Just In
Don't Miss
- Sports
ವಿರಾಟ್ ಕೊಹ್ಲಿ Vs ಬಾಬರ್ ಅಜಂ : ಆತನನ್ನು ಮೀರಿಸಲು ಯಾರಿಗೂ ಸಾಧ್ಯವಿಲ್ಲ ಎಂದ ಮಾಜಿ ಪಾಕ್ ಕ್ರಿಕೆಟಿಗ
- Movies
ಡಾ.ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ: ಕುಟುಂಬ ಬಯಸಿದಂತೆ ನಿರ್ಮಿಸಿದ್ದೇವೆ ಎಂದ ಸಿಎಂ
- News
Breaking; ಹಾಸನ ಟಿಕೆಟ್ ವಿವಾದ, ಮೌನ ಮುರಿದ ಎಚ್ಡಿ ರೇವಣ್ಣ!
- Finance
7th Pay Commission update news: ಕೇಂದ್ರ ಬಜೆಟ್ನಲ್ಲಿ 8ನೇ ವೇತನ ಆಯೋಗದ ಬಗ್ಗೆ ಘೋಷಣೆ?
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Technology
Tech News of this Week; ಈ ವಾರ ಟೆಕ್ ವಲಯದಲ್ಲಿ ಜರುಗಿದ ಘಟನೆಗಳೇನು?, ಇಲ್ಲಿದೆ ವಿವರ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Happy Gita Jayanti 2022 : ಶ್ರೀ ಕೃಷ್ಣ ಮಾಡಿರುವ ಈ 18 ಗೀತೋಪದೇಶದ ಸಾರಾಂಶ ತಿಳಿದುಕೊಂಡರೆ ನಮ್ಮ ಬದುಕೇ ಬದಲಾಗುವುದು
ಡಿಸೆಂಬರ್ 3ರಂದು ಗೀತಾ ಜಯಂತಿ ಆಚರಿಸಲಾಗುತ್ತಿದೆ. ಪ್ರತೀವರ್ಷ ಮಾರ್ಗಶಿರ ಮಾಸದ ಶುಕ್ಲ ದಶಮಿಯಂದು ಗೀತಾ ಜಯಂತಿ ಆಚರಿಸಲಾಗುವುದು.
ಈ ದಿನದಂದು ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆ ಬೋಧಿಸಿದ ಎಂದು ಹೇಳಲಾಗುವುದು.
ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆ
ಹಿಂದೂ ಧರ್ಮದ ಪವಿತ್ರ ಗೀತೆಯಾಗಿರುವ ಭಗವದ್ಗೀತೆಯಲ್ಲಿ ಬದುಕಿನ ಸಾರವನ್ನು ಎಳೆ-ಎಳೆಯಾಗಿ ವಿವರಿಸಲಾಗಿದೆ. ಇದರಲ್ಲಿ ವ್ಯಕ್ತಿಯ ಕರ್ಮ, ಧಾರ್ಮಿಕ, ಸಾಂಸ್ಕೃತಿಕ, ಪ್ರಾಯೋಗಿಕ ಹೀಗೆ ನಮ್ಮ ಬದುಕಿಗೆ ಅನ್ವಯಿಸುವ ಪ್ರತಿಯೊಂದು ವಿಷಯದ ಬಗ್ಗೆ ತುಂಬಾನೇ ಚೆನ್ನಾಗಿ ವಿವರಿಸಲಾಗಿದೆ.
ಭಗವದ್ಗೀತೆಯಲ್ಲಿರುವ ಸಾರಾಂಶ ಅರ್ಥ ಮಾಡಿಕೊಂಡರೆ ನಾವು ಬದುಕನ್ನು ನೋಡುವ ರೀತಿ ಬದಲಾಗುವುದು.
ಯುದ್ಧ ಭೂಮಿಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಮಾಡಿದ ಉಪದೇಶವನ್ನು ಗೀತೋಪದೇಶ ಎಂದು ಕರೆಯಲಾಗುವುದು.
ಇದರಲ್ಲಿ ಹೇಳಿರುವ 18 ಅಂಶಗಳು ಪ್ರತಿಯೊಬ್ಬ ವ್ಯಕ್ತಿಗೆ ಅನ್ವಯಿಸುವಂತಿದೆ ನೋಡಿ:

