For Quick Alerts
ALLOW NOTIFICATIONS  
For Daily Alerts

ಸೆ. 2ಕ್ಕೆ ಕನ್ಯಾ ರಾಶಿಗೆ ಬುಧನ ಸಂಚಾರ: ಯಾವೆಲ್ಲಾ ರಾಶಿಗಳಿಗೆ ತುಂಬಾ ಒಳ್ಳೆಯದು

|

ಗ್ರಹಗಳ ಸ್ಥಾನದ ದೃಷ್ಟಿಯಿಂದ ನೋಡುವುದಾದರೆ ಈ ತಿಂಗಳು ತುಂಬಾ ವಿಶೇಷವಾಗಿದೆ. ಸೆಪ್ಟೆಂಬರ್‌ 2ರಂದು 12 ಗಂಟೆ 3 ನಿಮಿಷಕ್ಕೆ ಬುಧ ಸಂಚಾರ ಸಿಂಹ ರಾಶಿಯಿಂದ ಕನ್ಯಾರಾಶಿಗೆ ಆಗಲಿದೆ ಹಾಗೂ ಸೆಪ್ಟೆಂಬರ್ 22ರಂದು ಸಂಜೆ 4 ಗಂಟೆ 55 ನಿಮಿಷಕ್ಕೆ ತುಲಾರಾಶಿಗೆ ಸಂಚರಿಸಲಿದೆ.

ಜ್ಯೋತಿಷ್ಯದಲ್ಲಿ ಬುಧನನ್ನು ಬುದ್ಧಿಯ ಗ್ರಹವೆಂದು ಹೇಳಲಾಗುತ್ತದೆ. ಬುಧ ಬಲವಾದ ಸ್ಥಾನದಲ್ಲಿದ್ದರೆ ವ್ಯಕ್ತಿಗೆ ತಾರ್ಕಿಕ ಸಾಮಾರ್ಥ್ಯ ಹಾಗೂ ಮಧುರ ಧ್ವನಿಯನ್ನು ಒದಗಿಸುತ್ತದೆ, ಅದೇ ದುರ್ಬಲ ಸ್ಥಾನದಲ್ಲಿದ್ದರೆ ತಾರ್ಕಿಕ ಸಾಮಾರ್ಥ್ಯ ಹದಗೆಡುವುದು ಹಾಗೂ ಚರ್ಮಕ್ಕೆ ಸಂಬಂಧಿಸಿದ ರೋಗಗಳು ಬರುವುದು. ಈ ಸಮಸ್ಯೆಯನ್ನು ನಿವಾರಿಸಲೂ ವೈದಿಕ ಶಾಸ್ತ್ರದಲ್ಲಿ ಪರಿಹಾರವಿದೆ.

ಜ್ಯೋತಿಷ್ಯ ಪ್ರಕಾರ ಬುಧನ ಕನ್ಯಾರಾಶಿಯ ಸಂಚರದಿಂದ ಯಾವ ರಾಶಿಗೆ ಯಾವ ಯೋಗವಿದೆ ಎಂದು ನೋಡೋಣ:

 ಮೇಷ ರಾಶಿ:

ಮೇಷ ರಾಶಿ:

ಬುಧಗ್ರಹವು ಮೇಷರಾಶಿಯಲ್ಲಿ ಆರನೇ ಮನೆಗೆ ಸಂಚಾರ ಮಾಡಲಿದೆ. ಆರನೇ ಮನೆಯನ್ನು ನಿಮ್ಮ ಶತ್ರುಗಳು, ಸಾಲ, ವಿವಾದ ಇತ್ಯಾದಿಯ ಬಗ್ಗೆ ಪರಿಗಣಿಸಲಾಗುತ್ತದೆ. ಉದ್ಯೋಗದಲ್ಲಿರುವವರಿಗೆ ಈ ಸಂಚಾರ ಉತ್ತಮವಾಗಿದೆ. ನಿಮಗೆ ಉದ್ಯೋಗ ಬಡ್ತಿ ಹಾಗೂ ಬೇರೆ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ಉತ್ತಮ ಫಲ ಸಿಗಲಿದೆ. ನೀವು ನಿಮ್ಮ ಕೆಲಸದ ಕೌಶಲ್ಯ ಹೆಚ್ಚಿಸಲು ಪ್ರಯತ್ನಪಟ್ಟಷ್ಟೂ ವೃತ್ತಿಯಲ್ಲಿ ಪ್ರಗತಿ ಕಾಣಬಹುದು.

