Just In
Don't Miss
- News
ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ: ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಟೀಕೆ
- Movies
ಈ ಷರತ್ತಿಗೆ ಓಕೆ ಅಂದ್ರೆ 'ಅರ್ಜುನ್ ರೆಡ್ಡಿ' ನಿರ್ದೇಶಕನ ಜೊತೆ ರಣ್ಬೀರ್ ಚಿತ್ರ!
- Sports
ರನ್ ಬೆನ್ನತ್ತುವ ಪರೀಕ್ಷೆಗೆ ಭಾರತ ಸಿದ್ದ: ವಿರಾಟ್ ಕೊಹ್ಲಿ
- Automobiles
ಜನವರಿ 1ರಿಂದ ಟಾಟಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ
- Finance
ವಿಶ್ವದ ಬೃಹತ್ ಕಂಪನಿಗಳನ್ನು ಮುನ್ನಡೆಸುತ್ತಿರುವ ಟಾಪ್ 10 ಭಾರತೀಯರು
- Technology
ಗೂಗಲ್ ಫೋಟೋಸ್ ನಲ್ಲಿ ಇದೀಗ ಚಾಟ್ ಫೀಚರ್- ಇದರಲ್ಲಿ ನೀವೇನು ಮಾಡಬಹುದು?
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
- Travel
ಭಾರತದಲ್ಲಿ ಖಗೋಳ ಛಾಯಾಚಿತ್ರಗ್ರಹಣ ಮಾಡಲು ಇಲ್ಲಿವೆ ಬೆಸ್ಟ್ ಸ್ಥಳಗಳು
ಡಿಸೆಂಬರ್‌ನಲ್ಲಿ ಅದೃಷ್ಟ ಹೊಂದಿರುವ ರಾಶಿಗಳು
ಪ್ರತಿ ದಿನದಂತೆ ಪ್ರತಿ ಮಾಸವು ನಮ್ಮಲ್ಲಿ ಹೊಸತನದ ಅಪೇಕ್ಷೆಗಳನ್ನು ಮೂಡಿಸುತ್ತದೆ. ಇವು ನೆರವೇರುತ್ತದೋ ಇಲ್ಲವೂ ಗೊತ್ತಿಲ್ಲ, ಆದರೆ ನಿರೀಕ್ಷೆಗಳು ಮಾತ್ರ ಹೆಚ್ಚುತ್ತಲೇ ಇರುತ್ತದೆ. ಪ್ರತಿ ಮಾಸದಲ್ಲೂ ಒಂದಿಲ್ಲೊಂದು ಅದೃಷ್ಟ ಪರೀಕ್ಷೆಗೆ ನಾವು ಸಿದ್ಧರಾಗುತ್ತಲೇ ಇರುತ್ತೇವೆ. ಆದರೆ ಈ ಎಲ್ಲಾ ಬಯಕೆ, ನಿರೀಕ್ಷೆಗಳ ಈಡೇರಿಕೆಗೆ ಆ ಮಾಸದ ಜ್ಯೋತಿಶಾಸ್ತ್ರದ ಭವಿಷ್ಯವೂ ಕಾರಣವಾಗುತ್ತದೆ ಎನ್ನಲಾಗುತ್ತದೆ.
ಪ್ರತಿ ಮಾಸವು ನಮ್ಮ ರಾಶಿಗೆ ಅನುಗುಣವಾಗಿ ಗ್ರಹಗತಿಗಳ ಬದಲಾವಣೆಯನ್ನು ಆಧರಿಸಿ ಅದೃಷ್ಟ ಹಾಗೂ ದುರಾದೃಷ್ಟಗಳನ್ನು ನಿರ್ಧರಿಸಲಾಗುತ್ತೆ. ಇದರ ಪ್ರಕಾರ ಮೂರು ರಾಶಿಚಕ್ರದವರು ಅತ್ಯಂತ ಅದೃಷ್ಟವನ್ನು ಅನುಭವಿಸುವರು. ಹಾಗೆಯೇ, ಮೂರು ರಾಶಿಚಕ್ರದವರ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಅದೃಷ್ಟವಂತ ರಾಶಿಚಕ್ರದವರು ಜೀವನದಲ್ಲಿ ಸಾಕಷ್ಟು ಧನಾತ್ಮಕ ಬದಲಾವಣೆಯನ್ನು ಕಂಡುಕೊಳ್ಳುವುದರ ಮೂಲಕ ತೃಪ್ತಿಯನ್ನು ಹಾಗೂ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ದುರಾದೃಷ್ಟವನ್ನು ಅನುಭವಿಸುವ ರಾಶಿ ಚಕ್ರದವರು ಕೆಲಸದಲ್ಲಿ ಅಡೆತಡೆ ಹಾಗೂ ಮಾನಸಿಕವಾಗಿಯೂ ಗೊಂದಲಕ್ಕೆ ಒಳಗಾಗುವರು ಎಂದು ಹೇಳಲಾಗುವುದು. ಹಾಗಿದ್ದರೆ 2019ರ ಡಿಸೆಂಬರ್ ಮಾಸದಲ್ಲಿ ಯಾವೆಲ್ಲಾ ರಾಶಿಚಕ್ರಕ್ಕೆ ಅದೃಷ್ಟ ಒಲಿದಿದೆ ಹಾಗೂ ಯಾವುದಕ್ಕೆ ದುರಾದೃಷ್ಟ ಇದೆ ಎಂದು ಮುಂದೆ ಲೇಖನದಲ್ಲಿ ತಿಳಿಯೋಣ.
