For Quick Alerts
ALLOW NOTIFICATIONS  
For Daily Alerts

Ketu Transit 2023 Effects : ಕೇತು ಸಂಚಾರ: 2023ರಲ್ಲಿ ಮೇಷ-ಕನ್ಯಾ ರಾಶಿಗಳ ಮೇಲೆ ಕೇತು ಪ್ರಭಾವ ಈ ರೀತಿಯಿದೆ

|

ವೈದಿಕ ಶಾಸ್ತ್ರದಲ್ಲಿ ಕೇತುವನ್ನು ಅತ್ಯಂತ ನಿಗೂಢ ಗ್ರಹವೆಂದು ಪರಿಗಣಿಸಲಾಗಿದೆ. ಇದು ಜೀವನದಲ್ಲಿ ನಿರ್ಲಿಪ್ತತೆಯ ಅಂಶವಾಗಿದೆ ಮತ್ತು ಒಬ್ಬ ವ್ಯಕ್ತಿಯನ್ನು ಲೌಕಿಕ ಭ್ರಮೆಯಿಂದ ದೂರವಿಟ್ಟು ಅವನನ್ನು ದೇವರ ಆಶ್ರಯಕ್ಕೆ ಕರೆದೊಯ್ಯುವ ಕೆಲಸ ಮಾಡುತ್ತದೆ.

ಕೇತು ಬಗ್ಗೆ ಪೌರಣಿಕ ಕತೆ
ಕೇತು ಜನಿಸಿದಾಗ ಅವನು ವಿವಿಧ ಋಷಿಗಳಿಂದ ಪೋಷಿಸಲ್ಪಟ್ಟನು, ರಾಹು ಎಂದು ಕರೆಯಲ್ಪಡುವ ತಲೆಯು ಅವನ ರಾಕ್ಷಸ ತಾಯಿಯಿಂದ ಪೋಷಿಸಲ್ಪಟ್ಟಿತು, ಆದ್ದರಿಂದ ರಾಹುವು ರಾಕ್ಷಸ ಗುಣಗಳನ್ನು ಅಧಿಕವಾಗಿ ಹೊಂದಿದ್ದನು ಮತ್ತು ಕೇತುವು ಆಳವಾದ ಜ್ಞಾನದ ಯಜಮಾನನಾದನು. ಋಷಿಗಳು ಮತ್ತು ಆಧ್ಯಾತ್ಮಿಕತೆಯನ್ನು ಪಡೆದ ನಂತರ, ಅವರ ಪ್ರಭಾವವೂ ತನ್ನೊಳಗೆ ಸೇರಿಕೊಂಡಿತು. ಈ ಕಾರಣಕ್ಕಾಗಿ, ಕೇತು ಗ್ರಹವನ್ನು ಧಾರ್ಮಿಕ ಗ್ರಹ ಎಂದೂ ಕರೆಯುತ್ತಾರೆ ಮತ್ತು ಅದು ವಿಶೇಷ ಸಂದರ್ಭಗಳಲ್ಲಿ ಜಾತಕದಲ್ಲಿ ನೆಲೆಗೊಂಡಾಗ, ಇದು ಜೀವನದಲ್ಲಿ ವ್ಯಕ್ತಿಗೆ ಮೋಕ್ಷವನ್ನು ಒದಗಿಸುವ ಗ್ರಹವೆಂದು ಪರಿಗಣಿಸಲಾಗುತ್ತದೆ.

ಕೇತು ಗ್ರಹಕ್ಕೆ ತಲೆ ಇಲ್ಲದಿರುವುದರಿಂದ ಅದು ವ್ಯಕ್ತಿಯ ಜಾತಕದಲ್ಲಿ ನೆಲೆಗೊಂಡಿದೆ. ಯಾವ ರಾಶಿಯವರ ಜಾತಕದಲ್ಲಿ ಕೇತು ಗ್ರಹದ ದಶಾ ಇರುತ್ತದೋ ಅವರ ಮೇಲೆ ತನ್ನಪ್ರಭಾವವನ್ನು ಬೀರುತ್ತದೆ.