ನೀವು ವ್ಯಾಪಾರಸ್ಥರಾದರೆ ಸಾಲ ತೆಗೆದುಕೊಳ್ಳಲು ಹೋಗದಿರುವುದು ಒಳ್ಳೆಯದು. ಇನ್ನು ಹೂಡಿಕೆ., ವ್ಯಾಪಾರ ವಿಸ್ತರಣೆಗೆ ಪ್ರಯತ್ನಿಸುವುದಕ್ಕಿಂತ ಇರುವ ವ್ಯಾಪಾರವನ್ನು ಬಲಪಡಿಸುವತ್ತ ಶ್ರಮಿಸುವುದು ಒಳ್ಳೆಯದು.

ಈ ಮೇಷರಾಶಿಯವರೇ ಆರೋಗ್ಯದ ಕಡೆ ಗಮನ ನೀಡಿ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಕಾಡಬಹುದು

ಪರಿಹಾರ: ಬಡವರಿಗೆ ಆಹಾರ ದಾನ ಮಾಡಿ.

ವೃಷಭ ರಾಶಿ

ವೃಷಭ ರಾಶಿ

ಬುಧ ಗ್ರಹವು ವೃಷಭ ರಾಶಿಯಲ್ಲಿ ಐದನೇ ಮನೆಗೆ ಸಂಚರಿಸಲಿದೆ. ವಿದ್ಯಾರ್ಥಿಗಳಿಗೆ ತುಂಬಾ ಒಳ್ಳೆಯ ಸಮಯವಾಗಿದೆ. ಉನ್ನತ ಶಿಕ್ಷಣಕ್ಕೆ ಅವಕಾಶ ದೊರೆಯಲಿದೆ. ಇನ್ನು ಪ್ರೇಮಿಗಳಿಗೂ ಬುಧ ಸಂಚಾರದಿಂದ ಒಳ್ಳೆಯದೇ ಆಗಲಿದೆ.ನಿಮ್ಮ ಪ್ರೀತಿಯ ವ್ಯಕ್ತಿಯ ಜೊತೆ ಹೆಚ್ಚಿನ ಸಮಯ ಕಳೆಯಬಹುದು.ಕೆಲವೊಂದು ತರ್ಕಗಳು ಬರಬಹುದು, ನಿಮ್ಮ ಮಾತುಗಳಿಂದ ಅವರಿಗೆ ನೋವಾಗದಂತೆ ಎಚ್ಚರವಹಿಸಿ .

ಕೆಲಸವನ್ನು ನೀವು ಶ್ರದ್ಧೆಯಿಂದ ಮಾಡಬೇಕು. ನೀವು ಈ ಸಂಚಾರದ ಸಮಯದಲ್ಲಿ ಹೊಸ ವಿಷಯವನ್ನು ಕಲಿತು ಕೊಳ್ಳುವಿರಿ. ಇದು ನಿಮ್ಮ ಕೆಲಸದ ಸಾಮರ್ಥ್ಯ ಮತ್ತಷ್ಟು ಹೆಚ್ಚಿಸಲು ಸಹಕಾರಿಯಾಗಲಿದೆ.

ಪರಿಹಾರ - ಶುಭ ಫಲಿತಾಂಶಕ್ಕಾಗಿ ಸಹೋದರಿ ಅಥವಾ ಅತ್ತೆಗೆ ಉಡುಗೊರೆ ನೀಡಿ.

ಮಿಥುನ ರಾಶಿ

ಮಿಥುನ ರಾಶಿ

ಮಿಥುನರಾಶಿಯಲ್ಲಿ ಬುಧನು ನಾಲ್ಕನೇ ಮನೆಗೆ ಸಂಚರಿಸಲಿದ್ದಾನೆ. ಈ ಮನೆಯ ಮೂಲಕ ನಿಮ್ಮ ತಾಯಿ, ಸಂತೋಷ-ಸಂಪನ್ಮೂಲಗಳು ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುವುದು. ಈ ಬುಧ ಸಂಚಾರದಿಂದ ಮಿಥುನ ರಾಶಿಯವರಿಗೆ ಒಳಿತಾಗಲಿದೆ. ಇನ್ನು ಮನಸ್ಸಿನ ನೆಮ್ಮದಿಗಾಗಿ ನಿಮಗೆ ಖುಷಿ ಕೊಡುವ ಸಂಗೀತ ಅಥವಾ ಓದು ಇವುಗಳಲ್ಲಿ ತೊಡಗಿಸಿಕೊಳ್ಳುವುದು ಒಳ್ಳೆಯದು.

