For Quick Alerts
ALLOW NOTIFICATIONS  
For Daily Alerts

ಶುಕ್ರವಾರ ಲಕ್ಷ್ಮಿಯನ್ನು ಹೀಗೆ ಪೂಜಿಸಿದರೆ ಆರ್ಥಿಕ ಸಂಕಷ್ಟ ದೂರಾಗುವುದು

|

ಶುಕ್ರವಾರ ಲಕ್ಷ್ಮಿ ಪೂಜೆಗೆ ತುಂಬಾ ಶ್ರೇಷ್ಠವಾದ ದಿನ, ಈ ದಿನ ಲಕ್ಷ್ಮಿಯನ್ನು ಆರಾಧಿಸುವುದರಿಂದ ಮನೆಯ ಸಂಪತ್ತು ಹೆಚ್ಚುವುದು, ನಿಮಗೆ ಆರ್ಥಿಕ ತೊಂದರೆಗಳಿದ್ದರೆ ಅವುಗಳು ದೂರಾಗುವುದು. ನೀವು ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಶುಕ್ರವಾರ ಈ ರೀತಿ ಲಕ್ಷ್ಮಿ ಪೂಜೆ ಮಾಡಿದರೆ ನಿಮಗೆ ಹೆಚ್ಚಿನ ಫಲ ಸಿಗುವುದು.

Laxmi Puja

* ಶುಕ್ರವಾರ ಉಪವಾಸವಿದ್ದು ಲಕ್ಷ್ಮಿಯನ್ನು ಆರಾಧಿಸಿ. ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ ಪೂಜೆ ಕೋಣೆ ಶುದ್ಧ ಮಾಡಿ, ಲಜ್ಷ್ಮಿಗೆ ಕಳಸ ಇಟ್ಟು ಪೂಜಿಸಿ. ಈ ದಿನ ನೀವು ಬಿಳಿ, ಕೆಂಪು ಅಥವಾ ಕೆನೆ ಬಣ್ಣದ ವಸ್ತ್ರ ಧರಿಸಿ. ಲಕ್ಷ್ಮಿ ಪೂಜಿಸುವಾಗ ಶ್ರೀಸೂಕ್ತವನ್ನು ಪಠಿಸಿ.

* ಶುಕ್ರವಾರ ಲಕ್ಷ್ಮಿ ಪೂಜೆಗೆ ಕಮಲದ ಹೂವು, ಶಂಖ, ಕೆಂಪು ಅಥವಾ ಗುಲಾಬಿ ಬಟ್ಟೆ ಅರ್ಪಿಸಿ, ಪೂಜಿಸಿ.

* ಶುಕ್ರವಾರ ಮನೆಯನ್ನು ಸ್ವಚ್ಛವಾಗಿಡಿ, ಸ್ವಚ್ಛತೆ ಇರುವ ಸ್ಥಳದಲ್ಲಿ ಲಕ್ಷ್ಮಿ ದೇವಿ ನೆಲೆಸುವುದು. ಮನೆಯಲ್ಲಿ ಬಲೆ ಕಟ್ಟಲು ಬಿಡಬೇಡಿ.

* ನಿಮ್ಮ ಮನೆಯ ಈಶಾನ್ಯ ಮೂಲೆಯಲ್ಲಿ ಮಾತೆ ಲಕ್ಷ್ಮಿಯ ಫೋಟೋ ಇಟ್ಟು ಪೂಜಿಸಿ. ಪೂಜಾ ಸ್ಥಳದ ಬಳಿ ಅಡುಗೆ ಕೋಣೆ ಅಥವಾ ಶೌಚಾಲಯ ಇರಬಾರದು.

* ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು, ಶುಕ್ರವಾರದಂದು, ತಾಯಿಗೆ ಬಿಳಿ ನೈವೇದ್ಯ ಅರ್ಪಿಸಬೇಕು. ಅಕ್ಕಿ ಪಾಯಸ ಮಾಡಿ ಅರ್ಪಿಸಿ.

* ಶುಕ್ರವಾರ 11/4ಕೆಜಿ ಅಕ್ಕಿಯನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಇಟ್ಟು ಗಂಟು ಹಾಕಿ 'ಓಂ ಶ್ರೀ ಶ್ರೀ ನಮಃ' ಎಂಬ ಮಂತ್ರವನ್ನು ಐದು ಬಾರಿ ಜಪಿಸಿ ನಂತರ ಈ ಮೂಟೆಯನ್ನು ಮನೆಯ ಬೀರುವಿನಲ್ಲಿಡಿ. ಹೀಗೆ ಮಾಡುವುದರಿಂದ ಧನ ಲಾಭವಾಗುತ್ತದೆ.

* ಶುಕ್ರವಾರ ಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ ಅವಳಿಗೆ ಕೆಂಪು ಬಣ್ಣದ ಬಟ್ಟೆಗಳನ್ನು ಅರ್ಪಿಸುವುದು ಮಂಗಳಕರ.

* ಶುಕ್ರವಾರ ಶ್ರೀ ವಿಷ್ಣು-ಲಕ್ಷ್ಮಿಯನ್ನು ಪೂಜಿಸಿ ಮಂತ್ರಗಳನ್ನು ಪಠಿಸಿ.

English summary

How To Do Laxmi Puja On Friday For Financial Benefits

Laxmi Puja On Friday: Do These Things on Friday to please Laxmi....
Story first published: Thursday, December 8, 2022, 22:46 [IST]
X
Desktop Bottom Promotion