ಕೇತುವು ಧರ್ಮದ ಪ್ರಬಲ ಮತ್ತು ಕರ್ಮ ಪ್ರಧಾನ ಗ್ರಹವಾಗಿದೆ. ಕೇತುವು ನಮ್ಮ ರಾಶಿಯಲ್ಲಿ ಉನ್ನತ ಸ್ಥಾನದಲ್ಲಿದ್ದರೆ ಅನೇಕ ಒಳ್ಳೆಯ ಘಟನೆಗಳು ನಮ್ಮ ಸುತ್ತ ನಡೆಯುತ್ತದೆ, ಅದೇ ನಮ್ಮ ರಾಶಿಯಲ್ಲಿ ದುರ್ಬಲ ಸ್ಥಾನದಲ್ಲಿದ್ದರೆ ಅದರ ಪ್ರಬಲ ಕೆಟ್ಟದಾಗಿರುತ್ತದೆ.

Ketu Transit 2023 Effects : ಕೇತು ಸಂಚಾರ: 2023ರಲ್ಲಿ ತುಲಾ-ಮೀನ ರಾಶಿಗಳ ಮೇಲೆ ಕೇತು ಪ್ರಭಾವ ಈ ರೀತಿಯಿದೆ

2023 ಗ್ರಹಗಳ ಸಂಚಾರದ ದೃಷ್ಟಿಯಿಂದ ಪ್ರಮುಖವಾದ ವರ್ಷವಾಗಲಿದೆ. ಶನಿ ಸಂಚಾರವಿದೆ. ಕೇತು ಸಂಚಾರ ಕೂಡ ಇದೆ. 2023ರಲ್ಲಿ ಕೇತು ಸಂಚಾರ ಯಾವಾಗ? ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ ಎಂದು ನೋಡೋಣ ಬನ್ನಿ:

2023ರಲ್ಲಿ ಕೇತು ಸಂಚಾರ ಯಾವಾಗ?

2023ರಲ್ಲಿ ಕೇತು ಸಂಚಾರ ಯಾವಾಗ?

ಕೇತು ಹಾಗೂ ರಾಹು ಒಂದೂವರೆ ವರ್ಷಗಳಿಗೊಮ್ಮೆ ರಾಶಿ ಬದಲಾಯಿಸುತ್ತದೆ. ಕೇತು 2023ರಲ್ಲಿ ಅಕ್ಟೋಬರ್ 30 ಮಧ್ಯಾಹ್ನ 14:13ಕ್ಕೆ ಕನ್ಯಾ ರಾಶಿಗೆ ಪ್ರವೇಶಿಸಲಿದೆ. ಕೇತು ಕನ್ಯಾ ರಾಶಿಯಲ್ಲಿರುವಾಗ ಪ್ರತಿಯೊಂದು ರಾಶಿಯ ಮೇಲೂ ಪ್ರಭಾವ ಬೀರಲಿದ್ದು ಇಲ್ಲಿ ಮೇಷ-ಕನ್ಯಾ ರಾಶಿಗಳ ಮೇಲೆ ಈ ಕೇತು ಸಂಚಾರ ಹೇಗೆ ಪ್ರಭಾವ ಬೀರಲಿದೆ ಎಂದು ಹೇಳಲಾಗಿದೆ ನೋಡಿ:

 ಮೇಷ ರಾಶಿ

ಮೇಷ ರಾಶಿ

ಕೇತು ಗೋಚಾರ ಫಲ 2023 ರ ಪ್ರಕಾರ ನಿಮಗೆ 2023 ರ ಆರಂಭದಲ್ಲಿ ಏಳನೇ ಮನೆಯಲ್ಲಿ ಕೇತು ಇರುತ್ತಾನೆ, ಕೇತು 7ನೇ ಮನೆಯಲ್ಲಿ ಇರುವುದರಿಂದ ನಿಮ್ಮ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳಿರುತ್ತದೆ. ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲ್ಲ, ಅನುಮಾನ ಹೆಚ್ಚುವುದು, ಸಂಬಂಧದಲ್ಲಿ ತುಂಬಾನೇ ಸಮಸ್ಯೆ ಬರಬಹುದು. ಇನ್ನು ವ್ಯಾಪಾರ ಮಾಡುತ್ತಿದ್ದರೆ, ವ್ಯಾಪಾರದಲ್ಲಿನ ಏರಿಳಿತದ ಪರಿಸ್ಥಿತಿಗಳಿಂದ ನೀವು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು.

ಅದೇ ಅಕ್ಟೋಬರ್ 30ರ ನಂತರ ಕೇತು ನಿಮ್ಮ 6ನೇ ಮನೆಗೆ ಸಾಗುತ್ತದೆ, ಆಗ ನಿಮ್ಮ ವೈವಾಹಿಕ ಜೀವನದ ಸಮಸ್ಯೆಗಳು ಕಡಿಮೆಯಾಗಿ ಪ್ರೀತಿ ಹೆಚ್ಚುವುದು. ಧಾರ್ಮಿಕ ವಿಷಯಗಳತ್ತ ಒಲವು ಹೆಚ್ಚುವುದು. ಈ ಸಮಯದಲ್ಲಿ ಆರೋಗ್ಯ ಸಮಸ್ಯೆ ಇರುತ್ತದೆ. ಈ ಸಮಯದಲ್ಲಿ ನಿಮ್ಮ ಖರ್ಚುಗಳಲ್ಲಿ ಸ್ವಲ್ಪ ಹೆಚ್ಚಳ ಕಂಡುಬರುತ್ತದೆ. ಉದ್ಯೋಗದಲ್ಲಿ ನಿಮ್ಮ ಸ್ಥಾನವು ಉತ್ತಮವಾಗಿರುತ್ತದೆ, ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿದ್ದರೆಅದಕ್ಕಾಗಿ ನೀವು ಕಠಿಣ ಪರಿಶ್ರಮ ಪಡಬೇಕಾಗುತ್ತದೆ.

ಪರಿಹಾರ: ಪ್ರತಿದಿನ ನಿಮ್ಮ ಹಣೆ ಮತ್ತು ಕುತ್ತಿಗೆಗೆ ಅರಿಶಿನ ತಿಲಕವನ್ನು ಹಚ್ಚಿ.

ವೃಷಭ ರಾಶಿ

ವೃಷಭ ರಾಶಿ

ಕೇತು ಗೋಚಾರ ಫಲ 2023 ರ ಪ್ರಕಾರ ವೃಷಭ ರಾಶಿಯವವರಲ್ಲಿ ವರ್ಷದ ಆರಂಭದಲ್ಲಿ ಕೇತು 6ನೇ ಮನೆಯಲ್ಲಿರುತ್ತಾನೆ. ಇದರಿಂದಾಗಿ ಆರೋಗ್ಯ ಸಮಸ್ಯೆಗಳು ಕಾಡಬಹುದು. ವೃಷಭ ರಾಶಿಯ ಮಹಿಳೆಯರು ಹೆಚ್ಚಿನ ಜಾಗ್ರತೆವಹಿಸಬೇಕು. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಯಶಸ್ಸನ್ನು ಪಡೆಯುತ್ತೀರಿ, ಉದ್ಯೋಗಸ್ಥರು ತಮ್ಮ ವೃತ್ತಿ ಕ್ಷೇತ್ರಗಳಲ್ಲಿಯೂ ಯಶಸ್ಸನ್ನು ಸಾಧಿಸಬಹುದು.