ಇನ್ನು ನೀವು ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಚಿಂತಿಸುತ್ತಿದ್ದರೆ ತಾಯಿ ಚೇತರಿಸಿಕೊಳ್ಳಲಿದ್ದಾರೆ. ಈ ರಾಶಿ ಚಕ್ರದಲ್ಲಿ ಕೆಲವರು ಆಸ್ತಿ ಅಥವಾ ವಾಹನ ಖರೀದಿಸುವ ಸಾಧ್ಯತೆ ಇದೆ. ಇನ್ನು ಆಸ್ತಿ ಮಾರಾಟ ಮಾಡ ಬಯಸುವವರಿಗೆ ಲಾಭದಲ್ಲಿ ಮಾರಲು ಇದು ಸೂಕ್ತ ಸಮಯವಾಗಿದೆ. ಇನ್ನು ಈ ರಾಶಿಯ ವಿದ್ಯಾರ್ಥಿಗಳಿಗೂ ಒಳ್ಳೆಯದು, ಕಠಿಣ ವಿಷಯವನ್ನು ಸುಲಭದಲ್ಲಿ ಅರಿತುಕೊಳ್ಳುವಿರಿ.

ಇನ್ನು ಉತ್ತಮ ವ್ಯಕ್ತಿಗಳನ್ನು ಭೇಟಿಯಾಗುವ ಸಾಧ್ಯತೆ ಇರುವುದರಿಂದ ಒಳ್ಳೆಯದನ್ನು ಕಲಿಯುತ್ತೀರಿ.

ಪರಿಹಾರ - ಬುಧವಾರದಂದು ಮಂಗಳಮುಖಿಯರ ಆಶೀರ್ವಾದ ಪಡೆಯಿರಿ.

ಕರ್ಕ ರಾಶಿ

ಕರ್ಕ ರಾಶಿ

ಕರ್ಕರಾಶಿಯಲ್ಲಿ ಬುಧನು ಮೂರನೇ ಮನೆಗೆ ಸಂಚರಿಸಲಿದ್ದಾನೆ. ಈ ಮನೆಯು ಪರಾಕ್ರಮ, ಧೈರ್ಯ, ಕಿರಿಯ ಸಹೋದರ ಸಹೋದರಿಯರು ಇತ್ಯಾದಿಗಳ ಬಗ್ಗೆ ಹೇಳುವುದು ಕರ್ಕರಾಶಿಯವರ ಸಂವಹನ ಕೌಶಲ್ಯ ಹೆಚ್ಚಲಿದೆ. ನಿಮ್ಮ ಧ್ವನಿಯೇ ನಿಮ್ಮ ಶಕ್ತಿಯಾಗಲಿದೆ. ಇನ್ನು ಸಾಮಾಜಿಕ ಮಾಧ್ಯಮದ ಮೂಲಕ ನಿಮ್ಮ ಸ್ಥಾನಮಾನ ಮತ್ತಷ್ಟು ಹೆಚ್ಚುವುದು. ಇನ್ನು ದೂರದ ಪ್ರಯಾಣ ಲಾಭದಾಯಕವಾಗಿದೆ ಹಾಗೂ ನಿಮ್ಮ ಮನೋಬಲವು ಹೆಚ್ಚುವುದು.

ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಹೆಚ್ಚಿನ ತೊಂದರೆಯೇನು ಇಲ್ಲ, ಆದರೆ ದೂಳಿನ ಕಡೆ ಹೆಚ್ಚು ಹೋಗದಂತೆ ಎಚ್ಚರವಹಿಸಿ.

