For Quick Alerts
ALLOW NOTIFICATIONS  
For Daily Alerts

Mangal Margi 2023 : ಎರಡೂವರೆ ತಿಂಗಳ ಬಳಿಕ ಜ.13ಕ್ಕೆ ಮಾರ್ಗಿಯಾಗುವ ಮಂಗಳ ಗ್ರಹ: 12 ರಾಶಿಗಳ ಬೀರಲಿದೆ ಈ ಪ್ರಭಾವ

|

ಜನವರಿ 13ಕ್ಕೆ ಮಂಗಳ ಗ್ರಹ ಮತ್ತೆ ಮಾರ್ಗಿಯಾಗಲಿದೆ. ಈಗ ಮಂಗಳ ಹಿಮ್ಮುಖ ಚಲನೆಯಲ್ಲಿದೆ. ಮಂಗಳ ಹಿಮ್ಮಖ ಚಲನೆಯಲ್ಲಿದ್ದಾಗ ಕೆಲ ರಶಿಗಳಿಗೆ ತುಂಬಾನೇ ತೊಂದರೆ ಉಂಟಾಗಿರುತ್ತದೆ, ಅಂಥವರಿಗೆ ಮಂಗಳ ಮಾರ್ಗಿಯಾದಾಗ ಮಂಗಳಕರವಾಗಿದೆ.

Mars Direct in Taurus on 13 January 2023 Effects and Remedies on 12 Zodiac Signs in Kannada

ವೃಷಭ ರಾಶಿಯಲ್ಲಿ ಮಂಗಳ: ದಿನಾಂಕ ಮತ್ತು ಸಮಯ

ಸುಮಾರು ಎರಡೂವರೆ ತಿಂಗಳ ಬಳಿಕ ಮಂಗಳ ಮಾರ್ಗಿಯಾಗಲಿದೆ. ಜನವರಿ 13, 2023 ರಂದು ಶುಕ್ರವಾರ ರಾತ್ರಿ 12.07 ನಿಮಿಷಕ್ಕೆ ಮಂಗಳ ವೃಷಭ ರಾಶಿಯಲ್ಲಿ ಪ್ರವೇಶಿಸಲಿದೆ.

ಮಂಗಳ ನಮ್ಮ ಆರೋಗ್ಯ, ನಡವಳಿಕೆ ಮತ್ತು ಆರ್ಥಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಜನವರಿ 13ರಿಂದ ದ್ವಾದಶ ರಾಶಿಗಳ ಮೇಲೆ ಮಂಗಳ ಗ್ರಹದ ಪ್ರಭಾವ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರಲ್ಲಿ 2ನೇ ಮನೆಯಲ್ಲಿ ಇರಲಿದೆ. ಮಂಗಳ ಹಿಮ್ಮುಖವಾಗಿರುವ ಈ ಸಂದರ್ಭದಲ್ಲಿ ನಿಮ್ಮಲ್ಲಿ ಕೋಪದ ವರ್ತನೆ, ಕುಟುಂಬ ಸದಸ್ಯರೊಂದಿಗೆ ಘರ್ಷಣೆಗಳು, ಆರ್ಥಿಕ ಜೀವನ ಮತ್ತು ಆರೋಗ್ಯದಲ್ಲಿ ಏರಿಳಿತಗಳು ಕಂಡು ಬಂದಿರಬಹುದು. ಆದರೆ ಜನವರಿ 13ಕ್ಕೆ ಮಂಗಳ ಮಾರ್ಗಿಯಾದ ಬಳಿಕ ಈ ಎಲ್ಲಾ ಕಷ್ಟಗಳಿಂದ ನಿಮಗೆ ಪರಿಹಾರ ದೊರೆಯುತ್ತದೆ. ನೀವು ಈ ಅವಧಿಯಲ್ಲಿ ಆಹಾರಕ್ರಮದ ಕಡೆ ಗಮನ ಹರಿಸಿ, ಚಾಲನೆ ಮಾಡುವಾಗ ಜಾಗ್ರತೆವಹಿಸಿ

ಪರಿಹಾರ: ಹನುಮಾನ್ ಚಾಲೀಸಾವನ್ನು ಪ್ರತಿದಿನ ಏಳು ಬಾರಿ ಪಠಿಸಿ.

