For Quick Alerts
ALLOW NOTIFICATIONS  
For Daily Alerts

ಜ್ಯೋತಿಷ್ಯದ ಪ್ರಕಾರ, ಪಾರ್ಟಿಗಳಲ್ಲಿ ಯಾವ ರಾಶಿಯವರು ಹೇಗೆ ವರ್ತಿಸುತ್ತಾರೆ ಗೊತ್ತೇ?

|

ವ್ಯಕ್ತಿಯ ವ್ಯಕ್ತಿತ್ವ ನಿರ್ಧಾರವಾಗುವುದು ಅವರವರ ವರ್ತನೆಯಿಂದ. ಪ್ರತಿಯೊಂದು ದಿನ ಹಾಗೂ ಕ್ಷಣವು ನಮ್ಮ ವರ್ತನೆಯ ಆಧಾರದ ಮೇಲೆಯೇ ಬದಲಾವಣೆಯನ್ನು ತೋರುತ್ತದೆ. ಒಂಟಿಯಾಗಿ ಇರುವಾಗ ನಮ್ಮ ಭಾವನೆಗಳು ಹಾಗೂ ವರ್ತನೆಗಳು ಒಂದು ರೀತಿಯಲ್ಲಿ ಇರುತ್ತವೆ. ಅದೇ ಜನ ಸಮೂಹ ಇದ್ದಾಗ ಅಥವಾ ಮನೆಗೆ ಸಂಬಂಧಿಕರು ಆಗಮಿಸಿರುವಾಗ ನಮ್ಮ ವರ್ತನೆಗಳು ವಿಭಿನ್ನವಾಗಿರುತ್ತವೆ. ಕೆಲವು ಬಾರಿ ನಮ್ಮವರ ವರ್ತನೆಗಳು ನಮ್ಮ ಊಹೆಗೂ ಮೀರಿರುವ ರೀತಿಯಲ್ಲಿ ತೋರಬಹುದು.

ಸಭೆ-ಸಮಾರಂಭ ಎನ್ನುವುದು ಸಮಾಜದಲ್ಲಿ ಸಾಮಾನ್ಯವಾಗಿ ಹಮ್ಮಿಕೊಳ್ಳುವ ಕಾರ್ಯಕ್ರಮ. ಎಲ್ಲರೂ ಒಂದೆಡೆ ಸೇರುವುದು, ಕಷ್ಟ ಸುಖಗಳನ್ನು ಹಂಚಿಕೊಳ್ಳುವುದು, ಪರಸ್ಪರ ಸಂಭಾಷಣೆ ನಡೆಸುವುದು, ಸಂತೋಷವನ್ನು ವಿನಿಮಯ ಮಾಡಿಕೊಳ್ಳುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿರುತ್ತದೆ. ಅಂತಹ ಸಮಯದಲ್ಲಿ ನಾವು ನಮ್ಮ ವರ್ತನೆಯನ್ನು ಸರಿಯಾದ ರೀತಿಯಲ್ಲಿ ತೋರ್ಪಡಿಸಬೇಕು.

