For Quick Alerts
ALLOW NOTIFICATIONS  
For Daily Alerts

ನವರಾತ್ರಿಯಲ್ಲಿ ಕನ್ಯಾಪೂಜೆ: ಐಶ್ವರ್ಯ ಪ್ರಾಪ್ರಿಗಾಗಿ ಕನ್ಯಾ ಪೂಜೆ ಹೇಗೆ ಮಾಡಬೇಕು?

|

ದುರ್ಗಾಷ್ಟಮಿಯಂದು ಮಾಡುವ ಪೂಜಾ ವಿಧಿ ವಿಧಾನಗಳಲ್ಲಿ ಕನ್ಯಾ ಪೂಜೆ ಪ್ರಮುಖವಾದದ್ದು. ಅನೇಕರು ಈ ದಿನ ಮನೆಗಳಲ್ಲಿ ಕನ್ಯಾ ಪೂಜೆಯನ್ನು ಮಾಡುತ್ತಾರೆ. ಇದನ್ನು ಕನ್ಯಾ ಬೋಜ್‌ ಎಂದು ಕರೆಯಲಾಗುವುದು. ಉತ್ತರ ಭಾರತದ ಕಡೆ ಕನ್ಯಾ ಪೂಜೆಯನ್ನು ಎಲ್ಲಾ ಮನೆಗಳಲ್ಲೂ ಆಚರಿಸಲಾಗುವುದು, ದಕ್ಷಿಣ ಭಾರತದ ಕಡೆಯೂ ಕೆಲವರು ಕನ್ಯಾಪೂಜೆಯನ್ನು ಮಾಡಲಾಗುವುದು.

Kanya Puja in Navrati

ಕನ್ಯಾ ಪೂಜೆ ಯಾವಾಗ, ಆಚರಣೆಯ ನಿಯಮಗಳೇನು ನೋಡೋಣ:

ಕನ್ಯಾ ಪೂಜೆ ಯಾವಾಗ?

ಕನ್ಯಾ ಪೂಜೆ ಯಾವಾಗ?

ದುರ್ಗಾಷ್ಟಮಿಯಂದು ಕನ್ಯಾ ಪೂಜೆ ಮಾಡಲಾಗುವುದು. ಈ ವರ್ಷ ಅಕ್ಟೋಬರ್‌ 3ರಂದು ಆಚರಿಸಲಾಗುವುದು

ಈ ದಿನ ಮುಟ್ಟಿನ ಚಕ್ರ ಪ್ರಾರಂಭವಾಗದ 9 ಬಾಲಕಿಯರನ್ನು ಮನೆಗೆ ಆಹ್ವಾನಿಸಿ, ಅವರನ್ನು ಪೂಜಿಸಿ, ಅವರಿಗೆ ಸ್ವಾದಿಷ್ಟಕರವಾದ ಆಹಾರವನ್ನು ನೀಡಲಾಗುವುದು. ಈ ಬಾಲಕಿಯರನ್ನು ದುರ್ಗೆಯ ಅವತಾರ ಎಂದು ಪೂಜಿಸಲಾಗುವುದು. ಪುಟ್ಟ ಬಾಲಕಿಯರನ್ನು ಮನೆಗೆ ಆಹ್ವಾನಿಸಿ ಅವರ ಪಾದಗಳನ್ನು ತೊಳೆದು ಕೆಂಪು ದಾರವನ್ನು ಕೈಗೆ ಕಟ್ಟಿ ಹಣೆಗೆ ಕುಂಕುಮ ಇಡಲಾಗುವುದು. ನಂತರ ಅವರಿಗೆ ಬಳೆ, ಫ್ಯಾನ್ಸಿ ಐಟಂಗಳನ್ನು ಉಡುಗೊರೆಯಾಗಿ ನೀಡಲಾಗುವುದು.

ಎಷ್ಟು ಕನ್ಯೆಯರನ್ನು ಪೂಜಿಸಬೇಕು

ಎಷ್ಟು ಕನ್ಯೆಯರನ್ನು ಪೂಜಿಸಬೇಕು

ಕನ್ಯಾ ಪೂಜೆ 7 ಅಥವಾ 9 ಬಾಲಕಿಯರನ್ನು ಪೂಜಿಸಲಾಗುವುದು, 7ಕ್ಕಿಂತ ಕಡಿಮೆ ಇರಬಾರದು. 9 ಬಾಲಕಿಯರನ್ನು ಪೂಜಿಸಿದರೆ ಅತ್ಯಂತ ಮಂಗಳಕರ ಎಂದು ನಂಬಲಾಗಿದೆ.

