For Quick Alerts
ALLOW NOTIFICATIONS  
For Daily Alerts

ಸಂದರ್ಶನದಲ್ಲಿ ನಿಮ್ಮ ದೌರ್ಬಲ್ಯದ ಬಗ್ಗೆ ಪ್ರಶ್ನೆ ಕೇಳಿದರೆ. ಹೀಗೆ ಉತ್ತರಿಸಿ

|

ಸಾಮಾನ್ಯವಾಗಿ ಹೊಸ ಕಂಪನಿಗಳಿಗೆ ಸಂದರ್ಶನಕ್ಕೆಂದು ಹೋಗುವಾಗ ಎಂಥಾ ಅನುಭವಿ ಅಭ್ಯರ್ಥಿಗಳಿಗೂ ಉದ್ವೇಗ, ಆತಂಕ ಇದ್ದೇ ಇರುತ್ತದೆ. ಉತ್ತಮ ಕಂಪನಿಗಳಲ್ಲಿ ಕೆಲಸ ಪಡೆಯಬೇಕೆಂದರೆ ಸಾಕಷ್ಟು ತಯಾರಿ ಅತ್ಯಗತ್ಯ, ಆದರೆ ನಿವೇಷ್ಟೇ ತಯಾರಿ ಹೊಂದಿದ್ದರೂ ಸಂದರ್ಶಕರು ಕೇಳುವ ಕೆಲವು ಪ್ರಶ್ನೆಗಳು ಎಂಥಹವರನ್ನು ತಬ್ಬಿಬ್ಬು ಮಾಡುತ್ತದೆ.

ನಿಮ್ಮ ಸಾಮರ್ಥ್ಯದ ಬಗ್ಗೆ ಹೇಳುವಷ್ಟು ಸುಲಭವಾಗಿ, ದೌರ್ಬಲ್ಯದ ಕುರಿತು ಕೇಳಿದರೆ ಹೇಳಲಾಗದು. ಅಂಥಾ ಪ್ರಶ್ನೆಗಳು ಅಥವಾ ಸಂದರ್ಭ ನಮ್ಮನ್ನು ಮುಜುಗರಕ್ಕೊಳಪಡಿಸುತ್ತದೆ. ಆದರೆ ಇದನ್ನು ಬಹಳ ನಾಜೂಕಿನಿಂದ ನಿಭಾಯಿಸಿ ಕೆಲಸ ಗಳಿಸುವಲ್ಲಿ ಸಫಲವಾಗಬೇಕು. ಸಂದರ್ಶನದಲ್ಲಿ ದೌರ್ಬಲ್ಯದ ಬಗ್ಗೆ ಪ್ರಶ್ನಿಸಿದಾಗ ದುರ್ಬಲರಾಗದೇ ಹೇಗೆ ಧೈರ್ಯವಾಗಿ ಎದುರಿಸಬೇಕು, ಇಲ್ಲಿದೆ ಕೆಲವು ಸಲಹೆಗಳು.

ಉತ್ತರ ಭೀತಿಗೊಳಿಸದಿರಲಿ

ಸಂದರ್ಶನದ ವೇಳೆ ನೀವು ಕೊಡುವ ಉತ್ತರ ಸಂದರ್ಶಕರನ್ನು ಭೀತಿಗೊಳಿಸದಿರಲಿ, ಆತ್ಮಸ್ಥೈರ್ಯದಿಂದ ನಯವಾಗಿ ಉತ್ತರಿಸಿ. ಅತಿಯಾದ ಆತ್ಮಸ್ಥೈರ್ಯವೂ ಒಳ್ಳೆಯದಲ್ಲ, ಈ ಬಗ್ಗೆ ಬಹಳ ಎಚ್ಚರದಿಂದಿರಿ.

