Latest Updates
-
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್!
ಜುಲೈನಲ್ಲಿ ಬುಧ ಗೋಚಾರ ಫಲ: ಈ 6 ರಾಶಿಗಳಿಗೆ ಧನ ಲಾಭವಿದೆ
ಪ್ರತಿ ತಿಂಗಳು ಬುಧ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡುತ್ತದೆ. ವೈದಿಕ ಶಾಸ್ತ್ರದ ಪ್ರಕಾರ ಬುಧನ ರಾಶಿ ಬದಲಾವಣೆ ಪ್ರತಿಯೊಂದು ರಾಶಿಯ ಮೇಲೂ ಪ್ರಭಾವ ಬೀರುತ್ತದೆ.

ಬುಧನ ಸ್ಥಾನ ಪ್ರಬಲವಾಗಿದ್ದರೆ ಆ ತಿಂಗಳು ಚೆನ್ನಾಗಿರುತ್ತದೆ, ಅದೇ ದುರ್ಬಲವಾಗಿದ್ದರೆ ಕೆಲವು ತೊಂದರೆಗಳು ಎದುರಾಗುತ್ತೆ. ಇದೀಗ ಜುಲೈ 2ಕ್ಕೆ ಬುಧ ಮಿಥುನ ರಾಶಿಗೆ ಸಂಚರಿಸಿದೆ. ಜುಲೈ 17ರವರೆಗೆ ಇದೇ ರಾಶಿಯಲ್ಲಿ ಇರಲಿದೆ, ನಂತರ ಕರ್ಕ ರಾಶಿಗೆ ಸಂಚರಿಸುವುದು.
ಬುಧ ಮಿಥುನ ರಾಶಿಯಲ್ಲಿರುವಾಗ ಕೆಲವೊಂದು ರಾಶಿಗಳಿಗೆ ಧನ ಲಾಭವಿದೆ. ಯಾವೆಲ್ಲಾ ರಾಶಿಗಳಿಗೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಮೇಷ ರಾಶಿ:
ಮೇಷ ರಾಶಿಯವರು ಈ ಅವಧಿಯಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಕಾಣುವಿರಿ. ನೀವು ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿದ್ದರೆ ಈ ಸಮಯದಲ್ಲಿ ನಿಮಗೆ ಒಳ್ಲೆಯ ಅವಕಾಶಗಳು ದೊರೆಯಲಿದೆ.

ವೃಷಭ ರಾಶಿ
ಈ ಅವಧಿ ಆರ್ಥಿಕವಾಗಿ ನಿಮಗೆ ಒಳ್ಳೆಯದಾಗಲಿ. ಹಳೆಯ ಹೂಡಿಕೆಗಳು ಲಾಭವನ್ನು ತಂದು ಕೊಡಲಿದೆ. ಈ ಅವಧಿಯಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸುವುದಾದರೆ ಆದರೆ ಯಾವುದಾದರೂ ಹೊಸ ಕಾರ್ಯ ಪ್ರಾರಂಭಿಸುವುದಾದರೆ ಈ ಅವಧಿ ಒಳ್ಳೆಯದಿದೆ.

ಮಿಥುನ ರಾಶಿ
ಬುಧ ಮಿಥುನ ರಾಶಿಯಲ್ಲಿ ಲಗ್ನ ಮನೆಯಲ್ಲಿ ಇರುವುದರಿಂದ ವ್ಯಾಪಾರಸ್ಥರು ಆರ್ಥಿಕ ಲಾಭ ಕಾಣುವಿರಿ. ಇನ್ನು ಈ ಅವಧಿಯಲ್ಲಿ ಯಾವುದೇ ಆರ್ಥಿಕ ತೊಂದರೆ ಇರುವುದಿಲ್ಲ.

ಸಿಂಹ ರಾಶಿ
ಸಿಂಹ ರಾಶಿಯವರಿಗೂ ಈ ಅವಧಿ ತುಂಬಾ ಒಳ್ಳೆಯದಿದೆ, ನಿಮ್ಮ ಸಂಪತ್ತು ಹೆಚ್ಚಾಗಲಿದೆ, ಆರ್ಥಿಕ ಜೀವನದಲ್ಲಿ ದೊಡ್ಡ ಬದಲಾವಣೆ ಉಂಟಾಗಲಿದೆ, ನಿಮ್ಮ ಆದಾಯ ಮೂಲಗಳು ಹೆಚ್ಚಾಗಲಿದೆ.

ಧನು ರಾಶಿ
ಧನು ರಾಶಿಯವರಿಗೆ ಈ ಅವಧಿ ಅನುಕೂಲಕರವಾಗಿದೆ. ವ್ಯವಹಾರದಲ್ಲಿ ಲಾಭ ಉಂಟಾಗುವುದು, ಆರ್ಥಿಕವಾಗಿ ದೃಢವಾಗಿರುತ್ತೀರಿ. ವ್ಯಾಪಾರಸ್ಥರು ಒಳ್ಳೆಯ ಲಾಭ ಗಳಿಸುವಿರಿ.

ಮೀನ ರಾಶಿ
ಮೀನ ರಾಶಿಯವರು ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಯಾವುದಾದರೂ ಹೂಡಿಕೆಗೂ ಈ ಅವಧಿ ಅನುಕೂಲಕರವಾಗಿದೆ.



Click it and Unblock the Notifications