ವೃಷಭ ರಾಶಿ

ವೃಷಭ ರಾಶಿ

ಮಂಗಳ ನಿಮ್ಮ ರಾಶಿಯಲ್ಲಿ ಮಾರ್ಗಿಯಾಗಲಿದೆ, ಮಂಗಳನ ನೇರ ಸಂಚಾರದಿಂದ ನೀವು ಮೊದಲಿಗಿಂತ ಹೆಚ್ಚು ಜಾಗ್ರತೆಯಿಂದಿರಬೇಕು. ಈ ಸಮಯದಲ್ಲಿ ವೈದ್ಯಕೀಯ ವೆಚ್ಚಗಳು ಹೆಚ್ಚಾಗುವ ಸಾಧ್ಯತೆಯಿದೆ. ಮಂಗಳವು ನಿಮ್ಮ ಲಗ್ನ ಮನೆಯಲ್ಲಿರುವಾಗ ವ್ಯವಹಾರ ಅಥವಾ ವಹಿವಾಟು ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕು.

ಪರಿಹಾರ: ಮಾತೆ ದುರ್ಗೆಯನ್ನು ಪೂಜಿಸಿ.

ಮಿಥುನ ರಾಶಿ

ಮಿಥುನ ರಾಶಿ

ಜ. 13ರಿಂದ ಮಂಗಳ ನಿಮ್ಮ 12ನೇ ಮನೆಯಲ್ಲಿರಲಿದೆ. ಈಗ ನೀವು ಎದುರಿಸುತ್ತಿರುವ ಸಮಸ್ಯೆಗಳಿಗೆ ಮಂಗಳ ನೇರ ಸಂಚಾರವಾದಗ ಪ್ರಗತಿ ಸಿಗಲಿದೆ. ಈ ಸಮಯದಲ್ಲಿ ನಿಮ್ಮ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಏರಳಿತಗಳು ಕಂಡು ಬರಬಹುದು, ನೀವು ಈ ಅವಧಿಯಲ್ಲಿ ಮುಕ್ತವಾಗಿ ಮಾತನಾಡುವ ಮೂಲಕ ತಪ್ಪು ಕಲ್ಪನೆ ಹೋಗಲಾಡಿಸಬೇಕು.

ಪರಿಹಾರ: ಪ್ರತಿದಿನ ಬೆಳಗ್ಗೆ ಕಾರ್ತಿಕೇಯನ ಆರಾಧನೆ ಮಾಡಿ.

ಕರ್ಕ ರಾಶಿ

ಕರ್ಕ ರಾಶಿ

ಜ. 13ರಿಂದ ಮಂಗಳ ನಿಮ್ಮ 11ನೇ ಮನೆಯಲ್ಲಿ ಇರಲಿದೆ. ಮಂಗಳ ಮಾರ್ಗಿಯಾದಾಗ ನೀವು ಹಣಕಾಸಿನ ಸಮಸ್ಯೆಗಳು, ಕೆಲಸದ ಸ್ಥಳದಲ್ಲಿ ಘರ್ಷಣೆಗಳು, ಬಡ್ತಿ ಮತ್ತು ಇನ್‌ಕ್ರಿಮೆಂಟ್‌ನಲ್ಲಿ ವಿಳಂಬ, ಉದ್ಯೋಗದಲ್ಲಿ ಕಡಿಮೆ ಅವಕಾಶಗಳು ಈ ಬಗೆಯ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ. ಈ ಅವಧಿ ವಿದ್ಯಾರ್ಥಿಗಳಿಗೆ ತುಂಬಾನೇ ಅನುಕೂಲಕರವಾಗಿದೆ. ಇನ್ನು ಸ್ವಲ್ಪ ಸಮಯದಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರೆ ಈ ಅವಧಿಯಲ್ಲಿ