ಅದೃಷ್ಟ ಹೊಂದಿರುವ ರಾಶಿಗಳು

ಮೇಷ ರಾಶಿ
ಮೇಷ ರಾಶಿಯವರಿಗೆ ಗುರು ಗ್ರಹವು ಶನಿ ಹಾಗೂ ಫ್ಲೂಟೋ ಜತೆ ಸೇರುವುದರಿಂದ ಈ ಮಾಸ ವೃತ್ತಿ, ಉನ್ನತ ಅಧಿಕಾರಕ್ಕೆ ಸಂಬಂಧಿಸಿದಂತೆ ಶುಭಸುದ್ಧಿ ಸಿಗಲಿದೆ.
ಸೂರ್ಯ, ಬುಧ ಮತ್ತು ಶುಕ್ರ ಗ್ರಹಗಳು ನಂಬಿಕೆಯ ವಿಷಯದಲ್ಲಿ, ದೂರದ ಪ್ರಯಾಣದಲ್ಲಿ ಮತ್ತು ಉದ್ಯಮಶೀಲತೆಯಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನೀಡಲಿದೆ. ನಿಮಗೆ ಅಗತ್ಯವೇ ಇಲ್ಲವಾದರೂ ಈ ಮಾಸದಲ್ಲಿ ನಿಮ್ಮಲ್ಲಿ ಉತ್ಸಾಹದ ಸ್ಫೋಟ ಉಕ್ಕಲಿದೆ. ನಿಮ್ಮ ಮುಂದಿನ ಭವಿಷ್ಯದ ಬಗ್ಗೆ ನಿರ್ಧರಿಸಲು ಇದು ಉತ್ತಮ ಸಮಯ, ಕೆಲಸಕ್ಕೆ ಬದಲಾವಣೆಯನ್ನು ಬಯಸಿದ್ದೀರಾ ಅಥವಾ ವಿದೇಶದಲ್ಲಿ ಅಧ್ಯಯನ ಮಾಡುವ ಆಲೋಚನೆ ಇದೆಯೇ, ಯಾವುದೇ ನಿರ್ಧಾರವನ್ನು ಪರಿಗಣಿಸಿದರೂ ಕೊಂಚ ಅಪಾಯ ಇದ್ದೇ ಇರುತ್ತದೆ, ಇಂಥಾ ಅಪಾಯವನ್ನು ತೆಗೆದುಕೊಳ್ಳಲು ಹಿಂಜರಿಯದಿರಿ.

