For Quick Alerts
ALLOW NOTIFICATIONS  
For Daily Alerts

ಮೇ.10ಕ್ಕೆ ವೃಷಭದಲ್ಲಿ ಬುಧನ ಹಿಮ್ಮುಖ ಚಲನೆ: ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕಾಗಿದೆ

|

ಜ್ಯೋತಿಷ್ಯ ಪ್ರಕಾರ ಯಾವುದೇ ಗ್ರಹವಾಗಿರಲಿ ಅದು ರಾಶಿಯಲ್ಲಿ ಹಿಮ್ಮೆಟ್ಟಿದರೆ ಅದರ ಪ್ರಭಾವ 12 ರಾಶಿಗಳ ಮೇಲಿರುತ್ತದೆ. ಇದೀಗ ಬುಧ ಗ್ರಹವು ಮೇ 10, 2022 ರಂದು ವೃಷಭ ರಾಶಿಯಲ್ಲಿ ಹಿಮ್ಮೆಟ್ಟುತ್ತಿದೆ. ಜ್ಯೋತಿಷ್ಯದ ಪ್ರಕಾರ, ಬುಧವು ವರ್ಷದಲ್ಲಿ 3 ರಿಂದ 4 ಬಾರಿ ಈ ರೀತಿ ಹಿಮ್ಮೆಟ್ಟುತ್ತದೆ.

ಸಾಮಾನ್ಯವಾಗಿ ಒಂದು ಗ್ರಹವು ಹಿಮ್ಮುಖವಾಗಿ ಚಲಿಸಲಾರಂಭಿಸಿದಾಗ ಅದರ ಪರಿಣಾಮಗಳು ಮತ್ತು ಫಲಿತಾಂಶಗಳಲ್ಲಿ ತೀವ್ರತೆ ಕಂಡು ಬರುತ್ತದೆ.

mercury retrograde 2022

ಬುಧವು ಹಿಮ್ಮುಖವಾಗಿ ಚಲಿಸುವ ಸ್ಥಳೀಯ ರಾಶಿಯವರ ಸಂಬಂಧದಲ್ಲಿ ಕೆಲವು ಸಮಸ್ಯೆಗಳಿರಬಹುದು. ಮೋಸ, ದ್ರೋಹ ಮತ್ತು ಒಳಸಂಚುಗಳಿಗೆ ಕಾರಣವಾಗಬಹುದು.

ಈ ಸಮಯದಲ್ಲಿ ಕಿರಿಕಿರಿ ಅನಿಸಬಹುದು ಒಂದು ರೀತಿಯ ಅಸುರಕ್ಷಿತೆ ಕಾಡುವುದು. ಆದರೆ ಇವೆಲ್ಲಾ ತಾತ್ಕಾಲಿಕ, ಯಾವಾಗ ಬುಧ ನೇರವಾಗಿ ಚಲಿಸಲಾರಂಭಿಸುತ್ತದೋ ಪರಿಸ್ಥಿತಿ ಸರಿಯಾಗುವುದು.

ವೃಷಭ ರಾಶಿಯಲ್ಲಿ ಬುಧ ಹಿಮ್ಮೆಟ್ಟುವ ಅವಧಿ
ಬುಧವು ಮೇ 10, 2022 ರಂದು ಸಂಜೆ 5:16 ಕ್ಕೆ ವೃಷಭ ರಾಶಿಯಲ್ಲಿ ಬುಧವು ಹಿಮ್ಮೆಟ್ಟಲು ಪ್ರಾರಂಭವಾಗುವುದು. ಜೂನ್ 3, 2022ಕ್ಕೆ ಮತ್ತೆ ಸಹಜ ಸ್ಥಿತಿಗೆ ಬರುತ್ತದೆ. ಬುಧ ನಿಮ್ಮ ರಾಶಿಯ ಮೇಲೆ ಪರಿಣಾಮ ಬೀರುತ್ತದೆ ಎಂಬುವುದು ಅದರ ಸ್ಥಾನವನ್ನು ಅವಲಂಬಿಸಿದೆ.

ಯಾವ ರಾಶಿ ಮೇಲೆ ಹೇಗೆ ಪರಿಣಾಮ ಬೀರಿದೆ ಎಂದು ನೋಡೋಣ:

