Latest Updates
-
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ
ವೃಷಭದಲ್ಲಿ ಹಿಮ್ಮುಖವಾಗಿ ಚಲಿಸುವ ಬುಧ: ಈ 4 ರಾಶಿಗಳಿಗೆ ಹಣದ ಲಾಭವಾಗಲಿದೆ
ಜ್ಯೋತಿಷ್ಯವು ಬುಧ ಗ್ರಹ ಮನುಷ್ಯನ ಸಂವಹನ, ಕೌಶಲ್ಯ, ಚಿಂತನೆ, ವರ್ತನೆ, ಶಿಕ್ಷಣ, ಬುದ್ಧಿವಂತಿಕೆ, ವ್ಯಾಪಾರ, ಮಾರಾಟ, ಬರಹ, ತಾರ್ಕಿಕ ಸಾಮರ್ಥ್ಯ ಇವುಗಳ ಮೇಲೆ ಪ್ರಭಾವ ಬೀರುತ್ತದೆ.
ಬುಧನ ಪ್ರಭಾವ ನಮ್ಮ ರಾಶಿಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುವುದು ನಮ್ಮ ರಾಶಿಯಲ್ಲಿ ಅದರ ಸ್ಥಾನವನ್ನು ಅವಲಂಬಿಸಿದೆ. ಅದು ದುರ್ಬಲ ಸ್ಥಾನದಲ್ಲಿ ಜೀವನದಲ್ಲಿ ಹಲವು ಸಮಸ್ಯೆಗಳು ಎದುರಾಗುವುದು, ಅದೇ ಪ್ರಬಲ ಸ್ಥಾನದಲ್ಲಿದ್ದರೆ ಅದೃಷ್ಟದ ಬೆಂಬಲ ದೊರೆಯುವುದು.

ಮೇ.10ಕ್ಕೆ ಬುಧ ವೃಷಭದಲ್ಲಿ ಹಿಮ್ಮುಖ ಚಲನೆ ಮಾಡಲಿದೆ. ಜ್ಯೋತಿಷ್ಯ ಪ್ರಕಾರ ಯಾವುದೇ ಗ್ರಹ ಹಿಮ್ಮುಖ ಚಲನೆ ಮಾಡಿದಾಗ ಅದರ ಕೆಟ್ಟ ಪ್ರಭಾವ ಅಧಿಕವಿರುತ್ತದೆ. ಆದರೆ ಹೀಗೆ ಹಿಮ್ಮುಖವಾಗಿ ಚಲಿಸಿದಾಗ ಬುಧ ರಾಶಿಯ ಪ್ರಬಲ ಸ್ಥಾನದಲ್ಲಿದ್ದರೆ ಆ ಸಮಯ ಆ ರಾಶಿಯವರಿಗೆ ತುಂಬಾ ಒಳ್ಳೆಯದಾಗಿರುತ್ತದೆ. ಈಗ ವೃಷಭದಲ್ಲಿ ಬುಧ ಹಿಮ್ಮುಖವಾಗಿ ಚಲಿಸುವಾಗ ಈ 4 ರಾಶಿಗಳಿಗೆ ಯೋಗಕಾರವಾಗಿದೆ. ಈ ಸಮಯದಲ್ಲಿ ಹಣದ ಲಾಭವಾಗಲಿದೆ. ಬನ್ನಿ ಆ ಅದೃಷ್ಟದ ರಾಶಿಗಳಾವುವು ಎಂದು ನೋಡೋಣ:

ಕರ್ಕ ರಾಶಿ
ಕರ್ಕ ರಾಶಿಯಲ್ಲಿ ಬುಧ 11ನೇ ಮನೆಯಲ್ಲಿ ಇರಲಿದೆ. ಬುಧನ ಈ ಸ್ಥಾನ ನಿಮಗೆ ಒಳ್ಳೆಯದಿದೆ. ಈ ಸಮಯದಲ್ಲಿ ಇತರ ಕೆಲ ಸವಾಲುಗಳು ಇದ್ದರೂ ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಆದರೆ ನೀವು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುವುದು ಸೂಕ್ತ. ಉದ್ಯೋಗ ಅಥವಾ ವ್ಯಾಪಾರ ಕ್ಷೇತ್ರದೊಂದಿಗೆ ಸಂಬಂಧ ಹೊಂದಿರುವವರು ಈ ಅವಧಿಯಲ್ಲಿ ವಿಶೇಷ ಲಾಭಗಳನ್ನು ಪಡೆಯುವ ಸಾಧ್ಯತೆಯಿದೆ. ನೀವು ಬಯಸದೇ ಇರುವ ಮೂಲಗಳಿಂದ ಕೂಡ ಹಣ ಬರಬಹುದು.

