For Quick Alerts
ALLOW NOTIFICATIONS  
For Daily Alerts

Makara Jyothi 2023 : ಮಕರ ಜ್ಯೋತಿ: ಈ ಜ್ಯೋತಿಯ ಹಿಂದಿನ ಸತ್ಯಾಸತ್ಯತೆ ಹಾಗೂ ಮಹತ್ವವೇನು?

|

ಅಯ್ಯಪ್ಪ ಭಕ್ತರಿಗೆ ಅಯ್ಯಪ್ಪ ಸ್ವಾಮಿ ಮಕರ ಜ್ಯೋತಿ ರೂಪದಲ್ಲಿ ದರ್ಶನ ನೀಡಲಾಗುವುದು ಎಂದು ಹೇಳಲಾಗುವುದು. ಅದರಂತೆ ಪ್ರತೀವರ್ಷ ಮಕರ ಜ್ಯೋತಿಯಂದು ಪೊನ್ನಂಬಲಮೇಡದಲ್ಲಿ 3 ಬಾರಿ ಪ್ರಕಾಶಮಾನವದ ಬೆಳಕು ಕಂಡು ಬರುವುದು.

makar jyothi

ಈ ಬೆಳಕು ಕಾಣುತ್ತಿದ್ದಂತೆ 'ಅಯ್ಯಪ್ಪ ಭಕ್ತರು ಸ್ವಾಮಿಯೇ ಶರಣಂ ಅಯ್ಯಪ್ಪ ಭಕ್ತಿಯಿಂದ ಜೋರಾಗಿ ದೇವರ ಸ್ಮರಣೆ ಮಾಡುತ್ತಾರೆ. ಆ ಬೆಳಕು ಕಂಡರೆ ಮಾತ್ರ ನಮ್ಮ ಜೀವನ ಪಾವನವಾಯಿತು ಎಂದು ಹೇಳಲಾಗುವುದು.

ಪ್ರಕಾಶಮಾನವಾದ ಆ ಜ್ಯೋತಿಯ ದರ್ಶನಕ್ಕೆ 41ದಿನಗಳ ಕಠಿಣ ವ್ರತ ನಿಯಮ ಪಾಲಿಸಿ, ಅಯ್ಯಪ್ಪ ಸ್ವಾಮಿಯ 18 ಮೆಟ್ಟಿಲುಗಳನ್ನು ಹತ್ತಿ ಸ್ವಾಮಿಯ ದರ್ಶನ ಪಡೆದು ನಂತರ ಮಕರ ಜ್ಯೋತಿಯ ದರ್ಶನಕ್ಕಾಗಿ ಕಾಯುತ್ತಾರೆ. ಯಾವಾಗ ಪೊನ್ನಂಬಲಮೇಡದ ಬೆಟ್ಟದಲ್ಲಿ ಆ ಪ್ರಕಾಶಮಾನವಾದ ಬೆಳಕು ಗೋಚರಿಸುತ್ತದೋ ಆಗ ಭಕ್ತಿಪರವೇಷದಿಂದ ಕುಣಿದಾಡುತ್ತಾರೆ, ಆ ಬೆಳಕಿನ ರೂಪದಲ್ಲಿ ಅಯ್ಯಪ್ಪಸ್ವಾಮಿಯೇ ದರ್ಶನ ನೀಡಿದ್ದಾರೆ ಎಂಬುವುದನ್ನು ಭಕ್ತರು ಬಲವಾಗಿ ನಂಬುತ್ತಾರೆ.

