Just In
- 9 min ago
ಗರ್ಭಾವಸ್ಥೆಯಲ್ಲಿ ಕಾಡುವ ಮೂತ್ರ ಸೋಂಕು(UTI): ತಡೆಗಟ್ಟುವುದು ಹೇಗೆ, ಚಿಕಿತ್ಸೆಯೇನು?
- 4 hrs ago
ಸಂಪತ್ತು ವೃದ್ಧಿಗಾಗಿ ಮನೆಯಲ್ಲಿ ಸ್ವಸ್ತಿಕ ಚಿಹ್ನೆ ಎಲ್ಲೆಲ್ಲಿ ಇಡಬೇಕು?
- 7 hrs ago
Horoscope Today 25 Jan 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- 17 hrs ago
ಆ್ಯಪಲ್ ಶೇಪ್ನ ದೇಹ ಹೊಂದಿರುವವರಿಗೆ ಹೆಚ್ಚಾಗಿ ಕಾಯಿಲೆ ಬೀಳುತ್ತಾರೆ, ಏಕೆ?
Don't Miss
- Movies
ಪಾಪ ಈ ನಟಿಗೆ ಮುಂಬೈನಲ್ಲಿ ಯಾರೂ ಬಾಡಿಗೆ ಮನೆ ಕೊಡ್ತಿಲ್ಲವಂತೆ! ಏಕೆ?
- Technology
ಕೈಗೆಟಕುವ ಬೆಲೆಯಲ್ಲಿ ಎಂಟ್ರಿ ಕೊಟ್ಟ ಇನ್ಫಿನಿಕ್ಸ್ ನೋಟ್ 12i! ಸ್ಟೈಲಿಶ್ ಲುಕ್!
- News
Breaking: ಸ್ವತಃ ಪೊಲೀಸ್ ಠಾಣೆಗೆ ತೆರಳಿ ರಮೇಶ ಜಾರಕಿಹೊಳಿ ವಿರುದ್ಧ ದೂರು ನೀಡಿದ ಡಿಕೆಶಿ, ಸಿದ್ದು- ಅಂತದ್ದೇನಿದೆ ದೂರಿನಲ್ಲಿ?
- Sports
ICC Ranking: ಏಕದಿನ ಕ್ರಿಕೆಟ್ನಲ್ಲಿ ಮೊಹಮ್ಮದ್ ಸಿರಾಜ್ ಈಗ ನಂಬರ್ 1 ಬೌಲರ್
- Finance
Budget 2023 Expectations: ಚುನಾವಣೆಗೂ ಮುನ್ನ ಕೇಂದ್ರ ಬಜೆಟ್ನಿಂದ ಕರ್ನಾಟಕ ಸರ್ಕಾರದ ನಿರೀಕ್ಷೆಗಳಿವು
- Automobiles
ಧೂಳೆಬ್ಬಿಸಲು ಬಿಡುಗಡೆಯಾಯ್ತು ಮಹೀಂದ್ರಾ ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್: ಬೆಲೆ...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2023ರಲ್ಲಿ ಗ್ರಹಗಳ ಸಂಚಾರಗಳು ಮಿಥುನ ರಾಶಿಯ ಮೇಲೆ ಬೀರಲಿದೆ ಈ ಪ್ರಭಾವ
2023 ಜನವರಿಯಲ್ಲಿ ಶನಿ ಗ್ರಹ ಕುಂಭ ರಾಶಿಗೆ ಪ್ರವೇಶಿಸಿದಾಗ ನಿಮಗೆ ಅದೃಷ್ಟ ತರಲಿದ್ದಾನೆ. ಗುರು, ಏಪ್ರಿಲ್ 22 ರಂದು ನಿಮ್ಮ ಹನ್ನೊಂದನೇ ಮನೆಗೆ ಪ್ರವೇಶಿಸುತ್ತಾನೆ. ಅಕ್ಟೋಬರ್ 30 ರಂದು, ರಾಹು ಮೀನಕ್ಕೆ ಚಲಿಸಲಿದೆ, ಅದೇ ರೀತಿ ಕೇತುಐದನೇ ಮನೆಯಿಂದ ನಿಮ್ಮ ನಾಲ್ಕನೇ ಮನೆಗೆ ಹೋಗುತ್ತಾನೆ. ಈ ಗ್ರಹಗಳ ಈ ಸಾಗಣೆಯು ನಿಮ್ಮ ಜೀವನದಲ್ಲಿ ಯಾವ ರೀತಿಯ ಬದಲಾವಣೆ ತರಲಿದೆ ಎಂದು ನೋಡೋಣ:
ಮೀನ ರಾಶಿಯವರಿಗೆ 2023ರಲ್ಲಿ ಶನಿಯ ಅನುಗ್ರಹವಿರುವುದರಿಂದ ಒಟ್ಟಾರೆಯಾಗಿ ನೋಡುವುದಾದರೆ ಅದೃಷ್ಟದ ವರ್ಷವಾಗಿದೆ. ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಜೊತೆಗೆ ಸ್ಥಗಿತಗೊಂಡ ಕೆಲಸಗಳು ಸಹ ಪ್ರಾರಂಭವಾಗುತ್ತವೆ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಾಗುವುದು. ಈ ವರ್ಷ ನಿಮಗೆ ಅನೇಕ ವಿಷಯಗಳಲ್ಲಿ ಉತ್ತಮವಾಗಿರುತ್ತದೆ.