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರಲ್ಲಿ ಬುಧವು ನಿಮ್ಮ ಎರಡನೇ ಮನೆಯಲ್ಲಿ ಅಂದರೆ ಹಣ, ಕುಟುಂಬ ಮತ್ತು ಸಂವಹನದ ಮನೆಯಲ್ಲಿ ಹಿಮ್ಮೆಟ್ಟುತ್ತಾನೆ. ಈ ಸಮಯದಲ್ಲಿ ನಿಮ್ಮ ಮಾತು ಸುಧಾರಿಸುವ ಸಾಧ್ಯತೆ ಇದೆ. ಹಾಗೆಯೇ ನಿಮ್ಮ ಸ್ವಭಾವದಲ್ಲಿ ನಮ್ರತೆಯನ್ನು ಕಾಣಬಹುದು. ಈ ಅವಧಿಯಲ್ಲಿ, ನಿಮ್ಮ ದೃಷ್ಟಿಕೋನದಿಂದ ನಿಮ್ಮ ಸುತ್ತಲಿನ ಜನರಿಗೆ ಎಲ್ಲವನ್ನೂ ವಿವರಿಸಲು ನೀವು ಎಲ್ಲ ಪ್ರಯತ್ನಗಳನ್ನು ಮಾಡುವುದನ್ನು ಕಾಣಬಹುದು. ಆದರೂ, ನಿಮ್ಮ ಮನಸ್ಸಿನಲ್ಲಿ ಏನಿದೆ ಎಂಬುದನ್ನು ವಿವರಿಸಲು ನಿಮಗೆ ಸಾಧ್ಯವಾಗುವುದಿಲ್ಲ.

ಈ ಅವಧಿಯಲ್ಲಿ ನಿಮ್ಮ ಕಿರಿಯ ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧದಲ್ಲಿ ನೀವು ಕೆಲವು ವ್ಯತ್ಯಾಸಗಳು ಮತ್ತು ತಪ್ಪುಗ್ರಹಿಕೆಯನ್ನು ಎದುರಿಸಬೇಕಾಗಬಹುದು.

ಆರ್ಥಿಕ ದೃಷ್ಟಿಯಿಂದ ಈ ಅವಧಿಯಲ್ಲಿ ನೀವು ಕೆಲವು ಅನಿಶ್ಚಿತತೆಗಳನ್ನು ಎದುರಿಸಬೇಕಾಗಬಹುದು. ಅಲ್ಲದೆ, ಹಠಾತ್ ನಷ್ಟದ ಸಾಧ್ಯತೆಯಿದೆ, ಆದ್ದರಿಂದ ಈ ಅವಧಿಯಲ್ಲಿ ಎಲ್ಲಿಯಾದರೂ ಹಣವನ್ನು ಹೂಡಿಕೆ ಮಾಡುವುದನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗಿದೆ.

ಉದ್ಯೋಗದಲ್ಲಿರುವವರು ತಮ್ಮ ಸಹೋದ್ಯೋಗಿಗಳು ಮತ್ತು ವೃತ್ತಿಪರ ಸ್ನೇಹಿತರೊಂದಿಗೆ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಈ ಅವಧಿಯು ಬ್ಯಾಂಕರ್‌ಗಳು ಮತ್ತು ಅಕೌಂಟೆಂಟ್‌ಗಳಿಗೆ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ನಿಮ್ಮ ಕೆಲಸದ ಕೌಶಲ್ಯವು ಮಹತ್ತರವಾಗಿ ಸುಧಾರಿಸುವ ಸಾಧ್ಯತೆಗಳಿವೆ, .

ಈ ಅವಧಿಯು ಮೇಷ ರಾಶಿಯ ವಿದ್ಯಾರ್ಥಿಗಳಿಗೆ ಉತ್ತಮವಾಗಿರುತ್ತದೆ.

ಪರಿಹಾರ: ನಿಮ್ಮ ಚಿಕ್ಕಮ್ಮ ಮತ್ತು ತಾಯಿಯ ಚಿಕ್ಕಪ್ಪನೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಿ, ಸಾಧ್ಯವಾದರೆ ಅವರಿಗೆ ಉಡುಗೊರೆಗಳನ್ನು ನೀಡಿ.

 ವೃಷಭ ರಾಶಿ

ವೃಷಭ ರಾಶಿ

ವೃಷಭ ರಾಶಿಯು ನಿಮ್ಮ ಲಗ್ನ ಮನೆಯಲ್ಲಿ ಹಿಮ್ಮೆಟ್ಟುತ್ತಾನೆ. ಈ ಸಮಯದಲ್ಲಿ ವಿಷಯಗಳನ್ನು ವಿಶ್ಲೇಷಿಸುವ ನಿಮ್ಮ ಸಾಮರ್ಥ್ಯವು ಸುಧಾರಿಸುವ ಸಾಧ್ಯತೆಯಿದೆ. ನಿಮ್ಮ ವಸ್ತುಗಳ ಲೆಕ್ಕಾಚಾರ ಮತ್ತು ಯೋಜನೆಗಳನ್ನು ಮಾಡುವಲ್ಲಿ ನೀವು ಉತ್ತಮರಾಗಬಹುದು.