Zodiac Sign

ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಉದ್ವೇಗಕ್ಕೆ ಒಳಗಾಗುವುದು ಅಥವಾ ಅತೀವ ಸಂತೋಷವನ್ನು ವ್ಯಕ್ತಪಡಿಸುವುದು ಉಚಿತವಾಗಿರುವುದಿಲ್ಲ. ಆದರೆ ಬಹುತೇಕ ಸಂದರ್ಭದಲ್ಲಿ ನಮ್ಮ ವರ್ತನೆ ನಮ್ಮ ಹಿಡಿತದಲ್ಲಿ ಇರದೆ ಹೋಗಬಹುದು. ಇಲ್ಲವೇ ನಾವು ಬಯಸಿದ ವ್ಯಕ್ತಿಗಳ ವರ್ತನೆ ನಮ್ಮ ಊಹೆಗೆ ಹೊಂದಿಕೆ ಆಗದೆ ಇರಬಹುದು. ಇಂತಹ ಬದಲಾವಣೆಯು ರಾಶಿ ಚಕ್ರಗಳಿಗೆ ಅನುಗುಣವಾಗಿ ಇರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ನಿಜ, ಜ್ಯೋತಿಷ್ಯ ಶಾಸ್ತ್ರ ಹೇಳುವಂತೆ ಪ್ರತಿಯೊಬ್ಬರು ಸಭೆ, ಸಮಾರಂಭ ಅಥವಾ ಪಾರ್ಟಿಗಳಂತಹ ಕಾರ್ಯಕ್ರಮಗಳಿಗೆ ಪ್ರವೇಶಿಸಿದಾಗ ವಿಭಿನ್ನ ವರ್ತನೆ ಹಾಗೂ ಸಂಭಾಷಣೆಯನ್ನು ತೋರುತ್ತಾರೆ. ಅದು ಅವರ ವ್ಯಕ್ತಿತ್ವ ಅಥವಾ ನಿಲುವಿನ ಭಾವನೆಗಳ ಬಗ್ಗೆ ವಿಭಿನ್ನವಾದ ನಿಲುವನ್ನು ಹೊಂದುವಂತೆ ಮಾಡುತ್ತದೆ. ಅದಕ್ಕೆ ಅವರವರ ರಾಶಿ ಚಕ್ರಗಳ ಪ್ರಭಾವದಿಂದ ಉಂಟಾಗುವುದು ಎಂದು ಹೇಳಲಾಗುವುದು. ಹಾಗಾದರೆ ಪಾರ್ಟಿಯ ಸಂದರ್ಭದಲ್ಲಿ ಯಾವ ರಾಶಿ ಚಕ್ರದವರು ಹೇಗೆ ವರ್ತನೆಯಲ್ಲಿ ಬದಲಾವಣೆಯನ್ನು ಕಂಡುಕೊಳ್ಳುತ್ತಾರೆ? ಎನ್ನುವುದನ್ನು ತಿಳಿಯೋಣ ಬನ್ನಿ.

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರು ಪಾರ್ಟಿಯಂತಹ ಕಾರ್ಯಕ್ರಮದಲ್ಲಿ ಇರುವಾಗ ಯಾವುದೇ ಸಮಯಕ್ಕಾಗಿ ಕಾಯುತ್ತಾ ಕುಳಿತುಕೊಳ್ಳುವುದಿಲ್ಲ. ಅವರ ಮನಸ್ಸು ಹೇಳಿದಂತೆ ನೃತ್ಯ ಮಾಡುತ್ತಾರೆ. ಕುಡಿತಕ್ಕೆ ಸಂಬಂಧಿಸಿದಂತೆ ಯಾವುದಾದರೂ ಸ್ಪರ್ಧೆಗಳಿದ್ದರೆ ಧೈರ್ಯದಿಂದ ಮುಂದೆ ನುಗ್ಗುತ್ತಾರೆ. ಬಹುಬೇಗ ಇತರರೊಂದಿಗೆ ಹೊಂದಿಕೊಳ್ಳುವರು. ಜೊತೆಗೆ ಯಾವುದೇ ರೀತಿಯ ಕೆಲಸಕ್ಕಾದರೂ ಸಹಾಯ ಮಾಡಲು ಮುಂದೆ ನುಗ್ಗುತ್ತಾರೆ. ಪಾರ್ಟಿಯು ನೀರಸದಿಂದ ಮುಂದುವರಿಯುತ್ತಿದೆ ಎಂದು ಭಾವಿಸಿದರೆ ಬಹುಬೇಗ ನಿರ್ಣಯಗಳನ್ನು ಕೈಗೊಂಡು, ಸಭೆಯನ್ನು ಚೈತನ್ಯದಿಂದ ಮುಂದುವರಿಯುವಂತೆ ಮಾಡುವರು.