ಧರ್ಮವೇ ದೊಡ್ಡದು
ಯುದ್ಧ ಭೂಮಿಯಲ್ಲಿರುವ ಅರ್ಜುನನಿಗೆ ಅಯ್ಯೋ ನನ್ನ ಬಂಧು ಬಳಗವನ್ನೇ ಕೊಲ್ಲಬೇಕೆ? ಎಂದು ದುಗುಡವಾಗುತ್ತದೆ. ಆಗ ಅರ್ಜುನನ ಮನಸ್ಥಿತಿ ಮಾಡಿಕೊಳ್ಳುವ ಶ್ರೀ ಕೃಷ್ಣ ಭವ-ಬಂಧನಗಳ ಬಗ್ಗೆ ಚಿಂತಿಸಬೇಡ, ನಿನ್ ಕರ್ತವ್ಯನಷ್ಟೇ ನೀನು ಮಾಡು, ಧರ್ಮವೇ ಎಲ್ಲಕ್ಕಿಂತ ದೊಡ್ಡದು ಎಂದು ಉಪದೇಶ ನೀಡುತ್ತಾನೆ.

ಸುಜ್ಞಾನದಿಂದಲೇ ಪರಿಹಾರ
ಹೇ ಅರ್ಜುನ... ನಿನ್ನಲ್ಲಿರುವ ದುಃಖದುಮ್ಮಾನ, ಗೊಂದಲಕ್ಕೆ ಅಜ್ಞಾನವೇ ಕಾರಣ, ಒಂದು ವಿಷಯ ತಿಳಿದಿಕೋ ದೇಹಕ್ಕೆ ಸಾವಿದೆ ಆದರೆ ಆತ್ಮಕ್ಕಲ್ಲ, ಆದ್ದರಿಂದ ನೀನು ಯಾರನ್ನೇ ಕೊಂದರು ಅವರ ಆತ್ಮ ಸಾಯಲ್ಲ, ಯುದ್ಧ ನಿನ್ನ ಧರ್ಮ ಅದನ್ನು ಮಾಡು ಎಂದು ಹೇಳುತ್ತಾನೆ.

ನಿಸ್ವಾರ್ಥದಿಂದ ಕಾರ್ಯಗಳನ್ನು ಮಾಡು
ನೀನು ಯಾವುದೇ ಫಲಿತಾಂಶ ಅಪೇಕ್ಷೆ ಮಾಡದೆ ನಿನ್ನ ಕರ್ತವ್ಯನ್ನಷ್ಟೇ ಮಾಡು, ಉಳಿದಿದ್ದು ದೇವರಿಗೆ ಬಿಟ್ಟು ಬಿಡು. ಆಸೆ, ಸಿಟ್ಟು, ಅತಿಯಾದ ಪ್ರೀತಿ ಇದುವೇ ನಮ್ಮ ಶತ್ರುಗಳು. ಇವುಗಳು ನಮ್ಮಲ್ಲಿನ ಮನಶಾಂತಿಯನ್ನು ಕಸಿದುಕೊಳ್ಳುತ್ತದೆ ಎಂದು ಹೇಳುತ್ತಾನೆ.

ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ
ಯಾವಾಗ ಅಧರ್ಮ ಹೆಚ್ಚಾಗುತ್ತದೋ ಆಗ ಧರ್ಮ ಸಂಸ್ಥಾಪನೆಗೆ ಭಗವಂತ ಮತ್ತೆ ಅವತಾರಗಳನ್ನುಎತ್ತುತ್ತಾನೆ. ಭಗವಂತನ ಈ ಜನ್ಮದ ಬಗ್ಗೆ ಅರಿತವನಿಗೆ ಮೋಕ್ಷ ಸಿಗುವುದು ಎಂದು ಶ್ರೀ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ.

ಫಲ ನಿರೀಕ್ಷಿಸಿದೆ ಕರ್ಮ ಮಾಡು
ನೀನು ಮಾಡುವ ಕೆಲಸವನ್ನು ಯಾವುದೇ ಅಪೇಕ್ಷೆ ಇಲ್ಲದೆ ಮಾಡು, ಆಗ ಮಾತ್ರ ನಾನು, ನನ್ನದು ಎಂಬ ಅಹಂಕಾರದಿಂದ ಹೊರಬರಲು ಸಾಧ್ಯ ಎನ್ನುತ್ತಾನೆ ಶ್ರೀಕೃಷ್ಣ.