ಪರಿಹಾರ - ಬುಧವಾರ ಶ್ರೀವಿಷ್ಣುವಿನ ಪೂಜೆ ಮಾಡಿ.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯಲ್ಲಿ ಬುಧನು ಎರಡನೇ ಮನೆಗೆ ಪ್ರವೇಶಿಸಲಿದ್ದಾನೆ.ಇದು ನಿಮ್ಮ ಧ್ವನಿ, ಹಣ,, ಕುಟುಂಬ ಇತ್ಯಾದಿಗಳ ಮನೆಯಾಗಿದೆ. ಬುಧ ಸಂಚಾರದ ಸಮಯದಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚುವುದು ಹಾಗೂ ನೀವು ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯುವಿರಿ. ಮನೆಯಲ್ಲಿ ಏನಾದರೂ ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ ಅದನ್ನು ಮಾತಿನ ಮೂಲಕ ಪರಿಹರಿಸಬಹುದು.

ಇನ್ನು ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ರಾಶಿಯವರು ತುಂಬಾ ಎಚ್ಚರವಾಗಿರಬೇಕು. ಖರ್ಚಿಗೆ ಕಡಿವಾಣ ಹಾಕುವುದು ಒಳ್ಳೆಯದು. ಇನ್ನು ಉದ್ಯೋಗದಲ್ಲಿ ಇರುವವರಿಗೆ ಹಾಗೂ ವ್ಯಾಪಾರಸ್ಥರಿಗೆ ಪ್ರಗತಿ ಉಂಟಾಗಲಿದೆ. ಸ್ವಲ್ಪ ಪ್ರಯತ್ನ ಪಟ್ಟರೂ ಹೆಚ್ಚು ಲಾಭ ಗಳಿಸಬಹುದು.

ಇನ್ನು ದಾಂಪತ್ಯ ಜೀವನ ಮತ್ತಷ್ಟು ಗಟ್ಟಿಯಾಗಲು ಪ್ರಯತ್ನಿಸಬೇಕು.

ಪರಿಹಾರ - ಬಡವರಿಗೆ ದಾನ ಮಾಡಿ.

ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಗೆ ಬುಧನ ಸಂಚಾರವಾಗಲಿದೆ, ಈ ಮನೆ ಅರೋಗ್ಯ, ವ್ಯಕ್ತಿತ್ವ, ಬುದ್ಧಿ, ವರ್ತನೆ ಇತ್ಯಾದಿಯ ಮನೆಯಾಗಿದೆ. ಬುಧ ಗ್ರಹ ಈ ರಾಶಿಯವರ ಅಧಿಪತಿಯಾಗಿರುವುದರಿಂದ ಈ ಸಂಚಾರದಿಂದಾಗಿ ಉದ್ಯಮಿಗಳಿಗೆ ಯಶಸ್ಸು ದೊರೆಯಲಿದೆ. ನಿಮ್ಮ ವ್ಯವಹಾರ ಪ್ರಜ್ಞೆಯೂ ಹೆಚ್ಚಾಗಲಿದೆ, ನಷ್ಟ, ಹಾನಿ ಉಂಟಾಗದಂತೆ ಜಾಗ್ರತರಾಗುವಿರಿ.

ಕನ್ಯಾರಾಶಿಯವರಿಗೆ ಬುಧನ ಸಂಚಾರದಿಂದಾಗಿ ಜೀವನ ಖುಷಿಯಾಗಿರುವುದು. ನಿಮ್ಮ ವರ್ತನೆಯನ್ನು ಮನೆಯವರು ಹಾಗೂ ಜನರು ಮೆಚ್ಚಿಕೊಳ್ಳುತ್ತಾರೆ. ಇನ್ನೂ ಆರೋಗ್ಯ ಬಗ್ಗೆಯೂ ಚಿಂತೆ ಮಾಡಬೇಕಾಗಿಲ್ಲ. ನೀವು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವನೆ, ವ್ಯಾಯಾಮ ಮಾಡಿದರೆ ಸಾಕು ಯಾವುದೇ ಕಾಯಿಲೆಯ ಕಾಟವಿಲ್ಲದೆ ಇರಬಹುದು.

ಯಾವುದೇ ಹೊಸ ಕೆಲಸ ಮಾಡುವ ಜಾಗ್ರತೆ, ಏಕೆಂದರೆ ಹೊಸ ಸವಾಲಿನಲ್ಲಿ ಸಿಲುಕಿಕೊಳ್ಳಬಹುದು. ಮಾಡುವ ಕೆಲಸದ ಕಡೆ ಹೆಚ್ಚಿನ ಗಮನ ನೀಡಿದರೆ ಸಾಕು.