ವೃಷಭ ರಾಶಿ

ವೃಷಭ ರಾಶಿ

ಈ ರಾಶಿಯ ವ್ಯಕ್ತಿಗಳು ಪಾರ್ಟಿಯಂತಹ ಸಮಾರಂಭದಲ್ಲಿ ಭಾಗವಹಿಸಲು ಇಷ್ಟ ಪಡದವರು ಎನ್ನಬಹುದು. ಅವರ ಉಪಸ್ಥಿತಿ ಇರುವ ಸಮಾರಂಭವು ಅತ್ಯಂತ ವಿಶೇಷವಾಗಿರುತ್ತದೆ. ಪಾರ್ಟಿಯಲ್ಲಿ ಎಲ್ಲರ ದೃಷ್ಟಿ ಅವರ ಮೇಲೆ ಇರುತ್ತದೆ ಎಂದು ಹೇಳಬಹುದು. ಇವರು ಅತಿಥಿಗಳಿಗೆ ಹೂವು, ವೈನ್‌ಗಳನ್ನು ನೀಡುವುದರಲ್ಲಿ ತೊಡಗಿಕೊಳ್ಳುವರು. ಇವರು ಪಾರ್ಟಿಯ ಆಹಾರ ಹಾಗೂ ಕೊಠಡಿಯ ಅಲಂಕಾರ ಉತ್ತಮವಾಗಿರುವಂತೆ ನೋಡಿಕೊಳ್ಳುವರು. ಅಲಂಕಾರ ಕೊಂಚ ಮಂಕಾಗಿದೆ ಎಂದರೂ ಅದನ್ನು ವಿಭಿನ್ನ ರೀತಿಯಲ್ಲಿ ಜೋಡಿಸುವುದರ ಮೂಲಕ ಸುಂದರ ನೋಟಕ್ಕೆ ಜೀವ ತುಂಬುವರು. ಆಹಾರದಲ್ಲೂ ಕೆಲವು ವಸ್ತುಗಳನ್ನು ಸೇರಿಸುವುದರ ಜೊತೆಗೆ ಉತ್ತಮ ರುಚಿ ಹೊಂದುವಂತೆ ಮಾಡುವರು.

ಮಿಥುನ ರಾಶಿ

ಮಿಥುನ ರಾಶಿ

ಇವರು ಪಾರ್ಟಿ ಹಾಗೂ ಸಭೆ ಸಮಾರಂಭಗಳಲ್ಲಿ ಪ್ರೀತಿಯ ಮಾತನ್ನು ಆಡುವ ಮೂಲಕ ಎಲ್ಲರನ್ನೂ ಸ್ವಾಗತಿಸುವುದು ಹಾಗೂ ಹುರಿದುಂಬಿಸುವ ಕೆಲಸ ಮಾಡುವರು. ಇವರು ತಮ್ಮ ಉತ್ತಮ ಸಂಭಾಷಣೆ ಹಾಗೂ ಕಥೆಯ ಮೂಲಕ ಎಲ್ಲರ ಗಮನವನ್ನು ತಮ್ಮೆಡೆಗೆ ತಿರುಗಿಸಿಕೊಳ್ಳುತ್ತಾರೆ. ಸ್ನೇಹ ಪರ ವರ್ತನೆ ಹಾಗೂ ಹಾಸ್ಯ ಪ್ರಜ್ಞೆಯ ಮೂಲಕ ಜನರ ಮನಸ್ಸನ್ನು ನಿರಾಳಗೊಳಿಸುತ್ತಾರೆ. ಕೊಠಡಿಯಲ್ಲಿ ಉತ್ತಮ ರೀತಿಯ ಕೆಲಸ ನಿರ್ವಹಿಸುವುದರ ಮೂಲಕ ಎಲ್ಲರಿಗೂ ನೆರವಾಗುತ್ತಾರೆ.

ಕರ್ಕ ರಾಶಿ

ಕರ್ಕ ರಾಶಿ

ಕರ್ಕ ರಾಶಿಯವರು ದೊಡ್ಡ ದೊಡ್ಡ ಪಾರ್ಟಿಗಳಿಗಿಂತ ಮನೆಯಲ್ಲಿ ಆಯೋಜಿಸುವ ಸಣ್ಣ ಕೂಟವನ್ನು ಇಷ್ಟಪಡುತ್ತಾರೆ. ಇವರು ತಮ್ಮ ಮನೆಯಲ್ಲಿಯೇ ಮನೆಯವರೊಂದಿಗೆ ಹಾಯಾಗಿ ಇರಲು ಇಷ್ಟಪಡುವರು. ತಮ್ಮ ಆಪ್ತರನ್ನು ಅಥವಾ ಸಂಬಂಧಿಗಳನ್ನು ಮನೆಗೆ ಆಮಂತ್ರಿಸಲು ಬಯಸುತ್ತಾರೆ. ಮನೆಗೆ ಬಂದ ಅತಿಥಿಗಳಿಗೆ ಉತ್ತಮ ಸೇವೆ ಹಾಗೂ ಸಂಭಾಷಣೆ ನಡೆಸುವುದರ ಮೂಲಕ ಸಂತೋಷವನ್ನು ಹಂಚಿಕೊಳ್ಳುವರು.