ಸತ್ಯಯುತವಾಗಿರಲಿ

ನಿಮ್ಮ ಉತ್ತರ ಸತ್ಯವಾಗಿರಲಿ, ಸುಳ್ಳಿನ ಮಹಾಪೂರ ಮುಂದೆ ನಿಮಗೇ ಸಮಸ್ಯೆಯಾದೀತು ಎಚ್ಚರ. "ನಾನು ಸಕಲ ಪಾರಂಗತ, ಎಲ್ಲವೂ ತಿಳಿದಿದೆ. ನನಗೆ ಯಾವುದೇ ದೌರ್ಬಲ್ಯವಿಲ್ಲ,'' ಎಂಬ ಉತ್ತರ ನಿಮ್ಮದಾಗದಿರಲಿ. ಇಂತಹ ಉದ್ಧಟತನ ಸಂದರ್ಶಕರಿಗೆ ಹಿಡಿಸದಿರಬಹುದು. ನಿಮ್ಮ ಸಾಮರ್ಥ್ಯ ಅರಿತು ಉತ್ತರಿಸಿ.

ಸರಿಯಾದ ನ್ಯೂನ್ಯತೆ ಆಯ್ಕೆ ಮಾಡಿ
ನೀವು ಸೇರುವ ಕಂಪನಿಯಲ್ಲಿ ನಿಭಾಯಿಸಲಿರುವ ಕೆಲಸಕ್ಕೆ ನೇರವಾಗಿ ಪರಿಣಾಮ ಬೀರುವಂಥ ದೌರ್ಬಲ್ಯಗಳನ್ನು ಬಿಚ್ಚಿಡದಿರಿ, ಆದಷ್ಟು ಅಂಥಹ ದೌರ್ಬಲ್ಯಗಳನ್ನು ಬದಲಾಯಿಸಿಕೊಳ್ಳಿ. ಉದಾಹರಣೆಗೆ, ಅತಿಯಾದ ಮೊಬೈಲ್ ಅಥವಾ ಸಾಮಾಜಿಕ ಜಾಲತಾಣಗಳ ಬಳಕೆ, ಮಾರಾಟಗಾರನೊಬ್ಬ ಗ್ರಾಹಕರ ಜೊತೆ ಅತಿಯಾದ ಸಲುಗೆಯಿಂದ ಮಾತನಾಡುವ ದೌರ್ಬಲ್ಯವನ್ನು ಹೇಳುವುದು ನಿಮ್ಮ ಕೆಲಸಕ್ಕೆ ಕುತ್ತು ತರಬಹುದು.

ದೌರ್ಬಲ್ಯದ ಬಗ್ಗೆ ನಿಮಗಿರುವ ಎಚ್ಚರ ತಿಳಿಸಿ

ನಿಮ್ಮ ದೌರ್ಬಲ್ಯದ ಬಗ್ಗೆ ಸಂದರ್ಶಕರು ಪ್ರಶ್ನಿಸಿದಾಗ ಮೊದಲಿಗೆ, ಎಲ್ಲರಂತೆ ತನಗೂ ಕೆಲವು ನ್ಯೂನ್ಯತೆಗಳಿದ್ದು, ಇದರ ಬಗ್ಗೆ ತಾನು ಸದಾ ಎಚ್ಚರದಿಂದಿರುವುದಾಗಿ ಹಾಗೂ ಇದನ್ನು ಒಪ್ಪಿಕೊಳ್ಳುವಲ್ಲಿ ನೀವು ಹಿಂಜರಿಯುವುದಿಲ್ಲ ಎಂಬುದನ್ನು ತಿಳಿಸಿ. ಇಂತಹ ಉತ್ತರ ಸಂದರ್ಶಕರಲ್ಲೂ ನಿಮ್ಮ ಬಗ್ಗೆ ಸಕಾರಾತ್ಮಕ ಭಾವನೆ ಹುಟ್ಟಿಸಲಿದೆ.

