Just In
- 1 hr ago
ಅಮೆಜಾನ್ ಫ್ರೀಡಂ ಸೇಲ್: ರಿಯಾಯಿತಿ ದರದಲ್ಲಿ ಕಿಚನ್ ಅಪ್ಲೈಯನ್ಸಸ್ ಲಭ್ಯ, ಕೊಳ್ಳುವವರಿಗೆ ಸುವರ್ಣವಕಾಶ
- 3 hrs ago
ಅಮೆಜಾನ್ ಫ್ರೀಡಂ ಸೇಲ್: ಆಕರ್ಷಕ ರಿಯಾಯಿತಿಯಲ್ಲಿ ಗೃಹಪಯೋಗಿ ವಸ್ತುಗಳನ್ನು ಕೊಳ್ಳುವ ಸುವರ್ಣವಕಾಶ
- 5 hrs ago
ಮಂಕಿಪಾಕ್ಸ್: ಗುಣಮುಖರಾಗಿ ವಾರ ಕಳೆದರೂ ವೀರ್ಯದಲ್ಲಿರುತ್ತೆ ಮಂಕಿವೈರಸ್!
- 7 hrs ago
ಅಮೆಜಾನ್ ಫ್ರೀಡಂ ಸೇಲ್: ಲಗೇಜ್ ಬ್ಯಾಗ್ಗಳ ಮೇಲೆ ಭಾರೀ ರಿಯಾಯಿತಿ ಲಭ್ಯ ಮಿಸ್ ಮಾಡದೆ ಇಂದೆ ಖರೀದಿಸಿ
Don't Miss
- News
ಮಗಳ ಕಾಯಿಲೆ ಚಿಕಿತ್ಸೆಗಾಗಿ ಗಾಂಜಾ ಬಳಕೆ ಕಾನೂನುಬದ್ದಗೊಳಿಸಲು ಹೋರಾಡುತ್ತಿರುವ ತಾಯಿ
- Automobiles
ವಿಶೇಷ ಸೌಲಭ್ಯಗಳನ್ನು ಒಳಗೊಂಡ ಜೀಪ್ ಕಂಪಾಸ್ ಆ್ಯನಿವರ್ಸರಿ ಎಡಿಷನ್ ಬಿಡುಗಡೆ
- Movies
ಖ್ಯಾತ ಹಾಸ್ಯ ಕಲಾವಿದ ರಾಜು ಶ್ರೀವತ್ಸವ್ಗೆ ಹೃದಯಾಘಾತ: ಪರಿಸ್ಥಿತಿ ಗಂಭೀರ!
- Finance
ಸೆನ್ಸೆಕ್ಸ್ ಕುಸಿತ, ನಿಫ್ಟಿ ಏರಿಕೆ: ಬುಧವಾರ ವಹಿವಾಟಿನ ಅಂತ್ಯ ಹೀಗಿದೆ
- Technology
ಲಾಂಚ್ಗೆ ಸಜ್ಜಾಗಿದೆ 'ಮೊಟೊರೊಲಾ ರೇಜರ್'!..ಗ್ಯಾಲಕ್ಸಿ Z ಫೋಲ್ಡ್ 4ಗೆ ಟಾಂಗ್!
- Sports
ಭಾರತ vs ಪಾಕಿಸ್ತಾನ: ಟಿ20 ಸೆಣೆಸಾಟದಲ್ಲಿ ಹೆಚ್ಚು ಗೆದ್ದಿದ್ಯಾರು? ಅಂಕಿಅಂಶಗಳ ಕುತೂಹಲಕರ ಮಾಹಿತಿ
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
Mangla Gauri Vrat 2022 Wishes : ಮಂಗಳಗೌರಿ ವ್ರತದ ಶುಭಾಶಯ, ವ್ಯಾಟ್ಸಾಪ್, ಫೇಸ್‌ಬುಕ್ ಸಂದೇಶಗಳು
ಶಿವನಿಗೆ ಅರ್ಪಿತವಾದ ಶ್ರಾವಣ ಮಾಸದಲ್ಲಿ ಶಿವನ ಪತ್ನಿ ಗೌರಿಯ ಪೂಜೆಯೂ ಸಹ ಅಷ್ಟೇ ಮಹತ್ವವನ್ನು ಪಡೆಯುತ್ತದೆ. ಶ್ರಾವಣ ಮಾಸದ ಪ್ರತಿ ಮಂಗಳವಾರ ಮಂಗಳಗೌರಿ ವ್ರತ ಮಾಡುವುದರಿಂದ ಕನ್ಯೆಯರು ಹಾಗೂ ಸುಮಂಗಲಿಯರಿಗೆ ಶುಭಫಲ ಸಿಗುತ್ತದೆ ಎಂಬ ನಂಬಿಕೆ ಇದೆ. ಶ್ರೀ ಸ್ವರ್ಣ ಗೌರಿ ವ್ರತ ಎಂದರೆ ಹೆಸರೇ ಸೂಚಿಸುವಂತೆ ಸ್ವರ್ಣ ಅಂದರೆ ಬಂಗಾರ, ಅಂದರೆ ಬಂಗಾರದ ಬಣ್ಣದಂತೆ ಹೊಳೆಯುವ ಗೌರಿ ಎಂದರ್ಥ.
ಅಂತಹ ಜಗನ್ಮಾತೆಯಾದ ಮಂಗಳ ಗೌರಿ ವ್ರತದ ವಿಶೇಷ ನಿಮ್ಮ ಬಂಧು-ಬಾಂಧವರು, ಸ್ನೇಹಿತರಿಗೆ ಶುಭಾಶಯಗಳನ್ನು ಕೋರಲು ಇಲ್ಲಿದೆ ವ್ಯಾಟ್ಸಾಪ್, ಫೇಸ್‌ಬುಕ್ ಸಂದೇಶಗಳು.