ಪರಿಹಾರ: ಮಂಗಳವಾರ ಹನುಮಂತನನ್ನು ಪೂಜಿಸಿ.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರಲ್ಲಿ ಜನವರಿ 13ರಿಂದ 10ನೇ ಮನೆಯಲ್ಲಿ ಇರಲಿದೆ. ಈ ಸಮಯದಲ್ಲಿ ನೀವು ಎದುರಿಸುತ್ತಿರುವ ಸಮಸ್ಯೆಗಳು ದೂರಾಗಲಿದೆ, ಹುದ್ದೆಗಳಲ್ಲಿ ಹೊಸ ಅವಕಾಶಗಳನ್ನು ಪಡೆಯುವ ಸಾಧ್ಯತೆಗಳಿವೆ. ಈ ಸಮಯದಲ್ಲಿ, ಆರೋಗ್ಯ, ರಿಯಲ್ ಎಸ್ಟೇಟ್ ಮತ್ತು ಸೈನ್ಯ ಇತ್ಯಾದಿಗಳಲ್ಲಿ ದುಡಿಯುತ್ತಿರುವವರು ಧನಾತ್ಮಕ ಫಲಿತಾಂಶಗಳನ್ನು ನೋಡುತ್ತಾರೆ. ಈ ಅವಧಿಯಲ್ಲಿ ತಾಯಿಯ ಸಂಪೂರ್ಣ ಬೆಂಬಲವಿರುತ್ತದೆ.

ಪರಿಹಾರ: ನಿಮ್ಮ ಬಲಗೈಯಲ್ಲಿ ತಾಮ್ರದ ಬಳೆಯನ್ನು ಧರಿಸಿ.

ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯವರಲ್ಲಿ ಜನವರಿ 13ರಿಂದ 9ನೇ ಮನೆಯಲ್ಲಿ ಇರಲಿದೆ. ನಿಮ್ಮ ಸಂಬಂಧವು ಮೊದಲಿಗಿಂತ ಉತ್ತಮವಾಗಿರುತ್ತದೆ. ಆದಾಗ್ಯೂ, ನಿಮ್ಮ ಹೆತ್ತವರ ಆರೋಗ್ಯದ ಬಗ್ಗೆ ಸ್ವಲ್ಪ ಚಿಂತೆ ಕಾಡಬಹುದು. ಅದೇ ಸಮಯದಲ್ಲಿ, ನಿಮ್ಮ ಕಿರಿಯ ಸಹೋದರರಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.

ಪರಿಹಾರ: ದೇವಸ್ಥಾನದಲ್ಲಿ ಬೆಲ್ಲ ಮತ್ತು ಕಡಲೆಕಾಯಿ ಪ್ರಸಾದವಾಗಿ ಹಂಚಿ.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯವರಲ್ಲಿ ಎಂಟನೇ ಮನೆಯಲ್ಲಿ ಇರಲಿದೆ. ಆಗ ಹಠಾತ್ ಸಮಸ್ಯೆಗಳಿಂದ ಸ್ವಲ್ಪ ಪರಿಹಾರವಿದೆ. ಆದರೆ ಹಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಂಪೂರ್ಣವಾಗಿ ನಿವಾರಣೆಯಾಗದಿರುವ ಸಾಧ್ಯತೆಯಿದೆ. ಹಿರಿಯರು ಮತ್ತು ಮೇಲಾಧಿಕಾರಗಳ ಜೊತೆ ಮಾತನಾಡುವಾಗ ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ಪ್ರಯಾಣ ಮಾಡುವಾಗ ಹೆಚ್ಚು ಜಾಗರೂಕರಾಗಿರಿ.