ಸಿಂಹ ರಾಶಿ

ಸಿಂಹ ರಾಶಿ

ಈ ರಾಶಿಯವರಿಗೆ ಪಾರ್ಟಿ ಎಂದರೆ ಎಲ್ಲವೂ ಆಗಿರುತ್ತದೆ. ಪಾರ್ಟಿಯ ಪ್ರತಿಯೊಂದು ಸಂಗತಿಯನ್ನು ಆನಂದಿಸುತ್ತಾರೆ. ಪಾರ್ಟಿಯ ಎಲ್ಲಾ ಸಂಗತಿಯನ್ನು ನಿರ್ವಹಿಸುವುದರಿಂದ ಹಿಡಿದು, ಕಾರ್ಯಕ್ರಮದ ಕೇಂದ್ರ ವ್ಯಕ್ತಿಯಾಗಿ ನಿಲ್ಲಬಹುದು. ಇವರು ತಾವು ತಂದ ಉಡುಗೊರೆಯು ಅತ್ಯಂತ ವಿಶೇಷವಾದದ್ದು ಎನ್ನುವ ರೀತಿಯಲ್ಲಿ ದೊಡ್ಡ ಸುದ್ದಿಯನ್ನು ಮಾಡುವರು. ಜೊತೆಗೆ ಎಲ್ಲರ ಗಮನವೂ ಅದರ ಕಡೆಗೆ ಕೇಂದ್ರೀಕರಿಸುವಂತೆ ಮಾಡುವರು. ಪಾರ್ಟಿಯಲ್ಲಿ ಹಾಸ್ಯ ಮಾಡುವುದು, ನೃತ್ಯ ಮಾಡುವುದು ಹಾಗೂ ಆಟ ಆಡುವುದು ಸೇರಿದಂತೆ ಎಲ್ಲಾ ಬಗೆಯ ಕೆಲಸವನ್ನು ನಿರ್ವಹಿಸುತ್ತಾರೆ.

ಕನ್ಯಾ ರಾಶಿ

ಕನ್ಯಾ ರಾಶಿ

ಪಾರ್ಟಿಯಲ್ಲಿ ಯಾವ ಸಂಗತಿ ನಡೆಯುವುದು ಎನ್ನುವುದರ ಬಗ್ಗೆ ಹೆಚ್ಚು ಆಸಕ್ತಿ ಹೊಂದುವುದು ಹಾಗೂ ಆ ಸಂಗತಿಯ ಬಗ್ಗೆ ಯಾವ ಬಗೆಯ ನಿರ್ವಹಣೆ ಹೊರಬೇಕು ಎನ್ನುವುದರಲ್ಲಿ ಕನ್ಯಾ ರಾಶಿಯವರು ಪ್ರಮುಖ ಪಾತ್ರವನ್ನು ನಿರ್ವಹಿಸುವರು. ಇವರು ಇತರರು ವಿಷಾದಿಸುವ ಸಂಗತಿಯನ್ನು ಇಷ್ಟಪಡುವುದಿಲ್ಲ. ಬಹುತೇಕ ಸಂದರ್ಭದಲ್ಲಿ ಇವರು ತಮಗೆ ಬೇಕಾದ ರೀತಿಯಲ್ಲಿ ಇರುವುದು ಹಾಗೂ ಸಂದರ್ಭಗಳನ್ನು ಬದಲಿಸಿಕೊಳ್ಳಲು ಪ್ರಯತ್ನಿಸುವರು.