ಸಮೃದ್ಧಿ
ದೇವಿ ಮಂಗಳಗೌರಿಯು ನಿಮಗೆ ಸುಖ, ಸಮೃದ್ಧಿ, ಆರೋಗ್ಯ, ಭಾಗ್ಯ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ನಿಮಗೂ ನಿಮ್ಮ ಕುಟುಂಬಕ್ಕೂ ಮಂಗಳಗೌರಿ ವ್ರತದ ಶುಭಾಶಯಗಳು

ಶಕ್ತಿ
ಯಾ ದೇವಿ ಸರ್ವಭೂತೇಶು ಶಕ್ತಿ ರೂಪೇಣ ಸಂಸ್ಥಿತಾ, ನಮಸ್ತಸೈ, ನಮಸ್ತಸೈ, ನಮಸ್ತಸೈ ನಮೋ ನಮಃ
ಮಂಗಳಗೌರಿ ವ್ರತದ ಶುಭಾಶಯಗಳು

ಜಗನ್ಮಾತೆ
ಬಂಗಾರ ಬಣ್ಣದಂತೆ ಹೊಳೆಯುವ ಗೌರಿ
ಷೋಡಶೋಪಚಾರದಿಂದ ಪೂಜಿಸಲ್ಪಡುವ ಜಗನ್ಮಾತೆ
ಶಿವನ ಅರ್ಧಾಂಗಿ, ಗಜಮುಖನ ತಾಯಿ
ಮಂಗಳಗೌರಿ ವ್ರತದ ಶುಭಾಶಯಗಳು

ತ್ರ್ಯಂಬಕೇ ಗೌರಿ
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ !
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ
ಮಂಗಳಗೌರಿ ವ್ರತದ ಶುಭಾಶಯಗಳು

ಸುಮಂಗಲಿ
ಇಡೀ ಸೃಷ್ಟಿಯು ಪುರುಷ ಹಾಗೂ ಪ್ರಕೃತಿ ಸ್ವರೂಪ
ಸಂತೋಷದ ವೈವಾಹಿಕ ಜೀವನಕ್ಕೆ ಅನ್ವರ್ಥ
ಸುಮಂಗಲಿಯರ ಇಷ್ಟಾರ್ಥ ಈಡೇರಿಸುವ ಪದ್ಮಜೇ
ಮಂಗಳಗೌರಿ ವ್ರತದ ಶುಭಾಶಯಗಳು

ಕರುಣಾವತಾರಂ
ಕರ್ಪೂರಗೌರಂ ಕರುಣಾವತಾರಂ ಸಂಸಾರಸಾರಂ ಭುಜಗೇಂದ್ರಹರಂ
ಸದಾ ಬಸಂತಂ ಹೃದಯರ್ವಿಂದೇ ಭಾವಂ ಭವಾನಿ ಸಹಿತಂ ನಮಾಮಿ
ಮಂಗಳಗೌರಿ ವ್ರತದ ಶುಭಾಶಯಗಳು

ಮಹಾಶಕ್ತಿ
ಆದಿಶಕ್ತಿ, ಮಹಾಶಕ್ತಿ ಸ್ವರೂಪ
ಕಮಲದಂಥ ಕಣ್ಣುಳವಳು
ಚಂದ್ರನ ಆಭರಣದಿಂದ ಅಲಂಕೃತಳು
ಮಹಾದೇವನ ಪ್ರೀತಿಯ ಮಡದಿ
ಜಗನ್ಮಾತೆ ಮಂಗಳಗೌರಿ ವ್ರತದ ಶುಭಾಶಯಗಳು

ಜಗದ್ವಂದ್ಯೆ
ಕನ್ಯೆಯರ ಪಾಲಿನ ಶಕ್ತಿಧಾತೆ
ಮುತ್ತೈದೆಯ ಸುಮಂಗಲಿ ರಕ್ಷಕಿ
ಜಗದ್ವಂದ್ಯೆ ಶಿವನ ಅರ್ಧಾಂಗಿ
ಮಂಗಳಗೌರಿ ವ್ರತದ ಶುಭಾಶಯಗಳು

ಮೋಕ್ಷಲಕ್ಷ್ಮೀಃ
ಗೌರಿ ತ್ವಮೇವ ಶಶಿಮೌಳಿನಿ ವೇಧಸಿ ತ್ವಂ
ಸಾವಿತ್ರ್ಯಸಿ ತ್ವಮಸಿ ಚಕ್ರಿಣಿ ಚಾರುಲಕ್ಷ್ಮೀಃ
ಕಾಶ್ಯಾಂ ತ್ವಮಸ್ಯಮಲರೂಪಿಣಿ ಮೋಕ್ಷಲಕ್ಷ್ಮೀಃ
ತ್ವಂ ಮೇ ಶರಣ್ಯಮಿಹ ಮಂಗಳಗೌರಿ ಮಾತಃ
ಮಂಗಳಗೌರಿ ವ್ರತದ ಶುಭಾಶಯಗಳು