For Quick Alerts
ALLOW NOTIFICATIONS  
For Daily Alerts

ಜ್ಯೋತಿಷ್ಯ: ಹಣ ಉಳಿಸುವುದರಲ್ಲಿ ಯಾವ ರಾಶಿಗೆ ಯಾವ ಸ್ಥಾನ?

|

ನಿಮ್ಮ ರಾಶಿಚಕ್ರ ಚಿಹ್ನೆಯ ಪ್ರಕಾರ ಹಣವನ್ನು ಉಳಿಸುವಲ್ಲಿ ನೀವು ಎಷ್ಟು ಒಳ್ಳೆಯವರು ಎಂದು ತಿಳಿಯಿರಿ

ಹಣ ಜೀವನದ ಒಂದು ಭಾವಗವೇ ಆಗಿರಬಹುದು ಆದರೆ ಹಣವಿಲ್ಲದೆ ಯಾರೂ ಇರಲಾರರು. ಅವರವರ ಜೀವನ ಶೈಲಿ, ಹಣ ಗಳಿಕೆಗೆ ತಕ್ಕಂತೆ ಎಲ್ಲರಿಗೂ ತಮ್ಮದೇ ಆದ ಖರ್ಚು ಇದ್ದೇ ಇರುತ್ತದೆ.

ಆದರೆ ನಿಮಗೆ ಗೊತ್ತೆ ಹಣ ಉಳಿಸುವ ವಿಚಾರದಲ್ಲಿ ಜ್ಯೋತಿಶಾಸ್ತ್ರ ಏನು ಹೇಳುತ್ತದೆ ಎಂದು?. ಪ್ರತಿಯೊಂದು ರಾಶಿಚಕ್ರದವರು ಒಂದೊ ರೀತಿ ಹಣ ಉಳಿಸುವವರು ಹಾಗೂ ಖರ್ಚು ಮಾಡುವವರು. ಯಾವ ರಾಶಿಯವರು ಹೇಗೆ ಹಣ ಉಳಿಸುತ್ತಾರೆ, ಯಾರೂ ಅತಿಯಾಗಿ ಕರ್ಚು ಮಾಡುತ್ತಾರೆ ಎಂಬ ಕುತೂಹಲ ನಿಮಗೂ ಇದೆಯೇ, ಬನ್ನಿ ಮುಂದೆ ನೋಡೋಣ:

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರು ಪ್ರತಿ ತಿಂಗಳು ಎಷ್ಟು ಖರ್ಚು ಮಾಡುತ್ತೀರಿ ಮತ್ತು ಉಳಿಸುತ್ತೀರಿ ಎಂಬುದರ ಕುರಿತು ಸಾಕಷ್ಟು ಜಾಗೃತರಾಗಿರುತ್ತೀರಿ, ಆದರೂ ಕೆಲವೊಮ್ಮೆ ನಿಮ್ಮ ಮೊಂಡುತನದ ಸ್ವಭಾವದಿಂದ ಸ್ವಲ್ಪ ಹಣ ಖರ್ಚು ಮಾಡುವ ಸಾಧ್ಯತೆ ಇರುತ್ತದೆ. ಒಂದು ವೇಳೆ ನೀವು ಏನಾದರೂ ಹಣವನ್ನು ಮನಸೋಇಚ್ಛೇ ಖರ್ಚು ಮಾಡಲು ಮುಂದಾದರೆ ಉಳಿಸಿದಷ್ಟೇ ಹಣವನ್ನು ಖರ್ಚು ಮಾಡುತ್ತೀರಿ. ಹಠಾತ್ ಶಾಪಿಂಗ್‌ಗೆ ಬಂದಾಗ ನೀವು ಮನಬಂದಂತೆ ಖರ್ಚು ಮಾಡದೇ ಇದ್ದರೆ, ನಿಮ್ಮ ಸ್ವಭಾವವನ್ನು ನಿಯಂತ್ರಿಸಬಹುದಾದರೆ ನೀವು ಹಣವನ್ನು ಉಳಿಸುವಲ್ಲಿ ಸಾಕಷ್ಟು ಉತ್ತಮರಾಗುತ್ತೀರಿ.

