For Quick Alerts
ALLOW NOTIFICATIONS  
For Daily Alerts

Budh Margi 2023 : ಧನು ರಾಶಿಯಲ್ಲಿ ಮಾರ್ಗಿಯಾದ ಬುಧ: ಈ ಅವಧಿ 9 ರಾಶಿಯವರಿಗೆ ತುಂಬಾನೇ ಫಲಪ್ರದವಾಗಿದೆ

|

ವಕ್ರೀಯ ಚಲನೆಯಲ್ಲಿ ಬುಧ ಜನವರಿ 18, 2023 ರಂದು ಸಂಜೆ 06:18 ಕ್ಕೆ ಧನು ರಾಶಿಯಲ್ಲಿ ಮಾರ್ಗಿಯಾಗಲಿದೆ. ಇದರಿಂದ ಬುಧ ಹಿಮ್ಮುಖ ಚಲನೆಯಲ್ಲಿದ್ದಾಗ ಸಮಸ್ಯೆಗಳನ್ನು ಎದುರಿಸಿದವರಿಗೆ ಪರಿಹಾರ ಸಿಗಲಿದೆ. ಧನು ರಾಶಿಯಲ್ಲಿ ಬುಧ ಮಾರ್ಗಿಯಾಗಿರುವುದರಿಂದ ದ್ವಾದಶಗಳಲ್ಲಿ ಯಾರಿಗೆಲ್ಲಾ ತುಂಬಾ ಒಳ್ಳೆಯ ಪ್ರಭಾವ ಬೀರಿದೆ ಎಂದು ನೋಡೋಣ:

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರಿಗೆ ಬುಧ ನಿಮ್ಮ 3ನೇ ಮತ್ತು 6ನೇ ಮನೆಯ ಅಧಿಪತಿಯಾಗಿದ್ದು ನಿಮ್ಮ 9ನೇ ಮನೆಯಲ್ಲಿ ಸಂಚಾರ ಮಾಡುವುದ. ಧನು ರಾಶಿಯಲ್ಲಿ ಬುಧ ಸಂಚಾರದಿಂದ ಆರೋಗ್ಯ, ವೃತ್ತಿಪರ ಜೀವನ ಮತ್ತು ಸಂವಹನ ಕ್ಷೇತ್ರದಲ್ಲಿ ಎದುರಿಸುತ್ತಿದ್ದ ಎಲ್ಲಾ ಸಮಸ್ಯೆಗಳಿಂದ ಪರಿಹಾರ ಸಿಗಲಿದೆ. ನೀವು ದೀರ್ಘಕಾಲದಿಂದ ಕೆಲಸವನ್ನು ಬದಲಾಯಿಸಬೇಕೆಂದು ಯೋಚಿಸುತ್ತಿದ್ದು ಕೆಲವು ಕಾರಣಗಳಿಂದ ಅದು ಸಾಧ್ಯವಾಗದೇ ಇದ್ದರೆ ಈ ಅವಧಿಯು ಕೆಲಸವನ್ನು ಬದಲಾಯಿಸಲು ಅನುಕೂಲಕರವಾಗಿದೆ.

ಪರಿಹಾರ: ತುಳಸಿ ಗಿಡಕ್ಕೆ ಪ್ರತಿದಿನ ನೀರು ಹಾಕಿ ಮತ್ತು ಒಂದು ಎಲೆಯನ್ನು ನಿಯಮಿತವಾಗಿ ಸೇವಿಸಿ.

ವೃಷಭ ರಾಶಿ

ವೃಷಭ ರಾಶಿ

ವೃಷಭ ರಾಶಿಯವರಿಗೆ, ಬುಧ ನಿಮ್ಮ ಎರಡನೇ ಮತ್ತು ಐದನೇ ಮನೆಯ ಅಧಿಪತಿ. ಎಂಟನೇ ಮನೆಯಲ್ಲಿ ಬುಧದ ಸ್ಥಾನವು ತುಂಬಾ ಅನುಕೂಲಕರ. ಈ ಸಂಚಾರದ ಅವಧಿಯಲ್ಲಿ ನಿಮ್ಮ ಜೀವನದಲ್ಲಿ ನಡೆಯುತ್ತಿರುವ ತೊಂದರೆಗಳಿಂದ ಸಂಪೂರ್ಣ ಪರಿಹಾರವನ್ನು ನೀಡಲು ವಿಫಲವಾಗಬಹುದು. ಆದ್ದರಿಂದ, ಈ ಅವಧಿಯಲ್ಲಿ ನಿಮ್ಮ ಆರೋಗ್ಯದ ಕಡೆ ತುಂಬಾನೇ ಗಮನಹರಿಸಬೇಕು. ಆದರೆ ಈ ಅವಧಿಯಲ್ಲಿ ಆರ್ಥಿಕವಾಗಿ ಯಾವುದೇ ತೊಂದರೆಯಿಲ್ಲ.