ಆರ್ಥಿಕವಾಗಿ, ಈ ಅವಧಿಯು ವೃಷಭ ರಾಶಿಯ ಜನರಿಗೆ ಅನುಕೂಲಕರವಾಗಿದೆ. ಈ ಸಮಯದಲ್ಲಿ ನೀವು ನಿಮ್ಮ ಹಿಂದಿನ ಕೆಲವು ಹೂಡಿಕೆಗಳಿಂದ ಹಣಕಾಸಿನ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಗಳಿವೆ. ಹೆಚ್ಚಿನ ಅಧ್ಯಯನಕ್ಕಾಗಿ ಯೋಜಿಸುತ್ತಿರುವವರಿಗೆ, ಈ ಅವಧಿಯು ಅವರಿಗೆ ಅನುಕೂಲಕರವಾಗಿದೆ. ಕೆಲಸದಲ್ಲಿ ಹೆಚ್ಚು ತೊಡಗಿಕೊಳ್ಳುವುದರಿಂದ ಮಾನಸಿಕ ಒತ್ತಡ ಹೆಚ್ಚುವುದು. ಇದರಿಂದಾಗಿ ಈ ಸಮಯದಲ್ಲಿ ನೀವು ತಲೆನೋವು ಮತ್ತು ನಿದ್ರಾಹೀನತೆಯ ಸಮಸ್ಯೆ ಉಂಟಾಗಬಹುದು.

ಅದೇ ಸಮಯದಲ್ಲಿ, ತೂಕವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ, ಆದ್ದರಿಂದ ನೀವು ಸಾಕಷ್ಟು ನಿದ್ರೆ ಮಾಡಬೇಕು. ಮಾನಸಿಕ ಒತ್ತಡವನ್ನು ಹೊರ ಹಾಕಲು ಪ್ರಯತ್ನಿಸಬೇಕು.

ಪರಿಹಾರ: ಬುಧವಾರ ಹೆಣ್ಣು ಮಕ್ಕಳಿಗೆ ಹಸಿರು ಬಟ್ಟೆ ಮತ್ತು ಬಳೆಗಳನ್ನುಉಡುಗೊರೆಯಾಗಿ ನೀಡಿ.

ಮಿಥುನ ರಾಶಿ

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಬುಧನು ತಮ್ಮ ಹನ್ನೆರಡನೇ ಮನೆಯಲ್ಲಿ ಅಂದರೆ ಖರ್ಚು, ನಷ್ಟ ಮತ್ತು ಪ್ರಯಾಣದ ಮನೆಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ನಿಮ್ಮ ಹನ್ನೆರಡನೇ ಮನೆಯಲ್ಲಿ ಲಗ್ನ ಮನೆಯ ಅಧಿಪತಿಯ ಹಿಮ್ಮೆಟ್ಟುವಿಕೆ ಆರೋಗ್ಯದ ದೃಷ್ಟಿಯಿಂದ ಅನುಕೂಲಕರವಾಗಿಲ್ಲ.

ಈ ಸಮಯದಲ್ಲಿ ನೀವು ನರಮಂಡಲಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಹೊಂದಿರಬಹುದು. ನೀವು ತಲೆತಿರುಗುವಿಕೆಯನ್ನು ಅನುಭವಿಸಬಹುದು ಮತ್ತು ನಿದ್ರಾಹೀನತೆಯನ್ನು ಸಹ ಎದುರಿಸಬಹುದು. ಹಿಂದಿನ ಕಾಯಿಲೆಯ ಮರುಕಳಿಸುವಿಕೆಯ ಅಪಾಯವೂ ಹೆಚ್ಚು, ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಮತ್ತು ನಿಯಮಿತ ತಪಾಸಣೆಗೆ ಒಳಗಾಗಲು ಸಲಹೆ ನೀಡಲಾಗಿದೆ.

ಈ ಸಮಯದಲ್ಲಿ ನಿಮ್ಮ ವಿದ್ಯುತ್ ಉಪಕರಣಗಳನ್ನು ಬಳಸುವಾಗ ಎಚ್ಚರಿಕೆವಹಿಸಬೇಕು. ಆದ್ದರಿಂದ ನಿಮ್ಮ ಮೊಬೈಲ್, ಟೆಲಿವಿಷನ್, ಸ್ಪೀಕರ್ ಇತ್ಯಾದಿ ವಸ್ತುಗಳ ಬಗ್ಗೆಜಾಗರೂಕರಾಗಿರಿ, ಜಾರ್ಜ್‌ನಲ್ಲಿ ಇಡುವಾಗ ಎಚ್ಚರ.

ಈ ಅವಧಿಯಲ್ಲಿ ನಿಮ್ಮ ಖರ್ಚುಗಳು ಹೆಚ್ಚಾಗುವ ಸಾಧ್ಯತೆಯಿದೆ. ನೀವು ಮಾನಸಿಕವಾಗಿ ಒತ್ತಡವನ್ನು ಅನುಭವಿಸಬಹುದು ಅಥವಾ ಈ ವೆಚ್ಚಗಳಿಂದಾಗಿ ನಿಮ್ಮ ಚಿಂತೆ ಹೆಚ್ಚುವುದು.