ಆದರೆ ಮಕರ ಜ್ಯೋತಿ ನೈಸರ್ಗಿಕವಾಗಿ ಗೋಚರಿಸುವುದೇ? ಈ ಜ್ಯೋತಿ ಬೆಳಕು ಮಾನವ ನಿರ್ಮಿತವೇ ಎಂಬ ಪ್ರಶ್ನೆ ಪ್ರತೀವರ್ಷ ಏಳುವುದು, ಇದರ ಬಗ್ಗೆ ದೇವಾಲಯದ ಮಂಡಳಿಯವರು ಏನು ಹೇಳಿದ್ದಾರೆ ಎಂದು ನೋಡೋಣ ಬನ್ನಿ:

ಮಕರ ಜ್ಯೋತಿಯ ಹಿಂದಿರುವ ಸತ್ಯಾಂಶವೇನು?

ಮಕರ ಜ್ಯೋತಿಯ ಹಿಂದಿರುವ ಸತ್ಯಾಂಶವೇನು?

ಶಬರಿಗಿರಿಯ ವಿರುದ್ಧ ದಿಕ್ಕಿನಲ್ಲಿರುವ ಬೆಟ್ಟವೇ ಪೊನ್ನಂಬಲಮೇಡು. ಈ ಪೊನ್ನಂಬಲಮೇಡು ಗಿರಿಯ ತುತ್ತ ತುದಿಯಲ್ಲಿ ಬೆಳಕು ಕಾಣಿಸಿಕೊಳ್ಳುವುದು, ಇದನ್ನು ಮಕರ ಜ್ಯೋತಿ ಎಂದು ಕರೆಯಲಾಗುವುದು.

ಈ ಮಕರ ಬೆಳಕು ನೈಸರ್ಗಿಕವಾದದ್ದೇ ಅಥವಾ ಮನುಷ್ಯರು ಮಾಡುವುದೇ ಎಂಬ ಬಗ್ಗೆ ತುಂಬಾ ಸಮಯದಿಂದ ವಾದಗಳಿವೆ. ತ್ರಿವಾಂಕೂರ್ ದೇವಾಸುರಂ ಬೋರ್ಡ್‌ ಇದು ಮಾನವ ನಿರ್ಮಿತ ಎಂದು ಹೇಳಿ 2011ರಲ್ಲಿ ಕೋರ್ಟ್‌ ಮೆಟ್ಟಿಲೇರಿತ್ತು.

ಮಕರ ಜ್ಯೋತಿಯ ಸಮಯದಲ್ಲಿ ಇಲ್ಲಿ ದೊಡ್ಡ ವೇದಿಕೆ ನಿರ್ಮಿಸಿ ದೊಡ್ಡ ಬಾಣಲೆಗೆ ತುಂಬಾ ಕರ್ಪೂರ ಹಾಕಿ ಮೂರು ಬಾರಿ ಉರಿಸಲಾಗುವುದು ಎಂದು ಹೇಳಲಾಗಿತ್ತು.

 ಮಕರ ಜ್ಯೋತಿ ನೈಸರ್ಗಿಕವಾದದ್ದು ಎಂದು ಹೇಳಿದ ಟಿಡಿಬಿ

ಮಕರ ಜ್ಯೋತಿ ನೈಸರ್ಗಿಕವಾದದ್ದು ಎಂದು ಹೇಳಿದ ಟಿಡಿಬಿ

ಆದರೆ ಇದು ಮಾನವನಿರ್ಮಿತವಲ್ಲ, ನೈಸರ್ಗಿಕವಾದದ್ದು ಎಂದ ತ್ರಿವಂಕೂರ್‌ ದೇವಾಸುರ ಬೋರ್ಡ್

ಮಕರ ಜ್ಯೋತಿ ನೈಸರ್ಗಕವಾದದ್ದು, ಮಕರ ಸಂಕ್ರಾಂತಿಯಂದು ಕಾಣುವ ಬೆಳಕು ನಕ್ಷತ್ರವಾಗಿದೆ, ಅದು ಮಾನವ ನಿರ್ಮಿತ ಬೆಳಕಲ್ಲ ಎಂದು ಟಿಡಿಬಿಯ ಕಾರ್ಯದರ್ಶಿ ಆರ್‌ ಅನಿತಾ ಹೇಳಿದರು.