ಪರಿಹಾರ: ಮಂಗಳ ಮುಖಿಯರಿಗೆ ಹಸಿರು ಬಣ್ಣದ ಬಟ್ಟೆ ಮತ್ತು ಬಳೆಗಳನ್ನು ದಾನ ಮಾಡಿ.

ಮಿಥುನ ರಾಶಿ

ಮಿಥುನ ರಾಶಿ

ಬುಧ ನಿಮ್ಮ ಏಳನೇ ಮನೆಗೆ ಸಂಚಾರ ಮಾಡಲಿದೆ. ಇದರಿಂದ ನಿಮಗೆ ಅನುಕೂಲಕರ ಫಲಿತಾಂಶಗಳನ್ನು ತರುತ್ತಾನೆ. ಮಿಥುನ ರಾಶಿಯವರು ಬುಧ ವಕ್ರೀಯ ಚಲನೆಯಲ್ಲಿದ್ದಾಗ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರೆ ಈ ಅವಧಿಯಲ್ಲಿ ಸರಿಯಾಗಲಿದೆ. ವೈವಾಹಿಕ ಜೀವನದಲ್ಲಿ ಖುಷಿ ಇರುತ್ತದೆ. ಪ್ರೇಮಿಗಳು ತಮ್ಮ ಸಂಬಂಧವನ್ನು ಮದುವೆ ಮೂಲಕ ಗಟ್ಟಿಯಾಗಿಸಲು ಬಯಸಿದರೆ ಈ ಅವಧಿ ಅನುಕೂಲಕರವಾಗಿದೆ.

ಪರಿಹಾರ: ಮಲಗುವ ಕೋಣೆಯಲ್ಲಿ ಒಂದು ಗಿಡವನ್ನು ಇಟ್ಟು ಆರೈಕೆ ಮಾಡಿ.

ಕರ್ಕ ರಾಶಿ

ಕರ್ಕ ರಾಶಿ

ಕರ್ಕ ರಾಶಿಯವರಲ್ಲಿ 6ನೇ ಮನೆಯಲ್ಲಿ ಇರಲಿದೆ. ಇದು ಶತ್ರು, ಆರೋಗ್ಯ, ಸ್ಪರ್ಧೆ ಮತ್ತು ತಾಯಿಯ ಚಿಕ್ಕಪ್ಪನ ಮನೆಯಾಗಿದೆ. ಬುಧನು ಧನು ರಾಶಿಯಲ್ಲಿ ಸಂಚಾರ ಮಾಡಿದಾಗ ಕರ್ಕ ರಾಶಿಯವರು ಮಿಶ್ರಫಲಿತಾಂಶ ಪಡೆಯುತ್ತಾರೆ. ಈ ಸಮಯವು ನಿಮಗೆ ಉತ್ತಮವಾಗಿರುತ್ತದೆ . ಆರನೇ ಮನೆಯಲ್ಲಿ ಬುಧದ ಸ್ಥಾನವು ಕರ್ಕ ರಾಶಿಯವರಿಗೆ ಹೆಚ್ಚು ಅನುಕೂಲಕರವಾಗಿರುವುದಿಲ್ಲ. ಈ ಅವಧಿಯಲ್ಲಿ ಮಧುಮೇಹ, ಜೀರ್ಣಕ್ರಿಯೆ ಅಥವಾ ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಗಳಿರಬಹುದು.

ಪರಿಹಾರ: ಹಸುವಿಗೆ ಹಸಿರು ಮೇವನ್ನು ತಿನ್ನಿಸಿ ಅಥವಾ ದಾನ ಮಾಡಿ

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರಲ್ಲಿ 5ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ಈ ಅವಧಿಯಲ್ಲಿ ತಮ್ಮ ಸಂಬಂಧದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಸಮೂಹ ಸಂವಹನ, ಬರವಣಿಗೆ ಅಥವಾ ಯಾವುದೇ ಹೊಸ ಭಾಷೆಯನ್ನು ಕಲಿಯುವ ಈ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಬುಧದ ಈ ಸ್ಥಾನವು ಫಲಪ್ರದವಾಗಿರುತ್ತದೆ.