ಸಿಂಹ ರಾಶಿ
ಈ ಮಾಸ ನೀವು ಹೆಚ್ಚು ಸಕ್ರಿಯರಾಗಿರುತ್ತೀರಿ ಮತ್ತು ಶ್ರದ್ಧೆಯಿಂದ ಇರುತ್ತೀರಿ. ಸಕಾರಾತ್ಮಕವಾಗಿ ನಿಮ್ಮ ದೈನಂದಿನ ಅಭ್ಯಾಸಗಳನ್ನು ಪುನರ್ರಚಿಸುತ್ತೀರಿ ಮತ್ತು ನಿಮ್ಮ ಯೋಗಕ್ಷೇಮದ ಬಗ್ಗೆ ಹೆಚ್ಚು ಕಾಳಜಿ ತೋರುತ್ತೀರಿ. ಅದೃಷ್ಟವಶಾತ್ ಗುರುವು ಒಮ್ಮೆ ನಿಮ್ಮ ಮನೆಯನ್ನು ಪ್ರವೇಶಿಸಿದರೆ ಹೆಚ್ಚು ಹೆಚ್ಚು ಆಶಾವಾದಿ ದೃಷ್ಟಿಕೋನ ನಿಮ್ಮದಾಗಲಿದೆ, ನಿಮ್ಮಲ್ಲಿ ಸೃಜನಶೀಲತೆ ಹೆಚ್ಚಲಿದೆ. ಅಲ್ಲದೇ ನಿಮ್ಮ ಸಂಗಾತಿಯಂದಿಗಿನ ಪ್ರಣಯ ಜೀವನವು ಉತ್ತಮವಾಗಿರುತ್ತದೆ. ಪ್ರೀತಿಯ ವಿಷಯದಲ್ಲಿ ನೀವು ಅತ್ಯಂತ ಸಂತೋಷದ ದಿನಗಳನ್ನು ಕಳೆಯುತ್ತೀರಿ. ನಿಮ್ಮ ಶಕ್ತಿಯು ಮಕ್ಕಳಂತೆ, ವಿನೋದದಿಂದ ಇರುತ್ತದೆ.

ಧನು ರಾಶಿ
2019 ಸಾಕಷ್ಟು ಆಸಕ್ತಿದಾಯಕ ವರ್ಷವಾಗಿದೆ. ಹಲವಾರು ಭೌತಿಕ ಪ್ರತಿಫಲಗಳ ಹೊರತಾಗಿಯೂ, ದೈಹಿಕ ಮತ್ತು ಆಧ್ಯಾತ್ಮಿಕ ವಿಷಯಗಳು ಸಮೃದ್ಧವಾಗಿ ನಿಮ್ಮದಾಗಲಿದೆ. ಈ ತಿಂಗಳು ಬುಧ ಗ್ರಹವು ಸೂರ್ಯ ಮತ್ತು ಶುಕ್ರನನ್ನು ಸೇರುತ್ತಾನೆ, ಆದ್ದರಿಂದ ನೀವು ಯಾವುದೇ ಸಮಯದಲ್ಲಿ ಮೊದಲಿನ ಸ್ಥಿತಿಗೆ ಹಿಂತಿರುಗಬಹುದು. ಈ ಮಾಸ ನಿಮಗೆ ಯಾವುದೇ ರೀತಿಯ ಒತ್ತಡ ಇರುವುದಿಲ್ಲ. ಬದಲಾಗಿ ಭಾವನಾತ್ಮಕ ಮತ್ತು ಕೌಟುಂಬಿಕ ವಿಷಯಗಳಲ್ಲಿ ಕಾಳಜಿ ಮತ್ತು ಸಹಾನುಭೂತಿ ನಿಮ್ಮದಾಗಲಿದೆ.
ಡಿಸೆಂಬರ್ 2019 ಈ ರಾಶಿಚಕ್ರಗಳಿಗೆ ಅದೃಷ್ಟವಿಲ್ಲ

ಮಿಥುನ ರಾಶಿ
ಗ್ರಹಗಳ ಬದಲಾವಣೆಯಿಂದಾಗಿ ಈ ಮಾಸದಲ್ಲಿ ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಪ್ರಣಯ ಜೀವನ ಕಹಿಯಾಗಿರಬಹುದು, ಇಬ್ಬರ ನಡುವೆ ಉತ್ತಮ ಬಾಂಧವ್ಯ ಇರುವುದಿಲ್ಲ. ಆದರೆ ಇಬ್ಬರ ನಡುವಿನ ಈ ವಿರಹ ಸಾಂದರ್ಭಿಕವಾಗಿದ್ದು, ಸಮಯ ಕಳೆದಂತೆ ಉತ್ತಮವಾಗಲಿದೆ. ಅತ್ಯಂತ ಸವಾಲಿನ ವಿಷಯವೆಂದರೆ, ನೀವು ನಿಮ್ಮ ಆಂತರ್ಯವನ್ನು ಸಹ ನೋಡಿಕೊಳ್ಳುವುದಿಲ್ಲ ಅಥವಾ ನಿಮ್ಮ ಭಾವನೆಗಳನ್ನು ಸಹ ಯಾರೊಂದಿಗೂ ಚರ್ಚಿಸುವುದಿಲ್ಲ. ಆದರೆ ಒಮ್ಮೆ ನೀವು ಇಂಥ ಮಾನಸಿಕ ಸ್ಥಿತಿಯಿಂದ ಹೊರಬಂದರೆ ಇದರ ಸಂತೋಷವನ್ನು ನೀವು ಅನುಭವಿಸುವಿರಿ. ಏನೇ ಅಗಲಿ ನಿಮಗೆ ಸಾಧ್ಯವಾದಷ್ಟು ಅತ್ಯುತ್ತಮ ಕೆಲಸಗಳನ್ನು ಮಾಡಿ ಮತ್ತು ಜೀವನ ಬಂದಂತೆ ಸಾಗಿ.

