ಮುಖ ಮಾಡಿ ಪೂಜೆ ಮಾಡುವುದು ಒಳ್ಳೆಯದು. ಹಳದಿ ಹೂವು ಮತ್ತು ಹಳದಿ ವಸ್ತುಗಳನ್ನು ಬಳಸಿ ಪೂಜೆ ಮಾಡಿದರೆ ಶುಭವಾಗುತ್ತದೆ. ಸುಗಮ ಜೀವನಕ್ಕಾಗಿ ಗಣೇಶ ಅಷ್ಟಕ ಪಠಿಸಿ ಮತ್ತು ನಾಗ ಸಹಸ್ರನಾಮಾವಳಿ ಪಠಿಸಿ.

ಮಕರ ಮತ್ತು ಕುಂಭ ರಾಶಿ

ಮಕರ ಮತ್ತು ಕುಂಭ ರಾಶಿ

ಮಕರ ಮತ್ತು ಕುಂಭ ರಾಶಿಯ ಅಧಿಪತಿ ಶನಿ. ಈ ರಾಶಿಯವರು ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಪೂಜೆ ಮಾಡುವುದು ಒಳ್ಳೆಯದು. ಉತ್ತಮ ಜೀವನ ಮತ್ತು ಸಮೃದ್ಧಿಗಾಗಿ ನೀಲಿ ಹೂವುಗಳನ್ನು ಬಳಸಿ.

English summary

Nag Panchami 2021: How To Worship On Nag Panchami as per Your Zodiac Sign in Kannada

Here we are discussing about Nag Panchami 2021: How To Worship On Nag Panchmi as per Your Zodiac Signs in Kannada. Read more.
X
Desktop Bottom Promotion