ಪರಿಹಾರ: ನೀವು ಉತ್ತಮ ಆರೋಗ್ಯ ಹೊಂದಿದ್ದರೆ ರಕ್ತದಾನ ಮಾಡಿ. ಇಲ್ಲದಿದ್ದರೆ ಕಾರ್ಮಿಕರಿಗೆ ಬೆಲ್ಲ ಮತ್ತು ಕಡಲೆಕಾಯಿ ಸಿಹಿತಿಂಡಿಗಳನ್ನು ದಾನ ಮಾಡಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಲ್ಲಿ 7ನೇ ಮನೆಯಲ್ಲಿರಲಿದೆ. ಆಗ ನೀವು ಈ ನಿಮ್ಮ ವೈವಾಹಿಕ ಜೀವನದಲ್ಲಿ ಇರುವ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು. ಮಂಗಳನ ಅಂಶವು ವೃತ್ತಿಪರವಾಗಿ ನಿಮಗೆ ಅನುಕೂಲಕರವಾಗಿದೆ, ವ್ಯಾಪಾರ ಪಾಲುದಾರಿಕೆಯು ಸಹ ಯಶಸ್ವಿಯಾಗುತ್ತದೆ.

ಪರಿಹಾರ: ಮಂಗಳದ ಬೀಜ ಮಂತ್ರವನ್ನು ಪ್ರತಿದಿನ 108 ಬಾರಿ ಪಠಿಸಿ.

ಧನು ರಾಶಿ

ಧನು ರಾಶಿ

ಧನು ರಾಶಿಯವರಲ್ಲಿ ಮಂಗಳ ಆರನೇ ಮನೆಯಲ್ಲಿ ಇರಲಿದೆ. ಮಂಗಳನ ಈ ಸ್ಥಾನ ನಿಮಗೆ ಅನುಕೂಲಕರವಾಗಿದೆ. ನಿಮ್ಮ ಕೆಲಸ ಕಾರ್ಯಗಳಲ್ಲೂ ಯಾವುದೇ ತೊಂದರೆ ಉಂಟಾಗುವುದಿಲ್ಲ. ಆರೋಗ್ಯದ ದೃಷ್ಟಿಯಿಂದ ಈ ಅವಧಿಯು ನಿಮಗೆ ಅನುಕೂಲಕರವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಈ ಅವಧಿಯಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ.

ಪರಿಹಾರ: ಬೆಲ್ಲ ಅಥವಾ ಬೆಲ್ಲದಿಂದ ಮಾಡಿದ ಸಿಹಿತಿಂಡಿಗಳನ್ನು ನಿಯಮಿತವಾಗಿ ಸೇವಿಸಿ.

ಮಕರ ರಾಶಿ

ಮಕರ ರಾಶಿ

ಮಕರ ರಾಶಿಯವರಲ್ಲಿ ಮಂಗಳ 5ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಸ್ವಲ್ಪ ನಿರಾಳರಾಗುತ್ತಾರೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಮಂಗಳವು ವೃಷಭ ರಾಶಿಯಲ್ಲಿ ಪರಿವರ್ತನೆ ಹೊಂದುವ ಮೂಲಕ ಅತ್ತೆಯೊಂದಿಗೆ ನಿಮ್ಮ ಸಂಬಂಧವನ್ನು ಸುಧಾರಿಸುತ್ತದೆ. ಕುಟುಂಬದಲ್ಲಿ ನಡೆಯುತ್ತಿರುವ ವಿವಾದಗಳು ಕೊನೆಗೊಳ್ಳುತ್ತವೆ. ಇದಲ್ಲದೆ, ಈ ಸಮಯವು ಗರ್ಭಿಣಿಯರಿಗೆ ಅನುಕೂಲಕರವಾಗಿರುತ್ತದೆ. ಆದರೆ ಮಂಗಳನು ​​ನಿಮ್ಮ ಎಂಟನೇ ಮನೆಯನ್ನು ನೋಡುತ್ತಿದ್ದಾನೆ, ಆದ್ದರಿಂದ ಜಾಗರೂಕರಾಗಿರಬೇಕು.