ವೃಷಭ ರಾಶಿ

ವೃಷಭ ರಾಶಿ

ವೃಷಭ ರಾಶಿಚಕ್ರ ಚಿಹ್ನೆಯ ಜನರು ತಮ್ಮ ಪ್ರಾಯೋಗಿಕ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಆದ್ದರಿಂದ ವೃಷಭ ರಾಶಿಯವರು ಎಷ್ಟೇ ಕಠಿಣ ಪರಿಸ್ಥಿತಿಯಿದ್ದರೂ ಹಣವನ್ನು ಉಳಿಸುವಲ್ಲಿ ಉತ್ತಮವಾದವರು, ಮೊದಲಿಗರು ಎಂದು ಎಣಿಸಬಹುದು. ನಿಮ್ಮ ಗುರಿಯನ್ನು ನೀವು ಚೆನ್ನಾಗಿ ತಿಳಿದಿದ್ದೀರಿ ಮತ್ತು ಅದು ಹಣವನ್ನು ಉಳಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ.

ಮಿಥುನ ರಾಶಿ

ಮಿಥುನ ರಾಶಿ

ಖರ್ಚು ಮಾಡುವುದು ಅಥವಾ ಖರ್ಚು ಮಾಡದಿರುವುದು - ಈ ಶಾಶ್ವತ ಸಂದಿಗ್ಧತೆಯು ಮಿಥುನ ರಾಶಿಯವರಿಗೆ ಸದಾ ಕಾಡುತ್ತದೆ. ನೀವು ತುಂಬಾ ಸಮಂಜಸವಾಗಿರುವ ಮತ್ತು ಹಣವನ್ನು ಹೇಗೆ ಉಳಿಸುವುದು ಎಂದು ತಿಳಿದಿದ್ದೀರಿ, ಹಣವನ್ನು ಚೆನ್ನಾಗಿ ಉಳಿಸುತ್ತೀರಿ ಸಹ ಆದರೆ ಸಂದರ್ಭಗಳೇ ನಿಮಗೆ ಹಣವನ್ನು ನೀರಿನಂತೆ ಖರ್ಚು ಮಾಡುವ ಅವಕಾಶವನ್ನು ತರುತ್ತದೆ.

ಕರ್ಕ ರಾಶಿ

ಕರ್ಕ ರಾಶಿ

ಕರ್ಕ ರಾಶಿಯವರು ಕೌಟುಂಬಿಕ ಜೀವನವನ್ನು ಬಹಳ ಪ್ರೀತಿಸುತ್ತಾರೆ, ಕುಟುಂಬಕ್ಕಾಗಿ ಅತಯಾಗಿ ಅಲ್ಲದಿದ್ದರೂ ಮಿತವಾಗಿ ಆದರೂ ಖರ್ಚು ಮಾಡಲು ಇವರು ಸಿದ್ಧ. ನೀವು ಖರ್ಚು ಮಾಡುವವರು, ಆದರೆ ಸರಿಯಾದ ಕಾರಣಕ್ಕಾಗಿ ಮಾತ್ರ ನಿಸ್ಸಂದೇಹವಾಗಿ ಖರ್ಚು ಮಾಡುತ್ತೀರಿ. ಆದಾಗ್ಯೂ, ಪರಿಸ್ಥಿತಿಯು ಬೇಡಿಕೆಯಿರುವಾಗ ನಿಮ್ಮ ಉಳಿತಾಯ ಮತ್ತು ವೆಚ್ಚಗಳ ನಡುವೆ ಸಮತೋಲನವನ್ನು ಹೇಗೆ ಸಾಧಿಸುವುದು ಎಂದು ನಿಮಗೆ ತಿಳಿದಿದೆ.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರು ಐಷಾರಾಮಿ ಜೀವನವನ್ನು ಪ್ರೀತಿಸುತ್ತೀರಿ ಏಕೆಂದರೆ, ಇದು ನಿಮ್ಮಲ್ಲಿ ಆತ್ಮವಿಶ್ವಾಸ ತುಂಬುತ್ತದೆ, ನಿಮ್ಮನ್ನು ಸಕಾರಾತ್ಮಕವಾಗಿರಿಸುತ್ತದೆ. ಆದ್ದರಿಂದ, ನೀವು ಸಾಮಾನ್ಯ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವುದಕ್ಕಿಂತ ಇತ್ತೀಚಿನ ಸ್ಮಾರ್ಟ್‌ಫೋನ್ ಅಥವಾ ಐಷಾರಾಮಿ ಕಾರಿನ ಮೇಲೆ ಖರ್ಚು ಮಾಡುತ್ತೀರಿ. ಹಣವನ್ನು ಉಳಿಸಲು ಬಂದಾಗ ನಿಮಗೆ ಅಗತ್ಯವಿಲ್ಲದ ವಿಷಯಗಳ ಮೇಲೆ ನಿಮ್ಮ ಖರ್ಚು ಮಾಡುವ ಅಭ್ಯಾಸವು ದೊಡ್ಡ ಸಮಸ್ಯೆಯಾಗಿದೆ.