ಕನ್ಯಾಪೂಜೆಯಲ್ಲಿ ಒಂದು ಹುಡುಗಿಗೆ ಪೂಜೆ ಮಾಡಿದರೆ ಐಶ್ವರ್ಯ ಪ್ರಾಪ್ತಿ, ಇಬ್ಬರನ್ನು ಬಾಲಕಿಯರನ್ನು ಪೂಜಿಸಿದರೆ ಭೋಗ ಮತ್ತು ಮೋಕ್ಷ ಸಿಗುವುದು. ಮೂರು ಬಾಲಕಿಯರನ್ನು ಪೂಜಿಸಿದರೆ ಧರ್ಮ, ಅರ್ಥ, ಕಾಮವನ್ನು ಒದಗಿಸುತ್ತದೆ. ನಾಲ್ಕು ಬಾಲಕಿಯರನ್ನು ಪೂಜಿಸಿದರೆ ಅಧಿಕಾರ ಲಭಿಸುವುದು. ಐದು ಬಾಲಕಿಯರನ್ನು ಪೂಜಿಸಿದರೆ ಜ್ಞಾನ ಹೆಚ್ಚುವುದು. ಆರು ಬಾಲಕಿಯರನ್ನು ಪೂಜಿಸಿದರೆ ಆರು ತರದ ವಿಶೇಷ ಸಿದ್ಧಿಗಳು ಲಭಿಸುತ್ತದೆ. ಏಳು ಬಾಲಕಿಯರನ್ನು ಪೂಜಿಸಿದರೆ ಆಳುವ ಅಧಿಕಾರ ದೊರೆಯುವುದು. ಎಂಟು ಬಾಲಕಿಯರನ್ನು ಪೂಜಿಸಿದರೆ ಸಂಪತ್ತು ಹೆಚ್ಚುವುದು. ಒಂಭತ್ತು ಬಾಲಕಿಯರನ್ನು ಪೂಜಿಸಿದರೆ ವೃತ್ತಿಯಲ್ಲಿ ಪ್ರಗತಿ ಸಿಗುವುದು.

 ಕನ್ಯಾ ಪೂಜೆಯ ನಿಯಮಗಳು

ಕನ್ಯಾ ಪೂಜೆಯ ನಿಯಮಗಳು

* ಮನೆಗೆ ಬಂದ ಬಾಲಕಿಯರ ಪಾದ ತೊಳೆಯಬೇಕು.

* ನಂತರ ಚಾಪೆ ಅಥವಾ ಶುಭ್ರವಾದ ಬಟ್ಟೆ ಹಾಸಿ ಅದರಲ್ಲಿ ಕೂರಿಸಬೇಕು, ನೆಲದ ಮೇಲೆ ಕೂರಿಸಬಾರದು.

* ಬಾಲಕಿಯರ ಕೈಗಳಿಗೆ ಕಾಲಾ (ಪವಿತ್ರ ದಾರ) ಕಟ್ಟಬೇಕು.

* ನಂತರ ತಿಲಕ ಹಾಕಿ ಅವರ ತಲೆಗೆ ಅಕ್ಷತೆ ಹಾಕಿ.

* ನಂತರ ಅವರಿಗೆ ಕನ್ಯಾ ಬೋಗ್‌ ಅರ್ಪಿಸಿ ( ಹೂಗಳು, ಹಣ್ಣುಗಳು, ಹಪ್ಪಳ, ಸಲಾಡ್, ಸಿಹಿ ತಿಂಡಿಗಳನ್ನು ಅರ್ಪಿಸಿ)

* ಅವರಿಗೆ ಹಣವನ್ನು ನೀಡುವಾ 1 ರುಪಾಯಿ ಸೇರಿಸಿ ಅಂದರೆ ರು. 11, ರುಪಾಯಿ 101 ಈ ರೀತಿನೀಡಿ.

ಕನ್ಯಾ ಪೂಜೆಯ ಮಹತ್ವ

ಕನ್ಯಾ ಪೂಜೆ ಮಾಡುವುದರಿಂದ ದುರ್ಗಾ ದೇವಿ ಸಂತುಷ್ಟಳಾಗಿ ನಮಗೆ ಅಷ್ಟೈಶ್ವರ್ಯ ನೀಡಿ ಕಾಪಾಡುತ್ತಾಳೆ ಎಂಬ ನಂಬಿಕೆ ಇದೆ.

English summary

Kanya Puja in Navratri 2022: Date, Puja Vidhi, Rituals, and Importance in kannada

Kanya Puja in Navrati 2022: Here are date, puja Vidhi, Rituals, and Importance , how to perform kanya puja, read on..
X
Desktop Bottom Promotion