ನ್ಯೂನ್ಯತೆಯಿಂದ ಹೊರಬರುವ ಪ್ರಯತ್ನದ ಬಗ್ಗೆ ತಿಳಿಸಿ
ಒಮ್ಮೆ ನಿಮ್ಮ ದೌರ್ಬಲ್ಯದ ಬಗ್ಗೆ ಹೇಳಿದ ನಂತರ ಮತ್ತೆ ಅದರಿಂದ ಹೊರಬರುವ ನಿಮ್ಮ ಪ್ರಯತ್ನದ ಬಗ್ಗೆಯೂ ಸಂದರ್ಶಕರಿಗೆ ತಿಳಿಸಿ ಹೇಳಿ. ಉದಾಹರಣೆಗೆ ನೀವು ಸಂಕೋಚ ಸ್ವಭಾವದವರಾಗಿದ್ದರೆ, ಸಹೋದ್ಯೋಗಿಯ ಜೊತೆ ಯಾವ ರೀತಿ ವೃತ್ತೀಯ ಬಾಂಧವ್ಯವನ್ನು ಹೊಂದುತ್ತೀರಿ ಎಂಬ ಬಗ್ಗೆಯೂ ವಿವರಿಸಿ.

ತಯಾರಿ ಅಗತ್ಯ
ಇಂತಹ ಪ್ರಶ್ನೆಗಳಿಗೆ ಉತ್ತರವನ್ನು ಬಾಯಿಪಾಠ ಮಾಡುವ ಅಗತ್ಯವಿಲ್ಲ, ಆದರೆ ಹೇಗೆ ಉತ್ತರಿಸಬೇಕು ಎಂಬ ಬಗ್ಗೆ ಸ್ವಲ್ಪ ತಯಾರಿ ಮಾಡಿಕೊಳ್ಳಿ. ಕೆಲವೇ ಸೆಕೆಂಡ್ ಗಳಲ್ಲಿ ಆಕರ್ಷಕ ಉತ್ತರ ಹೇಳುವ ಅಗತ್ಯವಿಲ್ಲದಿದ್ದರೂ, ನಿಮ್ಮ ಉತ್ತರದಿಂದಲೇ ಸಂದರ್ಶನದ ಯಶಸ್ಸು ಅಥವಾ ವಿಫಲತೆ ಅಡಗಿದೆ ಎಂಬ ಬಗ್ಗೆ ಅರಿವಿರಲಿ.

ದೌರ್ಬಲ್ಯದ ಬಗ್ಗೆ ಸಕಾರಾತ್ಮಕ ಸ್ಪಂದನೆ ನೀಡಿ
ನಯವಾಗಿ, ಚುರುಕಿನಿಂದ ಕೊಡುವ ಉತ್ತರ ನಿಮಗೆ ಹೆಚ್ಚು ಅಂಕ ತಂದುಕೊಡಲಿದೆ. ಇದರಿಂದ ನೀವು ಯಾವುದೇ ಟೀಕೆಗಳಿಗೆ ಹಿಂಜರಿಯುವುದಿಲ್ಲ, ಬದಲಾಗಿ ವೃತ್ತೀಯ ಕೌಶಲ್ಯ ಹೆಚ್ಚಿಸಿಕೊಳ್ಳಲಿದ್ದೀರಿ ಎಂದು ತಿಳಿಸಿದಂತಾಗುತ್ತದೆ. ಅಲ್ಲದೆ ನಿಮ್ಮ ದೌರ್ಬಲ್ಯವನ್ನು ಸಾಮಾರ್ಥ್ಯವಾಗಿ ಬದಲಿಸಿಕೊಳ್ಳುವ ಜಾಣ್ಮೆ ನಿಮಗಿದೆ ಎಂಬ ವಿಶ್ವಾಸ ಸಂದರ್ಶಕರಲ್ಲೂ ಮೂಡಬಹುದು.

English summary

Interview Question: How To Answer About Your Weakness?

Talking about their Achilles heels during a job interview can turn out to be an awkward moment for interviewees. It is, perhaps, a tricky situation when the interviewer is keen to know what is your greatest weakness and you have to make sure your answer does not threaten your candidature. However, there is always a smart way to tackle this question and even score brownie points for it. Here’s how.
X