ಅಕ್ಟೋಬರ್ 30ರ ನಂತರ ಕೇತು ನಿಮ್ಮ 5ನೇ ಮನೆಯಲ್ಲಿ ಇರಲಿದೆ. ಪ್ರೇಮ ಸಂಬಂಧದಲ್ಲಿ ಸಮಸ್ಯೆಗಳು ಬರಬಹುದು, ನೀರಸ ಅನಿಸಬಹುದು, ಗಟ್ಟಿಯಾಗಿರದ ಸಂಬಂಧಗಳು ಮುರಿದು ಹೋಗಬಹುದು. ಆದರೆ ಈ ಸಂಚಾರ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡಲಿದೆ. ವಿವಾಹಿತರು ಮಕ್ಕಳ ಬಗ್ಗೆ ಕಾಳಜಿಯನ್ನು ವಹಿಸಬೇಕಾಗುತ್ತದೆ. ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಿ.

ಪರಿಹಾರ: ಕಂದು ಬಣ್ಣದ ಬಟ್ಟೆಗಳನ್ನು ನಿರ್ಗತಿಕರಿಗೆ ದಾನ ಮಾಡಿ.

ಮಿಥುನ ರಾಶಿ

ಮಿಥುನ ರಾಶಿ

ಕೇತು ಗೋಚಾರ ಫಲ 2023 ರ ಪ್ರಕಾರ ಮಿಥುನ ರಾಶಿಯವರಲ್ಲಿ ವರ್ಷದ ಆರಂಭದ ತಿಂಗಳುಗಳಲ್ಲಿ ಕೇತು 5ನೇ ಮನೆಯಲ್ಲಿ ಇರಲಿದೆ. ಇದರಿಂದ ಪ್ರೀತಿ ಸಂಬಂಧದಲ್ಲಿರುವವರಿಗೆ ಈ ಸಮಯ ಪ್ರತಿಕೂಲವಾಗಿರುತ್ತದೆ. ನಿಮ್ಮಲ್ಲಿ ತಪ್ಪು ತಿಳುವಳಿಕೆ ಹೆಚ್ಚಾಗಿ ಅಂತರ ಬರಬಹುದು.

ಅಕ್ಟೋಬರ್ 30ರ ನಂತರ ಕೇತು ನಿಮ್ಮ ರಾಶಿರ 4ನೇ ಮನೆಯಲ್ಲಿ ಇರಲಿದೆ. ಈ ಮನೆಯನ್ನು ಕೂಡ ಹೆಚ್ಚು ಅನುಕೂಲಕರವೆಂದು ಪರಿಗಣಿಸಲಾಗುವುದಿಲ್ಲ. ಈ ಕಾರಣಕ್ಕಾಗಿ, ನಿಮ್ಮ ಕುಟುಂಬ ಜೀವನಕ್ಕೆ ನೀವು ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ಈ ಸಮಯದಲ್ಲಿ ನಿಮ್ಮ ತಾಯಿಯ ಆರೋಗ್ಯ ಕ್ಷೀಣಿಸಬಹುದು ಮತ್ತು ಅವರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕೌಟುಂಬಿಕ ಕಲಹಗಳು ಹೆಚ್ಚಾಗುವ ಸಾಧ್ಯತೆಯೂ ಇದೆ. ನೀವು ಕುಟುಂಬದಲ್ಲಿದ್ದರೂ ನೀವು ಒಬ್ಬಂಟಿಯಾಗಿರುವಂತೆ ಭಾವಿಸುವಿರಿ. ಸ್ವಲ್ಪ ಸಮಯದವರೆಗೆ ಕುಟುಂಬದಿಂದ ದೂರ ಹೋಗಿ ಪ್ರತ್ಯೇಕವಾಗಿ ವಾಸಿಸುವುದು ಸಹ ಸಂಭವಿಸಬಹುದು. ಆದರೆ ಕೇತು ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನವನ್ನು ಬಲಪಡಿಸುತ್ತದೆ. .

ಪರಿಹಾರ: ಪ್ರತಿದಿನ ಏಳು ಬಗೆಯ ಧಾನ್ಯಗಳನ್ನು ಪಕ್ಷಿಗಳಿಗೆ ತಿನ್ನಲು ಹಾಕಿ.