ಶನಿ ಗ್ರಹದ ಪ್ರಭಾವ
ಶನಿಯು ಎಂಟನೇ ಮನೆಯನ್ನು ತೊರೆಯಲಿರುವ ಕಾರಣ ವರ್ಷದ ಆರಂಭದಲ್ಲಿ ನೀವು ಮಾನಸಿಕ ಒತ್ತಡವನ್ನು ಅನುಭವಿಸುವಿರಿ. ಜನವರಿ 17 ರಂದು, ಶನಿಯು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸಿದ ತಕ್ಷಣ ನೀವು ತುಂಬಾ ಉತ್ತಮ ಸ್ಥಿತಿಯಲ್ಲಿರುತ್ತೀರಿ. ಅಡಚಣೆಯಾಗುತ್ತಿದ್ದ ಕೆಲಸಗಳು ಅಥವಾ ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳಲು ಪ್ರಾರಂಭಿಸುತ್ತವೆ, ಇದರಿಂದ ನಿಮ್ಮ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ನೀವು ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ, ಆ ನಿರ್ಧಾರಗಳು ಫಲ ನೀಡುತ್ತದೆ. ನೀವು ಕೆಲಸದಲ್ಲಿ ವರ್ಗಾವಣೆ ಬಯಸಿದ್ದರೆ ಈ ವರ್ಷದಲ್ಲಿ ನೀವು ಬಯಸಿದ ವರ್ಗಾವಣೆ ಸಿಗಲಿದೆ.
ವರ್ಷದ ಆರಂಭದಲ್ಲಿ ಮಕ್ಕಳ ಬಗ್ಗೆ ಚಿಂತೆ ಹೆಚ್ಚಲಿದೆ, ಇನ್ನು ಪ್ರೇಮ ಸಂಬಂಧದಲ್ಲಿರುವವರಿಗೂ ಸ್ವಲ್ಪ ಮಾನಸಿಕ ಒತ್ತಡ ಇರುತ್ತದೆ. ಆದರೆ ಆರ್ಥಿಕವಾಗಿ ಈ ಸಮಯವು ಉತ್ತಮವಾಗಿರುತ್ತದೆ. ಎರಡನೇ ಮತ್ತು ಮೂರನೇ ತ್ರೈಮಾಸಿಕವು ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಸುಧಾರಿಸುತ್ತದೆ, ನಿಮ್ಮ ಆದಾಯವು ಹೆಚ್ಚಾಗುತ್ತದೆ.
ನಿಮ್ಮ ಮಹತ್ವಾಕಾಂಕ್ಷೆಗಳು ಹೆಚ್ಚಾಗಿರುವುದರಿಂದ ಹಣಕಾಸಿನ ವಿಷಯಗಳಲ್ಲಿ ನೀವು ಸ್ವಲ್ಪ ಜಾಗರೂಕರಾಗಿರಬೇಕು. ಸರಿ-ತಪ್ಪುಗಳ ಬಗ್ಗೆ ಅವಲೋಕಿಸದಿದ್ದರೆ ನಷ್ಟವಾಗಬಹುದು, ಆದ್ದರಿಂದ ಜಾಗ್ರತೆಯಿಂದ ಹೆಜ್ಜೆ ಹಾಕಬೇಕು. ಹೊರ ದೇಶಕ್ಕೆ ಹೋಗಲು ಯೋಜನೆ ಹಾಕುತ್ತಿದ್ದರೆ ಅವಕಾಶ ಕೂಡಿ ಬರಲಿದೆ.
ಗುರು ಗ್ರಹದ ಪ್ರಭಾವ
ಗುರುಗ್ರಹದ ಆಶೀರ್ವಾದದಿಂದ ಕುಟುಂಬ ಜೀವನವು ಸಂತೋಷದಿಂದ ತುಂಬಿರುತ್ತದೆ ಮತ್ತು ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಯಾವುದೇ ಶುಭ ಕಾರ್ಯವನ್ನು ಸಹ ಪೂರ್ಣಗೊಳಿಸಬಹುದು. ಸುತ್ತಮುತ್ತಲಿನ ವಾತಾವರಣವು ಸಂತೋಷದಿಂದ ತುಂಬಿರುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತದೆ.