ಈ ಮಧ್ಯೆ, ಹಿಂದೆ ಸ್ಥಗಿತಗೊಂಡಿರುವ ಅಥವಾ ನಿಂತು ಹೋದ ಕೆಲವು ಯೋಜನೆಗಳನ್ನು ಪುನಃ ಸಕ್ರಿಯಗೊಳಿಸಲು ನೀವು ಪ್ರಯತ್ನಿಸಬಹುದು.

ಪರಿಹಾರ:ಚಿಕ್ಕ ತಾಮ್ರದ ಪಾತ್ರೆಯಲ್ಲಿ ಹಸಿರು ಸೊಪ್ಪನ್ನು ತುಂಬಿ ಅದನ್ನು ಮಣ್ಣಿನಡಿಯಲ್ಲಿ ಹೂತು ಹಾಕಿ.

ಕರ್ಕ ರಾಶಿ

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಬುಧನು ತಮ್ಮ ಹನ್ನೊಂದನೇ ಮನೆಯಲ್ಲಿ ಅಂದರೆ ಆದಾಯ ಮತ್ತು ಲಾಭದ ಮನೆಯಲ್ಲಿ ಹಿಮ್ಮೆಟ್ಟುತ್ತಾನೆ. ಈ ಅವಧಿಯು ನಿಮಗೆ ಆರ್ಥಿಕವಾಗಿ ಬಹಳ ಪ್ರಯೋಜನಕಾರಿ, ನೀವು ನಿರೀಕ್ಷಿಸದ ಮೂಲಗಳಿಂದ ಹಣ ಪಡೆಯಬಹುದು.

ಈ ಅವಧಿಯಲ್ಲಿ ನೀವು ವಸ್ತುಗಳನ್ನು ದುರಸ್ತಿ ಮಾಡಲು ಮತ್ತು ನವೀಕರಿಸಲು ಹಣವನ್ನು ಖರ್ಚು ಮಾಡುವ ಸಾಧ್ಯತೆಗಳಿವೆ. ವ್ಯಾಪಾರಸ್ಥರಿಗೂ ಸಮಯ ಅನುಕೂಲಕರವಾಗಿದೆ. ಅಲ್ಲದೆ, ಕೆಲವು ಹಳೆಯ ಸ್ನೇಹಿತರೊಂದಿಗಿನ ಸಂಬಂಧಗಳು ಸುಧಾರಿಸುವುದು. ಒಡಹುಟ್ಟಿದವರ ಜೊತೆ ಏನಾದರೂ ಭಿನ್ನಾಭಿಪ್ರಾಯವಿದ್ದರೆ ಈ ಅವಧಿಯಲ್ಲಿ ಸಂಬಂಧ ಸುಧಾರಿಸುವುದು.

ಪರಿಹಾರ: ಆರ್ಥಿಕ ಸಮೃದ್ಧಿ ಮತ್ತು ಜೀವನದಲ್ಲಿ ಸಂತೋಷಕ್ಕಾಗಿ, ಬೆಳ್ಳಿಯ ಚೈನ್‌ನಲ್ಲಿ ಚಿನ್ನದ ಪೆಂಡೆಂಟ್ ಅನ್ನು ಧರಿಸಿ.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯ ಜನರಿಗೆ, ಬುಧವು ನಿಮ್ಮ ಹತ್ತನೇ ಮನೆಯಲ್ಲಿ ಅಂದರೆ ವ್ಯಾಪಾರ ಮತ್ತು ವೃತ್ತಿಜೀವನದಲ್ಲಿ ಹಿಮ್ಮೆಟ್ಟಿಸುತ್ತದೆ. ಹೂಡಿಕೆಯ ವಿಷಯದಲ್ಲಿ ಈ ಅವಧಿಯು ಅನುಕೂಲಕರವಾಗಿದೆ. ಈ ಸಮಯದಲ್ಲಿ ನೀವು ಬಹುದ್ವಾರಿ ಗಳಿಸಲು ಸಾಧ್ಯವಾಗುವ ಸಾಧ್ಯತೆಗಳಿವೆ. ಸ್ವಂತ ವ್ಯವಹಾರದಲ್ಲಿರುವವರು ನಿಧಾನಗತಿಯಲ್ಲಿ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ.

ಈ ಅವಧಿಯಲ್ಲಿ ವ್ಯಾಪಾರಸ್ಥರು ಹೆಚ್ಚು ಗೊಂದಲಕ್ಕೊಳಗಾಗಬಹುದು ಏಕೆಂದರೆ ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನೀವು ಪಾಲುದಾರಿಕೆ ವ್ಯವಹಾರದಲ್ಲಿದ್ದರೆ, ನಿಮ್ಮ ಪಾಲುದಾರರು ಮತ್ತು ಸಹವರ್ತಿಗಳೊಂದಿಗೆ ಜಾಗರೂಕರಾಗಿರಲು ಸಲಹೆ ನೀಡಲಾಗಿದೆ.