ಕರ್ಕ ರಾಶಿ

ಕರ್ಕ ರಾಶಿ

ಕೇತು ಗೋಚಾರ ಫಲ 2023 ರ ಪ್ರಕಾರ ವರ್ಷದ ಆರಂಭದ ತಿಂಗಳಿನಲ್ಲಿ ಕೇತು ನಿಮ್ಮ 4ನೇ ಮನೆಯಲ್ಲಿ ಇರಲಿದೆ. ಈ ಕಾರಣಕ್ಕಾಗಿ, ಕೌಟುಂಬಿಕ ಜೀವನದಲ್ಲಿ ಸ್ವಲ್ಪ ಒತ್ತಡದ ಸಾಧ್ಯತೆಯಿದೆ. ಸಣ್ಣ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೆಚ್ಚಬಹುದು.. ಮನೆಯನ್ನು ನಿರ್ವಹಿಸಲು ಸಾಕಷ್ಟು ತಾಳ್ಮೆ ಮತ್ತು ಪ್ರಯತ್ನಗಳು ಬೇಕಾಗುತ್ತವೆ, ಬೇರೆ ಹೋಗಿ ವಾಸಿಸುವ ಸಂಭವ ಕೂಡ ಇದೆ . ಕೆಲಸದ ಕ್ಷೇತ್ರಕ್ಕೆ ಸಮಯ ಉತ್ತಮವಾಗಿರುತ್ತದೆ.

ಅಕ್ಟೋಬರ್ 30ರ ನಂತರ ಕೇತು ನಿಮ್ಮ ರಾಶಿಯ 3ನೇ ಮನೆಯಲ್ಲಿ ಇರಲಿದೆ. ಈ ಸಂಚಾರವು ನಿಮಗೆ ಅನುಕೂಲಕರವಾಗಿರುತ್ತದೆ ಏಕೆಂದರೆ ಮೂರನೇ ಮನೆಯಲ್ಲಿ ಕೇತುವಿನ ಸಂಚಾರವು ಅನುಕೂಲಕರವೆಂದು ಪರಿಗಣಿಸಲಾಗಿದೆ. ಕೇತುವು ನಿಮ್ಮ ಧೈರ್ಯ ಮತ್ತು ಶೌರ್ಯವನ್ನು ಹೆಚ್ಚಿಸುವುದಲ್ಲದೆ, ನಿಮ್ಮ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯುವ ಮೂಲಕ ನೀವು ಉತ್ತಮ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ನೀವು ಹಣಕಾಸಿನ ಪ್ರಯೋಜನಗಳನ್ನು ಪಡೆಯುತ್ತೀರಿ ಮತ್ತು ಈ ಸಮಯವು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಕೇತು ನಿಮಗೆ ಮುಂದೆ ಹೋಗಲು ಅವಕಾಶಗಳನ್ನು ನೀಡುತ್ತದೆ. ನೀವು ಕ್ರೀಡಾಪಟುವಾಗಿದ್ದರೆ ಈ ಸಮಯವು ಇನ್ನಷ್ಟು ಪ್ರಯೋಜನಕಾರಿಯಾಗಿದೆ. ಈ ಸಮಯದಲ್ಲಿ, ನೀವು ಆಸ್ತಿಯ ಮಾರಾಟ ಮತ್ತು ಖರೀದಿಯಿಂದಲೂ ಪ್ರಯೋಜನ ಪಡೆಯಬಹುದು.

ಪರಿಹಾರ: ಮಂಗಳವಾರ ದೇವಾಲಯದಲ್ಲಿ ತ್ರಿಕೋನ ಕೆಂಪು ಧ್ವಜವನ್ನು ದಾನ ಮಾಡಿ.