ತುಲಾ ರಾಶಿ
ಡಿಸೆಂಬರ್ ಮಾಸದಲ್ಲಿ ತುಲಾ ರಾಶಿಯವರಿಗೆ ಕೌಟುಂಬಿಕ ಜವಾಬ್ದಾರಿಗಳು ಹೆಚ್ಚಲಿದೆ. ನಿಮ್ಮ ಸುರಕ್ಷತೆಯ ಬಗ್ಗೆ ಗಮನಹರಿಸಿ, ಅದರಲ್ಲೂ ದೈಹಿಕ, ಮಾನಸಿಕ ಅಥವಾ ಭಾವನಾತ್ಮಕ ವಿಷಯಗಳಲ್ಲಿ ಎಚ್ಚರಿಕೆ ಒಳ್ಳೆಯದು. ನೀವು ವಾಸಿಸುತ್ತಿರುವ ಸ್ಥಳಗಳನ್ನು ಬದಲಾಯಿಸುವ ಸಾಧ್ಯತೆ ಇದೆ ಅಥವಾ ಬೇರೆ ನಗರಕ್ಕೆ ಸ್ಥಳಾಂತರವಾಗಬಹುದು. ಗ್ರಹಗತಿಗಳ ಬದಲಾವಣೆಯಿಂದಾಗಿ ನಿಮ್ಮ ಆಂತರಿಕ ಪ್ರಪಂಚ ಮತ್ತು ಪೂರ್ವಜರ ವಂಶಾವಳಿಯನ್ನು ನಿಯಂತ್ರಿಸುತ್ತದೆ, ಇದರಿಂದ ನೀವು ಹೆಚ್ಚು ಕ್ಷೀಣಿಸುತ್ತೀರಿ. ಅಲ್ಲದೆ ನೀವು ವ್ಯಾಪಾಸ್ಥರಾಗಿದ್ದರೆ, ನಿಮ್ಮ ಪಾಲುದಾರಿಕೆಯನ್ನು ಈ ವೇಳೆ ಪರೀಕ್ಷಿಸಲಾಗುತ್ತದೆ.

ಕುಂಭ ರಾಶಿ
ಈ ಸಂದರ್ಭದಲ್ಲಿ ನೀವು ಸ್ವಲ್ಪ ಕಷ್ಟದಲ್ಲಿರುತ್ತೀರಿ, ಆದರೆ ಮುಖ್ಯವಾಗಿ ನೀವು ನಿಮ್ಮನ್ನು ಸ್ವತಂತ್ರಗೊಳಿಸಿಕೊಳ್ಳುತ್ತಿದ್ದೀರಿ. ಈ ನಿಮ್ಮ ಸ್ವಾತಂತ್ರ್ಯ ಮುಂದೆ ನಿಮಗೆ ಸಾಕಷ್ಟು ಪ್ರಯೋಜನಕಾರಿಯಾಗಲಿದೆ. ಡಿಸೆಂಬರ್ ತಿಂಗಳು ಮತ್ತು ಜನವರಿ ಪೂರ್ಣ ಮಾಸ ನೀವು ಗಮನದಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯವೆಂದರೆ ನಿಮ್ಮೊಂದಿಗೆ ಸೌಮ್ಯವಾಗಿರುವುದು. ನಿಮ್ಮನ್ನು ಭಾವನೆಗಳಿಂದ ಬೇರ್ಪಡಿಸಿಕೊಳ್ಳಬೇಡಿ. ನಿಮಗೆ ಅಗತ್ಯವಿರುವ ವಿಶ್ರಾಂತಿ ಮತ್ತು ಕಾಳಜಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ.