Just In
Don't Miss
- News
ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ: ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಟೀಕೆ
- Movies
ಈ ಷರತ್ತಿಗೆ ಓಕೆ ಅಂದ್ರೆ 'ಅರ್ಜುನ್ ರೆಡ್ಡಿ' ನಿರ್ದೇಶಕನ ಜೊತೆ ರಣ್ಬೀರ್ ಚಿತ್ರ!
- Sports
ರನ್ ಬೆನ್ನತ್ತುವ ಪರೀಕ್ಷೆಗೆ ಭಾರತ ಸಿದ್ದ: ವಿರಾಟ್ ಕೊಹ್ಲಿ
- Automobiles
ಜನವರಿ 1ರಿಂದ ಟಾಟಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ
- Finance
ವಿಶ್ವದ ಬೃಹತ್ ಕಂಪನಿಗಳನ್ನು ಮುನ್ನಡೆಸುತ್ತಿರುವ ಟಾಪ್ 10 ಭಾರತೀಯರು
- Technology
ಗೂಗಲ್ ಫೋಟೋಸ್ ನಲ್ಲಿ ಇದೀಗ ಚಾಟ್ ಫೀಚರ್- ಇದರಲ್ಲಿ ನೀವೇನು ಮಾಡಬಹುದು?
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
- Travel
ಭಾರತದಲ್ಲಿ ಖಗೋಳ ಛಾಯಾಚಿತ್ರಗ್ರಹಣ ಮಾಡಲು ಇಲ್ಲಿವೆ ಬೆಸ್ಟ್ ಸ್ಥಳಗಳು
ರೈತನ ಬೆಳೆ ರಕ್ಷಿಸುತ್ತಿರುವ ಹುಲಿವೇಷದ ನಾಯಿ
ಶಿವಮೊಗ್ಗದ ರೈತರೊಬ್ಬರ ಮನೆಯಲ್ಲಿ ಹುಲಿಯೊಂದು ಓಡಾಡಿದಂತೆ ಕಂಡವರು ಅರೆಕ್ಷಣ ಅಯ್ಯೋ... ಇಲ್ಲಿಗೆ ಹುಲಿ ಬಂದಿದೆಯೇ? ಎಂದು ಗಾಬರಿ ಬೀಳುತ್ತಿದ್ದರು. ಸೂಕ್ಷ್ಮವಾಗಿ ನೋಡಿದರೆ ಹುಲಿಯಲ್ಲ, ಅರೇ... ಹುಲಿ ಅಲ್ಲ, ಹುಲಿಯಂತೆ ಕಾಣುವ ಈ ಪ್ರಾಣಿ ಯಾವುದೆಂದು ನೋಡಿದರೆ ಅದೊಂದು ನಾಯಿಯಾಗಿತ್ತು. ನಾಯಿಗೆ ಹುಲಿಯಂತೆ ಕಾಣಲು ಬಣ್ಣ ಬಳಿದಿದ್ದರು.
ಇದೇನು ಹುಲಿವೇಷಕ್ಕೆ ಮನುಷ್ಯರು ಬಣ್ಣ ಬಳಿದಂತೆ ನಾಯಿಗೂ ಬಳಿದಿದ್ದಾರೆ, ಈ ನಾಯಿಗೆ ಏಕೆ ಬೇಕು ಈ ಹುಲಿಯ ಬಣ್ಣ ಎಂದು ನೋಡಿದರೆ ಅಲ್ಲಿ ಹುಲಿಯಂತೆ ಕಾಣುವ ನಾಯಿಯನ್ನು ತನ್ನ ಬೆಳೆಯ ರಕ್ಷಣೆಗೆ ಬಳಸಿದ ರೈತನ ಚಾಣಾಕ್ಷತನ ಹಾಗೂ ಅವನ ನೋವು ಎರಡೂ ಎದ್ದು ಕಾಣುತ್ತದೆ.