ಕನ್ಯಾ ರಾಶಿ

ಕನ್ಯಾ ರಾಶಿ

ಪರಿಪೂರ್ಣತಾವಾದಿ ಕನ್ಯಾ ರಾಶಿಯು ಉಳಿತಾಯದ ಬಗ್ಗೆ ಪಾಠಗಳನ್ನು ಕಲಿಯಬೇಕಾದ ಜನರಿಗೆ ಉತ್ತಮ ಉದಾಹರಣೆಯಾಗಿದ್ದಾರೆ. ಕನ್ಯಾರಾಶಿಯು ಜೀವನದ ಸಣ್ಣ ಐಷಾರಾಮಿಗಳನ್ನು ಆನಂದಿಸಲು ಬಜೆಟ್ ಅನ್ನು ಹೇಗೆ ರಚಿಸುವುದು ಎಂದು ತಿಳಿದಿದೆ ಮತ್ತು ಸಾಕಷ್ಟು ಹಣವನ್ನು ಉಳಿಸುತ್ತಾರೆ. ಅವರು ಸಾಕಷ್ಟು ಚಾಣಾಕ್ಷರು ಮತ್ತು ಹಣದೊಂದಿಗೆ ಬುದ್ಧಿವಂತರು. ಅವರು ಹಣವನ್ನು ಉಳಿಸುವಲ್ಲಿ ಉತ್ತಮರು.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯವರು ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಹೇಗೆ ಉದಾರವಾಗಿರಬಾರದು ಎಂದು ನಿಮಗೆ ತಿಳಿದಿದ್ದರೆ ನೀವು ಬಹುಶಃ ಯೋಚಿಸುವುದಕ್ಕಿಂತ ಹೆಚ್ಚಿನ ಹಣವನ್ನು ಉಳಿಸುತ್ತೀರಿ. ಜನರು ತುಲಾ ರಾಶಿಯ ಔದಾರ್ಯವನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದು ತುಂಬಾ ದುಃಖಕರವಾಗಿದೆ. ಈ ರಾಶಿಚಕ್ರ ಚಿಹ್ನೆಯ ಜನರು ಅವರ ಅಗತ್ಯಗಳನ್ನು ನಿರ್ಲಕ್ಷಿಸುತ್ತಾರೆ ಮತ್ತು ಹಣವನ್ನು ಉಳಿಸುತ್ತಾರೆ ಆದರೆ ಸ್ನೇಹಿತನು ತೊಂದರೆಯಲ್ಲಿದ್ದಾನೆ ಮತ್ತು ಹಣಕಾಸಿನ ಸಹಾಯದ ಅಗತ್ಯವಿದೆ ಎಂದು ತಿಳಿದ ಕ್ಷಣ, ಅವರು ತನ್ನ ಉಳಿತಾಯವನ್ನು ಸಂತೋಷದಿಂದ ತೊಡಗಿಸಿಕೊಳ್ಳುತ್ತಾರೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ನೀವು ಅಲ್ಪಾವಧಿಯ ಬಜೆಟ್ ಮತ್ತು ಉಳಿತಾಯ ಯೋಜನೆಗಳನ್ನು ಮಾಡುವಲ್ಲಿ ಉತ್ತಮರು, ಆದರೆ ದೀರ್ಘಾವಧಿಯ ಹಣಕಾಸು ಯೋಜನೆಗೆ ಬಂದಾಗ, ನಿಮಗೆ ಕೆಲವು ಬಾಹ್ಯ ಸಹಾಯ ಬೇಕಾಗುತ್ತದೆ. ಕೆಲವೊಮ್ಮೆ ನೀವು ವಿಪರೀತ ಮತ್ತು ಭಾವೋದ್ರಿಕ್ತರಾಗುತ್ತೀರಿ ಮತ್ತು ಹಠಾತ್ ವೆಚ್ಚಗಳನ್ನು ಮಾಡುತ್ತೀರಿ. ಅಂತಹ ಖರ್ಚುಗಳನ್ನು ಹೇಗೆ ನಿಯಂತ್ರಿಸಬೇಕೆಂದು ನಿಮಗೆ ತಿಳಿದಿದ್ದರೆ, ಉತ್ತಮ ರೀತಿಯಲ್ಲಿ ಹಣ ಉಳಿಸುವವರು.