ಧ್ಯಾನದಿಂದ ಇಂದ್ರಿಯ ಗೆಲ್ಲಬೇಕು
ಧ್ಯಾನ ಮಾಡಿದರೆ ಮನಸ್ಸು ಹಾಗೂ ದೇಹದ ಮೇಲೆ ನಿಯಂತ್ರಣ ಸಾಧಿಸಬಹುದು. ಆದ್ದರಿಂದ ಧ್ಯಾನದಿಂದ ಇಂದ್ರಿಯಗಳನ್ನು ಗೆಲ್ಲಬೇಕು.

ಜ್ನಾನೋದಯ
ಧ್ಯಾನ ಮಾಡಿ ಭಗವಂತನಲ್ಲಿ ಲೀನವಾದಾಗ ಜ್ಞಾನೋದಯವಾಗುತ್ತದೆ.

ಪ್ರಯತ್ನ ನಿರಂತರವಾಗಿರಬೇಕು
ನಮ್ಮ ಪ್ರಯತ್ನ ನಿರಂತರವಾಗಿರಬೇಕು, ದೇವರ ಹುಡುಕಾಟ ನಿರಂತರ ಮಾಡಿದರೆ ಅದಕ್ಕೆ ಉತ್ತರ ಸಿಕ್ಕೇ ಸಿಗುವುದು.

ಧ್ಯಾನದಿಂದ ನನ್ನ ಸೇರಬಹುದು
ಗೀತ ಉಪದೇಶ ನೀಡುವಾಗ ಶ್ರೀಕೃಷ್ಣನು ಅರ್ಜುನನಿಗೆ ತನ್ನ ವಿಶ್ವ ರೂಪ ತೋರಿಸಿ ಅರ್ಜುನಲ್ಲಿದ್ದ ಅಜ್ಞಾನ, ದುಗುಡ ಹೊರದೂಡುತ್ತಾನೆ.

ಕರ್ಮಕ್ಕೆ ತಕ್ಕ ಫಲ
ಈ ಜಗತ್ತು ಅನೇಕ ಪವಾಡಗಳಿಂದ ತುಂಬಿದೆ, ಅವುಗಳನ್ನು ನೋಡಿ ಖುಷಿ ಪಡು, ಜಗತ್ತಿನಲ್ಲಿ ದೇವರುವುದಿಲ್ಲ, ದೇವರೊಳಗೆ ಜಗತ್ತಿದೆ. ಅವನು ನಿನ್ನ ಕೆಲಸಕ್ಕೆ ತಕ್ಕ ಫಲ ನೀಡುತ್ತಾನೆ.

ಭಗವಂತನನ್ನು ಪ್ರೀತಿಸು
ಯಾರು ಭಗವಂತನನ್ನು ಪ್ರೀತಿಸುತ್ತಾರೋ ಅವರೇ ಯೋಗಿಗಳು. ಭಗವಂಥನ ಪ್ರೀತಿ ಪಡೆಯುವಂಥ ಕರ್ಮಗಳನ್ನು ಮಾಡು, ಅದಲ್ಲದೆ ಕರ್ಮಗಳಿಗೆ ಫಲ ಬಯಸಬೇಡ.

ಮೂರು ಗುಣಗಳು ಹಾಗೂ ಜೀವನಶೈಲಿ
ಎಲ್ಲರಲ್ಲೂ ಸಾತ್ವಿಕ, ರಾಜಸಿಕ, ತಾಮಸಿಕ ಗುಣಗಳಿರುತ್ತದೆ. ಸಾತ್ವಿಕ ಗುಣ ಮೋಕ್ಷ, ರಾಜಸಿಕ ಗುಣ ಪುನರ್ಜನ್ಮ, ತಾಮಸಿಕ ಗುಣ ಕೆಳಮಟ್ಟದ ಜನ್ಮ. ಸಾತ್ವಿಕ ಗುಣ ಜ್ಞಾನ, ಸುಖ, ವಿಚಾರದ ರೂಪ. ರಾಜಸಿಕ ಪ್ರೀತಿ, ಆಸೆ, ಅಹಂಕಾರ, ತಾಮಸ ಅಂದ್ರೆ ಅಜ್ಞಾನ, ತಪ್ಪು, ತುಳುವಳಿಕೆ, ಆಲಸ್ಯ.
ಮೋಕ್ಷದ ಗುಣ ಮೇಲುಗೈ ಸಾಧಿಸಬೇಕು, ಅದಕ್ಕೆ ಭಗವಂತನ ಧ್ಯಾನ ಮಾಡಬೇಕು ಎನ್ನುತ್ತಾನೆ ಶ್ರೀಕೃಷ್ಣ