ವೈಯಕ್ತಿಕವಾಗಿ ನೋಡಿದರೆ, ಈ ಅವಧಿಯಲ್ಲಿ ನಿಮ್ಮ ಮನೆಯ ಸಂತೋಷ ಮತ್ತು ಶಾಂತಿ ಕದಡುವ ಸಾಧ್ಯತೆಯಿದೆ. ನಿಮ್ಮ ಮನೆಯ ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳು ಮತ್ತು ತಪ್ಪುಗ್ರಹಿಕೆಗಳು ಇರಬಹುದು, ಇದರಿಂದಾಗಿ ನೀವು ಸ್ವಲ್ಪ ಅಸಮಾಧಾನಕ್ಕೆ ಒಳಗಾಗಬಹುದು. ತಾಳ್ಮೆಯಿಂದ ನಡೆದುಕೊಳ್ಳಿ.

ಪರಿಹಾರ: ಹಸುಗಳಿಗೆ ಹುಲ್ಲು ದಾನ ಮಾಡಿ.

 ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಬುಧನು ಅವರ ಒಂಬತ್ತನೇ ಮನೆಯಲ್ಲಿ ಅಂದರೆ ಅದೃಷ್ಟ ಮತ್ತು ಧರ್ಮದ ಮನೆಯಲ್ಲಿ ಹಿಮ್ಮೆಟ್ಟುತ್ತಾನೆ. ಈ ಸಮಯದಲ್ಲಿ ನೀವು ಪ್ರತಿ ಕೆಲಸವನ್ನು ಪೂರ್ಣಗೊಳಿಸಲು ಹೆಚ್ಚು ಶ್ರಮಿಸಬೇಕಾಗುತ್ತದೆ .

ವಿದ್ಯಾರ್ಥಿಗಳಿಗೂ ಇದು ಸವಾಲಿನ ಸಮಯವಾಗಿದೆ. ಉದ್ಯೋಗಸ್ಥರು ಬಾಸ್‌ನೊಂದಿಗೆ ವ್ಯವಹರಿಸುವಾಗ ಎಚ್ಚರವಹಿಸಬೇಕು, ಇಲ್ಲದಿದ್ದರೆ ನಿಮ್ಮ ಇಮೇಜ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಸ್ವಂತ ವ್ಯಾಪಾರದಲ್ಲಿರುವವರು ತಮ್ಮ ಕೆಲಸಕ್ಕಾಗಿ ಕೆಲವು ಪ್ರವಾಸಗಳನ್ನು ಯೋಜಿಸಬೇಕಾಗಬಹುದು, ಆದರೆ ಆ ಪ್ರವಾಸಗಳಿಂದ ನೀವು ಯಾವುದೇ ವಿಶೇಷ ಫಲಿತಾಂಶಗಳನ್ನುಪಡೆಯಲು ಸಾಧ್ಯವಾಗುವುದಿಲ್ಲ ಆದರೆ ನಿಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರನ್ನು ಉಳಿಸಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ.

ಪರಿಹಾರ: ತುಳಸಿ ಗಿಡಕ್ಕೆ ಪೂಜೆಯನ್ನು ಮಾಡಿ.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯವರಿಗೆ ಬುಧನು ಎಂಟನೇ ಮನೆಯಲ್ಲಿ ಅಂದರೆ ಅನಿಶ್ಚಿತತೆ, ಅಭದ್ರತೆ ಮತ್ತು ಬದಲಾವಣೆಯ ಮನೆಯಲ್ಲಿ ಹಿಮ್ಮೆಟ್ಟುತ್ತಾನೆ. ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ಅವಧಿಯಲ್ಲಿ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯದಿರುವ ಸಾಧ್ಯತೆಯಿದೆ. ಅಲ್ಲದೆ, ಈ ಅವಧಿಯಲ್ಲಿ ಯಾವುದೇ ಬೆಲೆಬಾಳುವ ವಸ್ತು ಕಳ್ಳತನ ಅಥವಾ ನಷ್ಟವಾಗುವ ಸಾಧ್ಯತೆಯಿದೆ. ಷೇರು ಮಾರುಕಟ್ಟೆಯೊಂದಿಗೆ ಸಂಬಂಧ ಹೊಂದಿರುವವವರು ಜಾಗ್ರತೆವಹಿಸಬೇಕು, ಏಕೆಂದರೆ ಲೆಕ್ಕಾಚಾರಗಳು ತಪ್ಪುವ ಸಾಧ್ಯತೆ ಇದೆ.

