Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ಜ್ಯೋತಿಷ್ಯ: ಜುಲೈ 2022 ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದಿದೆ..!
ಆಷಾಢ ಮಾಸ ಆರಂಭವಾಗಿದೆ. ಬಹುತೇಕರು ಈ ಮಾಸದಲ್ಲಿ ಶುಭ ಕಾರ್ಯ ಮಾಡುವುದಿಲ್ಲ ಆದರೂ ಜ್ಯೋತಿಶಾಸ್ತ್ರದ ಪ್ರಕಾರ ಗ್ರಹಗಳ ಬದಲಾವಣೆಯಿಂದ ಗ್ರಹಗಳ ಚಲನೆಯಲ್ಲಿನ ಈ ಬದಲಾವಣೆಗಳು ಜುಲೈ ಮಾಸದಲ್ಲಿ ಯಾವ ರಾಶಿಯ ಮೇಲೆ ಶುಭ ಪರಿಣಾಮ ಬೀರಲಿದೆ, ಯಾರಿಗೆಲ್ಲಾ ಅದೃಷ್ಟ ಇರಲಿದೆ ಮುಂದೆ ನೋಡೋಣ:

2022 ಜುಲೈ ಕೆಲವು ರಾಶಿಗಳಿಗೆ ಶುಭದ ಸಂಕೇತವನ್ನು ನೀಡುತ್ತಿದೆ. ಅದರಂತೆ ಅಗ್ನಿ ಚಿಹ್ನೆಯ ಅದೃಷ್ಟ ರಾಶಿಗಳಾದ ಮೇಷ, ಸಿಂಹ ಮತ್ತು ಧನು ರಾಶಿಯವರು ಜುಲೈ ಅಭಿವೃದ್ಧಿ ಹೊಂದುವುದರಲ್ಲಿ ಆಶ್ಚರ್ಯವೇನಿಲ್ಲ.
ಸೂರ್ಯನು ಬದಲಾವಣೆಯು ಈ ಮೂರು ರಾಶಿಗಳಿಗೆ ಶುಭಫಲವನ್ನು ನೀಡುತ್ತಿದೆ. ಜುಲೈ 2022 ರಲ್ಲಿ ಮೇಷ, ಸಿಂಹ ಮತ್ತು ಧನು ರಾಶಿಯವರು ಏನನ್ನು ನಿರೀಕ್ಷಿಸಬಹುದು, ಯಾವೆಲ್ಲಾ ವಿಚಾರದಲ್ಲಿ ಅದೃಷ್ಟ ಒಲಿದಿದೆ ಮುಂದೆ ನೋಡೋಣ:

ಮೇಷ ರಾಶಿ
ಜುಲೈ ತಿಂಗಳು ಮೇಷ ರಾಶಿಯವರಿಗೆ ಮನಸ್ಸಿನಲಲ್ಲಿರುವ ಆಸೆಗಳನ್ನು ಪೂರೈಸಿಕೊಳ್ಳಲು ಶುಭ ಸಮಯ. ನೀವು ಈ ಮಾಸದಲ್ಲಿ ಸಾಕಷ್ಟು ಮೋಜು ಮಾಡಲಿದ್ದೀರಿ. ಜುಲೈ 22ರಂದು ನಿಮ್ಮ ಸೃಜನಶೀಲ ಅಭಿವ್ಯಕ್ತಿಯ ಐದನೇ ಮನೆಗೆ ಸೂರ್ಯನು ಸ್ಥಳಾಂತರಗೊಳ್ಳುತ್ತಿದ್ದಂತೆ, ನಿಮ್ಮ ಯೋಜನೆಗಳಿಗೆ ಶುಭ ಪ್ರಾರಂಭವಾಗಲಿದೆ ಮತ್ತು ಬದುಕಿನ ಸಂತೋಷವನ್ನು ಹುಡುಕುವ ಪ್ರಯತ್ನಗಳು ಇನ್ನಷ್ಟು ಹೆಚ್ಚಾಗಬಹುದು. ಲಾಭ ಮತ್ತು ನಷ್ಟದ ಬಗ್ಗೆ ಯೋಚಿಸಿ ನಂತರ ಹಣಕಾಸಿನ ನಿರ್ಧಾರ ಕೈಗೊಳ್ಳಿ. ನಿಮ್ಮ ಕೆಲಸದ ಸಂಬಂಧ ಪ್ರಚಾರದ ಅಗತ್ಯವಿದ್ದರೆ ಅದಕ್ಕಾಗಿ ಉತ್ತಮ ಪ್ರಯತ್ನ ಮಾಡಲೇಬೇಕು. ಈ ತಿಂಗಳು ನಿಮ್ಮ ಹೃದಯ ಮಾತನ್ನು ಕೇಳಿ, ಅದನ್ನು ಗೌರವಿಸಲು ಮರೆಯದಿರಿ.