ಮಕರ ಸಂಕ್ರಾಂತಿಯ ದಿನ ಗೋಚರಿಸುವ ಈ ಬೆಳಕಿನ ಹಿಂದೆ ಇರುವ ಊಹೆ ಪೋಹೆಗಳನ್ನು ಬದಿಗಿಟ್ಟು ನೋಡುವುದಾದರೆ ಇದು ಭಕ್ತರ ಪಾಲಿನ ದಿವ್ಯಜ್ಯೋತಿಯಾಗಿದೆ, ಅವರ ಭರವಸೆಯ ಬೆಳಕಾಗಿದೆ.

ಅಯ್ಯಪ್ಪಸ್ವಾಮಿಗೂ ಮಕರ ಜ್ಯೋತಿಗೂ ಇರುವ ಸಂಬಂಧ

ಅಯ್ಯಪ್ಪಸ್ವಾಮಿಗೂ ಮಕರ ಜ್ಯೋತಿಗೂ ಇರುವ ಸಂಬಂಧ

ಅಯ್ಯಪ್ಪ ಸ್ವಾಮಿಗೆ ಪಂದಳ ಅರಮನೆಯಿಂದ ತಂದ ಆಭರಣಗಳನ್ನು ತೊಡಿಸಿ ದೀಪಾರಾಧನೆ ಮಾಡುವಾಗ ಪೊನ್ನಂಬಲಮೇಡ ಬೆಟ್ಟದ ತುದಿಯಲ್ಲಿ ದಿವ್ಯಜ್ಯೋತಿ ಪ್ರಕಾಶಮಾನವಾಗಿ ಕಾಣಲಿದೆ

ಮಕರ ಜ್ಯೋತಿ ಎಂದರೆ ಸೂರ್ಯನು ಮಕರ ರಾಶಿಗೆ ಸಂಚರಿಸುವ ಶುಭ ಘಳಿಗೆಯಲ್ಲಿ ಆಕಾಶದಲ್ಲಿ ಪ್ರಕಾಶಮಾನವಾಗಿ ಗೋಚರಿಸುವ ನಕ್ಷತ್ರವೇ ಮಕರ ಜ್ಯೋತಿ. ಸೂರ್ಯಾಸ್ತದ ನಂತರ ಕಾಣಿಸುವ ಈ ನಕ್ಷತ್ರ ಮೂರು ಬಾರಿ ಪ್ರಕಾಶಮಾನವಾಗಿ ಕಂಡು ಕಣ್ಮರೆಯಾಗುವುದು. ಅಯ್ಯಪ್ಪ ಭಕ್ತರ ಪ್ರಕಾರ ಅಯ್ಯಪ್ಪ ಸ್ವಾಮಿಯೇ ಮಕರ ಜ್ಯೋತಿಯ ರೂಪದಲ್ಲಿ ಭಕ್ತರಿಗೆ ನೀಡುವ ದರ್ಶನಾಗಿದೆ.

ಪೌರಾಣಿಕ ಹಿನ್ನೆಲೆ

ಪೌರಾಣಿಕ ಹಿನ್ನೆಲೆ

ಮಕರ ಜ್ಯೋತಿಗೂ ಅಯ್ಯಪ್ಪ ಸ್ವಾಮಿಗೂ ಇರುವ ಸಂಬಂಧದ ಪೌರಾಣಿಕ ಕತೆಯ ಹಿನ್ನೆಲೆ ನೋಡುವುದಾದರೆ ಪಂದಳ ರಾಜ್ಯ ಯುವರಾಜನಾಗಿದ್ದ ಅಯ್ಯಪ್ಪಸ್ವಾಮಿ ಲೋಕ ಕಲ್ಯಾಣಕ್ಕೆ ಅರಮನೆಯನ್ನು ಬಿಟ್ಟು ಹೊರಡುತ್ತಾನೆ.