ಈ ಸಮಯದಲ್ಲಿ ನಿಮ್ಮ ಆರೋದ ಬಗ್ಗೆ ಹೆಚ್ಚು ಗಮನಹರಿಸಬೇಕು. ಈ ಅವಧಿಯಲ್ಲಿ ನಿಮ್ಮ ಖರ್ಚುಗಳು ಹೆಚ್ಚಾಗಬಹುದು. ನೀವು ಅನುಪಯುಕ್ತ ವಸ್ತುಗಳಿಗೆ ಹಣವನ್ನು ಖರ್ಚು ಮಾಡುವ ಸಾಧ್ಯತೆಯಿದೆ, ಅಂದರೆ, ನೀವು ದುಂದು ವೆಚ್ಚ ಮಾಡುವ ಸಾಧ್ಯತೆಯಿದೆ. ಜೊತೆಗೆ ಅನಾರೋಗ್ಯ ಕಾರಣದಿಂದಲೂ ಖರ್ಚು ಹೆಚ್ಚಬಹುದು.

ಪರಿಹಾರ: ಬಡ ಮಕ್ಕಳಿಗೆ ಪಠ್ಯ ಪುಸ್ತಕ, ಲೇಖನ ಸಾಮಗ್ರಿಗಳು, ಬಡವರಿಗೆ ಔಷಧಿಗಳನ್ನು ದಾನ ಮಾಡಿ!

 ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಜನರಿಗೆ, ಬುಧನು ನಿಮ್ಮ ಏಳನೇ ಮನೆಯಲ್ಲಿ ಅಂದರೆ ಜೀವನ ಸಂಗಾತಿ, ಪಾಲುದಾರಿಕೆ ಮತ್ತು ವ್ಯವಹಾರದ ಮನೆಯಲ್ಲಿ ಹಿಮ್ಮೆಟ್ಟುತ್ತಾನೆ. ಈ ಸಮಯದಲ್ಲಿ ನೀವು ನಿಮ್ಮ ಸಂಬಂಧದಲ್ಲಿ ಕೆಲವು ಏರಿಳಿತಗಳನ್ನು ಎದುರಿಸಬೇಕಾಗಬಹುದು. ತಪ್ಪು ಗ್ರಹಿಕೆಯಿಂದಾಗಿ ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗಬಹುದು. ನಿಮ್ಮ ವೈವಾಹಿಕ ಜೀವನದಲ್ಲಿ ಹೊರಗಿನವರ ಹಸ್ತಕ್ಷೇಪದಿಂದಾಗಿ ಸಮಸ್ಯೆಗಳು ಹೆಚ್ಚಾಗಬಹುದು. ಇದಲ್ಲದೆ, ಈ ಅವಧಿಯು ನಿಮ್ಮ ಸಂಗಾತಿಯ ಆರೋಗ್ಯದ ದೃಷ್ಟಿಯಿಂದ ಅನುಕೂಲಕರವಾಗಿರುವುದಿಲ್ಲ, ಅವರ ಆರೋಗ್ಯದ ಬಗ್ಗೆ ಎಚ್ಚರವಹಿಸಿ.

ಮದುವೆಯಾಗಲು ಬಯಸುವವರಿಗೆ ಕೆಲವು ಒಳ್ಳೆಯ ಪ್ರಸ್ತಾಪಗಳು ಬರುವ ಸಾಧ್ಯತೆ ಇದೆ.

ಪಾಲುದಾರಿಕೆ ವ್ಯವಹಾರದಲ್ಲಿರುವವರು ಈ ಅವಧಿಯಲ್ಲಿ ನಿಮ್ಮ ವಿರುದ್ಧ ಕೆಲವು ರೀತಿಯ ಪಿತೂರಿ ನಡೆಸುವ ಸಾಧ್ಯತೆಯಿರುವುದರಿಂದ ಸ್ವಲ್ಪ ಎಚ್ಚರಿಕೆ ವಹಿಸುವುದು ಒಳ್ಳೆಯದು. ಈ ಅವಧಿಯಲ್ಲಿ ಹಣವನ್ನು ಹೂಡಿಕೆ ಮಾಡದಂತೆ ಸಲಹೆ ನೀಡಲಾಗಿದೆ . ಈ ಅವಧಿಯಲ್ಲಿ ಯಾರಿಗೂ ಹಣವನ್ನು ಸಾಲವಾಗಿ ನೀಡಬೇಡಿ ಏಕೆಂದರೆ ಹಣವನ್ನು ಮರಳಿ ಪಡೆಯುವಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬಹುದು.

ಪರಿಹಾರ: ಬುಧವಾರದಂದು ಹಸಿರು ಬಟ್ಟೆಗಳನ್ನು ಧರಿಸಿ.

ಧನು ರಾಶಿ

ಧನು ರಾಶಿ

ಧನು ರಾಶಿಯವರಿಗೆ, ಬುಧನು ನಿಮ್ಮ ಆರನೇ ಮನೆಯಲ್ಲಿ ಅಂದರೆ ರೋಗ, ಸ್ಪರ್ಧೆ, ವಿವಾದ ಮತ್ತು ಸೇವೆಯ ಮನೆಯಲ್ಲಿ ಹಿಮ್ಮೆಟ್ಟುತ್ತಾನೆ. ನಿಮ್ಮ ಸಂಗಾತಿಯ ಆರೋಗ್ಯದ ದೃಷ್ಟಿಯಿಂದ ಈ ಅವಧಿಯು ಅನುಕೂಲಕರವಾಗಿರುವುದಿಲ್ಲ. ಅವರಿಗೆ ನರಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು, ಹಾಗೆಯೇ ಯಾವುದೇ ಹಳೆಯ ರೋಗವು ಮರುಕಳಿಸುವ ಸಾಧ್ಯತೆಯಿದೆ.