ಪರಿಹಾರ: ಶುಕ್ರವಾರದಂದು ಸರಸ್ವತಿ ದೇವಿಯನ್ನು ಪೂಜಿಸಿ.

ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯವರ ನಾಲ್ಕನೇ ಮನೆಯಲ್ಲಿ ಬುಧ ಇರಲಿದೆ. ಈ ಅವಧಿಯಲ್ಲಿ ನಿಮ್ಮ ಆರೋಗ್ಯ ಮತ್ತು ನಡವಳಿಕೆಯಲ್ಲಿ ಸುಧಾರಣೆಯನ್ನು ಕಾಣುತ್ತೀರಿ. ವೃತ್ತಿಪರ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳು ಪರಿಹರಿಸಲ್ಪಡುತ್ತವೆ ಮತ್ತು ಈ ಸಮಯದಲ್ಲಿ ನೀವು ಪ್ರಗತಿಯನ್ನು ನಿರೀಕ್ಷಿಸಬಹುದು.

ಪರಿಹಾರ- ಯಾವಾಗಲೂ ಹಸಿರು ಕರವಸ್ತ್ರವನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯವರಿಗೆ ಬುಧನು 3ನೇ ಮನೆಯಲ್ಲಿ ಇರಲಿದೆ. ಈ ಅವಧಿ ತುಲಾ ರಾಶಿಯ ಬರಹಗಾರರಿಗೆ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರಿಗೆ ಒಳ್ಳೆಯ ಸಮಯವಾಗಿದೆ. ಧನು ರಾಶಿಯಲ್ಲಿ ಬುಧ ಸಂಕ್ರಮಣದಿಂದಾಗಿ ಕಿರಿಯ ಸಹೋದರರೊಂದಿಗೆ ನಡೆಯುತ್ತಿರುವ ವಿವಾದಗಳು ಬಗೆಹರಿಯಲಿವೆ. ಅಲ್ಲದೆ, ಮೂರನೇ ಮನೆಯಲ್ಲಿ ಕುಳಿತಿರುವ ಬುಧವು ನಿಮ್ಮ ಒಂಬತ್ತನೇ ಮನೆಯನ್ನು ನೋಡುತ್ತಿರುವುದರಿಂದ ನಿಮ್ಮ ತಂದೆ ಮತ್ತು ಗುರುಗಳ ಬೆಂಬಲವನ್ನು ನೀವು ಪಡೆಯುತ್ತೀರಿ.

ಪರಿಹಾರ: ಬುಧವಾರದಂದು ಮನೆಯಲ್ಲಿ ತುಳಸಿ ಗಿಡವನ್ನು ನೆಟ್ಟು ಪೂಜಿಸಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಬುಧವು ನಿಮ್ಮ 2ನೇ ಮನೆಯಲ್ಲಿ ಇರಲಿದೆ. ಈ ಅವಧಿ, ಹಣ ಮತ್ತು ಕುಟುಂಬ ಸದಸ್ಯರೊಂದಿಗೆ ಇದ್ದ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಈ ಅವಧಿಯು ಹಣವನ್ನು ಗಳಿಸುವ ಮತ್ತು ಉಳಿಸುವ ವಿಷಯದಲ್ಲಿ ಫಲಪ್ರದವಾಗಿರುತ್ತದೆ. ಆದರೆ ನೀವು ಆರೋಗ್ಯದ ಬಗ್ಗೆ ಸ್ವಲ್ಪ ಜಾಗರೂಕರಾಗಿರಬೇಕು .

ಪರಿಹಾರ: ಬುಧ ಬೀಜ ಮಂತ್ರವನ್ನು ಪಠಿಸಿ.

ಧನು ರಾಶಿ

ಧನು ರಾಶಿ

ಬುಧ ಧನು ರಾಶಿಯಲ್ಲಿ ಮಾರ್ಗಿಯಾಗಿ ಸಂಚರಿಸಿದಾಗ ಮೊದಲ ಮನೆಯಲ್ಲಿ ಇರಲಿದೆ. ಧನು ರಾಶಿಯವರುವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಮಂಗಳಕರ ಫಲಿತಾಂಶಗಳನ್ನು ಪಡೆಯುತ್ತಾರೆ. ನಿಮ್ಮ ಕೆಲಸ ಕಾರ್ಯಗಳಿಗೆ ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ವೈವಾಹಿಕ ಜೀವನ ಚೆನ್ನಾಗಿರಲದೆ, ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ.