ತುಲಾ ರಾಶಿ

ತುಲಾ ರಾಶಿ

ತುಲಾರಾಶಿಯವರು ಪಾರ್ಟಿಯ ಮಸ್ತಿ ಮತ್ತು ಮೋಜನ್ನು ಪ್ರೀತಿಸುತ್ತಾರೆ. ಎಲ್ಲಿಯವರೆಗೆ ಮೋಜು-ಮಸ್ತಿ ನಡೆಯುತ್ತದೆಯೋ ಅಲ್ಲಿಯವರೆಗೂ ಸಮಯವನ್ನು ಕಳೆಯುತ್ತಾರೆ. ಕೆಟ್ಟ ಸಂಗತಿಗಳು ಅಥವಾ ಸನ್ನಿವೇಶಗಳನ್ನು ನಿಯಂತ್ರಿಸಲು ಹಾಗೂ ನಡೆಯದಂತೆ ನೋಡಿಕೊಳ್ಳಲು ಸೂಕ್ತ ಎಚ್ಚರಿಕೆ ವಹಿಸುವರು. ಅದಕ್ಕಾಗಿ ಅವರು ಏನು ಬೇಕಾದರೂ ಮಾಡುತ್ತಾರೆ. ಎಂತಹ ಸ್ಥಿತಿ ಅಥವಾ ಸಮಯವನ್ನಾದರೂ ಸೂಕ್ತ ಸಮತೋಲನದಲ್ಲಿ ನೆರವೇರುವಂತೆ ಕಾಳಜಿ ಹಾಗೂ ಮುನ್ನೆಚ್ಚರಿಕೆಯನ್ನು ಕೈಗೊಳ್ಳುವರು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಈ ರಾಶಿಯವರು ಸಾಮಾಜಿಕ ಕ್ಷೇತ್ರದಲ್ಲಿ ಹಾಗೂ ಜನ ಸಮೂಹದಲ್ಲಿ ಬೆರೆಯಲು ಇಷ್ಟಪಡುತ್ತಾರೆ. ಕೆಲವು ಸಂಗತಿಗಳಲ್ಲಿ ಅವರು ತೊಡಗಿಕೊಳ್ಳಲು ಬಯಸದೆ ಇದ್ದರೂ ಸಹ ಅವುಗಳನ್ನು ಒಂದೆಡೆ ಕುಳಿತು ವೀಕ್ಷಿಸುತ್ತಾರೆ. ಇವರು ಬಹುತೇಕ ಸಂದರ್ಭದಲ್ಲಿ ಸಂಗಾತಿಯೊಂದಿಗೇ ಮನೆಯಲ್ಲಿ ಇರಲು ಬಯಸುತ್ತಾರೆ. ಅವರಿಬ್ಬರೇ ಪಾರ್ಟಿ ಮಾಡಲು ಬಯಸುತ್ತಾರೆ. ಹಾಗಂತ ಇವರು ಸಮಾಜ ವಿರೋಧಿ ಪ್ರವೃತ್ತಿಯವರು ಎಂದಲ್ಲ. ಇವರು ತಮ್ಮ ಆಪ್ತರನ್ನು ಹೆಚ್ಚು ಪ್ರೀತಿಸುವುದು ಹಾಗೂ ಅವರೊಂದಿಗೆ ಸಮಯ ಕಳೆಯುವುದನ್ನೇ ಹೆಚ್ಚು ಬಯಸುತ್ತಾರೆ.

ಧನು ರಾಶಿ

ಧನು ರಾಶಿ

ಧನು ರಾಶಿಯ ವ್ಯಕ್ತಿಗಳು ಎಲ್ಲಾ ಬಗೆಯ ಪಾರ್ಟಿ ಹಾಗೂ ಸಭೆ-ಸಮಾರಂಭಗಳನ್ನು ಇಷ್ಟಪಡುತ್ತಾರೆ. ಇವರು ಪಾರ್ಟಿಯ ಪ್ರತಿಯೊಂದು ಕ್ಷಣವನ್ನು ಆನಂದಿಸುತ್ತಾರೆ. ಎಂತಹ ಸಾಹಸ ಸವಾಲುಗಳನ್ನು ಸಹ ಎದುರಿಸಲು ಸಿದ್ಧರಾಗಿ ನಿಲ್ಲುವರು. ಎಲ್ಲರೊಂದಿಗೂ ಬೆರೆಯುವುದು ಹಾಗೂ ಅವರನ್ನು ಮನರಂಜಿಸುವ ಕೆಲಸ ಕಾರ್ಯದಲ್ಲಿ ಸುಲಭವಾಗಿ ತೊಡಗಿಕೊಳ್ಳುವರು. ಎಲ್ಲರನ್ನೂ ರಂಜಿಸುತ್ತಾ, ತಾವೂ ಸಹ ಸಂತೋಷವನ್ನು ಪಡೆದುಕೊಳ್ಳುವರು.