ಪರಿಹಾರ - ಬುಧವಾರ ಶ್ರೀ ದುರ್ಗಾ ಮಾತೆಯ ಸಪ್ತಶತಿಯನ್ನು ಪಠಿಸಿ

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯವರಲ್ಲಿ ಬುಧನು ಹನ್ನೆರಡನೇ ಮನೆಗೆ ಸಂಚರಿಸಲಿದ್ದಾನೆ. ಹನ್ನೆರಡನೇ ಮನೆ ಹಾನಿ, ವೆಚ್ಚ ಇತ್ಯಾದಿಗಳ ಅಂಶವಾಗಿದೆ. ಆದ್ದರಿಂದ ಈ ರಾಶಿಯವರು ಸ್ವಲ್ಪ ಜಾಗೂರೂಕತೆಯಿಂದ ಇರಬೇಕು. ಕೆಲವೊಂದು ಸಮಸ್ಯೆಗಳು ಎದುರಾಗಬಹುದು, ಇದು ನಿಮ್ಮ ನಿರ್ಧಾರ ಸಾಮಾರ್ಥ್ಯದ ಮೇಲೆ ಬಾಧಿಸಬಹುದು. ಯಾವುದೇ ವಿಷಯದಲ್ಲಿ ಆದರೂ ತುಂಬಾ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಧಾರ್ಮಿಕ ಚಟುವಟಿಕೆಯಲ್ಲಿ ಭಾಗವಹಿಸುವುದು, ದೇವರ ಕಾರ್ಯಗಳಲ್ಲಿ ಭಾಗಿಯಾಗುವುದು ಮಾಡಿದರೆ ಒಳಿತಾಗುವುದು. ಇನ್ನು ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಖರ್ಚುಗಳು ಸ್ವಲ್ಪ ಅಧಿಕವಾಗಬಹುದು, ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಆದಷ್ಟೂ ಮಿತ ಖರ್ಚು ಮಾಡಿ.

ಇನ್ನು ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಆರೋಗ್ಯದ ಕಡೆ ಗಮನ ನೀಡಬೇಕು, ಹಳೆಯ ಕಾಯಿಲೆ ಮತ್ತೆ ಬರಬಹುದು. ನಿಮ್ಮಲ್ಲಿನ ನಕಾರಾತ್ಮಕ ಚಿಂತನೆ ಹೊರಗಿಡಿ, ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿ.

ಪರಿಹಾರ - ಗೋ ಸೇವೆ ಮಾಡಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಬುಧನು ವೃಶ್ಚಿಕ ರಾಶಿಯಲ್ಲಿ ಹನ್ನೊಂದನೇ ಮನೆಗೆ ಸಂಚಾರ ಮಾಡಲಿದ್ದಾನೆ. ಈ ಮನೆಯನ್ನು ಲಾಭದ ಮನೆಯೆಂದು ಎಂದು ಪರಿಗಣಿಸಲಾಗುತ್ತದೆ ಹಾಗೂ ಒಡ ಹುಟ್ಟದವರು ಹಾಗೂ ಸ್ನೇಹಿತರು ಇವುಗಳನ್ನು ಕೂಡ ಪರಿಗಣಿಸಲಾಗುತ್ತದೆ . ಈ ಸಂಚಾರದಿಂದಾಗಿ ವೃತ್ತಿ ಜೀವನದಲ್ಲಿ ಲಾಭ ಉಂಟಾಗಲಿದೆ. ಆದರೆ ಶಕ್ತಿ ಮೀರಿ ಕೆಲಸ ಮಾಡಲು ಹೋಗಬೇಡಿ, ನಿಮಗೆ ಎಷ್ಟು ಸಾಧ್ಯವೋ ಅಷ್ಟೇ ಮಾಡಿ, ಇಲ್ಲದಿದ್ದರೆ ತೊಂದರೆಗೆ ಸಿಲುಕಿಕೊಳ್ಳಬಹುದು.