ದೈವಿಕತ್ವಕ್ಕೆ ಬೆಲೆ
ಸಂಸಾರವೆಂಬುವುದು ಆದಿ ಅಂತ್ಯವಿಲ್ಲದ್ದು, ಇದನನ್ಉ ವೈರಾಗ್ಯವೆಂಬ ಶಸ್ತ್ರದಿಂದ ಕತ್ತರಿಸಬೇಕು. ದೈವೀಕತೆ ಬೆಲೆ ಕೊಟ್ಟಾಗ ಮಾತ್ರ ಇದು ಸಾಧ್ಯವಾಗುವುದು ಎಂದು ಅರ್ಜುನನ ಮನ ಬದಲಾಯಿಸುತ್ತಾನೆ ಶ್ರೀಕೃಷ್ಣ

ಸದ್ಗುಣದಿಂದ ಸ್ವತಂತ್ರ
ಸಿಟ್ಟು, ಅಹಂ, ಕ್ರೌರ್ಯ, ಅಪ್ರಾಮಾಣಿಕತೆ, ಅನೈತಿಕತೆ, ದುರಾಸೆ ಈ ಗುಣಗಳು ವ್ಯಕ್ತಿಯನ್ನು ನಾಶ ಮಾಡುತ್ತದೆ. ಮಾನವೀಯತೆ, ಸತ್ಯ, ಅಹಿಂಸೆ, ತಾಳ್ಮೆ, ಇಂದ್ರಿಯಗಳ ನಿಯಂತ್ರಣದಿಂದ ಜ್ಞಾನ ಪಡೆದು ಸ್ವತಂತ್ರರಾಗುವಿರಿ ಎಂಬುವುದು ಶ್ರೀಕೃಷ್ಣ ಹೇಳುತ್ತಾನೆ.

ಮೇರು ಸತ್ಯ
ನೀನು ಓಂ ನಾಮದಿಂದಲೇ ಸತ್ಕಾರ್ಯ ಪ್ರಾರಂಭಿಸಬೇಕು. ಯಜ್ಞ, ದಾನ, ತಪಸ್ಸು, ಸತ್ಕಾರ್ಯಗಳ ಮಹತ್ವವನ್ನು ವಿವರಿಸುತ್ತಾನೆ ಶ್ರೀ ಕೃಷ್ಣ.

ಪರಮಾತ್ಮನಲ್ಲಿ ಐಕ್ಯ
ಮನುಷ್ಯ ಕರ್ಮಯೋಗಿಯಾಗಿ ಬದುಕಬೇಕು, ನೀನು ಮಾಡುವ ಕಾರ್ಯವೇ ಆತ್ಮದೊಂದಿಗೆ ಜೋಡಿಸುತ್ತದೆ, ಪರಮಾತ್ಮನಲ್ಲಿ ಐಕ್ಯವಾಗಲು ದಾರಿ ತೋರುತ್ತದೆ ಎಂದು ಹೇಳುತ್ತಾನೆ.

ಭಗವಂತನಲ್ಲಿ ಪ್ರೀತಿ
ಶ್ರೀ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ ಈ ಜಗತ್ತೇ ನಾನಾಗಿದ್ದೇನೆ, ಎಲ್ಲಾ ವಸ್ತುಗಳು ನನ್ನಲ್ಲಿವೆ, ಆದರೆ ನಾನು ಯಾವುದರಲ್ಲೂ ಇಲ್ಲ, ಯಾರು ನನ್ನನ್ನು ನಂಬುತ್ತಾರೋ ಅವರ ಯೋಗಕ್ಷೇಮ ನಾನು ಕಾಯುತ್ತೇನೆ.

ಮಾಯೆಯಿಂದ ಕಳಚಿಕೋ
ಇಡಿ ಬ್ರಹ್ಮಾಂಡವೇ ಮಾಯೆ, ಅದನ್ನು ನೀನು ಅರ್ಥ ಮಾಡಿಕೋ, ಆ ಮಾಯೆಯಿಂದ ಕಳಚಿಕೊಂಡು ಭಕ್ತಿಯಿಂದ ಭಗವಂತನ ನಂಬು ಎಂದು ಶ್ರೀಕೃಷ್ಣ ಅರ್ಜುನನಿಗೆ ಸಲಹೆ ನೀಡುತ್ತಾನೆ.