ಮಕರ ರಾಶಿ

ಮಕರ ರಾಶಿ

ಈ ರಾಶಿಯವರು ಪಾರ್ಟಿಗಳಿಗೆ ಆಮಂತ್ರಣ ಹಾಗೂ ಆಹ್ವಾನವನ್ನು ಮೊದಲು ಅಪೇಕ್ಷಿಸುತ್ತಾರೆ. ಅವರ ಪ್ರಮುಖ ಕೆಲಸ ಕಾರ್ಯಗಳು ಮುಗಿದಿದ್ದರೆ ಪಾರ್ಟಿಗಳಿಗೆ ಸಮಯವನ್ನು ನೀಡುತ್ತಾರೆ. ಇವರು ಅಂದುಕೊಂಡಂತೆ ಸೂಕ್ತ ಸಮಯ ಹಾಗೂ ಪಾರ್ಟಿ ವ್ಯವಸ್ಥೆ ಇದ್ದರೆ ಅದರಲ್ಲಿ ಭಾಗವಹಿಸುತ್ತಾರೆ. ಸೀಮಿತ ವ್ಯಕ್ತಿಗಳೊಂದಿಗೆ ಮಾತ್ರ ಸಂಭಾಷಣೆ ಹಾಗೂ ಅವರೊಂದಿಗೆ ಪಾನೀಯವನ್ನು ಸ್ವೀಕರಿಸುತ್ತಾರೆ. ಹೆಚ್ಚೆಂದರೆ ಒಂದು ಗಂಟೆಗಳ ಕಾಲ ಸಭೆ ಸಮಾರಂಭವನ್ನು ಆನಂದಿಸುತ್ತಾರೆ, ನಂತರ ವಿದಾಯ ಹೇಳುವರು.

ಕುಂಭ ರಾಶಿ

ಕುಂಭ ರಾಶಿ

ಈ ರಾಶಿಯ ವ್ಯಕ್ತಿಗಳು ಎಲ್ಲಾ ಬಗೆಯ ವ್ಯಕ್ತಿಗಳನ್ನು ಪ್ರೀತಿಸುತ್ತಾರೆ. ವಿಶಿಷ್ಟ ವ್ಯಕ್ತಿಗಳೊಂದಿಗೆ ಪಾರ್ಟಿಯನ್ನು ಆನಂದಿಸುತ್ತಾರೆ. ಕುಂಭ ರಾಶಿಯವರು ಹೆಚ್ಚಾಗಿ ಒಂಟಿಯಾಗಿರಲು ಬಯಸುತ್ತಾರೆ. ಅವರು ಪಾರ್ಟಿಯಲ್ಲಿ ಹೇಗೆ ವರ್ತಿಸಬಹುದು? ಎನ್ನುವುದನ್ನು ಅಂದಾಜಿಸುವುದು ಕಷ್ಟ. ಇವರು ಮನಸ್ಸು ಮಾಡಿದರೆ ಆಳವಾದ ಸಂಭಾಷಣೆ ಹಾಗೂ ಸಂಗೀತದ ಮೂಲಕ ಎಲ್ಲರನ್ನೂ ಆಕರ್ಷಿಸುವರು. ಅಗತ್ಯವಿದ್ದರೆ ಪಾರ್ಟಿಯನ್ನು ಸುಂದರವಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ಮೀನ ರಾಶಿ

ಮೀನ ರಾಶಿ

ಮೀನ ರಾಶಿಯ ವ್ಯಕ್ತಿಗಳು ಪಾರ್ಟಿ ಹಾಗೂ ಸಭೆ-ಸಮಾರಂಭಗಳಲ್ಲಿ ಅತಿಯಾಗಿ ತಿನ್ನಲು ಬಯಸುತ್ತಾರೆ. ಪಾರ್ಟಿಯ ಪ್ರತಿಯೊಂದು ಸಂಗತಿಯನ್ನು ಅನುಭವಿಸಲು ಬಯಸುತ್ತಾರೆ. ಪಾರ್ಟಿಯಲ್ಲಿ ಸಹಚರರೊಂದಿಗೆ ನೃತ್ಯದಲ್ಲಿ ತಲ್ಲೀನರಾಗುವರು. ಜೊತೆಗೆ ಸಂತೋಷದ ಹುಮ್ಮಸ್ಸಲ್ಲಿ ಯಾರನ್ನಾದರೂ ಚುಂಬಿಸಬಹುದು. ಇಲ್ಲವಾದರೆ ತಮ್ಮ ಸಂಗಾತಿಯೊಂದಿಗೆ ಪ್ರಣಯದ ಸನ್ನಿವೇಶವನ್ನು ತೋರಬಹುದು. ಪಾರ್ಟಿಯ ಪ್ರತಿಯೊಂದು ಸಂಗತಿಯನ್ನೂ ಮನಃ ಪೂರ್ವಕವಾಗಿ ಆನಂದಿಸುವರು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

English summary

How Each Zodiac Sign Acts At A Party

When thinking about your own behavior at a party, it's important to think of a few things: Do you need to be the center of attention at all times? Are you cool to let others have the spotlight? Are you able to have in-depth conversations with one person at a time?
Story first published: Wednesday, November 6, 2019, 16:16 [IST]
X
Desktop Bottom Promotion