ಪಂದಳ ರಾಜನಿಗೆ ಅಯ್ಯಪ್ಪನಿಗೆ ಪಟ್ಟಾಭಿಷೇಕ ಮಾಡಿ ರಾಜ್ಯವನ್ನು ಮಗನಿಗೆ ಒಪ್ಪಿಸಬೇಕೆಂಬ ಆಸೆ ಇರುತ್ತದೆ. ಆದರೆ ಅಯ್ಯಪ್ಪಸ್ವಾಮಿ ನಾನು ಅರಮನೆಯಲ್ಲಿ ಇರಲ್ಲ, ಲೋಕ ಕಲ್ಯಾಣಕ್ಕಾ ಗಿ ಹೊರಟಿದ್ದೇನೆ ಎಂದು ಹೇಳಿದಾಗ. ನಿನಗೆ ಪಟ್ಟಾಭಿಷೇಕ ಮಾಡಿ ನೋಡುವ ಭಾಗ್ಯ ಇಲ್ಲವಲ್ಲ ಎಂದು ಕಣ್ಣೀರಿಡುತ್ತಾರೆ.

ಆಗ ಮಣಿಕಂಠ ತಂದೆಗೆ 'ನನ್ನ ಪಟ್ಟಾಭಿಷೇಕ ನೋಡಬೇಕೆಂಬ ನಿಮ್ಮ ಆಸೆಯನ್ನು ನಾನು ನಿರಾಸೆ ಮಾಡಲಾರೆ. ಶಬರಿಮಲೆಯಲ್ಲಿ ನನಗಾಗಿ ಇಂದು ಗುಡಿ ನಿರ್ಮಿಸಿ. ಅಲ್ಲಿ ಮಕರ ಸಂಕ್ರಾಂತಿಯ ದಿನದಂದು ನನ್ನ ಮೂರ್ತಿಗೆ ಸರ್ವಾಲಂಕಾರ ಮಾಡಿ. ನನ್ನನ್ನುನೋಡಲು ಲಕ್ಷಾಂತರ ಭಕ್ತರು ಬರುತ್ತಾರೆ, ನನ್ನ ಭಕ್ತರಿಗೆ ಜ್ಯೋತಿಯ ರೂಪದಲ್ಲಿ ದರ್ಶನ ನೀಡುತ್ತೇನೆ ಎಂದು ಹೇಳಿದರು. ಅದರಂತೆ ಪ್ರತೀವರ್ಷ ಅಯ್ಯಪ್ಪಸ್ವಾಮಿಯು ಮಕರ ಸಂಕ್ರಾಂತಿಯಂದು ಮಕರ ಜ್ಯೋತಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುವುದು ನಂಬಿಕೆ.

ಪ್ರತೀವರ್ಷ ಲಕ್ಷಾಂತರ ಅಯ್ಯಪ್ಪ ಭಕ್ತರು ಶಬರಿ ಮಲೆಗೆ ಭೇಟಿ ನೀಡಿ 18 ಮೆಟ್ಟಿಲುಗಳನ್ನು ಹತ್ತಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯುತ್ತಾರೆ. ಅಯ್ಯಪ್ಪನ ಭಕ್ತಿಯಿಂದ ಬೇಡಿಕೊಂಡವರಿಗೆ ಅನೇಕ ಪವಾಡಗಳು ನಡೆದಿವೆ, ಅಯ್ಯಪ್ಪಸ್ವಾಮಿ ನಂಬಿಕ ಭಕ್ತರ ಕೈ ಬಿಡಲ್ಲ ಎಂಬುವುದು ಭಕ್ತರ ಅಚಲ ನಂಬಿಕೆ.

English summary

Makar Sankranti 2023 : Know Facts And Significance Of Makara Jyothi in Kannada

Makar Sankranti 2023: What are the facts of significance of makar jyothi read on?
X
Desktop Bottom Promotion