ಸಿಂಹ ರಾಶಿ

ಸಿಂಹ ರಾಶಿ

ಕೇತು ಗೋಚಾರ ಫಲ 2023 ರ ಪ್ರಕಾರ ಸಿಂಹ ರಾಶಿಯವರಲ್ಲಿ ವರ್ಷದ ಆರಂಭದಲ್ಲಿ ಕೇತು ನಿಮ್ಮ ಮೂರನೇ ಮನೆಯಲ್ಲಿ ಇರಲಿದೆ. ಕೇತು 3ನೇ ಮನೆಯಲ್ಲಿ ಇರುವಾಗ ನಿಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಧೈರ್ಯ ಮತ್ತು ಶಕ್ತಿಯನ್ನು ಹೆಚ್ಚಿಸುವ ಸಾಧ್ಯತೆಗಳಿವೆ, ನಿಮ್ಮ ಕೆಲಸದಲ್ಲಿ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ನಿಮ್ಮೊಂದಿಗೆ ಕೆಲಸ ಮಾಡುವ ಸಹೋದ್ಯೋಗಿಗಳ ಸಹಕಾರದಿಂದ ಯಶಸ್ಸು ಪಡೆಯುತ್ತೀರಿ.

ಅದಾದ ಬಳಿಕ ಅಕ್ಟೋಬರ್ 30 ಕ್ಕೆ ಕೇತು ಕನ್ಯಾ ರಾಶಿಗೆ ಹೋದಾಗ ನಿಮ್ಮ ರಾಶಿಯ 2ನೇ ಮನೆಯಲ್ಲಿ ಇರಲಿದೆ. , ಅದು ನಿಮ್ಮ ಮಾತಿನ ಮನೆಯೂ ಆಗಿದೆ. ಈ ಮನೆಯಲ್ಲಿ ಕೇತು ಸಂಚಾರದಿಂದ ನಿಮ್ಮ ಮಾತಿನಲ್ಲಿ ಬದಲಾವಣೆಗಳು ಪ್ರಾರಂಭವಾಗುತ್ತವೆ. ನೀವು ಡಬಲ್ ಮೀನಿಂಗ್‌ನಲ್ಲಿ ಮಾತನಾಡಲು ಪ್ರಾರಂಭಿಸುತ್ತೀರಿ. ಈ ಸಮಯದಲ್ಲಿ ಮಾತನಾಡುವಾಗ ಜಾಗ್ರತೆವಹಿಸಬೇಕು. ಅಲ್ಲದೆ ನಿಮ್ಮ ಆಹಾರಕ್ರಮದ ಕಡೆಗೂ ವಿಶೇಷ ಗಮನ ಹರಿಸಬೇಕು. ಹಣಕಾಸಿನ ದೃಷ್ಟಿಯಿಂದ ಅಷ್ಟು ಅನುಕೂಲಕರವಲ್ಲ, ಆದ್ದರಿಂದ ಹಣವನ್ನುಜಾಗ್ರತೆಯಿಂದ ಖರ್ಚು ಮಾಡಬೇಕು. ಒಡಹುಟ್ಟಿದವರ ಸಹಕಾರದಿಂದ ನೀವು ಆರ್ಥಿಕ ಲಾಭವನ್ನು ಪಡೆಯಬಹುದು. ನೀವು ಕಣ್ಣಿನ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು.

ಪರಿಹಾರ: ಪ್ರತಿದಿನ ನಿಯಮಿತವಾಗಿ ಒಂದು ಚಮಚ ಜೇನುತುಪ್ಪವನ್ನು ನೀರಿನಲ್ಲಿ ಬೆರೆಸಿ ಕುಡಿಯಿರಿ.