ತಮ್ಮ ವೈವಾಹಿಕ ಜೀವನದಲ್ಲಿ ಕೆಲವು ವಿವಾದಗಳು ಮತ್ತು ಉದ್ವಿಗ್ನತೆಗಳನ್ನು ಎದುರಿಸುತ್ತಿರುವವರು ಈ ಅವಧಿಯಲ್ಲಿ ತಮ್ಮ ಸಂಬಂಧದಲ್ಲಿ ಹೆಚ್ಚಿನ ಸಮಸ್ಯೆಗಳನ್ನು ಮತ್ತು ವಿವಾದಗಳನ್ನು ಎದುರಿಸಬೇಕಾಗಬಹುದು.

ನಿಶ್ಚಿತಾರ್ಥ ಮಾಡಿಕೊಂಡವರು ತಮ್ಮ ಸಂಬಂಧದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು.

ಪಾಲುದಾರಿಕೆ ವ್ಯವಹಾರದಲ್ಲಿರುವವರಿಗೆ ಈ ಅವಧಿಯು ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ವ್ಯವಹಾರದಲ್ಲಿ ನೀವು ಬೆಳವಣಿಗೆಯನ್ನು ಕಾಣುವಿರಿ.

ಈ ಅವಧಿಯು ಲೆಕ್ಕಪರಿಶೋಧಕ ವೃತ್ತಿಪರರು ಮತ್ತು ಬ್ಯಾಂಕರ್‌ಗಳಿಗೆ ಅನುಕೂಲಕರವಾಗಿರುತ್ತದೆ.

ಪರಿಹಾರ: ನಿಮ್ಮ ಸಂಬಂಧಗಳಲ್ಲಿ ಸಂತೋಷ ಮತ್ತು ಶಾಂತಿಯನ್ನು ತರಲು ದೇವಾಲಯದಲ್ಲಿ ಹಸಿರು ಸೊಪ್ಪನ್ನು ದಾನ ಮಾಡಿ.

ಮಕರ ರಾಶಿ

ಮಕರ ರಾಶಿ

ಮಕರ ರಾಶಿಯವರಲ್ಲಿ ಬುಧನು ಐದನೇ ಮನೆಯಲ್ಲಿ ಅಂದರೆ ಮನರಂಜನೆ, ಮಕ್ಕಳು ಮತ್ತು ಶಿಕ್ಷಣದ ಮನೆಯಲ್ಲಿ ಹಿಮ್ಮೆಟ್ಟುತ್ತಾನೆ. ಈ ಸಮಯವು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರುತ್ತದೆ.

ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಸುಧಾರಣೆಯನ್ನು ಕಾಣಬಹುದು. ನಿಮ್ಮ ಅಧ್ಯಯನಕ್ಕಾಗಿ ನೀವು ವಿದೇಶದಲ್ಲಿರುವ ಯಾವುದೇ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ಯೋಜಿಸುತ್ತಿದ್ದರೆ ನೀವು ಅರ್ಜಿ ಸಲ್ಲಿಸಬಹುದು, ಈ ಸಮಯದಲ್ಲಿ ನೀವು ಅದರಲ್ಲಿ ಯಶಸ್ಸನ್ನು ಪಡೆಯಬಹುದು.

ಆರೋಗ್ಯದ ಬಗ್ಗೆ ನೋಡುವುದಾದರೆ ಈ ಅವಧಿಯಲ್ಲಿ ನಿಮ್ಮ ಮಗು ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು, ಈ ಕಾರಣದಿಂದಾಗಿ ನೀವು ಸ್ವಲ್ಪ ಚಿಂತಿತರಾಗಬಹುದು. ನಿಮ್ಮ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಲಹೆ ನೀಡಲಾಗಿದೆ.

ಪರಿಹಾರ: ಪ್ರತಿದಿನ ದುರ್ಗಾ ಮಂತ್ರ ಪಠಿಸುವುದು ಒಳ್ಳೆಯದು.