ಪರಿಹಾರ: ಗಣಪತಿಯನ್ನು ಪೂಜಿಸಿ.

ಮಕರ ರಾಶಿ

ಮಕರ ರಾಶಿ

ಮಕರ ರಾಶಿಯವರಲ್ಲಿ ಬುಧನು 12ನೇ ಮನೆಯಲ್ಲಿ ಇರಲಿದೆ. ಇದರಿಂದ ಈ ಅವಧಿ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ನೀವು ಕಂಪನಿಯನ್ನು ಬದಲಾಯಿಸುವುದು ಅಥವಾ ವಿದೇಶಕ್ಕೆ ಹೋಗಲು ಯೋಚಿಸುತ್ತಿದ್ದರೆ ಈ ಅವಧಿಯಲ್ಲಿ ನಿಮ್ಮ ನಿರೀಕ್ಷೆಗಳು ಈಡೇರುತ್ತಿದೆ. ಬುಧವು ಧನು ರಾಶಿಯಲ್ಲಿ ಸಾಗುತ್ತಿರುವ ಕಾರಣ ನೀವು ತಂದೆಯ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು.

ಪರಿಹಾರ: ಬುಧವಾರದಂದು ಹಸುಗಳಿಗೆ ಹಸಿರು ಮೇವನ್ನು ತಿನ್ನಿಸಿ.

ಕುಂಭ ರಾಶಿ

ಕುಂಭ ರಾಶಿ

ಕುಂಭ ರಾಶಿಯವರಲ್ಲಿ 11ನೇ ಮನೆಯಲ್ಲಿ ಇರಲಿದೆ. ಈ ಮನೆಯು ಹಣಕಾಸಿನ ಲಾಭ, ಆಸೆ, ಹಿರಿಯ ಒಡಹುಟ್ಟಿದವರು ಮತ್ತು ಚಿಕ್ಕಪ್ಪ ಇತ್ಯಾದಿಗಳನ್ನು ಪ್ರತಿನಿಧಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹನ್ನೊಂದನೇ ಮನೆಯಲ್ಲಿ ಬುಧನ ಸ್ಥಾನವು ಉತ್ತಮವಾಗಿದೆ ಎಂದು ಹೇಳಬಹುದು. ಹೂಡಿಕೆಯ ಮೂಲಕ ಹಣದಿಂದ ಲಾಭವನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ಗರ್ಭಧಾರನೆಗೆ ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿ ಶುಭ ಫಲಿತಾಂಶ ನೀಡಲಿದೆ.

ಪರಿಹಾರ: ಚಿಕ್ಕ ಮಕ್ಕಳಿಗೆ ಹಸಿರು ಬಣ್ಣದ ಉಡುಗೊರೆ ನೀಡಿ

ಮೀನ ರಾಶಿ

ಮೀನ ರಾಶಿ

ಮೀನ ರಾಶಿಯವರಲ್ಲಿ 10 ನೇ ಮನೆಯಲ್ಲಿ ಇರಲಿದೆ. ಇದರಿಂದ ಅನುಕೂಲಕರ ಫಲಿತಾಂಶ ದೊರೆಯಲಿದೆ. ನಿಮ್ಮ ಹತ್ತನೇ ಮನೆಯಿಂದ, ಬುಧವು ನಾಲ್ಕನೇ ಮನೆಯನ್ನು ನೋಡುತ್ತಿದ್ದಾನೆ, ಇದರ ಪರಿಣಾಮವಾಗಿ, ನಿಮ್ಮ ಕುಟುಂಬ ಜೀವನವು ಸಂತೋಷದಿಂದ ತುಂಬಿರುತ್ತದೆ.ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದರೆ ಬಗೆಹರಿಯಲಿದೆ.

ಪರಿಹಾರ: ಮನೆ ಮತ್ತು ಕೆಲಸದ ಸ್ಥಳದಲ್ಲಿ ಬುಧ ಯಂತ್ರವನ್ನು ಇಟ್ಟು ಪೂಜಿಸಿ.

Read more about: budh margi
English summary

Mercury Direct In Sagittarius on 18 January 2023 Effects and Remedies on 12 Zodiac Signs in Kannada

Budh Margi 2023 In Vrishabha Rashi ; Mercury Direct In Sagittarius Effects on Zodiac Signs : The Mercury Direct In Sagittarius will take place on 18 January 2023. Learn about remedies to perform in Kannada,
Story first published: Tuesday, January 17, 2023, 11:11 [IST]
X
Desktop Bottom Promotion