ಧನು ರಾಶಿ

ಧನು ರಾಶಿ

ಮುಕ್ತ ಮನೋಭಾವದ ಧನು ರಾಶಿಯು ಉತ್ತಮ ಅನುಭವವನ್ನು ಹೊಂದಲು ಬಂದಾಗ ದೊಡ್ಡ ಖರ್ಚು ಮಾಡುವವರಾಗಿರುತ್ತಾರೆ, ಅವರು ಪ್ರಯಾಣ, ರಜೆ, ಗೆಟ್‌ಟುಗೆದರ್‌ಗಳು ಇತ್ಯಾದಿಗಳಿಗೆ ಹಣವನ್ನು ಖರ್ಚು ಮಾಡಲು ಮನಸ್ಸಿಲ್ಲ. ಅವರು ನೆನಪುಗಳನ್ನು ಸೃಷ್ಟಿಸಲು ಇಷ್ಟಪಡುತ್ತಾರೆ, ಅದರೆ ಅದನ್ನು ಮಾಡಲು ಹಣವನ್ನು ಖರ್ಚು ಮಾಡಲು ಅವರಿಗೆ ಮನಸ್ಸಿಲ್ಲ. ಅವರು ಹಣವನ್ನು ಉಳಿಸುವಲ್ಲಿ ಉತ್ತಮರು ಆದರೆ ಸಾಹಸದ ಅವಕಾಶವು ಅವರ ಬಾಗಿಲನ್ನು ಬಡಿಯುವ ಕ್ಷಣದಲ್ಲಿ ಹಣವು ಕಣ್ಮರೆಯಾಗುತ್ತದೆ.

ಮಕರ ರಾಶಿ

ಮಕರ ರಾಶಿ

ಮಕರ ರಾಶಿಚಕ್ರ ಚಿಹ್ನೆಯ ಜನರು ಹಣವನ್ನು ಉಳಿಸಲು ಮಾತ್ರ ಗಳಿಸುತ್ತಾರೆ. ಅವರು ಹಣವನ್ನು ಉಳಿಸುವ ಬಗ್ಗೆ ತುಂಬಾ ಜಾಗೃತರಾಗುತ್ತಾರೆ, ಅವರು ಕೆಲವೊಮ್ಮೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ ಎಂಬ ಭಯದಿಂದ ಅವರು ಅಗತ್ಯವಿರುವ ವಿಷಯಗಳನ್ನು ನಿರ್ಲಕ್ಷಿಸುತ್ತಾರೆ. ಅವರು ಹಣ ಖರ್ಚಾಗುತ್ತದೆ ಎಂದು ಭಾವಿಸಿದರೆ ಅವರು ಅನಗತ್ಯ ಖರ್ಚುಗಳನ್ನು ಅಥವಾ ಸ್ನೇಹಿತರೊಂದಿಗೆ ಯಾವುದೇ ವಿಹಾರಗಳನ್ನು ತಪ್ಪಿಸುತ್ತಾರೆ. ನೆನಪಿಡಿ ನಾವು ಖರ್ಚು ಮಾಡಲು ಮಾತ್ರ ಹಣವನ್ನು ಗಳಿಸುತ್ತೇವೆ. ಸ್ವಲ್ಪ ವಿಶ್ರಾಂತಿ ಮತ್ತು ಜೀವನವನ್ನು ಆನಂದಿಸಿ ಮತ್ತು ಅದಕ್ಕಾಗಿ ನೀವು ಗಳಿಸಿದ ಹಣವನ್ನು ಬಳಸಿ.