ಕುಂಭ ರಾಶಿ

ಕುಂಭ ರಾಶಿ

ಕುಂಭ ರಾಶಿಯವರಿಗೆ ಬುಧನು ನಿಮ್ಮ ನಾಲ್ಕನೇ ಮನೆಯಲ್ಲಿ ಅಂದರೆ ಕುಟುಂಬ ಸುಖ, ಭೂಮಿ, ಆಸ್ತಿ ಮತ್ತು ವಾಹನದ ಮನೆಯಲ್ಲಿ ಹಿಮ್ಮೆಟ್ಟುತ್ತಾನೆ. ಈ ಸಮಯದಲ್ಲಿ ನೀವು ನಿಮ್ಮ ಮನೆಯನ್ನು ರಿಪೇರಿ ಮಾಡಬಹುದು ಅಥವಾ ನಿಮ್ಮ ಮನೆಗೆ ಹೊಸ ವಸ್ತುಗಳನ್ನು ಖರೀದಿಸಬಹುದು. ಮನೆಯಲ್ಲಿ ಈ ಅವಧಿಯಲ್ಲಿ ವಾತಾವರಣ ಅಷ್ಟು ಸರಿಯಿರಲ್ಲ.

ನೀವು ಈಗಾಗಲೇ ಯಾವುದೇ ಭೂಮಿ ಅಥವಾ ಆಸ್ತಿಯಲ್ಲಿ ಹೂಡಿಕೆ ಮಾಡಲು ಯೋಜಿಸಿದ್ದರೆ, ಈ ಅವಧಿಯಲ್ಲಿ ನೀವು ಅದರಲ್ಲಿ ಹೂಡಿಕೆ ಮಾಡುವ ಸಾಧ್ಯತೆಗಳಿವೆ. ತಮ್ಮ ಕುಟುಂಬದಿಂದ ದೂರದಲ್ಲಿ ವಾಸಿಸುವವರು, ಮನೆಗೆ ಹಿಂದಿರುಗುವ ಬಲವಾದ ಅವಕಾಶಗಳಿವೆ.

ಆರೋಗ್ಯದ ವಿಷಯದಲ್ಲಿ, ಈ ಅವಧಿಯಲ್ಲಿ ನಿಮ್ಮ ತಾಯಿಗೆ ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳಿರಬಹುದು. ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಲಹೆ ನೀಡಲಾಗಿದೆ.

ಪರಿಹಾರ: ಪ್ರತಿದಿನ ಬೆಳಗ್ಗೆ 108 ಬಾರಿ 'ಓಂ ನಮೋ ಭಗವತೇ ವಾಸುದೇವಾಯ' ಎಂದು ಪಠಿಸಿ.

 ಮೀನ ರಾಶಿ

ಮೀನ ರಾಶಿ

ಮೀನ ರಾಶಿಯವರಲ್ಲಿ ಬುಧನು ಮೂರನೇ ಮನೆಯಲ್ಲಿ ಅಂದರೆ ಧೈರ್ಯ, ಶಕ್ತಿ, ಸಣ್ಣ ಪ್ರಯಾಣ ಮತ್ತು ಸಹೋದರ ಮತ್ತು ಸಹೋದರಿಯ ಮನೆಯಲ್ಲಿ ಹಿಮ್ಮೆಟ್ಟುತ್ತಾನೆ. ಈ ಸಮಯದಲ್ಲಿ ಮೋಜು, ಮಸ್ತಿಗೆ ಹೆಚ್ಚು ಗಮನ ನೀಡುತ್ತೀರಿ. ಈ ಅವಧಿಯು ಮಾಧ್ಯಮ, ಪ್ರವಾಸೋದ್ಯಮ ಮತ್ತು ಸಂವಹನ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರಿಗೆ ಅನುಕೂಲಕರವಾಗಿದೆ ಎಂದು ಸಾಬೀತುಪಡಿಸಬಹುದು. ಈ ಸಮಯದಲ್ಲಿ ನಿಮ್ಮ ಕ್ಷೇತ್ರದಲ್ಲಿ ನಿಮ್ಮ ಯೋಗ್ಯತೆಯನ್ನು ಸಾಬೀತುಪಡಿಸಲು ನೀವು ಅನೇಕ ಅವಕಾಶಗಳನ್ನು ಪಡೆಯುವ ಸಾಧ್ಯತೆಯಿದೆ.

ಸಂಗಾತಿಯೊಂದಿಗೆ ಮನಸ್ಸು ಬಿಚ್ಚಿ ಸಂವಹನ ಮಾಡದೇ ಇದ್ದರೆ ಕೆಲವು ಸಮಸ್ಯೆಗಳ ಸಾಧ್ಯತೆಯಿದೆ.

ಪರಿಹಾರ: ಪ್ರತಿದಿನ ಬೆಳಗ್ಗೆ ವಿಷ್ಣು ಸಹಸ್ರನಾಮವನ್ನು ಪಠಿಸಿ!

English summary

Mercury Retrograde in Taurus on 10th May 2022, Effects and Remedies on 12 Zodiac Signs in Kannada

Mercury Retrograde in Taurus May 2022 Effects on Zodiac Signs in Kannada: The Mercury Retrograde in Taurus will take place on 10th may 2022. Learn about remedies to perform in Kannada,
X
Desktop Bottom Promotion