ಕನ್ಯಾ ರಾಶಿ

ಕನ್ಯಾ ರಾಶಿ

ಕೇತು ಗೋಚಾರ ಫಲ 2023 ರ ಪ್ರಕಾರ ವರ್ಷದ ಆರಂಭದಲ್ಲಿ ಕೇತು ಕನ್ಯಾ ರಾಶಿಯಲ್ಲಿ ಇರಲಿದೆ. ಇದರಿಂದಾಗಿ ಕೆಲ ಆರೋಗ್ಯ ಸಮಸ್ಯೆ ಕಾಡಬಹುದು, ನೀವು ನಿಮ್ಮ ಆಹಾರಕ್ರಮದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಅಲ್ಲದೆ ನಿಮ್ಮ ಮಾತುಗಳ ಮೇಲೆ ತುಂಬಾನೇ ಎಚ್ಚರವಹಿಸಬೇಕು, ಇಲ್ಲದಿದ್ದರೆ ಸಂಬಂಧಗಳನ್ನು ಹಾಳು ಮಾಡಬಹುದು. ಆರ್ಥಿಕವಾಗಿ, ಈ ಸಮಯವು ಸ್ವಲ್ಪ ದುರ್ಬಲವಾಗಿರುತ್ತದೆ, ಆದ್ದರಿಂದ ನೀವು ಆರ್ಥಿಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈ ಅವಧಿಯಲ್ಲಿ ನೋಡಿ ಖರ್ಚು ಮಾಡಬೇಕು.

ಅಕ್ಟೋಬರ್ 30 ಕ್ಕೆ ಕೇತು ನಿಮ್ಮ ರಾಶಿಗೆ ಸಂಚರಿಸಲಿದೆ. ಕೇತು ನಿಮ್ಮ ಲಗ್ನ ಮನೆಯಲ್ಲಿರುವಾಗ ನಿಮ್ಮ ಹಣಕಾಸಿನ ಸಮಸ್ಯೆಗಳು ಕಡಿಮೆಯಾಗಲಿದೆ. ನಿಧಾನವಾಗಿ ನೀವು ಆರ್ಥಿಕವಾಗಿ ಸಮೃದ್ಧರಾಗಲು ಪ್ರಾರಂಭಿಸುತ್ತೀರಿ. ನಿಮ್ಮ ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿರಬೇಕು. ನಿಮ್ಮ ನಡವಳಿಕೆಯಲ್ಲಿ ಕೆಲವು ಬದಲಾವಣೆಗಳಾಗುತ್ತವೆ. ನೀವು ಸ್ವಲ್ಪ ನಿಗೂಢವಾಗಿರುತ್ತೀರಿ ಮತ್ತು ನಿಮ್ಮ ಜೀವನ ಸಂಗಾತಿ ಮತ್ತು ನಿಮ್ಮ ಸುತ್ತಮುತ್ತಲಿನ ಜನರು ನಿಮ್ಮನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವಲ್ಲಿ ಸ್ವಲ್ಪ ಸಮಸ್ಯೆ ಇರುತ್ತದೆ. ನಿಮ್ಮ ನಡವಳಿಕೆ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರದಂತೆ ನೀವು ಬುದ್ಧಿವಂತಿಕೆಯಿಂದ ಪರಿಸ್ಥಿತಿ ನಿಭಾಯಿಸಿ. ಅಂತರ್ಮುಖಿ ಮನೋಭಾವದಿಂದ ದೂರವಿರುವುದು ನಿಮಗೆ ಪ್ರಯೋಜನಕಾರಿಯಾಗಿದೆ.

ಪರಿಹಾರ: ಬೀದಿ ನಾಯಿಗಳಿಗೆ ಹಾಲು ಮತ್ತು ರೊಟ್ಟಿ ಹಾಕಿ, ಬೀದಿ ನಾಯಿಯನ್ನು ಮನೆಗೆ ತಂದು ಸಾಕಿ.

English summary

Ketu Transit 2023 Effects : Know Ketu Transit in Virgo 2023 Date, Impact, Remedies On Aries To Virgo Zodiac Signs in Kannada

Ketu Rashi Parivartan 2023 Predictions in Kannada: Let us now know about Ketu Transit 2023 in Virgo date, time, effects, remedies, and how it will affect all Aries To Virgo Zodiac Signs.
X
Desktop Bottom Promotion