ಸಿಂಹ ರಾಶಿ
ನೀವು ಸದಾ ಮುಂಚೂಣಿಯಲ್ಲಿ ಇರಬಯಸುವ ರಾಶಿ. ಜುಲೈ ತಿಂಗಳು ನಿಮಗೆ ಸಾಮಾನ್ಯಕ್ಕಿಂತಲೂ ಹೆಚ್ಚು ನೀವು ಪ್ರಕಾಶಿಸುವ ಸಮಯವಾಗಿದೆ. ನಿಮ್ಮ ರಾಶಿಯ ಅಧಿಪತಿ ಸೂರ್ಯ ಜುಲೈ 22ರಂದು ನಿಮ್ಮ ಮೊದಲ ಸ್ವಗೃಹಕ್ಕೆ ವರ್ಗಾವಣೆಯಾಗುತ್ತಿದ್ದಂತೆ, ನೀವು ಶಕ್ತಿ, ಆತ್ಮವಿಶ್ವಾಸ ಮತ್ತು ಸ್ವಯಂ-ಅರಿವು ಹೆಚ್ಚಾಗುತ್ತದೆ. ಆರ್ಥಿಕವಾಗಿ ಸಹ ಲಾಭದಲ್ಲಿದ್ದೀರಿ. ನೀವು ಎಲ್ಲರ ಗಮನ ಸೆಳೆಯಲು ಸಿದ್ಧರಾಗಿರುವಿರಿ ಮತ್ತು ನೀವು ಅರ್ಹವಾದ ಅವಕಾಶಗಳನ್ನು ಸ್ವೀಕರಿಸುತ್ತೀರಿ. ಆದರೆ ಸ್ವಯಂ ಕಾಳಜಿಯನ್ನು ಹೆಚ್ಚಿಸಲು ಮರೆಯದಿರಿ. ಇತರರು ನಿಮ್ಮಿಂದ ಏನನ್ನು ಬಯಸುತ್ತಾರೆ ಎಂಬುಕ್ಕಿಂತ ನಿಮ್ಮ ಆದ್ಯತೆಯನ್ನು ಗೌರವಿಸುವುದು ಬಹಳ ಮುಖ್ಯವಾಗುತ್ತದೆ.

ಧನು ರಾಶಿ
ಜುಲೈ ಮಾಸದಲ್ಲಿ ನಿಮ್ಮ ಪರಿಧಿಯನ್ನು ವಿಸ್ತರಿಸುವುದೇ ನಿಮ್ಮ ಆದ್ಯತೆಯಾಗಿದೆ. ಜುಲೈ 22 ರಂದು ಸೂರ್ಯನು ನಿಮ್ಮ ಬುದ್ಧಿವಂತಿಕೆ, ಜ್ಞಾನ ಮತ್ತು ಪ್ರಯಾಣದ 9ನೇ ಮನೆಗೆ ವರ್ಗಾವಣೆಯಾಗುತ್ತಿದ್ದಂತೆ, ನಿಮ್ಮ ಪರಿಧಿಯನ್ನು ವಿಸ್ತರಿಸುವ ಬಯಕೆಯನ್ನು ಜುಲೈನಲ್ಲಿ ಪರಿಗಣಿಸಬಹುದು. ಈ ರಾಶಿಚಕ್ರದವರು ಜೀವನದ ವಿವಿಧ ದೃಷ್ಟಿಕೋನಗಳನ್ನು ಅನ್ವೇಷಿಸುತ್ತಿರುವಿರಿ, ಪ್ರಯಾಣ ಪ್ರಾರಂಭಿಸಲು ಸೂಕ್ತ ಸಮಯವಾಗಿದೆ. ಈ ಮಾಸವನ್ನು ಬಹಳ ಉತ್ಸಾಹದಿಂದ ಕಳೆಯುವಿರಿ. ಜುಲೈನ ಜ್ಯೋತಿಷ್ಯವು ಖಂಡಿತವಾಗಿಯೂ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ.



Click it and Unblock the Notifications