ಪರಿಹಾರ: ಅಗತ್ಯವಿರುವ ಮಗುವಿಗೆ ಕೆಂಪು ಬಣ್ಣದ ಬಟ್ಟೆಗಳನ್ನು ದಾನ ಮಾಡಿ.

ಕುಂಭ ರಾಶಿ

ಕುಂಭ ರಾಶಿ

ಕುಂಭ ರಾಶಿಯವರ 4ನೇ ಮನೆಯಲ್ಲಿ ಮಂಗಳ ಇರಲಿದೆ. ಈ ಸಮಯದಲ್ಲಿ, ನೀವು ಆಸ್ತಿಯನ್ನು ಖರೀದಿಸಲು ಅಥವಾ ನಿಮ್ಮ ಹಳೆಯ ವಾಹನವನ್ನು ಬದಲಾಯಿಸಲು ಯೋಜಿಸುತ್ತಿದ್ದರೆ, ಈ ಸಮಯವು ನಿಮಗೆ ಅನುಕೂಲಕರವಾಗಿರುತ್ತದೆ. ಈ ಅವಧಿಯಲ್ಲಿ ನಿಮ್ಮ ತಾಯಿಯ ಆರೋಗ್ಯವು ಉತ್ತಮವಾಗಿರುತ್ತದೆ, ಕೆಲಸದ ಸ್ಥಳದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗುವುದು. ನೀವು ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಮತ್ತು ನಿಮ್ಮ ಆಸೆಗಳು ಈಡೇರುತ್ತವೆ.

ಪರಿಹಾರ: ನಿಮ್ಮ ತಾಯಿಗೆ ಬೆಲ್ಲದ ಸಿಹಿತಿಂಡಿಗಳನ್ನು ಉಡುಗೊರೆಯಾಗಿ ನೀಡಿ.

ಮೀನ ರಾಶಿ

ಮೀನ ರಾಶಿ

ಮೀನ ರಾಶಿಯವರಲ್ಲಿ 3ನೇ ಮನೆಯಲ್ಲಿ ಇರಲಿದೆ. ಇದರಿಂದಾಗಿ ಇದುವರೆಗೆ ನೀವು ಎದುರಿಸುತ್ತಿದ್ದ ಸಮಸ್ಯೆಗಳು ಬಗೆಹರಿಯುತ್ತವೆ. ಮಂಗಳನ ಅಂಶವು ಆರೋಗ್ಯದ ದೃಷ್ಟಿಯಿಂದ ಅನುಕೂಲಕರವಾಗಿದೆ. ಈ ಸಮಯದಲ್ಲಿ ನಿಮ್ಮ ಶಕ್ತಿಯು ಹೆಚ್ಚಾಗುತ್ತದೆ, ಆರೋಗ್ಯ ಸಮಸ್ಯೆಯಿದ್ದರೆ ಅದು ದೂರಾಗುವುದು. ಮಂಗಳವು ವೃಷಭ ರಾಶಿಯಲ್ಲಿ ಪರಿವರ್ತನೆ ಹೊಂದುವ ಮೂಲಕ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ.

ಪರಿಹಾರ: ಸಾಧ್ಯವಾದರೆ, ಮಂಗಳವಾರ ಮತ್ತು ಶನಿವಾರದಂದು ಹನುಮಂತನ ದೇವಾಲಯಕ್ಕೆ ಭೇಟಿ ನೀಡಿ.

English summary

Mars Direct in Taurus on 13 January 2023 Effects and Remedies on 12 Zodiac Signs in Kannada

Mangal Margi 2023 In Vrishabha Rashi ; Mars Direct in Taurus Effects on Zodiac Signs : The Mars Direct in Taurus will take place on 13 January 2023. Learn about remedies to perform in Kannada
X
Desktop Bottom Promotion