For Quick Alerts
ALLOW NOTIFICATIONS  
For Daily Alerts

ದೀಪಾವಳಿಯಲ್ಲಿ ಎಷ್ಟು ಹಣತೆಗಳನ್ನು ಹಚ್ಚಿಡಬೇಕು ಗೊತ್ತಾ?

|

ದೀಪಾವಳಿ ಅಂದರೆ ಅಲ್ಲಿ ಹಣತೆಗಳದ್ದೇ ಕಾರುಬಾರು.... ಹಣತೆಗಳನ್ನು ಹಚ್ಚಿ ಸಾಲು-ಸಾಲಾಗಿ ಇಟ್ಟರೆ ಅವುಗಳು ಕಣ್ಣಿಗೆ ಆನಂದ ಜೊತೆಗೆ ಮನಸ್ಸಿಗೆ ದೈವಿಕ ಭಾವವನ್ನು ತುಂಬುತ್ತದೆ. ಮನೆಯಲ್ಲಿ ಹಣತೆಗಳನ್ನು ಹಚ್ಚಿಟ್ಟರೆ ಒಂಥರಾ ಪಾಸಿಟಿವ್ ವೈಬ್ಸ್. ದೀಪಾವಳಿ ಅಂದರೆ 5 ದಿನಗಳ ಆಚರಣೆ, ಅದರಲ್ಲಿ ಚಿಕ್ಕ ದೀಪಾವಳಿ, ಧನ್‌ತೆರೇಸ್, ದೊಡ್ಡ ದೀಪಾವಳಿ ಮೂರು ಪ್ರಮುಖ ದಿನಗಳಾಗಿವೆ.

ದೀಪಾವಳಿಗೆ ದೀಪಗಳನ್ನು ಹಚ್ಚಿಡಲೂ ಒಂದು ಕ್ರಮಗಳಿವೆ. ಏಕೆಂದರೆ ದೀಪಗಳು ಋಣಾತ್ಮಕ ಶಕ್ತಿಯನ್ನು ದೂರವಿಡುವುದರಿಂದ ದೀಪ ಹಚ್ಚುವುದರಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ. ದೀಪಾವಳಿಗೆ ನೀವು ದೀಪ ಹಚ್ಚುವಾಗ ಮೊದಲು ದೇವರ ಕೋಣೆಯಲ್ಲಿ ದೀಪ ಬೆಳಗಿ ನಂತರ ಮನೆಯ ಪೂರ್ವ, ಉತ್ತರ ಭಾಗಗಳಲ್ಲಿ ಇಟ್ಟು ನಂತರ ಇತರ ಕಡೆ ಇಡಬೇಕು.

ದೀಪಾವಳಿಗೆ ಎಷ್ಟು ದೀಪಗಳನ್ನು ಹಚ್ಚಬೇಕು ಎಂದು ನೋಡೋಣ ಬನ್ನಿ:

ಚಿಕ್ಕ ದೀಪಾವಳಿಗೆ (ಚೋಟಿ ದೀಪಾವಳಿ) ಎಷ್ಟು ಹಣತೆಗಳನ್ನು ಹಚ್ಚಿಡಬೇಕು?

ಚಿಕ್ಕ ದೀಪಾವಳಿಗೆ (ಚೋಟಿ ದೀಪಾವಳಿ) ಎಷ್ಟು ಹಣತೆಗಳನ್ನು ಹಚ್ಚಿಡಬೇಕು?

ಚಿಕ್ಕ ದೀಪಾವಳಿಗೆ 14 ಹಣತೆಗಳನ್ನು ಹಚ್ಚಿಡಬೇಕು. ಮೊದಲಿಗೆ 11 ದೀಪಗಳನ್ನು ತಟ್ಟೆಯಲ್ಲಿಡಬೇಕು. ಮಧ್ಯದಲ್ಲಿ ನಾಲ್ಕು ದೀಪಗಳಿರಬೇಕು. ಆ ದೀಪಗಳು ನಾಲ್ಕು ದಿಕ್ಕಿಗೆ ಮುಖ ಮಾಡಿದಂತೆ ಇರಬೇಕು. ಮೊದಲಿಗೆಈ ನಾಲ್ಕು ದೀಪಗಳನ್ನು ಹಚ್ಚಿ ನಂತರ ಇತರ ದೀಪಗಳನ್ನು ಹಚ್ಚಿ ಮನೆಯ ಇತರ ಭಾಗಗಳಲ್ಲಿ ಇಡಿ.

 ಧನತ್ರಯೋದಶಿಗೆ ಎಷ್ಟುದೀಪಗಳನ್ನು ಹಚ್ಚಬೇಕು?

ಧನತ್ರಯೋದಶಿಗೆ ಎಷ್ಟುದೀಪಗಳನ್ನು ಹಚ್ಚಬೇಕು?

ಧಾರ್ಮಿಕ ನಂಬಿಕೆ ಪ್ರಕಾರ ಧನ ತ್ರಯೋದಶಿಯಂದು 13 ದೀಪಗಳನ್ನು ಹಚ್ಚಬೇಕು. ಈ ದೀಪಗಳು ಕುಬೇರನಿಗೆ ಅರ್ಪಿಸಲಾಗುವುದು. 13 ದೀಪಗಳನ್ನು ಹಚ್ಚಿಟ್ಟು ಪೂಜಿಸಿದರೆ ಕುಬೇರನ ಕೃಪೆ ನಮ್ಮ ಮೇಲಿರುತ್ತದೆ ಎಂಬುವುದು ನಂಬಿಕೆ.

ದೊಡ್ಡ ದೀಪಾವಳಿಗೆ ಎಷ್ಟು ದೀಪಗಳನ್ನು ಹಚ್ಚಿಡಬೇಕು?

ದೊಡ್ಡ ದೀಪಾವಳಿಗೆ ಎಷ್ಟು ದೀಪಗಳನ್ನು ಹಚ್ಚಿಡಬೇಕು?

ಹಿಂದೂಗಳ ನಂಬಿಕೆ ಪ್ರಕಾರ ದೀಪಾವಳಿಗೆ ಒಟ್ಟು 13 ದೀಪಗಳನ್ನು ಹಚ್ಚಬೇಕು. ದೀಪಾವಳಿಯಲ್ಲಿ ಹಚ್ಚುವ ಒಂದೊಂದು ದೀಪಕ್ಕೂ ಒಂದೊಂದು ಅರ್ಥವಿದೆ. ದೀಪಾವಳಿಗೆ ದೀಪಗಳನ್ನು ಹಚ್ಚುವುದರಿಂದ ಮನೆಯಲ್ಲಿ ಸಂಪತ್ತು, ಸಮೃದ್ಧಿ ಹೆಚ್ಚುವುದು.

English summary

How Many Diyas Should Be Lit on Choti Diwali, Dhanteras, Diwali

Deepavali 2022: How many diyas should be lit on Choti Diwali, Dhanteras, Diwali, read on..
Story first published: Saturday, October 22, 2022, 18:57 [IST]
X
Desktop Bottom Promotion