ರೈತರು ಬೆಳೆದ ಬೆಲೆ ಕೈ ಸಿಗಲು ಎಷ್ಟು ಕಷ್ಟಪಡುತ್ತಾರೆ ಎನ್ನುವುದು ಅವರಿಗಷ್ಟೇ ಗೊತ್ತಿರುತ್ತದೆ. ಪ್ರಕೃತಿ ವಿಕೋಪ, ಮಂಗ, ಹಂದಿ ಹೀಗೆ ಇತರ ಪ್ರಾಣಿಗಳ ಕಾಟಗಳಿಂದ ರೈತ ತನ್ನ ಬೆಳೆ ರಕ್ಷಣೆ ಮಾಡುವಷ್ಟರಲ್ಲಿ ಸುಸ್ತಾಗಿ ಹೋಗುತ್ತಾನೆ. ಇನ್ನು ಬೆಳೆ ಬೆಳೆಯುವ ಕಡೆ ಮಂಗಗಳ ಕಾಟ ಇದ್ದರಂತೂ ಮುಗಿಯಿತು. ಬೆಳೆದು ಬಂದ ಬೆಳೆಗಳು ಕಪಿಚೇಷ್ಠೆಗೆ ಸಿಲುಕಿ ನಲುಗಿ ಹೋಗಿರುತ್ತವೆ. ಎಷ್ಟೇ ಕಾವಲು ಕುಳಿತರು ಅವು ತಮ್ಮ ಕೆಲಸ ಮಾಡದೆ ಬಿಡುವುದಿಲ್ಲ. ಇನ್ನು ಅವುಗಳಿಗಂತೂ ಮನುಷ್ಯನ ಭಯ ಇರುವುದಿಲ್ಲ.
ಹಾಗಾಗಿ ತನ್ನ ಬೆಳೆಯನ್ನು ರಕ್ಷಣೆ ಮಾಡಲು ತೀರ್ಥಹಳ್ಳಿ ತಾಲೂಕಿನ ನಲ್ಲೂರು ರೈತ ಶ್ರೀಕಂಠ ಗೌಡ ಈ ಐಡಿಯಾ ಮಾಡಿದ್ದಾರೆ. ಅವರ ಬೆಳೆಗೆ ಮಂಗಗಳು ದಾಳಿ ತುಂಬಾ ನಷ್ಟ ಮಾಡುತ್ತಿದ್ದವು. ಆಗ ಬಟ್ಕಳದಲ್ಲಿ ಒಬ್ಬ ರೈತ ಹುಲಿಯ ಆಕೃತಿ ತಂದು ಇಟ್ಟಾಗ ಅದಕ್ಕೆ ಹೆದರಿ ಮಂಗಗಳು ಬಾರದಿದ್ದ ಕತೆ ಕೇಳಿದ್ದು ನೆನಪಾಗಿ ಹಾಗೇ ಮಾಡುತ್ತಾರೆ.
ಹುಲಿಯ ಆಕೃತಿಯನ್ನು ನೋಡಿ ಭಯಪಟ್ಟು ಮಂಗಗಳು ಬರುತ್ತಿರಲಿಲ್ಲ, ಆದರೆ ಆ ಆಕೃತಿ ಎಲ್ಲಿಗೂ ಚಲಿಸದೆ ಒಂದೇ ಕಡೆ ಇರುವುದನ್ನು ನೋಡಿದ ಮಂಗಗಳು ಮತ್ತೆ ತಮ್ಮ ಕಪಿಚೇಷ್ಠೆಗೆ ಮುಂದಾಗುತ್ತವೆ. ಆಗ ಶ್ರೀಕಂಠ ಗೌಡರಿಗೆ ಹೊಳೆದಿದ್ದೇ ನಾಯಿಯನ್ನೇ ಹುಲಿ ಮಾಡುವ ಯೋಚನೆ.
#Karnataka farmer paints #TigerStripes on #dog to #SaveCrop from #monkeys
— 4to40 (@4to40) November 29, 2019
Srikanta Gowda, a farmer from #Naluru village, #Thirthahalli taluk in #Karnataka, has painted his dog to look like a tiger to save his crop from monkeys. https://t.co/ZZwhD2pe0g pic.twitter.com/VBhcbEeEWT
ಇದೀಗ ನಾಯಿ ಹುಲಿಯ ಗತ್ತಿನಲ್ಲಿ ಬೆಳೆ ಬೆಳೆದ ತೋಟದಲ್ಲಿ ಓಡಾಡುತ್ತಿದ್ದರೆ ಮಂಗಗಳು ಅದಕ್ಕೆ ಹೆದರಿ ಬರುವುದನ್ನು ನಿಲ್ಲಿಸಿವೆ. ತಮ್ಮ ಐಡಿಯಾ ವರ್ಕ್‌ಔಟ್ ಆಯ್ತು ಅಂತ ಶ್ರೀಕಂಠ ಗೌಡರಿಗೂ ನೆಮ್ಮದಿಯಾಗಿದೆ. ಇವರ ಐಡಿಯಾಕ್ಕೆ ಟ್ವಿಟರ್‌ನಲ್ಲಿ ಭಾರಿ ಮೆಚ್ಚುಗೆಯೂ ಸಿಕ್ಕಿದೆ.