ಧನು ರಾಶಿ
ಧನು ರಾಶಿಯವರಲ್ಲಿ ಬುಧ 6ನೇ ಮನೆಯಲ್ಲಿ ಹಿಮ್ಮೆಟ್ಟುತ್ತಿದ್ದಾನೆ. ಈ ಸಮಯದಲ್ಲಿ ಆರೋಗ್ಯ ಸಮಸ್ಯೆ, ಕುಟುಂಬ ಜೀವನದಲ್ಲಿ ಸಮಸ್ಯೆಗಳಿರಬಹುದು. ಆದರೆ ಹಣದ ವಿಷಯದಲ್ಲಿ ಚಿಂತಿಸಬೇಕಾಗಿಲ್ಲ. ಈ ಸಮಯ ಹೂಡಿಕೆಗೆ ಲಾಭದಾಯಕವಾಗಿದೆ. ಈ ಸಮಯವು ವ್ಯಾಪಾರಿಗಳು ಲಾಭ ಗಳಿಸಲಿದ್ದಾರೆ. ವೃತ್ತಿ ಜೀವನದಲ್ಲೂ ಆರ್ಥಿಕ ಪ್ರಗತಿ ಉಂಟಾಗುವುದು. ಕೆಲಸದಲ್ಲಿ ನಿಮ್ಮ ಗಮನವು ಉತ್ತಮವಾಗಿರುತ್ತದೆ.

ಕುಂಭ ರಾಶಿ
ಕುಂಭ ರಾಶಿಯವರಲ್ಲ ಬುಧ 4ನೇ ಮನೆಯಲ್ಲಿ ಹಿಮ್ಮುಖವಾಗಿ ಚಲಿಸಲಿದೆ. ಈ ಸಮಯ ಎಲ್ಲಾ ರೀತಿಯಿಂದಲೂ ಕುಂಭ ರಾಶಿಯವರಿಗೆ ಅನುಕೂಲಕರವಾಗಿದೆ. ನೀವು ಯಾವುದೇ ಅಲ್ಪಾವಧಿಯ ಹೂಡಿಕೆಗೆ ಪ್ಲ್ಯಾನ್ ಮಾಡುತ್ತಿದ್ದರೆ ಈ ಸಮಯವು ತುಂಬಾ ಅನುಕೂಲಕರವಾಗಿರುತ್ತದೆ. ಉದ್ಯೋಗಸ್ಥರಿಗೆ ಲಾಭವಾಗಲಿದೆ. ಬರಹಗಾರರು ಉತ್ತಮ ಲಾಭ ಪಡೆಯಲಿದ್ದಾರೆ.

ಮೀನ ರಾಶಿ
ಮೀನ ರಾಶಿಯಲ್ಲಿ ಬುಧ 3ನೇ ಮನೆಯಲ್ಲಿ ಹಿಮ್ಮುಖವಾಗಿ ಚಲಿಸಲಿದೆ. ಈ ಅವಧಿಯು ನಿಮಗೆ ಅನುಕೂಲಕರವಾಗಿದೆ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ವೃತ್ತಿ ಜೀವನದಲ್ಲಿ ಲಾಭಗಳಿರುತ್ತವೆ. ಕೆಲಸದ ಸ್ಥಳದಲ್ಲಿ ನಿಮ್ಮ ಇಮೇಜ್ ಬಲವಾಗಿರುತ್ತದೆ. ನೀವು ಪ್ರಯಾಣದಿಂದ ಉತ್ತಮ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ.



Click it and Unblock the Notifications