ಜನವರಿಯಿಂದ ಜುಲೈ
ಎರಡನೇ ಮತ್ತು ಮೂರನೇ ತ್ರೈಮಾಸಿಕವು ನಿಮಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಕೆಲ ದಿನಗಳಿಂದ ಉದ್ಯೋಗಕ್ಕೆ ಅರ್ಜಿ ಸಲ್ಲಿಸುತ್ತಿದ್ದವರಿಗೂ ಯಶಸ್ಸು ಸಿಗಲಿದ್ದು, ಹೊಸ ಉದ್ಯೋಗ ಸಿಗಲಿದೆ. ಇದರೊಂದಿಗೆ ನಿಮ್ಮ ಕೆಲಸದಲ್ಲಿ ನಿಮ್ಮ ಆತ್ಮವಿಶ್ವಾಸವೂ ಹೆಚ್ಚುತ್ತದೆ. ನೀವು ಕಂಪನಿಯಲ್ಲಿ ಒಂದು ಒಳ್ಳೆಯ ಸ್ಥಾನಕ್ಕೇರಲು ಸಾಧ್ಯವಾಗುವುದು. ಫೆಬ್ರವರಿ ತಿಂಗಳಲ್ಲಿ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ದೂರದ ಪ್ರಯಾಣದ ಸಾಧ್ಯತೆಗಳಿವೆ. ಮಾರ್ಚ್ ತಿಂಗಳಲ್ಲಿ ನೀವು ಸ್ವಲ್ಪ ಹುಷಾರಾಗಿ ನಡೆದುಕೊಳ್ಳಬೇಕು, ಯಾರೊಂದಿಗೂ ಕಠಿಣ ವರ್ತನೆ ತೋರಿಸಬೇಡಿ. ಭೂಮಿ ಅಥವಾ ಆಸ್ತಿ ಸಮಸ್ಯೆಗಳು ಬರಬಹುದು, ಆದರೆ ನೀವು ತುಂಬಾ ಜಾಗೂರೂಕತೆಯಿಂದ ಹೆಜ್ಜೆ ಇಡಬೇಕು.
ಜೂನ್ ತಿಂಗಳು ಉತ್ತಮವಾಗಿರುತ್ತದೆ. ನಿಮ್ಮ ಕೆಲಸಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ ಮತ್ತು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಜುಲೈ ತಿಂಗಳು ಆರ್ಥಿಕ ಸ್ಥಿತಿಯಲ್ಲಿ ಹೆಚ್ಚಳವಾಗುವುದು, ನಿಮ್ಮ ಕೆಲಸ ಕಾರ್ಯಗಳಲ್ಲಿ ಲಾಭ ಗಳಿಸುತ್ತೀರಿ.
ಆಗಸ್ಟ್-ಡಿಸೆಂಬರ್
ಆಗಸ್ಟ್ ತಿಂಗಳಲ್ಲಿ ನಿಮ್ಮ ಖರ್ಚುಗಳು ಹೆಚ್ಚಾಗಲಿದೆ, ಸರಿಯಾದ ಬಜೆಟ್ ಪ್ಲ್ಯಾನ್ ಮಾಡದಿದ್ದರೆ ಆರ್ಥಿಕ ತೊಂದರೆ ಉಂಟಾಗಬಹುದು, ಇನ್ನು ಮಿತಿ ಮೀರಿ ಖರ್ಚು ಮಾಡಲು ಹೋಗಬೇಡಿ. ಇದರ ನಂತರ, ಮುಂಬರುವ ಸೆಪ್ಟೆಂಬರ್ ತಿಂಗಳು ಅನೇಕ ಸಂದರ್ಭಗಳಲ್ಲಿ ಪರಿಹಾರದ ಸುದ್ದಿಯನ್ನು ತರುತ್ತದೆ ಮತ್ತು ನೀವು ಜೀವನದ ಹಲವು ಕ್ಷೇತ್ರಗಳಲ್ಲಿ ಮುನ್ನಡೆಯುತ್ತೀರಿ. ಈ ಸಮಯದಲ್ಲಿ, ನಿಮ್ಮ ಸ್ನೇಹಿತರು ಸಹ ನಿಮಗೆ ಸಹಾಯ ಮಾಡುತ್ತಾರೆ.
ಮಿಥುನ ರಾಶಿಯವರಿಗೆ ಅಕ್ಟೋಬರ್ ತಿಂಗಳು ನಿಮಗೆ ತುಂಬಾ ಒಳ್ಳೆಯದು, ಈ ಅವಧಿಯಲ್ಲಿ ನೀವು ದೊಡ್ಡ ವಾಹನ ಅಥವಾ ನಿಮ್ಮ ಮನೆಯನ್ನು ಖರೀದಿಸಬಹುದು. ನವೆಂಬರ್ ತಿಂಗಳು ಪ್ರೇಮ ವ್ಯವಹಾರಗಳಿಗೆ ಅನುಕೂಲಕರವಾಗಿರುತ್ತದೆ, ಡಿಸೆಂಬರ್ ತಿಂಗಳಲ್ಲಿ ನೀವು ಸ್ಥಿರಾಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ವಲ್ಪ ಒತ್ತಡವನ್ನು ಎದುರಿಸಬೇಕಾಗಬಹುದು, ತಾಯಿಯ ಆರೋಗ್ಯದ ಕಡೆ ಗಮನ ನೋಡಬೇಕು.