ಕುಂಭ ರಾಶಿ

ಕುಂಭ ರಾಶಿ

ಕುಂಭ ರಾಶಿ ಅತ್ಯಂತ ಬುದ್ಧಿವಂತ ಚಿಹ್ನೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ, ಹಣದ ವಿಷಯ ಬಂದಾಗ ಲೆಕ್ಕ ಹಾಕಿದ ಉಪಾಯಗಳನ್ನು ತೆಗೆದುಕೊಳ್ಳಲು ಇಷ್ಟಪಡುತ್ತಾರೆ. ಅವರು ತಮ್ಮ ಖರ್ಚುಗಳನ್ನು ಎಚ್ಚರಿಕೆಯಿಂದ ನೋಡುತ್ತಾರೆ ಮತ್ತು ಅದಕ್ಕೆ ತಕ್ಕಂತೆ ಉಳಿಸುತ್ತಾರೆ. ಕುತೂಹಲಕಾರಿಯಾಗಿ, ಅವರ ಹೆಚ್ಚಿನ ಹಣಕಾಸಿನ ಯೋಜನೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.

ಮೀನ ರಾಶಿ

ಮೀನ ರಾಶಿ

ಮೀನ ರಾಶಿಚಕ್ರದವರು ದೊಡ್ಡ ಕನಸುಗಾರರು, ಯಾವಾಗಲೂ ಅವರು ಇನ್ನೂ ಗಳಿಸಬೇಕು ಎಂಬ ಮುಂದಾಲೋಚನೆಯಲ್ಲಿ ಹಣಕಾಸಿನ ಯೋಜನೆಗಳನ್ನು ಮಾಡುತ್ತಾರೆ. ಅವರು ಗಾಳಿಯಲ್ಲಿ ಕೋಟೆಗಳನ್ನು ಮಾಡಲು ಇಷ್ಟಪಡುತ್ತಾರೆ, ನಮಗೆ ತಿಳಿದಿರುವಂತೆ ಸಾಕಷ್ಟು ವೆಚ್ಚವಾಗುತ್ತದೆ. ಅವರು ಅಲಂಕಾರಿಕ ಮತ್ತು ಸುಂದರವಾದ ವಸ್ತುಗಳನ್ನು ಪ್ರೀತಿಸುತ್ತಾರೆ. ಆದ್ದರಿಂದ ಅವರು ಸ್ವಲ್ಪ ಹಣ ಸಿಕ್ಕಿದ ಕ್ಷಣ, ಅವರು ಅದನ್ನು ತಮ್ಮ ಇತ್ತೀಚಿನ ಆಸೆಗಳಿಗೆ ಖರ್ಚು ಮಾಡುತ್ತಾರೆ. ಮೀನ ರಾಶಿಯವರು ಉಳಿತಾಯದಲ್ಲಿ ಒಳ್ಳೆಯವರಲ್ಲ.

English summary

How good you are at saving money, as per the zodiac signs in Kannada

Here we are discussing about How good you are at saving money, as per the zodiac signs in Kannada. Read more.
Story first published: Thursday, March 3, 2022, 18:09 [IST]
X
Desktop Bottom Promotion