ಇನ್ನು ಕುಟುಂಬ ಜೀವನ ನೋಡುವುದಾದರೆ ಬುಧನ ಸಂಚಾರದಿಂದಾಗಿ ಸುಖಕರವಾಗಿರಲಿದೆ. ಹಿರಿಯ ಸಹೋದರ ಸಹೋದರಿಯ ಬೆಂಬಲವನ್ನು ಪಡೆಯುತ್ತೀರಿ ಮತ್ತು ಅವರೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಇನ್ನು ಇದು ಸ್ನೇಹಿತರ ಮನೆಯಾಗಿರುವುದರಿಂದ ಅವರೊಂದಿಗೆ ಸಮಯ ಕಳೆಯಲು ಅವಕಾಶ ದೊರೆಯುವುದು. ಹಳೆಯ ನೆನಪುಗಳನ್ನು ಮೆಲುಕು ಹಾಕುವ ಸಂದರ್ಭ ಕೂಡ ಬರುವುದು. ಇನ್ನು ಹೂಡಿಕೆ ಮಾಡಿದರೆ ಒಳಿತಾಗಲಿದೆ.

ಪರಿಹಾರ - ಬುಧವಾರ ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸಿ.

ಧನು ರಾಶಿ

ಧನು ರಾಶಿ

ಧನು ರಾಶಿಯಲ್ಲಿ ಬುಧನು ಹತ್ತನೇ ಮನೆಗೆ ಸಂಚರಿಸಲಿದ್ದಾನೆ. ಈ ಮನೆಯಿಂದಾಗಿ ಬಯಸದೇ ಲಾಭ ಬರುವ ಸಾಧ್ಯತೆ ಇದೆ. ಈ ಮನೆಯನ್ನು ಕುಟುಂಬದ ಮನೆಯೆಮದು ಪರಿಗಣಿಸಲಾಗಿದೆ. ಈ ರಾಶಿಚಕ್ರದಿಂದಾಗಿ ಶುಭ ಸಂಚಾರ ಉಂಟಾಗಲಿದೆ. ಕೆಲಸದ ಜಾಗದಲ್ಲೂ ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗುವುದು, ನಿಮಗೆ ಬಡ್ತಿ ಬರುವ ಸಾಧ್ಯತೆ ಇದೆ. ಇನ್ನು ಕುಟುಂಬ ಜೀವನವು ಸುಖಕರವಾಗಿರಲಿದೆ. ಉದ್ಯಮಿಗಳಿಗೂ ಲಾಭ ದೊರೆಯಲಿದೆ. ಇನ್ನು ವಿದ್ಯಾರ್ಥಿಗಳಿಗೂ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.

ಪರಿಹಾರ - ಇಷ್ಟ ದೇವರನ್ನು ಪೂಜಿಸಿ.

ಮಕರ ರಾಶಿ

ಮಕರ ರಾಶಿ

ಮಕರ ರಾಶಿಯವರಲ್ಲಿ ಬುಧನು ಒಂಭತ್ತನೇ ಮನೆಗೆ ಪ್ರವೇಶಿಸಲಿದ್ದಾನೆ. ಈ ಮನೆಯ ಮೂಲಕ ಧರ್ಮ, ಉನ್ನತ ಶಿಕ್ಷಣ, ಪ್ರಯಾಣ ಇತ್ಯಾದಿಗಳ ಬಗ್ಗೆ ಪರಿಗಣಿಸಲಾಗುತ್ತದೆ. ಈ ರಾಶಿಯವರಲ್ಲಿ ಬುಧ ಒಂಬತ್ತನೇ ಮನೆಯಲ್ಲಿ ಇರುವುದರಿಂದ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಬಹುದು. ಉದ್ಯೋಗದಲ್ಲಿರುವರಿಗೂ ಒಳಿತು ಉಂಟಾಗಲಿದೆ.

ಧಾರ್ಮಿಕ ಚಟುವಟಿಕೆಯಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ಇನ್ನು ವ್ಯಾಪಾರಸ್ಥರಿಗೂ ಲಾಭ ಉಂಟಾಗಲಿದೆ. ಒಟ್ಟಾರೆಯಾಗಿ ಹೇಳುವುದಾದರೆ ಬುಧನ ಸಂಚಾರದಿಂದ ಈ ರಾಶಿಯವರಿಗೆ ಒಳಿತಾಗಲಿದೆ.

