For Quick Alerts
ALLOW NOTIFICATIONS  
For Daily Alerts

ಜುಲೈ 16ಕ್ಕೆ ಕರ್ಕ ಸಂಕ್ರಾಂತಿ: ಈ ದಿನ ಪೂಜೆಗೆ ತುಂಬಾ ಶ್ರೇಷ್ಠ, ಈ ದಿನದ ಪೂಜಾ ವಿಧಿಗಳು ಹೇಗಿರಬೇಕು?

|

ಸೂರ್ಯನ ರಾಶಿ ಬದಲಾವಣೆಯನ್ನು ಸಂಕ್ರಾಂತಿ ಎಂದು ಕರೆಯಲಾಗುವುದು. ಈ ತಿಂಗಳಿನಲ್ಲಿ ಸೂರ್ಯನು ಕರ್ಕ ರಾಶಿಗೆ ಪ್ರವೇಶಿಸಲಿದೆ. ಈ ಕರ್ಕ ಸಂಕ್ರಾಂತಿ ತುಂಬಾನೇ ವಿಶೇಷವಾಗಿದೆ.

Karka Sankranti

ಕರ್ಕ ಸಂಕ್ರಾಂತಿಯು ಸೂರ್ಯ ದೇವನ ದಕ್ಷಿಣ ಯಾತ್ರೆಯ ಆರಂಭವನ್ನು ಸೂಚಿಸುತ್ತದೆ. ಆರು ತಿಂಗಳ ಕಾಲ ನಡೆಯುವ ದಕ್ಷಿಣಾಯನವು ಕರ್ಕ ಸಂಕ್ರಾಂತಿಯಂದು ಪ್ರಾರಂಭವಾಗುತ್ತದೆ. ಕರ್ಕ ಸಂಕ್ರಾಂತಿಯು ಮಕರ ಸಂಕ್ರಾಂತಿಯ ಪ್ರತಿರೂಪವಾಗಿದೆ ಮತ್ತು ದತ್ತಿ ಚಟುವಟಿಕೆಗಳಿಗೆ ಪ್ರಮುಖವೆಂದು ಪರಿಗಣಿಸಲಾಗಿದೆ.

ಈ ಸಮಯದಲ್ಲಿ ದೇವತೆಗಳು ನಿದ್ರಿಸುತ್ತಾರೆ ಎಂದು ನಂಬಲಾಗಿದೆ. ಈ ದಿನದಂದು ಭಕ್ತರು ಮಹಾವಿಷ್ಣುವನ್ನು ಸ್ಮರಿಸುತ್ತಾ ಕರ್ಕ ಸಂಕ್ರಾಂತಿ ಉಪವಾಸವನ್ನು ಆಚರಿಸುತ್ತಾರೆ. ಕರ್ಕ ಸಂಕ್ರಾಂತಿಯಂದು ಬಡವರಿಗೆ ಅನ್ನದಾನ, ವಸ್ತ್ರದಾನ ಮಾಡುವುದರಿಂದ ಪುಣ್ಯ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ. ಈ ದಿನ ಸೂರ್ಯ ದೇವನನ್ನು ಹಾಗೂ ಶ್ರೀ ವಿಷ್ಣುವನ್ನು ಪೂಜಿಸಬೇಕು.

ಈ ವರ್ಷ, ಕರ್ಕ ಸಂಕ್ರಾಂತಿಯನ್ನು ಶನಿವಾರ, ಜುಲೈ 16, 2022 ರಂದು ಆಚರಿಸಲಾಗುತ್ತದೆ. ಕರ್ಕಾಟಕ ಸಂಕ್ರಾಂತಿಯ ದಿನಾಂಕ, ಶುಭ ಮುಹೂರ್ತ, ಪೂಜಾ ವಿಧಾನ ಮತ್ತು ಮಹತ್ವವನ್ನು ತಿಳಿಯೋಣ:

ಕರ್ಕ ಸಂಕ್ರಾಂತಿ 2022 ದಿನಾಂಕ

ಕರ್ಕ ಸಂಕ್ರಾಂತಿ 2022 ದಿನಾಂಕ

ಜುಲೈ 16ರ ಶನಿವಾರದಂದು ಕರ್ಕ ಸಂಕ್ರಾಂತಿಯನ್ನು ಆಚರಿಸಲಾಗುವುದು.

ಕರ್ಕ ಸಂಕ್ರಾಂತಿ ಪುಣ್ಯ ಕಾಲ: ಜುಲೈ 16, ಶನಿವಾರ, ಮಧ್ಯಾಹ್ನ 12:28 ರಿಂದ 06:45 ರವರೆಗೆ

ಕರ್ಕ ಸಂಕ್ರಾಂತಿ ಮಹಾ ಪುಣ್ಯ ಕಾಲ: ಜುಲೈ 16, ಶನಿವಾರ ಸಂಜೆ 04:40 ರಿಂದ 06:45 ರವರೆಗೆ

ಕರ್ಕ ಸಂಕ್ರಾಂತಿಯ ಮಹತ್ವ

ಕರ್ಕ ಸಂಕ್ರಾಂತಿಯ ಮಹತ್ವ

ಕರ್ಕ ಸಂಕ್ರಾಂತಿಯನ್ನು ಶ್ರಾವಣ ಮಾಸದ ಆರಂಭದ ಸಂಕೇತವೆಂದು ಪರಿಗಣಿಸಲಾಗಿದೆ. ಈ ದಿನ ಉತ್ತರಾಯಣ ಮುಗಿದು ದಕ್ಷಿಣಾಯನ ಪ್ರಾರಂಭವಾಗುತ್ತದೆ. ಈ ದಿನದಂದು ಪುವಾಸವಿದ್ದು ಶ್ರೀ ವಿಷ್ಣುವನ್ನು ಪೂಜಿಸುವುದರಿಂದ ಜೀವನದ ಎಲ್ಲಾ ತೊಂದರೆಗಳಿಂದ ಮುಕ್ತಿ ಸಿಗಲಿದೆ ಎಂಬುವುದು ಭಕ್ತರ ಅಚಲ ನಂಬಿಕೆ.

ಕರ್ಕ ಸಂಕ್ರಾಂತಿಯು ಪಿತೃ ತರ್ಪಣವನ್ನು ಮಾಡಲು ಬಯಸುವವರಿಗೆ ತಮ್ಮ ಪೂರ್ವಜರ ಅಗಲಿದ ಆತ್ಮಗಳಿಗೆ ಶಾಂತಿಯನ್ನು ನೀಡಲು ಅತ್ಯಂತ ಅನುಕೂಲಕರ ಸಮಯವಾಗಿದೆ.

ಕರ್ಕ ಸಂಕ್ರಾಂತಿ ಪೂಜಾ ವಿಧಾನ

ಕರ್ಕ ಸಂಕ್ರಾಂತಿ ಪೂಜಾ ವಿಧಾನ

ಕರ್ಕ ಸಂಕ್ರಾಂತಿ 2022 ರ ಪೂಜಾ ವಿಧಾನದ ಬಗ್ಗೆ ತಿಳಿಯೋಣ :

* ಬೆಳಗ್ಗೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿದ ಬಳಿಕ ನದಿಯಲ್ಲಿ ಸ್ನಾನ ಮಾಡಬೇಕು. ಮನೆಯಲ್ಲಿ ಸ್ನಾನ ಮಾಡುವುದಾದರೆ ಸ್ನಾನದ ನೀರಿಗೆ ಸ್ವಲ್ಪ ಗಂಗಾ ಜಲ ಸೇರಿಸಿ ಸ್ನಾನ ಮಾಡಿ.

* ಮಡಿ ವಸ್ತ್ರಗಳನ್ನು ಧರಿಸಿ ಸೂರ್ಯ ಮಂತ್ರಗಳನ್ನು ಪಠಿಸುತ್ತಾ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಬೇಕು.

* ಬಳಿಕ ವಿಷ್ಣು ದೇವರನ್ನು ಪೂಜಿಸಿ.

ಪೂಜೆಯ ಸಮಯದಲ್ಲಿ ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಪಠಿಸಲಾಗುತ್ತದೆ. ಇದರಿಂದ ಭಕ್ತರಿಗೆ ಶಾಂತಿ ಮತ್ತು ಸೌಭಾಗ್ಯ ದೊರೆಯುತ್ತದೆ.

ಕರ್ಕ ಸಂಕ್ರಾಂತಿಯ ದಿನದಂದು ಬ್ರಾಹ್ಮಣರಿಗೆ ಧಾನ್ಯಗಳು, ವಸ್ತ್ರಗಳು ಮತ್ತು ಎಣ್ಣೆ ಇತ್ಯಾದಿಗಳನ್ನು ದಾನ ಮಾಡಬೇಕು.

ಈ ದಿನದಂದು ಹೊಸ ಅಥವಾ ಮುಖ್ಯವಾದ ಯಾವುದನ್ನಾದರೂ ಪ್ರಾರಂಭಿಸಲು ತುಂಬಾ ಯೋಗ್ಯವಾದ ದಿನವಾಗಿದೆ ಅಂದರೆ ಧ್ಯಾನ, ದಾನ ಮತ್ತು ಸೇವೆ ಮಾಡಲು ತುಂಬಾ ಸೂಕ್ತವಾದ ದಿನವಾಗಿದೆ.

English summary

Karka Sankranti 2022 Date, History, Pauja Vidhi, Rituals and Significance

Karka Sankranti 2022 Date, History, Pauja Vidhi, Rituals and Significance
X
Desktop Bottom Promotion