ಪರಿಹಾರ - ಹಸಿದವರಿಗೆ ಅನ್ನದಾನ ಮಾಡಿ.

ಕುಂಭ ರಾಶಿ

ಕುಂಭ ರಾಶಿ

ಕುಂಭ ರಾಶಿಯವರಲ್ಲಿ ಬುಧನು ಎಂಟನೇ ರಾಶಿಗೆ ಪ್ರವೇಶಿಸಲಿದ್ದಾನೆ. ಈ ಮನೆ ಜೀವನದಲ್ಲಿ ಬರಲಾಗುವ ಅಡೆತಡೆಗಳು, ಅಪಘಾತ, ಸಂಶೋಧನೆ, ಗೂಢ ಜ್ಞಾನ ಇತ್ಯಾದಿಗಳ ಅಂಶವಾಗಿದೆ. ಸಂಶೋಧನೆಯಲ್ಲಿ ತೊಡಗಿರುವವರಿಗೆ ಒಳ್ಳೆಯ ಫಲಿತಾಂಶ ದೊರೆಯಲಿದೆ. ಬುಧಗ್ರಹದ ಸಂಚಾರದಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ವಿದ್ಯಾರ್ಥಿಗಳಿಗೆ ಪ್ರಗತಿ ಉಂಟಾಗಲಿದೆ. ಇನ್ನು ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಪೂರ್ವಜರ ಆಸ್ತಿಯ ಲಾಭ ದೊರೆಯಲಿದೆ.

ಕೌಟಂಬಿಕ ಜೀವನ ಸಾಮಾನ್ಯವಾಗಿರಲಿದೆ. ಇನ್ನು ಮಕ್ಕಳ ಆರೋಗ್ಯದ ಕಡೆ ಗಮನ ನೀಡುವುದು ಒಳ್ಳೆಯದು. ಅಲ್ಲದೆ ನಿಮ್ಮ ಆರೋಗ್ಯದ ಬಗ್ಗೆಯೂ ನಿರ್ಲಕ್ಷ್ಯ ಮಾಡಬೇಡಿ.

ಪರಿಹಾರ - ಬುಧವಾರ ಏಲಕ್ಕಿ ದಾನ ಮಾಡಿ.

ಮೀನಾ ರಾಶಿ

ಮೀನಾ ರಾಶಿ

ಬುಧನು ಮೀನಾ ರಾಶಿಯವರಲ್ಲಿ ಏಳನೇ ಮನೆಗೆ ಸಂಚರಿಸಲಿದ್ದಾನೆ. ಏಳನೇ ಮನೆಯನ್ನು ಪಾಲುದಾರಿಕೆ, ವ್ಯಾಪಾರ ಜೀವನ ಸಂಗಾತಿ ಇತ್ಯಾದಿಗಳ ಮನೆಯೆಂದು ಪರಿಗಣಿಸಲಾಗುತ್ತದೆ. ಬುಧ ಗ್ರಹದ ಸಂಚಾರದಿಂದಾಗಿ ಒಳಿತಾಗಲಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಪಡೆಯುವಿರಿ. ಪಾಲುದಾರಿಕೆಯ ವ್ಯಾಪಾರದಲ್ಲಿ ಲಾಭ ಪಡೆಯುವಿರಿ. ಇನ್ನು ಉದ್ಯೋಗಿಗಳಿಗೂ ಅನುಕೂಲಕರ ಪರಿಸ್ಥಿತಿ.

ಇನ್ನು ದಾಂಪತ್ಯ ಜೀವನದಲ್ಲಿ ಖುಷಿ, ನೆಮ್ಮದಿ ಇರುವುದು. ಇನ್ನು ವಿದೇಶಕ್ಕೆ ಹೋಗ ಬಯಸುವವರಿಗೆ ಅವಕಾಶ ದೊರೆಯಲಿದೆ.

ಪರಿಹಾರ - ಮನೆ ಅಥವಾ ಕಚೇರಿಯಲ್ಲಿ ಬುಧ ಯಂತ್ರವನ್ನು ಸ್ಥಾಪಿಸಿ.

English summary

Mercury Transit In Virgo 2020: Effects On Your Zodiac Sign in Kannada

Mercury Transit In Virgo 2020: Effects On Your Zodiac Sign in Kannada,
X
Desktop Bottom Promotion